ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

IMG 20241018 WA0000

ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರಸಾಲ(loan) ಯೋಜನೆಗೆ ಅರ್ಜಿ ಆಹ್ವಾನ..!

ಹಲವಾರು ಕಾರಣಗಳಿಂದ ಇಂದು ಅನೇಕರು ನಿರುದ್ಯೋಗಿಗಳಾಗಿದ್ದಾರೆ (Unemployed). ಆರ್ಥಿಕತೆಯ ಕಾರಣವು ಇರಬಹುದು. ಹೌದು ಇಂದು ಹಲವು ಸಮುದಾಯಗಳಿಗೆ ಸರ್ಕಾರದಿಂದ ಹಲವು ಯೋಜನೆಗಳು ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಸಮುದಾಯಗಳ ಕಲ್ಯಾಣ (Development) ನಡೆಯುತ್ತದೆ. ಇದೀಗ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಗುಡ್ ನ್ಯೂಸ್ ಒಂದು ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರವು (state government) ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದು, 2024 – 25ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ವೈಶಿಷ್ಟ್ಯಗಳು :

ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುತ್ತದೆ.

ಯೋಜನೆಯ ಘಟಕ ವೆಚ್ಚ ರೂ.1 ಲಕ್ಷ, ರೂ. 50 ಸಾವಿರ ಸಹಾಯಧನ ನೀಡುತ್ತಾರೆ ಹಾಗೂ ರೂ. 50 ಸಾವಿರ ಸಾಲ ಸೌಲಭ್ಯ

ಪರಿಶಿಷ್ಟ ಪಂಗಡಗಳ(ST) ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರದ ಕಲ್ಯಾಣ ಯೋಜನೆಗಳು :

ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ.

ಘಟಕ ವೆಚ್ಚ : ₹1 ಲಕ್ಷ
ಸಾಲ : ₹50,000 (ಶೇ.4 ರಷ್ಟು ಬಡ್ಡಿದರ)

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು (Documents) :

ಭಾವಚಿತ್ರ
ಜಾತಿ ಪ್ರಮಾಣಪತ್ರ (RD ಸಂಖ್ಯೆ ಹೊಂದಿರಬೇಕು)
ಆದಾಯ ಪ್ರಮಾಣಪತ್ರ (RD ಸಂಖ್ಯೆ ಹೊಂದಿರಬೇಕು)
ಆಧಾರ್ ಕಾರ್ಡ್
ಬ್ಯಾಂಕ್‌ ಪಾಸ್ ಬುಕ್

ಸರ್ಕಾರದ ಈ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾಗಿದೆ :

ಸೇವಾ ಸಿಂಧು ಪೋರ್ಟಲ್ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ
ಅಕ್ಟೋಬರ್ 23 ರಿಂದ ನವೆಂಬರ್ 23ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದು.

ಗಮನಿಸಿ (Notice) :

ಅರ್ಜಿ ಸಲ್ಲಿಸಲು : ಅಕ್ಟೋಬರ್ 23 ರಿಂದ ಅವಕಾಶ
ಕೊನೆಯ ದಿನಾಂಕ : ನವೆಂಬರ್ 23 ಕೊನೆಯ ದಿನಾಂಕ

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!