ರೈತರೇ ಗಮನಿಸಿ -ಹೈನುಗಾರಿಕೆ  ಮಾಡಲು 40 ಸಾವಿರ ಸಹಾಯಧನ! ಹೀಗೆ ಅಪ್ಲೈ ಮಾಡಿ

IMG 20241017 WA0001

ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಿಹಿ ಸುದ್ದಿ, ರೈತರಿಗೆ ದೊರೆಯಲಿದೆ 40 ಸಾವಿರ ಸಹಾಯಧನ…!

ಇಂದು ರೈತರು ಬಹಳ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಇಲ್ಲ. ಹವಾಮಾನದ ವಿಪರೀತ ಬದಲಾವಣೆಯು (Climate change) ರೈತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಟ್ಟಿದೆ. ಇಂದು ರೈತರು ಬೆಳೆ ಬೆಳೆಯುದಕ್ಕೆ ಮುಂದಾದರೆ ಬಹಳ ಕಷ್ಟ ಅನುಭವಿಸುತ್ತಾನೆ. ರೈತನು ಬೆಳೆಯನ್ನು ಬೆಳೆದುಕೊಳ್ಳುವದರ ಜೊತೆಗೆ ಕೃಷಿ ಉಪಕಸುಬುಗಳಾದ ಹೈನುಗಾರಿಕೆ (Dairy farm), ಮೀನುಗಾರಿಕೆ (Fish farming), ಕೋಳಿ ಸಾಕಾಣಿಕೆ (poultry farm) ಮತ್ತು ಕುರಿ/ಆಡು( sheep and goat farming) ಸಾಕಾಣಿಕೆಯಲ್ಲಿಯು ತೊಡಗಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಹೈನುಗಾರಿಕೆಯಲ್ಲಿ ತೊಡಗಿರುವ ಅಥವಾ ಹೊಸದಾಗಿ ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಹಾಯ ಧನ(subsidy) ದೊರೆಯಲಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಇಲಾಖೆಯಿಂದ ಹೈನುಗಾರಿಕೆ (Dairy farming) ಯಲ್ಲಿ ತೊಡಗಿರುವವರಿಗೆ ಆರ್ಥಿಕ ನೆರವು :

ಇದೀಗ ಹೈನುಗಾರಿಕೆ ಮಾಡುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ರೈತನು ಕೃಷಿ ಮಾಡುವುದರ ಜೊತೆ ಜೊತೆಯಲಿ ಹೈನುಗಾರಿಕೆಯನ್ನು ಮಾಡಿ ಲಾಭಗಳಿಸಿಕೊಳ್ಳಬೇಕು ಎಂಬ ಆಶಯವನ್ನು ಇಟ್ಟುಕೊಂಡಿರುವಂತಹ ರೈತರಿಗೆ ಅಥವಾ ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಹಸು/ಎಮ್ಮೆ ಸಾಕಾಣಿಕೆಗೆ 40 ಸಾವಿರ ಅರ್ಥಿಕ ನೆರವನ್ನು (Dairy farm subsidy scheme) ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ದತಿ ಯೋಜನೆಯಡಿ ಪಡೆಯಬಹುದು.

ಸಮಗ್ರ ಕೃಷಿ ಪದ್ದತಿ ಯೋಜನೆ (Karnataka Agriculture deparment IFS scheme) ಯಡಿ ರೈತರಿಗೆ ಅರ್ಥಿಕ ನೆರವು :

ರೈತನು ಒಂದೇ ಬಗೆಯ ಬೆಳೆಯನ್ನು ಬೆಳೆದುಕೊಂಡು ಇಳುವರಿಯನ್ನು ಪಡೆಯುವ ಸಮಯದಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಆದ್ದರಿಂದ ರೈತರಿಗೆ ಆದಾಯವನ್ನು ಹೆಚ್ಚಿಸಲು ಕರ್ನಾಟಕ ರಾಜ್ಯ ಕೃಷಿ ಇಲಾಖೆಯು (Department of Agriculture) ಸಮಗ್ರ ಕೃಷಿ ಪದ್ಧತಿ ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ 2 ವರ್ಷದಿಂದ ಸಮಗ್ರ ಕೃಷಿ ಪದ್ದತಿ ಯೋಜನೆಯನ್ನು ಅನುಷ್ಥಾನ ಮಾಡಲಾಗಿದ್ದು, ಮುಖ್ಯವಾಗಿ ಕೃಷಿಯ ಉಪಕಸುಬುಗಳಾದ, ಕೋಳಿ ಸಾಕಣೆ, ಹೈನುಗಾರಿಕೆ, ಹಂದಿ ಸಾಕಾಣಿಕೆ, ಆಡು/ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ,ಮೀನು ಸಾಕಾಣಿಕೆ ಇಂತಹ ಕಸುಬುಗಳನ್ನು ಮಾಡುವುದರಿಂದ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಸಂಭವಿಸುವುದಿಲ್ಲ.

ಸಮಗ್ರ ಕೃಷಿ ಪದ್ದತಿ ಯೋಜನೆಯ ಮುಖ್ಯ ಉದ್ದೇಶ (purpose) :

ರೈತನ ಜೀವನ ಮಟ್ಟವನ್ನು ಸುಧಾರಿಸಿ ಅವನ ಆರ್ಥಿಕ ಪರಿಸ್ಥಿತಿಯಲ್ಲಿ ಸಮಗ್ರ ಕೃಷಿ ಪದ್ಧತಿಗಳು ತುಂಬಾ ಸಹಕಾರಿಯಾಗಿದೆ. 2022-23 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಕಾರ್ಯಕ್ರಮದಡಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಕೇವಲ ಬೆಳೆಗಳಿಂದ ಬರುತ್ತಿರುವ ಉತ್ಪಾದನೆಯು ಹಾಗೂ ಆದಾಯ ಕುಂಠಿತಗೊಳ್ಳುತ್ತಿದ್ದು ಕಾರಣ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪಕಸುಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಹೆಚ್ಚಿಸಿಕೊಂಡು ರೈತರ ಕುಟುಂಬಕ್ಕೆ ವರ್ಷಪೂರ್ತಿ ಉದ್ಯೋಗ ಸೃಷ್ಟಿಸಿ ರೈತನು ಸ್ವಾವಲಂಬಿ ಜೀವನವನ್ನು ಸಾಗಿಸಲು ಈ ಯೋಜನೆಯು ಸಹಾಯವಾಗುತ್ತದೆ. ಬಹಳ ಮುಖ್ಯವಾಗಿ ರೈತನಿಗೆ ಆರ್ಥಿಕವಾಗಿ ನೇರವಾಗುವುದು ಈ ಯೋಜನೆಯ ಗುರಿಯಾಗಿದೆ.

ಸಮಗ್ರ ಕೃಷಿ ಪದ್ದತಿ ಯೋಜನೆ ಉದ್ದೇಶಗಳು (Objectives) :

ಸಮಗ್ರ ಕೃಷಿ ಪದ್ದತಿ ಯೋಜನೆಯಡಿ ಕೃಷಿ ಮತ್ತು ಕೃಷಿಗೆ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವುದು.
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಬೇಸಾಯ ಪದ್ಧತಿ ಅಳವಡಿಸುವ ಮೂಲಕ ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಸುವುದು.
ರೈತನ ಆದಾಯವನ್ನು ತೋಟಗಾರಿಕೆ ಹಾಗೂ ಪಶು ಸಂಗೋಪನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ಹೆಚ್ಚಿಸುವುದು.
ರೈತನು ತಾನು ಬೆಳೆಯುವ ಬೆಳೆಯ ಜೊತೆಗೆ ಬೇರೆ ರೀತಿಯ ಆದಾಯ ಮೂಲಗಳನ್ನು ಅಳವಡಿಸಿಕೊಂಡು ಲಾಭ ಗಳಿಸುವಂತೆ ಪ್ರೇರೇಪಿಸುವುದು.

ಈ ಯೋಜನೆಯಡಿ ಯಾವ ಯಾವ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು (Economic help) ಪಡೆಯಬಹುದು ?

ಈ ಯೋಜನೆಯಡಿ ರೈತರು ಕೃಷಿ ಹೊಂಡ ನಿರ್ಮಾಣ(Farm pond) ಮಾಡಿಕೊಂಡು ಇದರಲ್ಲಿ ಮೀನು ಸಾಕಾಣಿಕೆಯನ್ನು ಮಾಡಬಹುದು. ಎಮ್ಮೆ ಹಾಗೂ ಹಸು ಸಾಕಾಣಿಕೆಗೆ(Dairy farm) ಮಾಡಿಕೊಂಡು ಆರ್ಥಿಕವಾಗಿ ಮುಂದೆಬರಲು ಈ ಯೋಜನೆ ಸಹಾಯ ಮಾಡುತ್ತದೆ. ಎರೆಹುಳು ಸಾಕಾಣಿಕೆ ಮಾಡಿ ಗೊಬ್ಬರ ತಯಾರಿಸಲು (Vermicompost) ಉತ್ತೇಜನ ನೀಡುತ್ತದೆ. ಇಂದು ಮೀನು ಸಾಕಾಣಿಕೆಯಲ್ಲಿ ಉತ್ತಮ ಲಾಭ ಬರುತ್ತಿದ್ದು ಮೀನು ಸಾಕಾಣಿಕೆಗೂ (Fish farming) ಕೂಡ ಆರ್ಥಿಕವಾಗಿ ನೆರವು ಮಾಡಿಕೊಡುತ್ತದೆ. ಇವುಗಳ ಜೊತೆಯಲ್ಲಿ ಅಜೋಲ್ಲಾ ಘಟಕ(Azolla bed), ಸಣ್ಣ ಪ್ರಮಾಣದ ಮೇವಿನ ಬೆಳೆಗೆ ನೆರವು(Fodder seeds),ಕೈತೋಟ ನಿರ್ಮಾಣಕ್ಕೆ ನೆರವು(Kitchen garden), ಮರ ಆಧಾರಿತ ಕೃಷಿ (Forestry crops) ಈ ರೀತಿಯಾದಂತಹ ಹಲವಾರು ಕೃಷಿಗಳಿಗೆ ಉತ್ತೇಜನ ನೀಡುವುದರ ಮೂಲಕ ಆರ್ಥಿಕ ಸಹಾಯವನ್ನು ಮಾಡಲಾಗುತ್ತದೆ.

ರೈತರಿಗೆ ದೊರೆಯುವ ಘಟಕವಾರು ಅರ್ಥಿಕ (Dairy farming subsidy) ನೆರವಿನ ವಿವರ ಹೀಗಿದೆ:

ರೈತರು ಮಾಡುವಂತಹ ಕೃಷಿ ಅನುಸಾರ ಈ ಯೋಜನೆಯಡಿ ಸಹಾಯಧನವನ್ನು ನೀಡಲಾಗುತ್ತದೆ. ನೀರು ಸಂರಕ್ಷಣೆ ಮಾಡಲು ವಿವಿಧ ಅಳತೆಗಳ ಚಿಕ್ಕ ಹೊಂಡಗಳ ಅನುಸಾರ ಸಹಾಯಧನವನ್ನು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ 10*10*3 – 13,173 ರೂ, 12*12*3 – 16,508 ರೂ, 15*15*3 – 22,808 ರೂ, 18*18*3 – 30,665 ರೂ, 21*21*3 – 40,041 ರೂ. ಹಾಗೂ ಲೈನಿಂಗ್ ವೆಚ್ಚ25000 ರೂಗಳನ್ನು ನೀಡಲಾಗುತ್ತದೆ. 2500 ರೂ.ಗಳನ್ನು ಸಸ್ಯಬೇಲಿ ಕೃಷಿಗೆ, ಬದುಗಳು/ಟ್ರೆಂಚ್ ಗಳಿಗೆ 2000 ರೂ, ಬೆಳೆ ಪದ್ದತಿ ಆಧಾರಿತ ಸಮಗ್ರ ಬೆಳೆ ಪ್ರಾತ್ಯಕ್ಷತೆ ಗೆ (ನೂತನ ತಳಿಗಳೊಂದಿಗೆ) – 15000 ರೂ. ಸಣ್ಣ ಪ್ರಮಾಣದ ಕುರಿ/ಮೇಕೆ/ಕೋಳಿ ಮತ್ತು ಮೇವಿನ ಬೆಳೆಗಳಿಗೆ 10000 ರೂ, ಎರೆಹುಳು ಗೊಬ್ಬರವನ್ನು ತಯಾರಿಸಲು 8500 ರೂ, ಅಜೋಲ್ಲಾಗೆ  1000 ರೂ, ಮರಳು ಆಧಾರಿತ ಕೃಷಿಗೆ  1000 ರೂ, ಕೈ ತೋಟ ಮಾಡಲು 1000 ರೂ, ಮೀನುಗಾರಿಕೆ ಮಾಡಲು 2500 ರೂ, ಪಶು ಆಹಾರ(ಹಸು/ಎಮ್ಮೆ (2 ಸಂಖ್ಯೆ) ಖರೀದಿ) ಬೆಳೆಗಳಾದ ಹೈಬ್ರಿಡ್ ನೇಪಿಯರ್ ಹಾಗೂ ಅವಶ್ಯಕವಿರುವ ಪಶು ಆಹಾರ ಬೆಳೆಯಲು 40,000 ರೂ.

ಹೈನುಗಾರಿಕೆಗೆ 50 ಸಾವಿರ ಸಹಾಯಧನ (Diary farming loan) :
ಮಳೆಯಾಶ್ರಿತ ಪ್ರದೇಶದ ಸಮಗ್ರ ಕೃಷಿ ಪದ್ದತಿ ಯೋಜನೆಯಡಿ ಒಬ್ಬ ರೈತನಿಗೆ ಎಲ್ಲಾ ಘಟಕಗಳಲ್ಲಿ ಗರಿಷ್ಠ ರೂ 1,25,000 ರವರಿಗೆ ಸಹಾಯಧನವನ್ನು ಪಡೆಯಬಹುದು. ನೀರಾವರಿ ಪ್ರದೇಶದ ರೈತರು ಸೇರಿದಂತೆ 2 ಹಸು ಅಥವಾ ಎಮ್ಮೆ ಸಾಕಾಣಿಕೆಗೆ ರೂ 50,000 ಸಾವಿರದವರೆಗೆ ಸಹಾಯಧನವನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು : (Documents for IFS yojana)

ಮೊದಲಿಗೆ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ರೈತರು ಸ್ವಂತ ಜಮೀನು ಹೊಂದಿರಬೇಕು.
ಅರ್ಜಿದಾರರ ಅಧಾರ್ ಕಾರ್ಡ (Aadhar card)
ಅರ್ಜಿದಾರರ ಪೋಟೋ (Photo)
ಜಮೀನಿನ ಪಹಣಿ (RTC) ಹೊಂದಿರಬೇಕು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಬ್ಯಾಂಕ್ ಪಾಸ್ ಬುಕ್ ಪ್ರತಿ (Bank pass book)
ಅರ್ಜಿ ನಮೂನೆ (ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತದೆ)
ಮೊಬೈಲ್ ನಂಬರ್ (Mobile number)

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ವಿಧಾನ (How to apply application) :

ಮೇಲೆ ತಿಳಿಸಿರುವ ಅಂತಹ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ರೈತರಿಗೆ ಹತ್ತಿರವಾಗಿರುವ ಹಳ್ಳಿಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಅನುದಾನ ಲಭ್ಯತೆ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!