ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ  ಸಾಲ & ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

IMG 20240805 WA0000

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ(loan) ಪಡೆಯಲು ಅರ್ಜಿಗಳ ಆಹ್ವಾನ.

ಇದೀಗ ಸಮುದಾಯದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ (Veerashaiva Lingayat Development Corporation) ವತಿಯಿಂದ ಪ್ರತಿ ವರ್ಷ ಫಲಾನುಭವಿಗಳಿಗಾಗಿ ಸಾಲ, ಶೈಕ್ಷಣಿಕ ಸಾಲ, ವೈದ್ಯಕೀಯ, ಶಿಕ್ಷಣ ಹೀಗೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ 2024-25ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ವಿವಿಧ ಯೋಜನೆಯಡಿ ಶೈಕ್ಷಣಿಕ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date for Application) :

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿಯಾಗಿದೆ. ಆಸಕ್ತರು ಆ.31, ರೊಳಗೆ ಆನ್ ಲೈನ್ (Online) ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.

ಸಮುದಾಯದ ಅಭ್ಯರ್ಥಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ.

ಬಸವ ಬೆಳಗು ಯೋಜನೆ (Basava Belagu yojana) :

ಬಸವ ಬೆಳಗು ಯೋಜನೆಯು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ
ನೀಡುವ ಯೋಜನೆಯಾಗಿದ್ದು. ಇದರಿಂದ ಹಲವಾರು ಅಭ್ಯರ್ಥಿಗಳಿಗೆ ಉಪಯೋಗವಾಗಲಿದೆ. ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಯಬೇಕೆಂದರೆ ಹಲವು ನಿಯಮಗಳನ್ನು ಜಾರಿ ತರಲಾಗಿದೆ. ಅವುಗಳು ಈ ಕೆಳಗಿನಂತಿವೆ :

ಈ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸುವವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು. 2. ಕುಟುಂಬದ ವಾರ್ಷಿಕ ಆದಾಯ 3.5 ಲಕ್ಷ ರೂ.ಗಿಂತ ಹೆಚ್ಚಿರಬಾರದು.

ವೃತ್ತಿಪರ ಕೋರ್ಸ್‌ಗಳಿಗೆ 5 ಲಕ್ಷದ ವರೆಗೂ ಸಾಲ ಸೌಲಭ್ಯ :

ಈ ಯೋಜನೆಯಲ್ಲಿ ವೃತ್ತಿಪರ ಕೋರ್ಸ್‌ಗಳಾದ (Professional Courses) ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ 28 ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ವಾರ್ಷಿಕ 1 ಲಕ್ಷದಿಂದ ಗರಿಷ್ಟ 4 ಲಕ್ಷದಿಂದ 5 ಲಕ್ಷದವರೆಗೆ ಶೇ.2 ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತದೆ.

ವಿದೇಶ ವಿದ್ಯಾವಿಕಾಸ ಯೋಜನೆ :

ಇನ್ನೊಂದು ಮುಖ್ಯ ಯೋಜನೆಯು ಕೂಡ ಸಾಲ ಸೌಲಭ್ಯ ನೀಡುತ್ತಿದ್ದು ಈ ಯೋಜನೆಯಡಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಅವರ ಕುಟುಂಬ ವಾರ್ಷಿಕದ ಆದಾಯ ರೂ.8.00 ಲಕ್ಷಗಳ ಮಿತಿಯಲ್ಲಿರಬೇಕು.

ಈ ಯೋಜನೆಯ ಸಾಲ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿಹೆಚ್ಡಿ, ಮಾಸ್ಟರ್ ಆಗಿರಬೇಕು.
ಡಿಗ್ರಿ ಕೋರ್ಸ್ಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ ರೂ.10.00 ಲಕ್ಷಗಳಂತೆ 3ವರ್ಷದವರೆಗೆ ಒಟ್ಟು ರೂ.20.00 ಲಕ್ಷಗಳನ್ನು ಶೂನ್ಯಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

ವಿದೇಶ ವಿದ್ಯಾವಿಕಾಸ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳು :

ಮತ್ತೊಂದು ಯೋಜನೆಯಾದ ವಿದೇಶ ವಿದ್ಯಾವಿಕಾಸ ಯೋಜನೆಯು 2022-23 ಮತ್ತು 2023-24 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು ವ್ಯಾಸಂಗ ದೃಢೀಕರಣ ಮತು ಹಿಂದಿನ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಜೀವಜಲ ಯೋಜನೆ:

ಜೀವಜಲ ಯೋಜನೆಯು ಕೂಡ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಯೋಜನೆಯಾಗಿದ್ದು, ಇದರಲ್ಲೂ ಕೂಡ ಹಲವು ಸಾಲ ಸೌಲಭ್ಯ ದೊರೆಯುತ್ತದೆ. ಅವುಗಳ ಬಗ್ಗೆ ವಿವರ ಈ ಕೆಳಗೆ ನೀಡಲಾಗಿದೆ.

ಜೀವಜಲ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ವಿದ್ಯಾರ್ಥಿಗಳು ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿರಬೇಕು.
ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳ ಮಿತಿಯೊಳಗಿರಬೇಕು.
ದಕ್ಷಿಣಕನ್ನಡ, ಉಡುಪಿ, ಕೊಡಗು, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಸಣ್ಣ ಹಿಡುವಳಿದಾರರ ಪ್ರಮಾಣಪತ್ರಹೊಂದಿರಬೇಕು.

ಈ ಯೋಜನೆಯಲ್ಲಿ ಇರುವ ಸೌಲಭ್ಯಗಳು (Facilities) :

ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ಕೊಳವೆ ಬಾವಿ ಕೊರೆಸುವ ಮುಖೇನ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಘಟಕ ವೆಚ್ಚ ರೂ. 4.75 ಲಕ್ಷಗಳಲ್ಲಿ ರೂ. 4.25 ಲಕ್ಷಗಳು ಸಹಾಯಧನ, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಉಳಿದ ಜಿಲ್ಲೆಗಳಿಗೆ ಘಟಕ ವೆಚ್ಚರೂ. 3.75 ಲಕ್ಷಗಳಲ್ಲಿ ರೂ.3.25 ಲಕ್ಷ ಸಹಾಯಧನ, ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/- ಗಳ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ.

ಕಾಯಕ ಕಿರಣ ಯೋಜನೆ:

ವೀರಶೈವ-ಲಿಂಗಾಯತ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯಒದಗಿಸಲಾಗುವುದು.
ಘಟಕ ವೆಚ್ಚ ರೂ.1,00,000/- ಗಳಿಗೆ ಶೇ.20ರಷ್ಟು ಗರಿಷ್ಠ ರೂ.20,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ ರೂ.80,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.
ಘಟಕವೆಚ್ಚ ರೂ.2,00,000/- ಗಳಿಗೆ ಶೇ.15ರಷ್ಟು ಗರಿಷ್ಠ ರೂ.30,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.85ರಷ್ಟು ಗರಿಷ್ಠ ರೂ.1,70,000/-ಗಳನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

ಭೋಜನಾಲಯ ಕೇಂದ್ರ

ಸಮುದಾಯದ ಜನರು ಹೋಟೆಲ್ ಉದ್ಯಮ ಕೈಗೊಳ್ಳಲು ಈ ಯೋಜನೆಯಲ್ಲಿ ಸಾಲ ಮತ್ತು ಸಹಾಯಧನ ನೀಡಲಾಗುವುದು. ಹೋಟೆಲ್ ಉದ್ದಿಮೆ ಕೈಗೊಳ್ಳಲು ಘಟಕ ವೆಚ್ಚ ರೂ. 5.00 ಲಕ್ಷ ಇದರಲ್ಲಿ ರೂ.4,60,000/- ಬ್ಯಾಂಕ್ ಸಾಲ ಪಡೆದಿದ್ದಲ್ಲಿ ರೂ. 40,000/- ಸಹಾಯಧನ ನೆರವು ನೀಡಲಾಗುವುದು. ಲಾನುಭವಿಗಳು ತಮ ಸ್ವಂತ ಹೆಸರಿನಲ್ಲಿ ಕನಿಷ್ಠ 20್ಡ30 ಅಳತೆಯುಳ್ಳ ನಿವೇಶನ ಹೊಂದಿರಬೇಕು.

ವಿಭೂತಿ ನಿರ್ಮಾಣ ಘಟಕ :

ವೀರಶೈವ-ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸುವವರಿಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆ ಇದಾಗಿದೆ. ಕುಟುಂಬದ ವಾರ್ಷಿಕ ವರಮಾನ ರೂ.3.50 ಲಕ್ಷಗಳು ಮತ್ತು 18 ರಿಂದ 55 ವರ್ಷಗಳ ವಯೋಮಿತಿಯಲ್ಲಿರುವವರು ಅರ್ಜಿಸಲ್ಲಿಸಬಹುದು. ವಿಭೂತಿ ನಿರ್ಮಾಣ ಘಟಕ ನಿರ್ಮಿಸಲು ಘಟಕ ವೆಚ್ಚರೂ. 4.00 ಲಕ್ಷ ಇದರಲ್ಲಿ ರೂ.3,60,000/- ನಿಗಮದಿಂದ ಸಾಲ ಮತ್ತುರೂ. 40,000/- ಸಹಾಯಧನ ವಾರ್ಷಿಕ ಶೇ.3 ರ ಬಡ್ಡಿದರದಲ್ಲಿ ನೆರವು ನೀಡಲಾಗುವುದು.

ಸ್ವಾವಲಂಬಿ ಸಾರಥಿ ಯೋಜನೆ :

ವಾಣಿಜ್ಯಬ್ಯಾಂಕ್ಗಳ ಸಹಯೋಗದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯು ಸಾಲ ಸೌಲಭ್ಯ ನೀಡಲಿದ್ದು, ನಿರುದ್ಯೋಗಿ ಚಾಲಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲುಸ್ವಾವಲಂಭಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರವಾಹನ (ಹಳದಿಬೊರ್ಡ್) ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟುಅಥವಾ ಗರಿಷ್ಠ 3.00 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರುಮಾಡಲಾಗುತ್ತದೆ.
ಉಳಿದಮೊತ್ತವನ್ನುಬ್ಯಾಂಕ್/ ಹಣಕಾಸುಸಂಸ್ಥೆಗಳಮೂಲಕಅವರುವಿಸುವಚಾಲ್ತಿಬಡ್ಡಿದರದಲ್ಲಿಸಾಲಪಡೆಯುವುದು.ವಯೋಮಿತಿ 21 ರಿಂದ 45 ವರ್ಷಗಳವಯೋಮಿತಿಯಲ್ಲಿರುವವರು ಅರ್ಜಿಸಲ್ಲಿಸಬಹುದು.

ಸ್ವಯಂ ಉದ್ಯೋಗ ಸಾಲ ಯೋಜನೆ :

ಈ ಯೋಜನೆಯು ವಾಣಿಜ್ಯ ಬ್ಯಾಂಕ್ಗಳ ಸಹಯೋಗವನ್ನು ಸಾಲ ಸೌಲಭ್ಯ ನೀಡುತ್ತದೆ. ನಿರುದ್ಯೋಗಿಗಳಿಗೆ ಸ್ವಯಂಉದ್ಯೋಗ ಕಲ್ಪಿಸಿಕೊಳ್ಳಲು ಅವರುಕೈಗೊಳ್ಳುವ ಕೃಷಿ/ ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ ಮತ್ತು ಯಂತೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳು/ ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್ಗ ಮೂಲಕ ಸಾಲ ಪಡೆದಿದ್ದಲ್ಲಿ ನಿಗಮದಿಂದ ಶೇ.20 ರಷ್ಟು ಅಥವಾ ಗರಿಷ್ಠರೂ. 1.00 ಲಕ್ಷಗಳಸಹಾಯ ಧನ ಮಂಜೂರು ಮಾಡಲಾಗುತ್ತದೆ.

ಗಮನಿಸಿ (Notice)  :

ಅರ್ಜಿದಾರರು ತಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ (Adhar number Link) ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ (Bank account) ಆಧಾರ್ ಸಂಖ್ಯೆಯನ್ನು ಫೀಡ್ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಾಲತಾಣ ಅಥವಾ ನಿಗಮದ ದೂರವಾಣಿ ಸಂಖ್ಯೆ 080 22865522/ 9900012351 ಅನ್ನು ಸಂಪರ್ಕಿಸುವುದು ಅಥವಾ ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ  ಸಾಲ & ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Leave a Reply

Your email address will not be published. Required fields are marked *

error: Content is protected !!