ಎಲ್‌ಐಸಿ ಸ್ಮಾರ್ಟ್ ಪಿಂಚಣಿ ಯೋಜನೆ: ನಿವೃತ್ತಿಯ ಆರ್ಥಿಕ ಭದ್ರತೆಗೆ ಹೊಸ ಆಯ್ಕೆ!
ಭಾರತೀಯ ಜೀವ ವಿಮಾ ನಿಗಮ (LIC) ನಿವೃತ್ತ ವ್ಯಕ್ತಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ ‘ಸ್ಮಾರ್ಟ್ ಪಿಂಚಣಿ ಪ್ಲಾನ್’ (Smart pension plan) ಅನ್ನು ಪರಿಚಯಿಸಿದೆ. ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಿದರೆ ಜೀವನಪೂರ್ತಿ ಪಿಂಚಣಿ ಲಭ್ಯವಾಗುವ ಈ ಯೋಜನೆ, ಹಣಕಾಸಿನ ದೃಷ್ಟಿಯಿಂದ ಸುರಕ್ಷಿತ ಹಾಗೂ ಭರವಸೆಗೆ ಉದಾಹರಣೆಯಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯನ್ನು ಹಣಕಾಸು ಸೇವೆಗಳ (Financial Services) ಕಾರ್ಯದರ್ಶಿ ಎಂ. ನಾಗರಾಜು ಮತ್ತು ಎಲ್‌ಐಸಿ ಸಿಇಒ ಸಿದ್ಧಾರ್ಥ ಮೊಹಾಂತಿ ಅವರು ಉದ್ಘಾಟಿಸಿದರು. ಇದು ಸಿಂಗಲ್ ಪ್ರೀಮಿಯಂ ಸ್ಕೀಮ್ (Single Premium scheme) ಆಗಿದ್ದು, ಹೂಡಿಕೆದಾರರು ಒಮ್ಮೆ ಹಣ ಹೂಡಿಕೆ ಮಾಡುತ್ತಿದ್ದಂತೆ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ.
ಈ ಯೋಜನೆಯ ವಿಶೇಷತೆಗಳು:
1. ಆರ್ಥಿಕ ಭದ್ರತೆ (Economic Security) :
ನಿವೃತ್ತಿ ನಂತರದ ಜೀವನದಲ್ಲಿ ಹಣಕಾಸಿನ ಸ್ಥಿರತೆ ಒದಗಿಸಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ. ಹೂಡಿಕೆದಾರರು ನಿರ್ವಹಿಸಬಹುದಾದ ಆದಾಯವನ್ನು ನಿರಂತರವಾಗಿ ಪಡೆಯಲು ಇದು ಸಹಾಯ ಮಾಡುತ್ತದೆ.
2. ಒಂದು ಬಾರಿಯ ಪ್ರೀಮಿಯಂ (one time Premium) :
ಈ ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ ಒಮ್ಮೆ ಮಾತ್ರ ಪೂರ್ಣ ಮೊತ್ತ ಪಾವತಿಸಿದರೆ ಸಾಕು, ನಂತರ ನಿರಂತರವಾಗಿ ಪಿಂಚಣಿ ಪಡೆಯಬಹುದು.
3. ವಿವಿಧ ಪಿಂಚಣಿ ಆಯ್ಕೆಗಳು (Different Pension selection) :
ಹೂಡಿಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸಿಂಗಲ್ ಲೈಫ್ ಅಥವಾ ಜಾಯಿಂಟ್ ಲೈಫ್ ಪಿಂಚಣಿ ಆಯ್ಕೆಗಳು (ವರ್ಷಾಶನ) ಹೊಂದಬಹುದು. ಇದರಿಂದ ನಿಗದಿತ ಅವಧಿಯಲ್ಲಿ ಅಥವಾ ಜೀವನ ಪೂರ್ತಿಗೂ ಪಿಂಚಣಿ ಪಡೆಯುವ ಅವಕಾಶ ಲಭ್ಯವಿರುತ್ತದೆ.
4. ಹಿಂತೆಗೆದುಕೊಳ್ಳುವ ಅವಕಾಶ:
ತುರ್ತು (Emergency) ಅವಶ್ಯಕತೆಗಳ ಸಂದರ್ಭದಲ್ಲಿ ಹೂಡಿಕೆದಾರರು ಅರ್ಧ ಅಥವಾ ಸಂಪೂರ್ಣ ಮೊತ್ತವನ್ನು ಹಿಂತೆಗೆದುಕೊಳ್ಳಲು ಅವಕಾಶವಿದೆ.
5. ಕನಿಷ್ಠ ಹೂಡಿಕೆ:
ಈ ಯೋಜನೆಯ ಅಡಿಯಲ್ಲಿ ಕನಿಷ್ಠ ಹೂಡಿಕೆ ಮೊತ್ತ 1 ಲಕ್ಷ ರೂಪಾಯಿ ಆಗಿದೆ.
6. ಸಾಲ ಸೌಲಭ್ಯ (Loan facility) :
ಹೂಡಿಕೆ ಮಾಡಿದ 3 ತಿಂಗಳ ನಂತರ, ಪಾಲಿಸಿಯಡಿ ಸಾಲ ಪಡೆಯುವ ಅವಕಾಶ ಸಿಗುತ್ತದೆ.
ಸ್ಮಾರ್ಟ್ ಪಿಂಚಣಿ ಯೋಜನೆಯ (Smart Pension scheme) ಕನಿಷ್ಠ ಖರೀದಿ ಬೆಲೆ: ₹1,00,000/- ಹಾಗೂ ಗರಿಷ್ಠ ಖರೀದಿ ಬೆಲೆ: ಯಾವುದೇ ಮಿತಿ ಇಲ್ಲ (ಅಂಡರ್ ರೈಟಿಂಗ್ ನೀತಿಯ ಅನುಮೋದನೆಗೆ ಒಳಪಟ್ಟಿರುತ್ತದೆ).
ಕನಿಷ್ಠ ವರ್ಷಾಶನ ಮೊತ್ತ:
ಪ್ರತಿ ತಿಂಗಳು: ₹1,000/-
ತ್ರೈಮಾಸಿಕ: ₹3,000/-
ಅರ್ಧ ವರ್ಷ: ₹6,000/-
ವರ್ಷಪೂರ್ತಿ: ₹12,000/-
ಗರಿಷ್ಠ ವರ್ಷಾಶನ: ಯಾವುದೇ ಮಿತಿ ಇಲ್ಲ
ಪ್ರೀಮಿಯಂ ಪಾವತಿ ವಿಧಾನ: ಸಿಂಗಲ್ ಪ್ರೀಮಿಯಂ (ಒಮ್ಮೆಲೇ ಪಾವತಿ)
ಯಾರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು?:
18 ರಿಂದ 100 ವರ್ಷ ವಯಸ್ಸಿನೊಳಗಿನವರು ಈ ಯೋಜನೆಯನ್ನು ಖರೀದಿಸಲು ಅರ್ಹರಾಗಿದ್ದಾರೆ. ನಿವೃತ್ತಿಯ ಆರ್ಥಿಕ ಭದ್ರತೆ ಬೇಕಾದ ಎಲ್ಲರಿಗೂ ಇದು ಉಪಯುಕ್ತ ಆಯ್ಕೆಯಾಗಲಿದೆ.
ಎಲ್‌ಐಸಿ ‘ಸ್ಮಾರ್ಟ್ ಪಿಂಚಣಿ ಪ್ಲಾನ್’ (Smart Pension Plan) ನಿವೃತ್ತಿಯ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಅತ್ಯುತ್ತಮ ಆಯ್ಕೆ. ಇದರ ಮೂಲಕ ಹೂಡಿಕೆದಾರರು ತಮ್ಮ ಭವಿಷ್ಯದ ಆದಾಯದ ಬಗ್ಗೆ ಆತಂಕವಿಲ್ಲದೆ ಸುಖ ಜೀವನ ನಡೆಸಬಹುದು. ಒಂದೇ ಬಾರಿಗೆ ಹೂಡಿಕೆ ಮಾಡಿ ನಿರಂತರ ಆದಾಯದ ಮೂಲವನ್ನು ರೂಪಿಸಿಕೊಳ್ಳಲು ಇದು ಸುಗಮ ಮತ್ತು ನಂಬಿಕೆ ಅರ್ಹವಾಗಿರುವ ಯೋಜನೆಯಾಗಿದೆ. ಇನ್ನು ಆರ್ಥಿಕ ಭದ್ರತೆಗೆ ಇದು ಉತ್ತಮ ಆಯ್ಕೆಯಾಗಿದೆ!.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.