ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, LIC ಜೀವನ್ ಅಕ್ಷಯ್ ಯೋಜನೆಯ ಬಗ್ಗೆ ತಿಳಿಸಿ ಕೊಡುತ್ತೇವೆ. ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ. ನೀವು ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಇದರ ಲಾಭವನ್ನು ಪಡೆಯಲು ಬಯಸಿದರೆ ಈ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
LIC ಜೀವನ್ ಅಕ್ಷಯ್ ಯೋಜನೆ(LIC jeevan akshay scheme):
ದೇಶದ ಅತಿದೊಡ್ಡ ವಿಮಾ ಕಂಪನಿ LIC, ಪ್ರತಿ ವರ್ಗ ಮತ್ತು ವಯಸ್ಸಿನವರಿಗೆ ದೇಶದಾದ್ಯಂತ ಕೋಟ್ಯಂತರ ಪಾಲಿಸಿದಾರರನ್ನು ಹೊಂದಿದೆ. ಭಾರತೀಯ ಜೀವ ವಿಮಾ ನಿಗಮದ (LIC) ಪಾಲಿಸಿಯು ಸರ್ಕಾರಿ ವಿಮಾ ಕಂಪನಿಯಾಗಿದ್ದು, ಹೂಡಿಕೆ ಮಾಡಲು ಉತ್ತಮವೆಂದು ಪರಿಗಣಿಸಲಾಗಿದೆ. ನೀವು ಉತ್ತಮ ಆದಾಯವನ್ನು ಪಡೆಯುವಂತಹ ಮನೆಯಲ್ಲಿ ಕುಳಿತು ಹೂಡಿಕೆ ಮಾಡುವ ಕೆಲವು ಪಾಲಿಸಿಗಳಿವೆ. ಅದರಲ್ಲಿ LIC ಯು ಈಗಾಗಲೇ ಜನಸಾಮಾನ್ಯಾರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ಒಂದು ಪಾಲಿಸಿಯು LIC ಜೀವನ್ ಅಕ್ಷಯ್ ಪಾಲಿಸಿಯಾಗಿದೆ, ಇದರಲ್ಲಿ ನಿಮ್ಮ ನಿಯಮಿತ ಆದಾಯವು ಒಂದು ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಿದ ನಂತರ ಪ್ರತಿ ತಿಂಗಳು ಪ್ರಾರಂಭವಾಗುತ್ತದೆ. ನಿವೃತ್ತಿ ಯೋಜನೆಗೆ ಸಂಬಂಧಿಸಿದಂತೆ ಇದು ಉತ್ತಮ ಆಯ್ಕೆಯಾಗಿದೆ.
LIC ಜೀವನ್ ಅಕ್ಷಯ್ ಪಾಲಿಸಿ:
LIC ಯ ಜೀವನ್ ಅಕ್ಷಯ್ ಪಾಲಿಸಿಯಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ ಸರ್ವಸಾಮನ್ಯ ಜನರು 20,000 ರೂಪಾಯಿಯ ವರೆಗೂ ಪೆನ್ಷನ್ ಹಣವನ್ನ ಪಡೆದುಕೊಳ್ಳಬಹುದಾಗಿದೆ . LIC ‘ಜೀವನ್ ಅಕ್ಷಯ್’ ಇದು ಸಿಂಗಲ್ ಪ್ರೀಮಿಯಂ ಪಾಲಿಸಿಯಾಗಿದ್ದು, ತಕ್ಷಣದಲ್ಲಿಯೇ ಪೆನ್ಷನ್ ನೀಡಲು ಆರಂಭಿಸುತ್ತದೆ. ಆದರೆ, ಇದರಲ್ಲಿ ಗರಿಷ್ಠ ಹೂಡಿಕೆ ಮಿತಿ ಇಲ್ಲ. ಅಂದರೆ ಹೆಚ್ಚಿನ ಹೂಡಿಕೆ, ಮಾಸಿಕ ಪಿಂಚಣಿ ಹೆಚ್ಚಾಗುತ್ತದೆ.
LIC ಅಕ್ಷಯ್ ಯೋಜನೆಯ ವೈಶಿಷ್ಟ್ಯಗಳು :
ಇದು ಸಿಂಗಲ್ ಪ್ರೀಮಿಯಂ ಪಾಲಿಸಿಯಾಗಿದೆ, ಹಾಗಾಗಿ ತಕ್ಷಣದಲ್ಲಿಯೇ ನೀಡಲು ಆರಂಭಿಸಲಾಗುತ್ತದೆ.
LIC ಜೀವನ್ ಅಕ್ಷಯ ಪಾಲಿಸಿಯಲ್ಲಿ ಕನಿಷ್ಠ 12 ಸಾವಿರ ರೂಪಾಯಿಯ ಪೆನ್ಷನ್ ಲಾಭವನ್ನು ಪಡೆಯಬಹುದು.
ಈ ಯೋಜನೆಯ ಒಂದು ವಿಶೇಷತೆ ಏನೆಂದರೆ ನಿಮಗೆ ಸಾಲದ ಅಗತ್ಯವಿದ್ದಲ್ಲಿ ಈ ಪಾಲಿಸಿಯನ್ನು ಖರೀದಿಸಿ 90 ದಿನಗಳ ನಂತರ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು .
ಈ ಯೋಜನೆಯಲ್ಲಿ ಕನಿಷ್ಠ 1 ಲಕ್ಷ ಹೂಡಿಕೆ ಮಾಡಬೇಕು ಮತ್ತು ಗರಿಷ್ಟ ಹೂಡಿಕೆಗೆ ಯಾವುದೇ ಮೀತಿಇರುವದಿಲ್ಲ .
ಈ ಪಾಲಿಸಿಯಲ್ಲಿ, ನೀವು ಪ್ರೀಮಿಯಂ ಅನ್ನು ಒಮ್ಮೆ ಠೇವಣಿ ಮಾಡಬೇಕು, ಅದರ ನಂತರ ಪ್ರತಿ ತಿಂಗಳು ಪೆನ್ಷನ್ ಖಾತರಿಪಡಿಸುತ್ತದೆ .
LIC ಯ ಜೀವನ್ ಅಕ್ಷಯ್ ಪಾಲಿಸಿಯನ್ನು ಖರೀದಿಸಲು ಕನಿಷ್ಠ ವಯಸ್ಸು 30 ವರ್ಷ ಮತ್ತು ಗರಿಷ್ಠ ವಯಸ್ಸು 85 ವರ್ಷ ಮೀರಿರಬೇಕು .
LIC ಜೀವನ್ ಅಕ್ಷಯ್ ಯೋಜನೆಗೆ ಅರ್ಹತೆಯ ಮಾನದಂಡ ಈ ಕೆಳಗಿನಂತಿವೆ:
ಪ್ರವೇಶದ ಕನಿಷ್ಠ ವಯಸ್ಸು: 30 ವರ್ಷಗಳು
ಪ್ರವೇಶದ ಗರಿಷ್ಠ ವಯಸ್ಸು: 85 ವರ್ಷಗಳು
ವರ್ಷಾಶನದ ಕನಿಷ್ಠ ಖರೀದಿ ಬೆಲೆ: ರೂ.1,00,000
ವರ್ಷಾಶನದ ಗರಿಷ್ಠ ಖರೀದಿ ಬೆಲೆ: ಯಾವುದೇ ಮಿತಿಯಿಲ್ಲ
LIC ಪ್ರೀಮಿಯಂ ಪಾವತಿ ವಿಧಾನಗಳು- ವಾರ್ಷಿಕ, ದ್ವೈವಾರ್ಷಿಕ, ತ್ರೈಮಾಸಿಕ, ಮಾಸಿಕ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
LIC ಜೀವನ್ ಅಕ್ಷಯ್ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ:
ಡೆತ್ ಬೆನಿಫಿಟ್ ಸಿಗುತ್ತದೆ.
ಮೆಚುರಿಟಿ ಲಾಭ ಲಭ್ಯವಾಗುತ್ತದೆ.
ಆದಾಯ ತೆರಿಗೆ ಪ್ರಯೋಜನ ನೀಡಲಾಗುತ್ತದೆ.
LIC ಯ ಜೀವನ್ ಅಕ್ಷಯ್ ಪಾಲಿಸಿಯ ಪೆನ್ಷನ್ ಆಯ್ಕೆಗಳು:
ಈ ಯೋಜನೆಯಡಿಯಲ್ಲಿ ಒಟ್ಟು 10 ವಿವಿಧ ಪೆನ್ಷನ್ ಆಯ್ಕೆಗಳಿವೆ.
ಆಯ್ಕೆ 1: ಜೀವನಕ್ಕಾಗಿ ತಕ್ಷಣದ ವರ್ಷಾಶನ.
ಆಯ್ಕೆ 2: 5 ವರ್ಷಗಳ ಖಾತರಿ ಅವಧಿಯೊಂದಿಗೆ ತಕ್ಷಣದ ವರ್ಷಾಶನ.
ಆಯ್ಕೆ 3: 10 ವರ್ಷಗಳ ಖಾತರಿ ಅವಧಿಯೊಂದಿಗೆ ತಕ್ಷಣದ ವರ್ಷಾಶನ.
ಆಯ್ಕೆ 4: 15 ವರ್ಷಗಳ ಖಾತರಿ ಅವಧಿಯೊಂದಿಗೆ ತಕ್ಷಣದ ವರ್ಷಾಶನ.
ಆಯ್ಕೆ 5: 20 ವರ್ಷಗಳ ಖಾತರಿ ಅವಧಿಯೊಂದಿಗೆ ತಕ್ಷಣದ ಪಿಂಚಣಿ.
ಆಯ್ಕೆ 6: ಖರೀದಿ ಬೆಲೆಯ ವಾಪಸಾತಿಯೊಂದಿಗೆ ಜೀವನಕ್ಕಾಗಿ ತಕ್ಷಣದ ಪಿಂಚಣಿ.
ಆಯ್ಕೆ 7: ಜೀವನಕ್ಕೆ ತಕ್ಷಣದ ಪಿಂಚಣಿಯು ವಾರ್ಷಿಕ 3% ನಂತೆ ಹೆಚ್ಚಾಗುತ್ತದೆ.
ಆಯ್ಕೆ 8: ಪ್ರಾಥಮಿಕ ಪಿಂಚಣಿದಾರನ ಮರಣದ ನಂತರ ದ್ವಿತೀಯ ಪೆನ್ಷನ ದಾರನಿಗೆ 50% ನೀಡುವುದು.
ಆಯ್ಕೆ 9: ಜಾಯಿಂಟ್ ಲೈಫ್ ಇಮ್ಮಿಡಿಯೇಟ್ ವರ್ಷಾಶನವು ಯಾವುದೇ ಪಿಂಚಣಿದಾರ ಬುದುಕಿರುವವರೆಗೆ 100% ಪಿಂಚಣಿ ನೀಡುತ್ತದೆ.
ಆಯ್ಕೆ 10: ಜಾಯಿಂಟ್ ಲೈಫ್ ಇಮ್ಮಿಡಿಯೇಟ್ ವರ್ಷಾಶನ, ಎಲ್ಲ ಪಿಂಚಣಿದಾರರು ಬದುಕಿರುವವರೆಗೂ 100% ರಷ್ಟು ಪಿಂಚಣಿ ನೀಡುವುದು, ಮರಣದ ನಂತರ ಖರೀದಿ ಬೆಲೆಯನ್ನು ಹಿಂತಿರುಗಿಸುವುದು.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Sir lic jeavan akshaya monthy estu amount katbeku sir.