Loan Scheme- ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ, ಹೈನುಗಾರಿಕೆಗೆ, ಕುರಿ, ಮೇಕೆ ಸಾಕಾಣಿಕೆಗೆ ಬೆಂಬಲ, ಇಲ್ಲಿದೆ ಮಾಹಿತಿ

loan scheme

ರೈತರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು, ರೈತರಿಗಾಗಿ ಕೇಂದ್ರ ಸರ್ಕಾರದ ವತಿಯಿಂದ ಮಹತ್ವದ ಯೋಜನೆಗಳಲ್ಲಿ ಒಂದಾದ ಕಿಸಾನ್ ಕ್ರೆಡಿಟ್‌ ಕಾರ್ಡ್ ಯೋಜನೆಯಡಿಯಲ್ಲಿ ( Kisan Credit Card Scheme ) ಕಡಿಮೆ ಬಡ್ಡಿಗೆ ರೈತರಿಗೆ ಸಾಲ ಸಿಗಲಿದೆ. ಈ  ಸಾಲ ಸೌಲಭ್ಯ ಪಶುಸಂಗೋಪನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ನೀಡಲಾಗುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮುಖ್ಯವಾಗಿ ಈ ಒಂದು ಯೋಜನೆಯ ಉದ್ದೇಶ ( Purpose ) ಏನೆಂದರೆ ಪಶುಸಂಗೋಪನೆಯಲ್ಲಿ ( Animal Husbandry ) ತೊಡಗಿಸಿಕೊಂಡಂತಹ ರೈತರನ್ನು ಆರ್ಥಿಕವಾಗಿ ಸದೃಢ ಗೊಳಿಸಲು ಭಾರತ ಸರ್ಕಾರದ, ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್‌/ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಈ ಸಾಲ ಸೌಲಭ್ಯ ನೀಡಲು ಮುಂದಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ನ ಮುಖ್ಯ ಮಾಹಿತಿ :

ಈ ಕಿಸಾನ್ ಕ್ರೆಡಿಟ್ ಕಾರ್ಡ್  (Kisan Credit Card Loan) ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ.3 ಲಕ್ಷಗಳವರೆಗೆ ದೊರೆತ್ತದೆ. ಮತ್ತು ಪ್ರತಿ ರೈತರಿಗೆ ರೂ.10 ಲಕ್ಷ ಸಾಲ ಸೌಲಭ್ಯವನ್ನು ಪಡೆಯುವ ಅವಕಾಶವನ್ನು ಸರ್ಕಾರ ನೀಡುತ್ತಿದೆ.

ಹಾಗೆಯೇ ಇನ್ನೊಂದು ಮುಖ್ಯ ವಿಚಾರ ಎಂದರೆ ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಸಾಲಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ದೊರೆಯುತ್ತದೆ ಈ ಸಾಲವನ್ನು ಮರುಪಾವತಿ ಮಾಡಿದಲ್ಲಿ ವರ್ಷಕ್ಕೆ ಶೇ.3 ರಷ್ಟು ಬಡ್ಡಿ ಸಹಾಯಧನದ ಸೌಲ ಸೌಲಭ್ಯವನ್ನು ( Loan Facility ) ಕೂಡ ಈ ಒಂದು ಯೋಜನೆಯ ಅಡಿಯಲ್ಲಿ ಪಡೆಯಬಹುದು. ರೈತರು ಬ್ಯಾಂಕುಗಳಿಂದ ಪಡೆಯುವ ಸಾಲದ ಬಡ್ಡಿ ದರಕ್ಕೆ ಒಟ್ಟು ಶೇ.5 ರಷ್ಟು ಬಡ್ಡಿ ರಿಯಾಯಿತಿಯನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿರುತ್ತದೆ.

ಈ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಅಡಿಯಲ್ಲಿ ಯಾವೆಲ್ಲಾ ಘಟಕಗಳಿಗೆ ಎಷ್ಟು ಸಾಲ ಸಿಗಲಿದೆ ? ಬಡ್ಡಿ ಎಷ್ಟು ? ಗರಿಷ್ಠ ಮಿತಿ ಏನು ? ಎಂಬುದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

1. ಹೈನುಗಾರಿಕೆ ( Dairy Farming ) :

ಮಿಶ್ರತಳಿ ದನಗಳ ನಿರ್ವಹಣೆಗೆ ಪ್ರತಿ ಹಸುವಿಗೆ ಗರಿಷ್ಠ 18000 ರೂಪಾಯಿಗಳಂತೆ ಅಂದರೆ ( 1+1 ) ಎರಡು ಹಸುಗಳಿಗೆ 36,000 ರೂಪಾಯಿ ಸಾಲ ಸೌಲಭ್ಯ ಇರುತ್ತದೆ.

ಹಾಗೆಯೇ ಸುಧಾರಿತ ಎಮ್ಮೆಗಳ ನಿರ್ವಹಣೆ (1+1) : ಪ್ರತಿ ಎಮ್ಮೆಗೆ ಗರಿಷ್ಠ 21,000 ರೂಪಾಯಿಗಳಂತೆ, ಎರಡು ಎಮ್ಮೆಗಳಿಗೆ 42,000 ರೂಪಾಯಿ ಸಾಲ ಸಿಗಲಿದೆ.

2. ಕುರಿ ಸಾಕಾಣಿಕೆ ( Sheep farming ) :

8 ತಿಂಗಳ ಸಾಕಾಣಿಕೆ ಅವಧಿಗೆ 10+1 ಕುರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 29,950 ರೂ. ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,700 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

– 8 ತಿಂಗಳ ಸಾಕಾಣಿಕೆ ಅವಧಿಗೆ 20+1 ಕುರಿಮರಿಗಳ ನಿರ್ವಹಣೆಗೆ ಕಟ್ಟಿ ಮೇಯಿಸುವ ಕುರಿಗಳಿಗೆ 57,200 ರೂ. ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ 28,200 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

– 10 ಕುರಿ ಮರಿಗಳ ಕೊಬ್ಬಿಸುವಿಕೆಗೆ 13,120 ರೂ. ರಂತೆ ಹಾಗೂ 20 ಕುರಿ ಮರಿಗಳ ಕೊಬ್ಬಿಸುವಿಕೆಗೆ 26,200 ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.

3. ಮೇಕೆ ಸಾಕಾಣಿಕೆ ( Goat Farming ) :

ಮೇಕೆಗಳ ನಿರ್ವಹಣೆ (10+1) (8 ತಿಂಗಳ ಸಾಕಾಣಿಕೆ ಅವಧಿ):
ಕಟ್ಟಿ ಮೇಯಿಸುವಂತಹ ಮೇಕೆಗಳಿಗೆ 29,250 ರೂಪಾಯಿಗಳು ಮತ್ತು ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 14,700 ರೂಪಾಯಿ ಸಾಲ ಸೌಲಭ್ಯ ಸಿಗಲಿದೆ.

ಹಾಗೆಯೇ (20+1) (8 ತಿಂಗಳ ಸಾಕಾಣಿಕೆ ಅವಧಿ):
ಕಟ್ಟಿ ಮೇಯಿಸುವಂತಹ ಮೇಕೆಗಳಿಗೆ 57,200 ರೂಪಾಯಿಗಳು ಮತ್ತು ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 28,200 ರೂಪಾಯಿ ಸಾಲ ಸೌಲಭ್ಯ

4. ಹಂದಿ ನಿರ್ವಹಣೆ ( Pig Farming ) :

10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ : 60,000 ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ.

5. ಕೋಳಿ ಸಾಕಾಣಿಕೆ ( Chicken Farming ) :

ಮಾಂಸದ ಕೋಳಿ ಸಾಕಾಣಿಕೆ (1 ಕೋಳಿಗೆ 80 ರೂಪಾಯಿ):
1000 ಕೋಳಿಗಳಿಗೆ ಗರಿಷ್ಠ 80,000 ರೂಪಾಯಿಗಳವರೆಗೆ ಸರ್ಕಾರವು ಸಾಲ ನೀಡಲಿದೆ.

ಮೊಟ್ಟೆ ಕೋಳಿ ಸಾಕಾಣಿಕೆ (1 ಕೋಳಿಗೆ 180 ರೂಪಾಯಿ):
1000 ಕೋಳಿಗಳಿಗೆ ಗರಿಷ್ಠ 1,80,000 ರೂಪಾಯಿಗಳವರೆಗೆ ಸರ್ಕಾರವು ಸಾಲ ನೀಡಲಿದೆ.

6. ಮೊಲ ಸಾಕಾಣಿಕೆ ( Rabit Forming ) :

ಮೊಲ ಸಾಕಾಣಿಕೆ (50+1) : ಗರಿಷ್ಠ 50,000 ರೂಪಾಯಿವರೆಗೆ ಸಾಲ ಸಿಗಲಿದೆ.

ಈ ಸಾಲ ಸೌಲಭ್ಯ ಪಡೆಯಲು ಬೇಕಾಗುವ ಮುಖ್ಯ ದಾಖಲೆಗಳ ( Documents ) ವಿವರ :

1. ಭರ್ತಿ ಮಾಡಿದ ಅರ್ಜಿ ನಮೂನೆ
2. ಬ್ಯಾಂಕ್ ಖಾತೆ ವಿವರ
3. ಆ‌ರ್.ಟಿ.ಸಿ
4. ಆಧಾರ್ ಕಾರ್ಡ್
5. ಭಾವಚಿತ್ರ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಆರ್ಥಿಕ ನೆರವು ಒದಗಿಸುವ ಅಭಿಯಾನವು ದಿನಾಂಕ 31-3- 2024 ವರೆಗೆ ಮುಂದುವರೆಸಲಾಗಿದೆ.

ಮತ್ತು ಈ ಯೋಜನೆಯಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲ್ಲಿ ನೀಡಿರುವ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿದು ಕೊಳ್ಳಬಹುದು. ದೂರವಾಣಿ ಸಂಖ್ಯೆ : 8277 100 200

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

WhatsApp Group Join Now
Telegram Group Join Now

Related Posts

One thought on “Loan Scheme- ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ, ಹೈನುಗಾರಿಕೆಗೆ, ಕುರಿ, ಮೇಕೆ ಸಾಕಾಣಿಕೆಗೆ ಬೆಂಬಲ, ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *

error: Content is protected !!