Loan Scheme: ರಾಜ್ಯದ ರೈತರಿಗೆ, ಕಡಿಮೆ ಬಡ್ಡಿಗೆ ಸಿಗಲಿದೆ 3 ಲಕ್ಷ ತನಕ ಸಾಲ!

1000347891

ರೈತರಿಗೆ ಗುಡ್ ನ್ಯೂಸ್, ಈ ಯೋಜನೆ ಮೂಲಕ ಕಡಿಮೆ ಬಡ್ಡಿಗೆ ಸಿಗಲಿದೆ 3 ಲಕ್ಷ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ..!

ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ರೈತರಿಗೆ ಅವರ ಅಲ್ಪಾವಧಿಯ ಹಣಕಾಸಿನ ಅಗತ್ಯತೆಗಳು ಮತ್ತು ನಿರ್ದಿಷ್ಟ ಸಾಲದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಭಾರತ ಸರ್ಕಾರವು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳಂತಹ ವಿವಿಧ ಕೃಷಿ ಇನ್‌ಪುಟ್‌ಗಳನ್ನು (Agricultural inputs) ಸುಲಭವಾಗಿ ಖರೀದಿಸಬಹುದು ಮತ್ತು ಅವರ ತಕ್ಷಣದ ಉತ್ಪಾದನಾ ಅಗತ್ಯಗಳಿಗಾಗಿ ಹಣವನ್ನು ಡ್ರಾ (money draw) ಮಾಡಬಹುದಾದ ರೈತರಿಗೆ ಅಲ್ಪಾವಧಿಯ ಸಾಲ ಮತ್ತು ಅವಧಿಯ ಸಾಲಗಳನ್ನು(loans) ಒದಗಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆಯಲ್ಲಿ ವಾರ್ಷಿಕವಾಗಿ ಬಡ್ಡಿದರದಲ್ಲಿ ಸಾಲ ಪಡೆಯಬಹುದು :

ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ 1.60 ಲಕ್ಷ ರೂಪಾಯಿವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಅಂದರೆ, ತಿಂಗಳಿಗೆ ಶೇ.0.5ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ ಲಭ್ಯವಾಗಲಿದೆ. ಈ ಯೋಜನೆಗೆ ಇರಬೇಕಾದ ಅರ್ಹತೆಗಳು, ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಇರಬೇಕಾದ ಅರ್ಹತೆಗಳು :

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಸಂಬಂಧಿಸಿ ಆರ್ ಬಿಐ (RBI) ಹೊರಡಿಸಿರುವ ಸುತ್ತೋಲೆ ಪ್ರಕಾರ ರೈತರು (ವೈಯಕ್ತಿಕ/ಜಂಟಿ ಸಾಲಗಾರರು), ಹಿಡುವಳಿ ರೈತರು, ಮೌಖಿಕ ಗೇಣಿದಾರರು ಹಾಗೂ ಪಾಲು ಬೆಳೆಗಾರರು, ರೈತರ ಸ್ವಸಹಾಯ ಗುಂಪುಗಳು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುದರಿಂದ ಅದರಲ್ಲಿರುವ ವಿಶೇಷತೆಗಳು  :

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ರೈತರು 1.60ಲಕ್ಷ ರೂ.ನಿಂದ 3ಲಕ್ಷ ರೂ. ತನಕ ಸಾಲ ಪಡೆಯಬಹುದು.
ಸಾಲ ಪಡೆದವರಿಗೆ ಅಪಘಾತ ವಿಮೆ(accident insurance) ಹಾಗೂ ಆರೋಗ್ಯ ವಿಮೆ ಸೌಲಭ್ಯವಿದೆ. ಅಪಘಾತದಿಂದ ಅಂಗವೈಕಲ್ಯ ಅಥವಾ ಮೃತ್ಯುವಾದರೆ 50,000ರೂ. ಹಾಗೂ ಇತರ ಸಂದರ್ಭಗಳಲ್ಲಿ 25,000ರೂ. ವಿಮೆ ಸೌಲಭ್ಯವಿದೆ.
ಬ್ಯಾಂಕಿನಿಂದ ನಗದು ವಿತ್ ಡ್ರಾಗೆ ಪಾಸ್ ಬುಕ್ ನೀಡಲಾಗುತ್ತದೆ.
25,000ರೂ. ನಗದು ಮಿತಿಯೊಂದಿಗೆ ಚೆಕ್ ಬುಕ್ ವಿತರಿಸಲಾಗುತ್ತದೆ.
ರುಪೇ ಕ್ರೆಡಿಟ್ ಕಾರ್ಡ್ ಕೂಡ ನೀಡಲಾಗುತ್ತದೆ.
ಸಾಲದ ಹಣದಲ್ಲಿ ರೈತರು ಬೀಜಗಳು, ರಾಸಾಯನಿಕಗಳು ಹಾಗೂ ಕೃಷಿ ಉಪಕರಣಗಳನ್ನು ಖರೀದಿಸಬಹುದು.
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ರೈತರಿಗೆ ಕ್ರೆಡಿಟ್ ಮಿತಿ ಹೆಚ್ಚಳ ಮಾಡಲಾಗುತ್ತದೆ.
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ರೈತರಿಗೆ ಬಡ್ಡಿದರಗಳ ಮೇಲೆ ಸಬ್ಸಿಡಿ ಕೂಡ ನೀಡಲಾಗುತ್ತದೆ.
ಸಾಲ ಮೂರು ವರ್ಷಗಳ ಅವಧಿಗೆ ಲಭ್ಯವಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents) :

ಸಹಿ ಹೊಂದಿರುವ ಸಾಲದ ಮನವಿ ಪತ್ರ
ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದು.
ವಿಳಾಸ ದೃಢೀಕರಣಕ್ಕೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರ ಚೀಟಿ ಇತ್ಯಾದಿ.
ನಿಮ್ಮ ಪಾಸ್ ಪೋರ್ಟ್ ಗಾತ್ರದ ಫೋಟೋ
ಸಾಲ ನೀಡುವಿಕೆಗೆ ಸಂಬಂಧಿಸಿ ಬ್ಯಾಂಕ್ ಕೋರಿರುವ ಇತರ ಅಗತ್ಯ ದಾಖಲೆಗಳು

ಆನ್ ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದು :

ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಆನ್ ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಯೋನೋ ಅಪ್ಲಿಕೇಷನ್(yono app) ಮೂಲಕ ಅಥವಾ. ಎಸ್ ಬಿಐ ಯೋನೋ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!