ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ 5ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ…!
ಇಂದು ಭಾರತ ಸರ್ಕಾರವು ಅನೇಕ ರೀತಿಯ ಸಾಲ ಸೌಲಭ್ಯ, ಸಹಾಯಧನ, ಅಷ್ಟೇ ಅಲ್ಲ ಮುಂತಾದ ರೀತಿಯ ಹತ್ತು ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ರೂಪಿಸಿದೆ. ಇದರ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ತಮ್ಮ ಜೀವನವನ್ನು ಸುಲಲಿತವಾಗಿ ನಡೆಸಬಹುದು. ಹಾಗೆಯೇ ಇದೀಗ ಸರ್ಕಾರವು (Government) ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಸರ್ಕಾರವು ಮಹಿಳೆಯರಿಗಾಗಿ ಬಂಪರ್ ಆಫರ್ (Bumper offer) ವೊಂದನ್ನ ನೀಡಿದ್ದು, ಮಹಿಳೆರಿಗೆ ಬಡ್ಡಿ ರಹಿತ ಸಾಲ(loan without interest)ವನ್ನು ಒದಗಿಸಲು ಮುಂದಾಗಿದೆ. ಇದರ ಮುಖ್ಯ ಉದ್ದೇಶವೇನೆಂದರೆ, ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಾಗಿದೆ. ಅದಕ್ಕಾಗಿ ವಿವಿಧ ಯೋಜನೆಗಳ ಭಾಗವಾಗಿ ಮಹಿಳೆಯರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ಈ ಯೋಜನೆಯಿಂದ ಮಹಿಳೆಯರು ಅನೇಕ ರೀತಿಯ ಸೌಲಭ್ಯಗಳನ್ನು (Facilities) ಪಡೆಯಬಹುದು :
ಹೌದು, ಸರ್ಕಾರ ನೀಡುತ್ತಿರುವ ಈ ಬಡ್ಡಿ ರಹಿತ ಯೋಜನೆಯು ಮಹಿಳೆಯರಿಗೆ ಅನೇಕ ರೀತಿಯಲ್ಲಿ ನೆರವಿಗೆ ಬರಲಿದೆ. ಅದರಲ್ಲೂ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಬಯಸುವ ಮಹಿಳಾ ಉದ್ಯಮಿಗಳಿಗಾಗಿ ಸರ್ಕಾರ ಬಡ್ಡಿ ರಹಿತ (with out interest) ಸಾಲವನ್ನ ನೀಡಲು ಮುಂದಾಗಿದೆ. ಇದು ಮಹಿಳೆಯರಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸಲು ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಸರ್ಕಾರದ ಉಪಕ್ರಮಗಳ ಒಂದು ಉತ್ತಮ ಯೋಜನೆಯಾಗಿದೆ. ಸರ್ಕಾರ ನೀಡುತ್ತಿರುವ ಈ ಬಡ್ಡಿ ರಹಿತ ಸಾಲವನ್ನು ವ್ಯಾಪಾರ ವಿಸ್ತರಣೆ , ಕೌಶಲ್ಯ ತರಬೇತಿ , ಶಿಕ್ಷಣ ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.
ಸರ್ಕಾರವು “ಲಖ್ಪತಿ ದೀದಿ” (Lakpathi Didi) ಎಂಬ ಯೋಜನೆ ಮೂಲಕ ಮಹಿಳೆಯರಿಗೆ ನೆರವು ನೀಡುತ್ತಿದೆ :
ಇಂದು ಸರ್ಕಾರವು ಅನೇಕ ರೀತಿಯ ಯೋಜನೆಗಳು, ಸಹಾಯ ಧನ, ಸಾಲ ಸೌಲಭ್ಯಗಳನ್ನು ಈಗಾಗಲೇ ನೀಡುತ್ತಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರ ಅಗತ್ಯತೆಗಳಿಗೆ ಅನುಗುಣವಾಗಿ ಸರ್ಕಾರ ವಿವಿಧ ಯೋಜನೆಗಳನ್ನ ಜಾರಿ ಮಾಡಿದೆ. ಇದರಲ್ಲಿ ಹಲವಾರು ಯೋಜನೆಗಳು ಬಡವರು, ನಿರ್ಗತಿಕರು ಹಾಗು ಮಹಿಳಾ ಸಬಲೀಕರಣಕ್ಕಾಗಿಯೇ ಇದ್ದಾವೆ. ಅದೇ ರೀತಿ ಮಹಿಳೆಯರನ್ನ ಆರ್ಥಿಕವಾಗಿ ಸಮರ್ಥರನ್ನಾಗಿ ಮಡಲು ಸರ್ಕಾರ ಹೊಸ ಯೋಜನೆಯನ್ನ ಆರಂಭಿಸಿದೆ. ಈ ಯೋಜನೆ ಮೂಲಕ ಮಹಳೆಯರು ಬಡ್ಡಿರಹಿತ ಸಾಲವನ್ನ ಪಡೆಯಬುದು. ಮತ್ತು ಈ ಯೋಜನೆಯಿಂದಾಗ ಮಹಿಳೆಯರು 5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನ ಪಡೆಯಬಹುದು.
ಲಖ್ಪತಿ ದೀದಿ ಯೋಜನೆಯಡಿ ಸರ್ಕಾರ ನೀಡಲಿದೆ 5 ಲಕ್ಷ ವರೆಗೆ ಬಡ್ಡಿರಹಿತ ಸಾಲ :
ಭಾರತ ಸರ್ಕಾರವು ಕಳೆದ ವರ್ಷ ಆಗಸ್ಟ್ 15 ರಂದು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಲಖ್ಪತಿ ದೀದಿ ಯೋಜನೆಯನ್ನು ಆರಂಭಿಸಿದ್ದು, ಮಹಿಳೆಯರು ಹೊಸದಾಗಿ ತಮ್ಮ ಸ್ವಂತ ಉದ್ಯಮವನ್ನು (Own business) ಸ್ಥಾಪಿಸಲು ಮತ್ತು ಯಾರ ಮೇಲೂ ಅವಲಂಬಿತಾರಾಗದೆ ಅವರ ಜೀವನವನ್ನು ಅವರೇ ರೂಪಿಸಿಕೊಳ್ಳಬೇಕು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಈ ಯೋಜನೆಯು ಹೆಚ್ಚು ಅವಶ್ಯಕವಾಗಿದೆ :
ಈ ಯೋಜನೆಯನ್ನು ಪಡೆಯಲು ಮಹಿಳೆಯರು ಸ್ವಸಹಾಯ ಸಂಘಕ್ಕೆ ಸೇರಿಕೊಂಡು ಇದರ ಲಾಭವನ್ನ ಪಡೆಯಬಹುದು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಈ ಯೋಜನೆಯು ಹೆಚ್ಚು ಅವಶ್ಯಕವಾಗಿದೆ. ಇದರಲ್ಲಿ ಅನೇಕ ಮಹಿಳೆಯರು ಒಳಗೊಂಡಿದ್ದು, ಒಬ್ಬ ಮಹಿಳೆ ತನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಇಚ್ಛಿಸಿದರೆ, ಅವಳು ತನ್ನ ವ್ಯವಹಾರ ಯೋಜನೆಯೊಂದಿಗೆ ಸ್ವ-ಸಹಾಯ ಗುಂಪಿನ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಲಖ್ಪತಿ ದೀದಿ ಯೋಜನೆಯ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ :
ಲಖ್ಪತಿ ದೀದಿ ಯೋಜನೆ ಅಡಿಯಲ್ಲಿ, ಸ್ವ-ಸಹಾಯ ಗುಂಪು ಸೇರಿದ ನಂತರ, ಮಹಿಳೆ ವ್ಯಾಪಾರ ಯೋಜನೆಯನ್ನು ಮಾಡಬೇಕಾಗುತ್ತದೆ. ಬಳಿಕ ಆ ವ್ಯವಹಾರ ಯೋಜನೆಯನ್ನು ಸ್ವಸಹಾಯ ಸಂಘದ ಮೂಲಕ ಸರಕಾರಕ್ಕೆ ಕಳುಹಿಸಲಾಗುವುದು. ಸರ್ಕಾರಿ ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸುತ್ತಾರೆ. ಆ ನಂತರ ಅರ್ಜಿಯನ್ನು ಅಂಗೀಕರಿಸಿದರೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಮಹಿಳೆಗೆ ನೀಡಲಾಗುತ್ತದೆ.
ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು (Qualifications) :
ಈ ಯೋಜನೆ ಮಹಿಳೆಯರಿಗೆ ಮಾತ್ರ.
ಮಹಿಳಾ ಅರ್ಜಿದಾರರು, ತಾವು ಅರ್ಜಿ ಸಲ್ಲಿಸುವ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಬಾರದು.
ಅರ್ಜಿದಾರರ ಕುಟುಂಬದಲ್ಲಿ ಯಾರೂ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಕೌಶಲ್ಯ ಹೊಂದಿರಬೇಕು.
ಮುಖ್ಯವಾಗಿ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಈಗಾಗಲೇ ಸದಸ್ಯರಾಗಿರಬೇಕು.
ಲಖ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (Documents) :
ವಸತಿ ಪ್ರಮಾಣ ಪತ್ರ.
ಆಧಾರ್ ಕಾರ್ಡ್.
ಪಡಿತರ ಚೀಟಿ.
ಆದಾಯ ಪ್ರಮಾಣ ಪತ್ರ.
ಬ್ಯಾಂಕ್ ಖಾತೆ.
ಮೊಬೈಲ್ ಸಂಖ್ಯೆ.
ಪ್ಯಾನ್ ಕಾರ್ಡ್.
ಸ್ವಸಹಾಯ ಸಂಘದಲ್ಲಿ ಇರುವಂತಹ ಸದಸ್ಯತ್ವದ ಸರ್ಟಿಫಿಕೇಟ್.
ಲಕ್‌ಪತಿ ದೀದಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ವಸಹಾಯ ಗುಂಪಿಗೆ ಸೇರಿಕೊಳ್ಳದಿದ್ದರೆ ಮೊದಲು ಸ್ಥಳೀಯ ಸ್ವಸಹಾಯ ಗುಂಪಿಗೆ ಸೇರಿಕೊಳ್ಳ ಬೇಕು.
ಲಕ್‌ಪತಿ ದೀದಿ ಯೋಜನೆಗಾಗಿ ಅರ್ಜಿ ನಮೂನೆಯನ್ನು ಅತ್ತಿರದ ಅಂಗನವಾಡಿ ಕೇಂದ್ರದಿಂದ ಪಡೆದು ನಿಮ್ಮ ವಿವರಗಳನ್ನು ಭರ್ತಿ ಮಾಡಿಕೊಳ್ಳಬೇಕು.
ನಿಗದಿತ ಕಚೇರಿ ಅಥವಾ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
ಅರ್ಜಿಯನ್ನು ಪರಿಶೀಲಿಸಿದ ನಂತರ ಅರ್ಜಿಯ ಅನುಮೋದನೆಯ ನಿರ್ಧಾರವನ್ನು ಎಸ್‌ಎಂಎಸ್ (SMS) ಮತ್ತು ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.
ಆಯ್ಕೆಯ ನಂತರ ಕಾರ್ಯಾಗಾರಗಳು ಮತ್ತು ಇತರ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗುತ್ತದೆ.
ಬೇಕಾದ ತರಬೇತಿಗಳನ್ನು ಪಡೆದುಕೊಂಡ ನಂತರ ಹಣಕಾಸಿನ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.