LPG Cylinder: ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಇದ್ರೆ ಈ ತಪ್ಪು ಮಾಡಬೇಡಿ..!

LPG cylinder expire date

ನೀವು ಸಿಲಿಂಡರ್ ಗಳ (cylinder) ಬಳಕೆಯನ್ನು ಮಾಡುತ್ತಿದ್ದೀರಾ ? ಎಚ್ಚರ ಎಕ್ಸ್ಪರಿ ಡೇಟ್ (Expiry Date) ನಿಂದಾಗಿ ಸಿಲಿಂಡರ್ ಗಳ ಸ್ಪೋಟಗಳು ಹೆಚ್ಚಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿಯೂ ಕೂಡ ಅಡುಗೆಯನ್ನು ಸಿದ್ದ ಮಾಡಲು ಕಟ್ಟಿಗೆಗಳನ್ನು ಬಳಸುವ ಬದಲು ಎಲ್‌ಪಿಜಿ ಸಿಲಿಂಡರ್ (LPG Cylinder) ಬಳಕೆಯನ್ನು ಮಾಡುತ್ತಿದ್ದೇವೆ. ಇದರಿಂದ ಅಡುಗೆ ಮಾಡುವ ಕೆಲಸವೇನೋ ಬೇಗ ಮುಗಿಯುತ್ತದೆ. ಆದರೆ ನಮ್ಮ ಗಮನವನ್ನು ಸ್ವಲ್ಪ ಬೇರೆ ಕಡೆ ಮೀಸಲಿರಿಸಿದರೆ ಇದರಿಂದ ಭಾರಿ ಅನಾಹುತಗಳು ಸಂಭವಿಸಬಹುದು. ಹೌದು, ಎಲ್‌ಪಿಜಿ ಸಿಲಿಂಡರ್ ಗಳಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ದುಷ್ಪರಿಣಾಮಗಳು ಇದ್ದಾವೆ. ಅಂದರೆ ಇತ್ತೀಚಿಗೆ ಮನೆಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಗಳಿಂದ ಸಿಲಿಂಡರ್ ಸ್ಫೋಟಗಳು (cylinder blast) ಹೆಚ್ಚಾಗುತ್ತಿವೆ. ಸಿಲಿಂಡರ್ ಸ್ಫೋಟಗಳನ್ನು ತಡೆಗಟ್ಟುವುದು ಹೇಗೆ? ಇದಕ್ಕೆ ಕಾರಣ ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಎಲ್‌ಪಿಜಿ ಸಿಲಿಂಡರ್ (LPG Cylinder)ಗಳಲ್ಲಿಯೂ ಎಕ್ಸ್ಪರಿ ಡೇಟ್ (Expiry Date) ಗಮನಿಸಿ :

ನಾವು ಮಾಡುವ ಸಣ್ಣ ತಪ್ಪಿನಿಂದಾಗಿ ಹಲವಾರು ಜೀವಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ. ಇದಕ್ಕೆ ಪರಿಹಾರ ನಾವು ಎಲ್‌ಪಿಜಿ ಸಿಲಿಂಡರ್ (LPG Cylinder)ಗಳನ್ನು ಬಳಸುವ ಮುನ್ನ ಸಿಲಿಂಡರ್ ಎಕ್ಸ್ಪರಿ ಡೇಟ್ (Expiry Date) ಆಗಿದೆಯೇ ಎಂದು ಪರಿಶೀಲಿಸಬೇಕು. ಹೌದು ಕೇವಲ ತಿನ್ನುವ ಪದಾರ್ಥಗಳಿಗೆ ಅಥವಾ ಔಷಧಿಗಳಿಗೆ(Medicine) ಮಾತ್ರವಲ್ಲದೆ ಸಿಲಿಂಡರ್ ಗಳು ಕೂಡ ಎಕ್ಸ್ಪರ್ ಆಗುತ್ತವೆ. ಆದ್ದರಿಂದ ಜಾಗರೂಕತೆಯಿಂದ ಎಲ್‌ಪಿಜಿ ಸಿಲಿಂಡರ್ ಗಳನ್ನು ಬಳಸಬೇಕು.

LPG ಸಿಲಿಂಡರ್ ಗಳ ಸ್ಪೋಟಕ್ಕೆ ಕಾರಣ ಏನು ?

LPG ಸಿಲಿಂಡರ್ ಸ್ಫೋಟವಾಗಲು ಸಾಮಾನ್ಯ ಕಾರಣ ಗ್ಯಾಸ್ ಲೀಕೇಜ್, ಹಾಗೂ ಹಾನಿಗೊಳಗಾದ ಪೈಪ್ ಗಳು(Regulator Pipes).
ಎಲ್‌ಪಿಜಿ ಸಿಲಿಂಡರ್‌ಗಳ ಅಸಮರ್ಪಕ ನಿರ್ವಹಣೆಯಿಂದ ಅಥವಾ ಹೆಚ್ಚಿನ ತಾಪಮಾನಕ್ಕೆ ಒಡ್ಡುವುದರಿಂದಲೂ ಸಿಲಿಂಡರ್ ಸ್ಪೋಟಗಳು ಸಂಭವಿಸಬಹುದು.
ಬಹಳ ಮುಖ್ಯವಾಗಿ ಅಡುಗೆ ಮನೆಯ ವಾತಾವರಣ ದಿಂದಲೂ ಸ್ಫೋಟದ ಅಪಾಯ ಹೆಚ್ಚುತದೆ. ಹಾಗೂ ಸಿಲಿಂಡರ್ (LPG Cylinder) ನಲ್ಲಿ ಉತ್ಪಾದನಾ ದೋಷ (Manufacturing Defect) ಕಂಡುಬಂದರೆ ಅನಿಲ ಸೋರಿಕೆಯಾಗುತ್ತದೆ ಇದರಿಂದ ಸಿಲಿಂಡರ್ ಸ್ಪೋಟಗಳು ಸಾಧ್ಯತೆ ಹೆಚ್ಚಿರುತ್ತದೆ.

ಅನಿಲ ಸೋರಿಕೆಯಾಗುವುದನ್ನು ತಡೆಗಟ್ಟುವುದು ಹೇಗೆ ?

ಸಿಲಿಂಡರ್ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಸ್ಲೀಪಿಂಗ್ ಪ್ರಕ್ರಿಯೆಯ (Sniffing Process) ಮೂಲಕ ಪರಿಶೀಲಿಸಬಹುದು. ತದನಂತರ ಅನಿಲ ಸೋರಿಕೆ ಆಗುತ್ತಿರುವ ಜಾಗದಲ್ಲಿ ನೀರು ಅಥವಾ ಸಾಬೂನು ಮಿಶ್ರಿತ ನೀರನ್ನು (soap water) ಹಾಕುವ ಮೂಲಕ ಅನಿಲ ಸೋರಿಕೆಯಾಗುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆಯನ್ನು (process) ನೀವು ಮಾಡಿದ ಬಳಿಕ ಆ ಜಾಗದಲ್ಲಿ ಗುಳ್ಳೆಗಳು ಇದ್ದರೆ ನಿಮ್ಮ ಅನಿಲ ಸೋರಿಕೆಯಾಗುತ್ತಿದೆ ಎನ್ನುವುದು ಖಾತರಿಯಾಗುತ್ತದೆ.
ಅಥವಾ, ಇಂದು ಮಾರುಕಟ್ಟೆಯಲ್ಲಿ ಅಡುಗೆಮನೆಗಳಿಗೆ ಗ್ಯಾಸ್ ಡಿಟೆಕ್ಟರ್‌ಗಳಿಗೆ ಸಂಬಂಧಿಸಿದಂತೆ, ಹಲವಾರು ರೀತಿಯ ಆಯ್ಕೆಗಳು ಲಭ್ಯವಿವೆ, ಅದು ಅನಿಲ ಸೋರಿಕೆಯನ್ನು ಪತ್ತೆಹಚ್ಚಲು ಮತ್ತು ಅಪಾಯಗಳನ್ನು ತಿಳಿಸಲು ಸಹಾಯ ಮಾಡುತ್ತದೆ. ಗ್ಯಾಸ್ ಡಿಟೆಕ್ಟರ್ (gas detecter) ಅನ್ನು ಖರೀದಿಸುವ ಮೊದಲು, LPG ಗ್ಯಾಸ್‌ನೊಂದಿಗೆ ಅದರ ಹೊಂದಾಣಿಕೆಯನ್ನು ಪರಿಶೀಲಿಸುವುದು ಅತ್ಯಗತ್ಯ.

ಮನೆಯಲ್ಲಿ ಸಿಲಿಂಡರ್ ಸ್ಫೋಟಗಳು ವಿವಿಧ ಕಾರಣಗಳಿಂದ ಸಂಭವಿಸಬಹುದು ಅಂತಹ ಘಟನೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು (precautions) ತೆಗೆದುಕೊಳ್ಳುವುದು ಅತ್ಯಗತ್ಯ. LPG ಸಿಲಿಂಡರ್ ಸ್ಫೋಟಗಳನ್ನು ತಡೆಗಟ್ಟಲು, ಗ್ಯಾಸ್ ಕಂಪನಿಗಳು ಮತ್ತು ನಿಯಂತ್ರಕ ಅಧಿಕಾರಿಗಳು ಒದಗಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು (safety guidelines) ಅನುಸರಿಸುವುದರಿಂದ ಸಿಲಿಂಡರ್ ಸ್ಪೋಟಗಳನ್ನು ತಡೆಗಟ್ಟಬಹುದು.

ಗ್ಯಾಸ್ ಸಿಲಿಂಡರ್ ಗಳಿಂದ ಉಂಟಾಗುವ ತುರ್ತುಗಳಿಗೆ ಇಲ್ಲಿದೆ ಪರಿಹಾರ :

ನೀವೇನಾದರೂ LPG ಗ್ಯಾಸ್ ಸಿಲಿಂಡರ್ ಬಳಕೆದಾರರಿದ್ದರೆ, ಎಚ್ಚರ ವಹಿಸುವುದು ಅಗತ್ಯವಾಗಿದೆ. ಬಳಕೆ ಸಮಯದಲ್ಲಿ ಗ್ಯಾಸ್ ವಾಸನೆ ಬಂತು, ಗ್ಯಾಸ್ ಲೀಕ್ ಆಗುತ್ತಿದೆ ಎಂದು ಅನ್ನಿಸಿದ ಕೂಡಲೇ ಮೊದಲನೆಯದಾಗಿ ರೆಗ್ಯುಲೇಟರ್ ಅನ್ನು ಬಂದ್ ಮಾಡಿ. ಗ್ಯಾಸ್ ಏಜೆನ್ಸಿಗೆ ಫೋನ್ ಮಾಡಿ.

ಅವರು ಏನಾದರೂ ಇವತ್ತು ರಜೆ, ನಾವು ನಾಳೆ ಬರುತ್ತೇವೆ ಎಂಬ ಉತ್ತರ ಗ್ಯಾಸ್ ಏಜೆನ್ಸಿಗಳಿಂದ ಬಂದರೆ, ಏನು ಮಾಡ್ಬೇಕು ಮುಂದೆ ಎಂದು ಯೋಚನೆ ಬಂದರೆ ಕೂಡಲೇ ತುರ್ತು ಸೇವೆ ನಿಮಗೆ ಅಗತ್ಯ ಇದೆ ಮತ್ತು ಬೇಕು ಎಂದು ಚಿಂತಿಸಿ.

ತುರ್ತು ಸೇವೆ ಬೇಕಾದರೆ ಏನು ಮಾಡಬೇಕು

ಮೊದಲಿಗೆ 1906 ಈ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ .
ಕರೆ ಮಾಡಿದೆ ಕೂಡಲೇ ಆ ಕಡೆಯಿಂದ ಮಹಿಳೆಯೊಬ್ಬರು ಮಾತನಾಡುತ್ತಾರೆ.
ಮತ್ತು ನಿಮ್ಮ ಅಡ್ರೆಸ್, ಫೋನ್ ನಂಬರ್ ಎಲ್ಲಾ ಕೇಳುತ್ತಾರೆ. ಭಯ ಪಡದೆ ನಿಮ್ಮ ಅಡ್ರೆಸ್, ಫೋನ್ ನಂಬರ್, ಕೊಡಿ.
ಅದ ನಂತರ ಇನ್ನೊಂದು ಘಂಟೆಯೊಳಗೆ ಓರ್ವ ವ್ಯಕ್ತಿ ನಿಮ್ಮ ಮನೆಗೆ ಭೇಟಿ ಕೊಡುತ್ತಾರೆ ಅಂದು ತಿಳಿಸಿಸುತ್ತಾರೆ.
ನಂತರ ಅವರು ಹೇಳಿದ ಸಮಯಕ್ಕಿಂತ ಮೊದಲೇ ಬರುತ್ತಾರೆ.ಬಂದ ಓರ್ವ ಯುವಕ ಸಮಸ್ಯೆ ಏನೆಂದು ಕೇಳುತ್ತಾರೆ.
ನೀವೂ ನಿಮ್ಮ LPG ಸಿಲಿಂಡರ್ ಅಲ್ಲಿ ಅದ ಸಮಸ್ಯವನ್ನು ಹೇಳಿಕೊಳ್ಳಿ.
ನಂತರ ಅವರು ಇದ್ದ ಸಮಸ್ಯವನ್ನು ಪರಿಶೀಲಿಸಿ ಸರಿ ಮಾಡಿ ಕೊಟ್ಟು ಹೋಗುತ್ತಾರೆ.
ನೆನಪಿರಲಿ ಅವರು ಮಾಡಿದ ಕೆಲಸಕ್ಕೆ ಯಾವುದೇ ಹಣವನ್ನು ಕೇಳುವುದಿಲ್ಲ ಮತ್ತು ತಾಗೆದುಕೊಳ್ಳುವುದಿಲ್ಲ .

ಈಗ ನಿಮಗೂ ಕೂಡಾ ಗೊತ್ತಾಯ್ತು ಅಲ್ಲವೇ, ನೀವು LPG ಗ್ಯಾಸ್ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಏನು ಮಾಡಬೇಕು ಅಂತ ತಿಳಿದಿರಿ ಅಲ್ಲವೇ. ಇನ್ನು ಮುಂದೆ ಗ್ಯಾಸ್ ಅಥವಾ ಇನ್ಯಾವುದೇ ತುರ್ತು ಸೇವೆಗೆ ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆ 1906 ಆಗಿರುತ್ತದೆ. ನೀವು ಈ ನಂಬರ್ ಗೆ ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಿಸಿದ್ರೇ, ಕೂಡಲೇ ಪ್ರತಿಸ್ಪಂದನೆ ಸಿಗುತ್ತದೆ ಎಂದು ಹೇಳಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!