ಸ್ವಯಂ ಉದ್ಯೋಗ ಆರಂಭಿಸಲು 1.7 ಲಕ್ಷ ರೂ. ಸಾಲ ಮತ್ತು ಸಹಾಯಧನ! ಅಪ್ಲೈ ಮಾಡಿ

IMG 20240810 WA0005

ನೀವು ನಿರುದ್ಯೋಗ ಸಮಸ್ಯೆಯನ್ನು (unemployment problem) ಎದುರಿಸುತ್ತಿದ್ದೀರಾ? ಹಾಗಿದ್ದಲ್ಲಿ ಸ್ವ ಉದ್ಯೋಗವನ್ನು ಪ್ರಾರಂಭಿಸಲು ಇದು ಸುವರ್ಣಾವಕಾಶ.

ನಮ್ಮ ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆಯು ಹೇರಳವಾಗಿ ಕಾಡುತ್ತಿದೆ. ಹಲವಾರು ಜನರಿಗೆ ಉದ್ಯೋಗವಿಲ್ಲದೆ  ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವಿದ್ಯಾವಂತರು, ವಿದ್ಯಾವಂತರು ಎಲ್ಲರೂ ಕೂಡ ಇಂದು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇರೆಯವರ ಕೆಳಗಡೆ ಕೆಲಸ ಮಾಡುವುದಕ್ಕಿಂತ ತಾವೇ ಏನಾದರೂ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ನಿರುದ್ಯೋಗ (unemployment) ಸಮಸ್ಯೆಯನ್ನು ಎದುರಿಸುತ್ತಿರುವ ಎಲ್ಲರಿಗೂ ಕೂಡ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತಹ ವಿವಿಧ ನಿಗಮಗಳಿಂದ ಸಾಲ(loan)ದ ಜೊತಗೆ ಸಹಾಯಧನ ಸೌಲಭ್ಯವನ್ನು (subsidy facility) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಯಾವೆಲ್ಲ ದಾಖಲೆಗಳು ಬೇಕು? ಇದಕ್ಕೆ ಯಾರೆಲ್ಲಾ ಅರ್ಹರು? ಸಾಲ ಸೌಲಭ್ಯವನ್ನು ಹೇಗೆ ನೀಡಲಾಗುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಹಿಂದುಳಿದ ವರ್ಗಗಳ (backward classes) ಅಡಿಯಲ್ಲಿ ಬರುವಂತಹ ವಿವಿಧ ನಿಗಮಗಳಿಂದ ಸಾಲದ ಜೊತಗೆ ಸಹಾಯಧನ ಸೌಲಭ್ಯವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವರಿಗೆ ಸ್ವ ಉದ್ಯೋಗವನ್ನು (own business) ಪ್ರಾರಂಭಿಸಲು ಒಂದು ಸುಸಂದರ್ಭವಾಗಿದೆ. ಯಾರೆಲ್ಲಾ ಅರ್ಹ ಅಭ್ಯರ್ಥಿಗಳಿದ್ದಾರೋ ಅವರು ಇದರ ಅಡಿಯಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯವನ್ನು ಪಡೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು:?

ಈ ಯೋಜನೆಯ ಲಾಭವನ್ನು ಹಿಂದುಳಿದ ವರ್ಗಗಳಲ್ಲಿ ಬರುವಂತಹ ವಿವಿಧ 9 ನಿಗಮಗಳ ಜನರಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಬಂಧಪಟ್ಟ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬಹುದು. ವಿಶ್ವಕರ್ಮ ಮತ್ತು ಇದರ ಉಪ ಸಮುದಾಯಗಳು, ಉಪ್ಪಾರ ಮತ್ತು ಇದರ ಉಪ ಸಮುದಾಯಗಳು, ಅಂಬಿಗ ಮತ್ತು ಇದರ ಉಪ ಸಮುದಾಯಗಳು ಸವಿತಾ ಮತ್ತು ಅದರ ಉಪ ಸಮುದಾಯಗಳು, ಮಡಿವಾಳ ಮತ್ತು ಅದರ ಉಪ ಸಮುದಾಯಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು ಒಕ್ಕಲಿಗ ಮತ್ತು ಅದರ ಉಪ ಸಮುದಾಯಗಳು, ಲಿಂಗಾಯತ ಮತ್ತು ಅದರ ಉಪ ಸಮುದಾಯಗಳು, ಮರಾಠ ಮತ್ತು ಅದರ ಉಪ ಸಮುದಾಯಗಳು (ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಮೇಲೆ ತಿಳಿಸಲಾದ ಸಮುದಾಯದ ನಿಗಮಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ಕನಿಷ್ಠ ಅರ್ಹತೆಗಳು (qualifications) :

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಿದ್ಯಾರ್ಹತೆ ಕನಿಷ್ಠ 7ನೇ ತರಗತಿಯಿಂದ 10ನೇ ತರಗತಿಯವರೆಗೆ ಇದ್ದರೆ ಸಾಕು. ಹಾಗೂ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ 55 ವರ್ಷದೊಳಗೆ ಇರಬೇಕು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Documents) :

ಅಭ್ಯರ್ಥಿಯ ಆಧಾ‌ರ್ ಕಾರ್ಡ್ (Adhar card)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste and income certificate)
ಬ್ಯಾಂಕ್ ಪಾಸ್ ಬುಕ್(Bank pass book)
ಶೈಕ್ಷಣಿಕ ಅಂಕ ಪಟ್ಟಿಗಳು
ಅಭ್ಯರ್ಥಿಯ ರೇಷನ್ ಕಾರ್ಡ್

ಸಾಲ ಸೌಲಭ್ಯದ ಹಾಗೂ ಸಹಾಯಧನ ಮೊತ್ತದ ವಿವರ:

ಅರ್ಹ ಅಭ್ಯರ್ಥಿಗಳಿಂದ ಸಲ್ಲಿಸಿದ ಅರ್ಜಿಗಳು ಆಯ್ಕೆಯಾದ ನಂತರ ಸ್ವಯಂ ಉದ್ಯೋಗ ಆರಂಭಿಸಲು ಘಟಕದ ವೆಚ್ಚವು 1 ಲಕ್ಷ ರೂಪಾಯಿ ಇದ್ದರೆ ಅಂತಹ ಅಭ್ಯರ್ಥಿಗಳಿಗೆ ರೂ. 20,000 ಸಹಾಯಧನ ನೀಡಲಾಗುತ್ತದೆ. ಇನ್ನುಳಿದ ಬಾಕಿ ಹಣವನ್ನು (80,000 ರೂ.) ಬ್ಯಾಂಕ್ ನಲ್ಲಿ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಘಟಕದ ವೆಚ್ಚ 2 ಲಕ್ಷ ರೂಪಾಯಿ ಇದ್ದರೆ ರೂ.30,000 ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ. ಇನ್ನುಳಿದ ಬಾಕಿ ಹಣವನ್ನು (1.7 ಲಕ್ಷ ರೂ.) ಬ್ಯಾಂಕ್ ನಲ್ಲಿ ಸಾಲದ ರೂಪದಲ್ಲಿ ನೀಡಲಾಗುತ್ತದೆ.

ಗಮನಿಸಿ (Notice) :
ಅರ್ಜಿಗಳನ್ನು ಆನ್ನೈನ್ ಮುಖಾಂತರವೇ ಸಲ್ಲಿಸಬೇಕಾಗಿದ್ದು, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ವರ್ಗದ ನಿಗಮಕ್ಕೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “ಸ್ವಯಂ ಉದ್ಯೋಗ ಆರಂಭಿಸಲು 1.7 ಲಕ್ಷ ರೂ. ಸಾಲ ಮತ್ತು ಸಹಾಯಧನ! ಅಪ್ಲೈ ಮಾಡಿ

Leave a Reply

Your email address will not be published. Required fields are marked *

error: Content is protected !!