ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಪರವಾನಗಿ ಭೂಮಾಪಕರ( Licensed Land Surveyor) ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗೆ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅರ್ಹತೆಗಳು ಯಾವುವು?, ವಿದ್ಯಾರ್ಹತೆ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ?, ವಯೋಮಿತಿ ಏನಿರಬೇಕು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಯಾವ ದಾಖಲೆಗಳು ಬೇಕಾಗುತ್ತವೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಪರವಾನಗಿ ಭೂಮಾಪಕರ ಹುದ್ದೆ ( Licensed Land Surveyor Recruitment) 2023:
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ವತಿಯಿಂದ ಪರವಾನಗಿ ಭೂಮಾಪಕರ ಹುದ್ದೆಗೆ 2000 ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪರವಾನಗಿ ನೀಡಲಾದ ಭೂಮಾಪಕರಿಗೆ ಸರ್ಕಾರದ ಆದೇಶ ನಿಗದಿಪಡಿಸಿರುವಂತೆ ಪ್ರತಿ ಅಳತೆ ಕಾರ್ಯಕ್ಕೆ ಇಲಾಖೆಯಿಂದ ಸೇವಾ ಶುಲ್ಕವನ್ನು ನೀಡಲಾಗುವುದು. ಭೂಮಾಪಕನ ಕೆಲಸ ನಿರ್ವಹಿಸಲು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ಧಪ್ರಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್ 2023 ರಲ್ಲಿ ನಡೆಸಲು ಉದ್ದೇಶಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರ :
ಹುದ್ದೆಯ ಹೆಸರು : ಪರವಾನಗಿ ಭೂಮಾಪಕರು ( Licensed Land Surveyor)
ಒಟ್ಟು ಖಾಲಿ ಹುದ್ದೆಗಳು : 2000
ಇದನ್ನೂ ಓದಿ: SSLC, PUC ಆದವರಿಗೆ ಅಬಕಾರಿ ಇಲಾಖೆಯಲ್ಲಿ ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾವ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?:
ಜಿಲ್ಲೆ | ಹುದ್ದೆಗಳು |
ಉಡುಪಿ | 86 |
ಉತ್ತರಕನ್ನಡ | 75 |
ಕೊಡಗು | 25 |
ಕೋಲಾರ | 53 |
ಗದಗ | 54 |
ಚಿಕ್ಕಮಗಳೂರು | 83 |
ಚಿತ್ರದುರ್ಗ | 73 |
ಚಾಮರಾಜನಗರ | 35 |
ತುಮಕೂರು | 110 |
ದಕ್ಷಿಣ ಕನ್ನಡ | 36 |
ದಾವಣಗೆರೆ | 95 |
ಧಾರವಾಡ | 92 |
ಬೆಂಗಳೂರು ಗ್ರಾಮಾಂತರ | 66 |
ಬೆಂಗಳೂರು ಜಿಲ್ಲೆ | 125 |
ಬಿಜಾಪುರ | 32 |
ಬೆಳಗಾವ | 85 |
ಬಳ್ಳಾರಿ | 55 |
ವಿಜಯನಗರ | 47 |
ಬಾಗಲಕೋಟಿ | 47 |
ಬೀದರ್ | 35 |
ಮಂಡ್ಯ | 71 |
ಮೈಸೂರು | 40 |
ಯಾದಗಿರಿ | 20 |
ರಾಮನಗರ | 100 |
ರಾಯಚೂರು | 40 |
ಶಿವಮೊಗ | 125 |
ಹಾವೇರಿ | 152 |
ಹಾಸನ | 60 |
ಕೊಪ್ಪಳ | 28 |
ಕಲಬುರಗಿ | 10 |
ಚಿಕ್ಕಬಳ್ಳಾಪುರ | 45 |
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು:
- ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
- ದುಡಕಾಯವಾಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅಭ್ಯರ್ಥಿಗಳು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು.
- ಅಭ್ಯರ್ಥಿಯು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಪಡೆದು ತೇರ್ಗಡೆಯನ್ನು ಹೊಂದಿರಬೇಕು.
ಶೈಕ್ಷಣಿಕ ಅರ್ಹತೆಗಳು:
- ಕನಿಷ್ಠ ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ.) ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ 12 ನೇ ತರಗತಿ ಸಿ.ಬಿ.ಎಸ್.ಇ ಅಥವಾ ಐ.ಸಿ.ಎಸ್.ಇ, ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ 60% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು
- ಅಥವಾ ಭಾರತದಲ್ಲಿ, ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ. (ಸಿವಿಲ್) / ಅಥವಾ ಬಿ.ಟೆಕ್ (ಸಿಎಲ್) / ಅಥವಾ ಸಿವಿಲ್ ಇಂಜಿನೀಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು.
- ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ
ಸರ್ವೆ” ಯಲ್ಲಿ ಪದವಿ ಪೂರ್ವ ದಿನಮಾದಲ್ಲಿ ಉತ್ತೀರ್ಣರಾಗಿರಬೇಕು ಅಥವಾ
- ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐ.ಟಿ.ಐ. ಇನ್
ಸರ್ವೆ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ
- ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೆ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ ಒಳಪಟ್ಟ, ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ, ಕವಿಪ್ರ, 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.
ವಯೋಮಿತಿ :
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ 65 ವರ್ಷಗಳು ಮೀರಿರಬಾರದು.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 20 ಫೆಬ್ರವರಿ, 2023
ಅರ್ಜಿ ಶುಲ್ಕ :
ಈ ಹುದ್ದೆಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಅರ್ಜಿಯ ಶುಲ್ಕ 1000/- ಆಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ
ಹಂತ 1: ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಮೊದಲಿಗೆ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: URL ನಲ್ಲಿ “Engagement of Licensed Surveyors -2023” ಆನ್ ಲೈನ್, ಎಂದು ಪ್ರದರ್ಶನ ವಾಗುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಹಂತ 3: ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು. CAPTCHA ದಾಖಲಿಸುವುದು.
ಹಂತ 4: ನಂತರ ಓಟಿಪಿಯನ್ನು ಜನರೇಟ್ ಮಾಡಬೇಕು. ನಮೂದಿಸಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ದಾಖಲಿಸುವುದು ಹಾಗೂ Submit ಮಾಡುವುದು.
ಹಂತ 5: ನಂತರ ಆನ್ ಲೈನ್ ಅರ್ಜಿಯಲ್ಲಿ ಅಗತ್ಯ ಎಲ್ಲಾ ಮುಖ್ಯ ವಿವರಗಳನ್ನು (ಹೆಸರು ಮತ್ತು ಆಧಾರ್ /ವೋಟರ್ ಐಡಿ ನಂಬರ್) ಭರ್ತಿ ಮಾಡಿ ಪುನ: Submit ಮಾಡುವುದು.
ಹಂತ 6: ಅರ್ಜಿ ನಮೂನೆಗಳನ್ನು ಪೂರ್ಣಗೊಳಿಸಿದ ನಂತರ ಸಹಿ ಮಾಡಿದ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು.
ಹಂತ 7: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ Submit button ಒತ್ತುವುದು, ನಂತರ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸುವುದು.
ಹಂತ 7: ಆನ್ ಲೈನ್ ಮೂಲಕ ಶುಲ್ಕವನ್ನು ಪಾವತಿಸಿದ ನಂತರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಹಂತ 8: ಆನ್ ಲೈನ್ ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ Submit ಮಾಡಿದ ನಂತರ ಪರದೆಯ ಮೇಲೆ ಸ್ವೀಕೃತಿ ಪತ್ರ ಮೂಡುತ್ತದೆ. ಸ್ವೀಕೃತಿ ಪತ್ರ PRINT ತೆಗೆದುಕೊಂಡು, ಅದರಲ್ಲಿ ನಮೂದಿಸಿರುವ ವಿಶಿಷ್ಟ ಅರ್ಜಿ ಸಂಖ್ಯೆ (Application ID) ಯನ್ನು ಇಲಾಖೆಯೊಂದಿಗಿನ ಮುಂದಿನ ಎಲ್ಲಾ ವ್ಯವಹಾರಗಳಿಗೆ ಬಳಸುವುದು.
ನೀವೇನಾದರೂ ಸರ್ಕಾರದ ಹುದ್ದೆಗಳಿಗೆ ಹುಡುಕುತ್ತಿದ್ದರೆ, ಇದು ಒಂದು ಉತ್ತಮ ಅವಕಾಶವಾಗಿದೆ. ಹಾಗಾಗಿ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಈ ಕೂಡಲೇ ನಿಮ್ಮ ಎಲ್ಲಾ ಸ್ನೇಹಿತರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್ಶಿಪ್ ಗಳ ಮಾಹಿತಿ
- SSP ಸ್ಕಾಲರ್ಶಿಪ್ : Click Here
- ಧರ್ಮಸ್ಥಳ ಸುಜ್ಞಾನನಿಧಿ ಸ್ಕಾಲರ್ಶಿಪ್: Click Here
- ರೈತ ವಿದ್ಯಾನಿಧಿ ಸ್ಕಾಲರ್ಶಿಪ್: Click Here
- ಕೇಂದ್ರ ಸರ್ಕಾರದ ಲೇಬರ್ ಕಾರ್ಡ್ ಸ್ಕಾಲರ್ಶಿಪ್: Click Here
- ಎಚ್‌ಡಿಎಫ್‍ಸಿ ಬಡ್ತೆ ಕದಂ: Click Here
- ಹೊಸ ಕೈಂಡ್ ಸ್ಕಾಲರ್ಶಿಪ್ ಕೋಟಕ್ ಕನ್ಯಾ ಸ್ಕಾಲರ್ಶಿಪ್: Click Here
- ವಿದ್ಯಾಸಿರಿ ಸ್ಕಾಲರ್ಶಿಪ್: Click Here
- ಕ್ರೆಡಿಟ್ ಸ್ವಿಸ್ ಸ್ಕಾಲರ್ಶಿಪ್ 2022 : Click Here
- ಲದೂಮಾ ದಮೇಚ ಯುವಾ ಸ್ಕಾಲರ್ಶಿಪ್ 2022 : Click Here
- ಫೆಡರಲ್ ಬ್ಯಾಂಕ್ ಸ್ಕಾಲರ್ಶಿಪ್ 2022: Click Here
- ಕೋಲ್ಗೇಟ್ ಸ್ಕಾಲರ್ಶಿಪ್ 2022-23: Click Here
- ಜಿಂದಾಲ್ ಸ್ಕಾಲರ್ಶಿಪ್ 2022: Click Here
- SSP ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: Click Here
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/
ಇದನ್ನೂ ಓದಿ:
25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?
ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022
ಗೂಗಲ್ ಪೇ ಲೋನ್ : ಗೂಗಲ್ ಪೇ ನಲ್ಲಿ 8 ಲಕ್ಷ ರೂಪಾಯಿ ಸಾಲ ಸೌಲಭ್ಯ : ಈಗಲೇ ಅರ್ಜಿ ಸಲ್ಲಿಸಿ