ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪರವಾನಗಿ(licence) ಹೊಂದಿರುವ 1,131 ಭೂ ಮಾಪಕರಿಗೆ ಹೆಚ್ಚುವರಿ ಸಂಭಾವನೆ(Karnataka High Court Order On Land Surveyors Payment hike): ಪಾವತಿ ಮಾಡುವ ಪ್ರಕ್ರಿಯೆ ತಡವಾದಲ್ಲಿ ಶೇ.1 ರಷ್ಟು ಬಡ್ಡಿ ಪಾವತಿಸಬೇಕು.
2008 ರಿಂದ 2013ರ ಅವಧಿಯಲ್ಲಿ ರಾಜ್ಯ ಸರ್ಕಾರದ(karnataka governament) ಆದೇಶದಂತೆ ತತ್ಕಾಲ್ ಸೇವೆಗಳ ಅಡಿಯಲ್ಲಿ ಹೆಚ್ಚವರಿ ಸೇವೆ ಸಲ್ಲಿಸಿರುತ್ತಾರೆ. ತತ್ಕಾಲ್‌ನಲ್ಲಿ ಸೇವೆ ಪಡೆದು ಕೊಂಡ ಫಲಾನುಭವಿಗಳಿಂದ ಸಂಗ್ರಹಿಸಿರುವ ಮೊತ್ತವನ್ನು ಪರವಾನಿಗೆ (License)ಪಡೆದ ಭೂ ಮಾಪಕರಿಗೆ ಪಾವತಿ ಮಾಡದಿರುವುದರ ಜೊತಗೆ ಈ ಮೊತ್ತವನ್ನು ಸರ್ಕಾರದ ಖಜಾನೆಗೂ ಪಾವತಿಸಿಲ್ಲ.ಇದರ ಬದಲಿಗೆ ಪ್ರತ್ಯೇಕ ಖಾತೆಯಲ್ಲಿಡಲಾಗಿದೆ. ಸೇವೆ ಸಲ್ಲಿಸಿದ ಭೂ ಮಾಪಕರಿಗೆ ಸಂಭಾವನೆ ಪಾವತಿಸದಿರುವುದು ಸರ್ಕಾರದ ಅನ್ಯಾಯದ ನಡೆಯಾಗಿದೆ ಎಂದು ಪೀಠ ತಿಳಿಸಿದೆ. ರಾಜ್ಯ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಅನುಮತಿ ಪಡೆದ ಭೂ ಮಾಪಕರಿಗೆ ಮುಂದಿನ ಮೂರು ತಿಂಗಳಲ್ಲಿ ಸಂಭಾವನೆ ಪಾವತಿಸುವಂತೆ ಹೈಕೋರ್ಟ್(High court) ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕೆ. ಬಿ. ಲೋಕೇಶ್ ಸೇರಿ 1,130 ಮಂದಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ರಾಮಚಂದ್ರ ಹುದ್ದಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ಈ ಆದೇಶವನ್ನು ಹೊರಡಿಸಾಲಗಿದೆ. ಎರಡು ಸುತ್ತಿನ ಕಾನೂನು ಹೋರಾಟದ ನಂತರ 15 ವರ್ಷದ ಹಿಂದೆ ಮಾಡಿದ್ದ ಹೆಚ್ಚುವರಿ ಕೆಲಸಕ್ಕೆ ಇದೀಗ ಲಾಭ ದೊರಕಲಿದೆ.ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪರವಾನಗಿ ಹೊಂದಿರುವ 1000ಕ್ಕೂ ಅಧಿಕ ಭೂ ಮಾಪಕರಿಗೆ ಹೆಚ್ಚುವರಿ ಸಂಭಾವನೆ ಸಿಗತ್ತಿರುವುದು ಖುಷಿಯ ವಿಚಾರ.
ಹೈಕೋರ್ಟ್(High court) ಆದೇಶವೇನು?:
ಸರ್ಕಾರ ಆದೇಶದ ಅವಧಿಯಲ್ಲಿ ಅರ್ಜಿ ಸಲ್ಲಿಸಿರುವ ಭೂ ಮಾಪಕರು ಸೇವೆ ಸಲ್ಲಿಸಿರುವ ಸಂಬಂಧ ಖಚಿತಪಡಿಸಿಕೊಂಡು ಸಂಭಾವನೆ ಪಾವತಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಸೇವಕರ ರಕ್ತ ಮತ್ತು ಬೆವರಿಗೆ ಬೆಲೆ ನೀಡಬೇಕಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಸಂಭಾವನೆ ಪಾವತಿಗೆ ಸೂಚನೆ ನೀಡಿ ಆದೇಶಿಸಿದೆ.
ಈ ಆದೇಶವನ್ನು ಪಾಲಿಸುವಲ್ಲಿ ವಿಳಂಬವಾದರೆ ಯಾವ ಶಿಕ್ಷೆ ದೊರೆಯುತ್ತದೆ?
”ಸಂಭಾವನೆ ಪಾವತಿಸುವ ಪ್ರಕ್ರಿಯೆ ವಿಳಂಬವಾದಲ್ಲಿ ಶೇ.1 ರಷ್ಟು ಬಡ್ಡಿ(interest)ಯನ್ನು ಪಾವತಿ ಮಾಡಬೇಕು. ಆ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.