ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಚೀನಾದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಚೆರಿ ನ್ಯೂ ಎನರ್ಜಿ(Cheary new energy) ತನ್ನ ಹೊಸ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರನ್ನು (New little ant electric car) ಬಿಡುಗಡೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರ್ :
ಹೊಸ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರು (New little ant electric car) ಹೆಚ್ಚು ಆಕರ್ಷಕವಾದ ಪ್ರೊಫೈಲ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರಿನ ಮುಂಭಾಗದ ವಿನ್ಯಾಸವನ್ನು ನೋಡುವುದಾದರೆ , ಹೊಸ ಹೆಡ್‌ಲ್ಯಾಂಪ್‌ಗಳು ಮತ್ತು DRL ಗಳು ಮತ್ತು ಕ್ಲೋಸ್ಡ್ ಫ್ರಂಟ್ ಗ್ರಿಲ್ (Closed front grill) ಮತ್ತು ಇನ್ನೂ ಕೆಲವು ವಿಭಿನ್ನ ವಿನ್ಯಾಸಗಳನ್ನು ಹೊಂದಿದೆ. ಗ್ರಿಲ್‌ನಲ್ಲಿ ಹೊಸ Qq ಲೋಗೋ(Logo) ಕೂಡ ಇದೆ. ಇದರ ಹಿಂದಿನ ಪ್ರೊಫೈಲ್ ಹೆಚ್ಚಾಗಿ ಕ್ಲಾಸಿಕ್ ಲಿಟಲ್ ಆಂಟ್ ನಂತೆಯೇ (Classic little ant)ಇರುತ್ತದೆ ಎಂದು ತಿಳಿದಿದೆ.
ಹೊಸ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರನ ಒಳಗಡೆ ವಿನ್ಯಾಸವನ್ನು ನೋಡುವುದಾದರೆ, ಹೊಸ ಲಿಟಲ್ ಆಂಟ್ ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ (Dashboard) ನಲ್ಲಿ ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್(Touchscreen Infotinement system) ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೊಸದಾಗಿ
ಕಾಣುವ ಸ್ಟೀರಿಂಗ್ ವೀಲ್ ಮತ್ತು ಸ್ಲಿಮ್ಮರ್ ಏರ್ ವೆಂಟ್‌ಗಳೊಂದಿಗೆ ವಿಭಿನ್ನವಾಗಿ ಕಂಡಿದೆ. ಇನ್ನು ಚೆರಿ ನ್ಯೂ ಲಿಟಲ್ ಆಂಟ್‌ನ ಬೇರೆ ವಿನ್ಯಾಸಗಳೆಂದರೆ, ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ವೈರ್‌ಲೆಸ್ ಚಾರ್ಜಿಂಗ್, ಲೆದರ್ ಸೀಟ್ ಅಪ್ಹೋಲ್ಸ್ಟರಿ, ಹೀಟೆಡ್ ಸೀಟ್ ಮತ್ತು ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ ಎಂಬುದು ಕಾಣುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಕಾರಿನ ವೈಶಿಷ್ಟತೆ :
ಇದರ ಜೊತೆಗೆ ಚೆರಿ ನ್ಯೂ ಲಿಟಲ್ ಆಂಟ್ LED ಲೈಟ್‌ಗಳೊಂದಿಗೆ ದೊಡ್ಡ ಮೇಕ್ಅಪ್ ಮಿರರ್ ಮತ್ತು PM2.5 ಏರ್ ಫಿಲ್ಟರ್ ಅನ್ನು ಹೊಂದಿದೆ. ಈ ಕಾರಿನಲ್ಲಿ ವಾಯ್ಸ್ ಕಂಟ್ರೋಲ್ ಗಳು ಮತ್ತು ಅಪ್ಲಿಕೇಶನ್ ಮೂಲಕ ಕಂಟ್ರೋಲ್ ಮಾಡಬಹುದುದಾದ ರಿಮೋಟ್ ಕಂಟ್ರೋಲ್ ಮಾಡುವಂತಹ ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿಲಬಹುದು.ಈ ಎಲೆಕ್ಟ್ರಿಕ್ ಕಾರಿನಲ್ಲಿ ಸುರಕ್ಷತೆಗಾಗಿ, ಕಿಟ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಕೂಡಾ ಹೊಂದಿದೆ.ಇದರೊಂದಿಗೆ ಸುರಕ್ಷತೆಯ ಗಮನಹರಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು (Rear parking sensor), ಕ್ರೂಸ್ ಕಂಟ್ರೋಲ್ (cross control)ಮತ್ತು ಆಟೋಮ್ಯಾಟಿಲ್ ಪವರ್-ಆಫ್(Auto myatil power off) ಅನ್ನು ಒಳಗೊಂಡಿಸಿದೆ.
ಇನ್ನು ಗ್ರೌಂಡ್ ಕ್ಲಿಯರೆನ್ಸ್ (ground clearence)120mm ಆದರೆ ಟರ್ನಿಂಗ್ ರೇಡಿಯಸ್(turning radius) 4.55mtr ಆಗಿದೆ. ಸ್ಟ್ಯಾಂಡರ್ಡ್ ಪವರ್‌ಟ್ರೇನ್ (standard powerstrain)50 PS ಪವ(power)ರ್ ಮತ್ತು 95 Nm ಗರಿಷ್ಠ ಟಾರ್ಕ್(torque) ಅನ್ನು ನೀಡುತ್ತದೆ.
ಈ ಚೆರಿ ನ್ಯೂ ಲಿಟಲ್ ಆಂಟ್ ಎಲೆಕ್ಟ್ರಿಕ್ ಕಾರ್ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಬರುತ್ತದೆ. ಮೊದಲನೆಯದಾಗಿ ಈ ಎಲೆಕ್ಟ್ರಿಕ್ ಕಾರು 25.05 kWh ಲಿಥಿಯಂ ಐರಾನ್ ಫಾಸ್ಫೇಟ್ ಬ್ಯಾಟರಿ (Lithium Iron posphate battery) ಯೊಂದಿಗೆ 251km ರೇಂಜ್ ಅನ್ನು ನೀಡುತ್ತದೆ.
ಇನ್ನು ಇದರ ಜೊತೆಗೆ 28.86 kWh ಟರ್ನರಿ ಲಿಥಿಯಂ ಬ್ಯಾಟರಿ (Turnury lithium battery) ಮತ್ತು
29.23 kWh LFP ಬ್ಯಾಟರಿಯು 30km ರೇಂಜ್ ಅನ್ನು ನೀಡುತ್ತದೆ. ಆದರೆ ಈ ಎಲೆಕ್ಟ್ರಿಕ್ ಕಾರ 40.3 kWh ಟರ್ನರಿ ಲಿಥಿಯಂ ಬ್ಯಾಟರಿಯನ್ನು (Turnary lithium battery)ಹೊಂದಿದ್ದು, 408km ರೇಂಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರು RWD ಮಾದರಿಯಾಗಿದೆ ಎಂದು ಹೇಳಬಹುದು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಈ ಕಾರಿನ ಬೆಲೆ ಮತ್ತು ಲಭ್ಯತೆ :
ಇನ್ನೂ ಕೊನೆಯದಾಗಿ ಚೆರಿ ಎಲೆಕ್ಟ್ರಿಕ್ ಕಾರಿನ (chery electric car) ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿಯನ್ನು ತಿಲಿಯುವುದಾದರೆ, ಬಣ್ಣಗಳ ಆಯ್ಕೆಯ ಬಗ್ಗೆ ನಿರ್ದಿಷ್ಟವಾಗಿರುವ ಬಳಕೆದಾರರು ಹೊಸ ಲಿಟಲ್ ಆಂಟ್‌ನೊಂದಿಗೆ ಆಯ್ಕೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ಹೊಂದಿರುತ್ತಾರೆ. ಒಟ್ಟು ಏಳು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇವು ಡಾರ್ಕ್ ಗ್ರೀನ್, ಲೈಟ್ ಗ್ರೀನ್, ಪೀಚ್, ಅಗವೆ ಬ್ಲೂ, ವೈಟ್ ಮತ್ತು ಗ್ರೇ ಬಣ್ಣಗಳಾಗಿವೆ.ಹೊಸ ಚೆರಿ ಎಲೆಕ್ಟ್ರಿಕ್ ಕಾರಿನ (Chery Electric Car) ಪ್ರಾರಂಭಿಕ ಬೆಲೆಯು ಅಂದಾಜು ರೂ.8.92 ಲಕ್ಷವಾಗಿದೆ. ಚೆರಿ ಎಲೆಕ್ಟ್ರಿಕ್ ಕಾರಿನ ಟಾಪ್-ಸ್ಪೆಕ್(top spec) ರೂಪಾಂತರದ ಬೆಲೆಯು ಅಂದಾಜು ರೂ.9.49 ಲಕ್ಷವಾಗಿದೆ. ಈ ಚೆರಿ ನ್ಯೂ ಲಿಟಲ್ ಆಂಟ್ (chery new little ant) ನ್ಯೂ ಮಾಡೆಲ್ ಕಾರ್ (new model car)ಅನ್ನು ಕ್ಲಾಸಿಕ್ ಲಿಟಲ್ ಆಂಟ್(classic little ant)ನ ನವೀಕರಿಸಿದ ಆಕೃತಿ ಎಂದು ತಿಳಿದಿದೆ.
ನೀವೂ ಕೂಡಾ ಈ ಈ ಚೆರಿ ನ್ಯೂ ಲಿಟಲ್ ಆಂಟ್ (chery new little ant) ನ್ಯೂ ಮಾಡೆಲ್ ಕಾರ್ (new model car) ಅನ್ನು ಉತ್ತಮ ಬ್ಯಾಟರಿ ಆಯ್ಕೆಯುಳ್ಳ, ವಿವಿಧ ಬಣ್ಣಗಳ ಮತ್ತು ಉತ್ತಮ ಮೊತ್ತದಲ್ಲಿ ದೊರೆಯುವ ಈ ಕಾರ್ ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿಯನ್ನು ನೀವು ತಿಳಿದ ಮೇಲೆ ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಅವರಿಗೂ ಮಾಹಿತಿಯನ್ನು ತಿಳಿಸಿ, ಧನ್ಯವಾದಗಳು.
ಈ ಕಾರಿನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ