ಭಾರತದ ಪ್ರಸಿದ್ಧ ದೇಸಿಯ ಮೊಬೈಲ್ ಕಂಪನಿ ಹೊಸ ಸ್ಮಾರ್ಟ್ ವಾಚ್ ಸರಣಿಯನ್ನು ದೇಶೀಯ ಮಾರುಕಟ್ಟೆಗೆ ಇಂದು ಬಿಡುಗಡೆ ಮಾಡಿದೆ.
ಹೊಸ ಪ್ರೋವಾಚ್ ಸ್ಮಾರ್ಟ್ ವಾಚ್ ಸರಣಿಯಲ್ಲಿ ಎರಡು ವಾಚ್‌ಗಳನ್ನು ಬಿಡುಗಡೆ ಮಾಡಲಾಗಿದ್ದು . ಎರಡೂ ವಾಚ್‌ಗಳು ಆಕರ್ಷಕ ವಿನ್ಯಾಸ ಮತ್ತು ಬಲವಾದ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ ಮತ್ತು ಈ ಸ್ಮಾರ್ಟ್ ವಾಚ್ ಗಳ ಬೆಲೆ 3,000 ರೂ.ಗಿಂತ ಕಡಿಮೆ ಇರುವುದು ವಿಶೇಷವಾಗಿದೆ.
ಲಾವಾ ಭಾರತದಲ್ಲಿ Prowatch ZN ಮತ್ತು Prowatch VN ಅನ್ನು ಇಂದು ದೆಹಲಿ ಯಲ್ಲಿ ಅಧಿಕೃತ ವಾಗಿ ಬಿಡುಗಡೆ ಮಾಡಿದೆ. ಈ ಎರಡರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ಕೆಳಗೆ ಕೊಡಲಾಗಿದೆ.
Lava Prowatch ZN ನ ವೈಶಿಷ್ಟ್ಯಗಳು
ಹೊಸ ಪ್ರಮುಖ Prowatch ZN 60 Hz ನ ರಿಫ್ರೆಶ್ ದರದೊಂದಿಗೆ 1.43 ಇಂಚಿನ AMOLED ಪ್ಯಾನೆಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆಯನ್ನು ಹೊಂದಿದೆ ಮತ್ತು ಇದರ ಗರಿಷ್ಠ ಹೊಳಪು 600 ನಿಟ್ಸ್ ಆಗಿದೆ. ಇದರ ಪಿಕ್ಸೆಲ್ ಸಾಂದ್ರತೆಯು AOD ವೈಶಿಷ್ಟ್ಯದೊಂದಿಗೆ 326 ppi ಆಗಿದೆ. ವಾಚ್‌ನಿಂದ ಕರೆಗಳನ್ನು ಸ್ವೀಕರಿಸಲು ಮತ್ತು ಸಂಪರ್ಕ ಕಡಿತಗೊಳಿಸಲು ಬ್ಲೂಟೂತ್ ಕರೆ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಹೆಚ್ಚಿನ ನಿಖರತೆಯ PPG ಸಂವೇದಕವನ್ನು ಹೊಂದಿದೆ, ಇದು ನಿಖರವಾದ ಆರೋಗ್ಯ ನಿಯತಾಂಕಗಳನ್ನು ಅಳೆಯುತ್ತದೆ. ಇದು ಒತ್ತಡ, ಚಟುವಟಿಕೆ, ಉಸಿರಾಟ,SPO2 ಮತ್ತು ಹೃದಯ ಬಡಿತದ ವೈಶಿಷ್ಟ್ಯವನ್ನು ಒದಗಿಸಲಾಗಿದೆ.
ವಿಶೇಷವಾಗಿ ಬ್ಲೂಟೂತ್ 5.2 ಬೆಂಬಲವನ್ನು ಹೊಂದಿದೆ. ವಾಚ್ ನಲ್ಲಿ 350mAh ಬ್ಯಾಟರಿಯನ್ನು ಕೊಡಲಾಗಿದೆ , ಇದು ಒಂದು ಗಂಟೆ ಚಾರ್ಜ್ ಮಾಡುವ ಮೂಲಕ 7 ರಿಂದ 8 ದಿನಗಳವರೆಗೆ ಸಾಮಾನ್ಯ ಬ್ಯಾಕಪ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಐಪಿ 68 ಪ್ರಮಾಣೀಕರಣವನ್ನೂ ಪಡೆದುಕೊಂಡಿದೆ. ಇದು 30 ನಿಮಿಷಗಳ ಕಾಲ 1.5 ಆಳವಾದ ನೀರಿನಲ್ಲಿ ಇಟ್ಟರು ಯಾವುದೇ ತೊಂದರೆ ಆಗುವುದಿಲ್ಲ. ಹೌದು ವಾಟರ್ ಪ್ರೂಫ್ ಸೌಲಭ್ಯ ಹೊಂದಿದೆ
ಮತ್ತು 110+ ಸ್ಪೋರ್ಟ್ಸ್ ಮೋಡ್‌ಗಳು, 150+ ವಾಚ್ ಫೇಸ್‌ಗಳನ್ನು ಹೊಂದಿದೆ, ಇದನ್ನು ಪ್ರೊ ವಾಚ್ ಅಪ್ಲಿಕೇಶನ್‌ನಿಂದ ಮೊಬೈಲ್ ಫೋನ್ ಗೆ ಕನೆಕ್ಟ್ ಮಾಡಬಹುದು.
Lava Prowatch ZN ಲಾವಾ ವಿಶೇಷ ಬೆಲೆಯನ್ನು ಘೋಷಿಸಿದ್ದು, ಕ್ರಮವಾಗಿ 2,588 ಮತ್ತು 2,999 ರೂ ಆಗಿದೆ
Prowatch VN ವಿಶೇಷತೆಗಳು.
Prowatch VN 320×386 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.96 ಇಂಚಿನ TFT 2.5D ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಇದರ ಗರಿಷ್ಠ ಹೊಳಪು 500 ನಿಟ್‌ಗಳು. ಇದು 115+ ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ 150 ವಾಚ್ ಫೇಸ್‌ಗಳು, ಬ್ಲೂಟೂತ್ ಕರೆ ಸೌಲಭ್ಯ ನೀಡಲಾಗಿದೆ.
ನೀರು ಮತ್ತು ಧೂಳಿನ ಸುರಕ್ಷತೆಗಾಗಿ IP67 ರೇಟಿಂಗ್ ನೀಡಲಾಗಿದೆ. ಸ್ಮಾರ್ಟ್ ವಾಚ್ ಆರೋಗ್ಯ ಮೇಲ್ವಿಚಾರಣೆ, ಹೃದಯ ಬಡಿತ ಸಂವೇದಕ, SPO2 ಟ್ರ್ಯಾಕರ್, ಒತ್ತಡ ಮಟ್ಟದ ಟ್ರ್ಯಾಕರ್ ಮತ್ತು ನಿದ್ರೆ ಟ್ರ್ಯಾಕರ್ ಅನ್ನು ಹೊಂದಿದೆ.
Prowatch VN- ಈ ವಿಶೇಷ ವಾಚ್ ರೂ 1,999 ಬೆಲೆಯಲ್ಲಿ ಲಭ್ಯವಿದೆ. ಈ ಎರಡು ಸ್ಮಾರ್ಟ್ ವಾಚ್ ಮಾರಾಟವು ಅಮೆಜಾನ್ ಮತ್ತು ಕಂಪನಿಯ ಅಧಿಕೃತ ಸೈಟ್‌ನಲ್ಲಿ ಏಪ್ರಿಲ್ 26 ರಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ.
the best one quality ..brother 👌