LIC HFL Recruitment: LIC ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

IMG 20240727 WA0003

ಈ ವರದಿಯಲ್ಲಿ LIC ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

LIC HFL ನಿಂದ 200 ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ:

ಎಲ್‌ಐಸಿ ಹೆಚ್‌ಎಫ್‌ಎಲ್‌ (ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌) 200 ಜೂನಿಯರ್ ಅಸಿಸ್ಟಂಟ್(Junior Assistant) ಹುದ್ದೆಗಳ ನೇಮಕಾತಿ(Recruitment)ಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ನಿಗದಿತ ದಿನಾಂಕದ ಒಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿವರ:

ನೇಮಕಾತಿ ಪ್ರಾಧಿಕಾರ: ಭಾರತೀಯ ಜೀವ ವಿಮಾ ನಿಗಮ

ಉದ್ಯೋಗ ಸಂಸ್ಥೆ: ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌(LIC Housing Finance Limited)

ಹುದ್ದೆ ಹೆಸರು: ಜೂನಿಯರ್ ಅಸಿಸ್ಟಂಟ್(Junior Assistant)

ಒಟ್ಟು ಹುದ್ದೆಗಳ ಸಂಖ್ಯೆ: 200

ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 38

ಮಾಸಿಕ ವೇತನ: ರೂ.32,000-35,200
ಅರ್ಹತೆಗಳ ವಿವರ:

ವಿದ್ಯಾರ್ಹತೆ(Educational Qualification):

ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿವಿ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿ ಪಾಸಾಗಿರಬೇಕು.

ವಯೋಮಿತಿ(Age limit):

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 28 ವರ್ಷ ಆಗಿರಬೇಕು.

ಅರ್ಜಿ ಶುಲ್ಕ(Application fee):

ಅಭ್ಯರ್ಥಿಗಳು ಅಗತ್ಯ ಅರ್ಜಿ ಶುಲ್ಕ ರೂ. 800/- (ಎಲ್ಲಾ ಅಭ್ಯರ್ಥಿಗಳಿಗೆ ಅನ್ವಯಿಸುತ್ತದೆ) ಇದು ಮರುಪಾವತಿಸಲಾಗುವುದಿಲ್ಲ. GST @ 18% ಅನ್ನು ಅರ್ಜಿ ಶುಲ್ಕದಲ್ಲಿ ವಿಧಿಸಲಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಮೋಡ್(Online mode) ಮೂಲಕ ಮಾತ್ರ ಅಗತ್ಯ ಶುಲ್ಕವನ್ನು ಪಾವತಿಸಬೇಕು. ಆನ್‌ಲೈನ್ ಪಾವತಿಗೆ ಅನ್ವಯವಾಗುವ ವಹಿವಾಟು ಶುಲ್ಕವನ್ನು ಅರ್ಜಿದಾರರು ಭರಿಸಬೇಕಾಗುತ್ತದೆ.

ಆಯ್ಕೆ ವಿಧಾನ(Selection process):

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್‌ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದೆ. 200 ಅಂಕಗಳಿಗೆ ಆಬ್ಜೆಕ್ಟಿವ್‌ ಮಾದರಿಯ ಮಲ್ಟಿಪಲ್ ಚಾಯ್ಸ್‌ ಪ್ರಶ್ನೆಗಳ ಪರೀಕ್ಷೆ ಇರುತ್ತದೆ. ಇಂಗ್ಲೀಷ್, ಲಾಜಿಕಲ್ ರೀಸನಿಂಗ್, ಜೆನೆರಲ್ ಅವಾರ್‌ನೆಸ್, ಪ್ರೊಫೆಶನಲ್ ನಾಲೆಡ್ಜ್‌ ವಿಷಯಗಳಲ್ಲಿ 50 ಪ್ರಶ್ನೆಗಳು ಇರುತ್ತವೆ. ಪರೀಕ್ಷಾ ಅವಧಿ 120 ನಿಮಿಷಗಳು.

ಅಸಿಸ್ಟಂಟ್ ಹುದ್ದೆಗಳ ಮಾಸಿಕ ವೇತನ:

ಅಪ್ರೆಂಟಿಸ್‌: ರೂ.9,000-15,000

ಅಸಿಸ್ಟಂಟ್: ರೂ.22,730

ಅಸಿಸ್ಟಂಟ್ ಮ್ಯಾನೇಜರ್: ರೂ.53,620

ಅಸಿಸ್ಟಂಟ್ ಮ್ಯಾನೇಜರ್ (ಲೀಗಲ್): ರೂ.32,815

ಪ್ರೊಬೇಷನ್ ಅವಧಿ: ನೇಮಕಗೊಂಡ
ದಿನಾಂಕದಿಂದ 1 ವರ್ಷ.

ಅರ್ಜಿ ಸಲ್ಲಿಕೆ ವಿಧಾನ(Application process):

ಎಲ್‌ಐಸಿ ಹೆಚ್‌ಎಫ್‌ಎಲ್‌ ಅಧಿಕೃತ ವೆಬ್‌ಸೈಟ್‌ www.lichousing.com ಗೆ ಭೇಟಿ ನೀಡಿ.

‘Careers’ ಆಯ್ಕೆಯನ್ನು ಕ್ಲಿಕ್ ಮಾಡಿ.

‘Job Opportunities’ ಆಯ್ಕೆ ಮಾಡಿ.

‘Recruitment of Junior Assistant’ ಲಿಂಕ್ ಮೇಲೆ ಕ್ಲಿಕ್ ಮಾಡಿ.

‘Apply Online’ ಆಯ್ಕೆ ಮಾಡಿ ಮತ್ತು ಅಗತ್ಯ ಮಾಹಿತಿಗಳನ್ನು ಪೂರ್ತಿ ಮಾಡಿ.

ಕಡ್ಡಾಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ.

ಅರ್ಜಿ ಸಲ್ಲಿಸಿ ಮತ್ತು ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

ಅರ್ಜಿಯ ಆರಂಭಿಕ ದಿನಾಂಕ: 25-07-2024

ಅರ್ಜಿಯ ಕೊನೆ ದಿನಾಂಕ: 14-08-2024

ಅಡ್ಮಿಟ್‌ ಕಾರ್ಡ್‌(Admit card)ಡೌನ್‌ಲೋಡ್ ದಿನಾಂಕ: ಪರೀಕ್ಷೆಗೆ 7-14 ದಿನಗಳ ಮುನ್ನ.

ಪರೀಕ್ಷೆ ದಿನಾಂಕ: ಸೆಪ್ಟೆಂಬರ್ 2024.

ಈ ಅವಕಾಶವನ್ನು ಉಪಯೋಗಿಸಿ, ಅರ್ಹ ಅಭ್ಯರ್ಥಿಗಳು ವೇಗವಾಗಿ ಅರ್ಜಿ ಸಲ್ಲಿಸಿ ಉತ್ತಮ ಭವಿಷ್ಯದತ್ತ ಹೆಜ್ಜೆಹಾಕಿರಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!