LPG Cylinder:  ಗ್ಯಾಸ್ಸ್  ಕನೆಕ್ಷನ್ ಇರುವ ಎಲ್ಲರಿಗೂ ಸರ್ಕಾರದ ಹೊಸ ಮಾರ್ಗಸೂಚಿ  ಪ್ರಕಟ!

LPG cylinder subsidy

ನೀವು ಸಿಲಿಂಡರ್ ಗಳ ಬಳಕೆಯನ್ನು ಮಾಡುತ್ತಿದ್ದೀರಾ ? ಹಾಗಿದ್ದಲ್ಲಿ ಸಿಲಿಂಡರ್ ನ ಎಕ್ಸ್ಪರಿ ಡೇಟ್ (Expiry Date)ಅನ್ನು ಒಮ್ಮೆ ಗಮನಿಸಿ.

ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಗಳಲ್ಲಿಯೂ ಕೂಡ ತಂತ್ರಜ್ಞಾನವನ್ನು ಬಳಸಿದ ವಸ್ತುಗಳ ಉಪಯುಕ್ತತೆ ಹೆಚ್ಚಾಗಿದೆ. ಹೀಗೆ ನೋಡಿದರೆ ಹಿಂದಿನ ಕಾಲದಲ್ಲಿ ಇದ್ದಂತಹ ಯಾವ ವಸ್ತುಗಳನ್ನು ಅಥವಾ ಆಚಾರ ವಿಚಾರಗಳನ್ನು ಇಂದು ನಾವು ಪಾಲಿಸುತ್ತಿಲ್ಲ. ಅಂದಿನಿಂದ ಹಿಡಿದು ಇಂದಿನವರೆಗೂ ನಾವು ಮಾಡುವ ಪ್ರತಿ ಕೆಲಸದಲ್ಲೂ ಅಥವಾ ನಾವು ಬಳಸುವ ಪ್ರತಿ ವಸ್ತುವಿನಲ್ಲಿಯೂ ಎಷ್ಟು ಪ್ರಯೋಜನ ಇರುತ್ತದೆಯೋ ಅಷ್ಟೇ ದುಷ್ಪರಿಣಾಮಗಳು ಕೂಡ ಇರುತ್ತವೆ. ನಾವು ಪ್ರಯೋಜನಗಳು ಅಷ್ಟೇ ಅಲ್ಲದೆ ದುಷ್ಪರಿಣಾಮಗಳ ಮೇಲೆಯೂ ಕೂಡ ಹೆಚ್ಚು ಗಮನವನ್ನು ಇಡಬೇಕಾಗುತ್ತದೆ. ಇದರಿಂದ ನಮಗೆ ಆಗುವ ಅನಾಹುತಗಳನ್ನು ತುಂಬಾ ಸುಲಭವಾಗಿ ತಪ್ಪಿಸಬಹುದು. ಇದೇ ರೀತಿಯಾಗಿ ಇಂದು ಎಲ್ಲರ ಮನೆಗಳಲ್ಲಿಯೂ ಕೂಡ ಅಡುಗೆಯನ್ನು ಸಿದ್ದ ಮಾಡಲು ಕಟ್ಟಿಗೆಗಳನ್ನು ಬಳಸುವ ಬದಲು ಎಲ್‌ಪಿಜಿ ಸಿಲಿಂಡರ್ (LPG Cylinder) ಬಳಕೆಯನ್ನು ಮಾಡುತ್ತಿದ್ದೇವೆ. ಇದರಿಂದ ಅಡುಗೆ ಮಾಡುವ ಕೆಲಸವೇನೋ ಬೇಗ ಮುಗಿಯುತ್ತದೆ. ನಮ್ಮ ಗಮನವನ್ನು ಸ್ವಲ್ಪ ಬೇರೆ ಕಡೆ ಮೀಸಲಿರಿಸಿದರೆ ಇದರಿಂದ ಭಾರಿ ಅನಾಹುತಗಳು  ಆಗುವುದುಂಟು. ಎಲ್‌ಪಿಜಿ ಸಿಲಿಂಡರ್ ಗಳಿಂದ ಆಗುವ ದುಷ್ಪರಿಣಾಮಗಳೇನು? ಹಾಗೂ ಇದರಿಂದ ಪಾರಾಗುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಎಕ್ಸ್ಪರಿ ಡೇಟ್ (Expiry Date) ಕೇವಲ ಔಷಧಿಗಳಿಗಷ್ಟೇ ಅಲ್ಲ ಎಲ್‌ಪಿಜಿ ಸಿಲಿಂಡರ್ ಗಳಿಗೂ ಅನ್ವಯಿಸುತ್ತದೆ:

ಎಲ್‌ಪಿಜಿ ಸಿಲಿಂಡರ್ಗಳು ಸ್ಪೋಟಗೊಂಡ ಸುದ್ದಿಯನ್ನು ನಾವು ಪ್ರತಿ ದಿನ ಕೇಳುತ್ತಲೇ ಇರುತ್ತೇವೆ . ಆದರೂ ಕೂಡ  ಸಿಲಿಂಡರ್ ಸ್ಪೋಟ ಏಕೆ ಆಗುತ್ತಿದೆ ಹಾಗೂ ಇದರಿಂದ ಪಾರಾಗುವುದು ಹೇಗೆ ಎಂಬುದನ್ನು ನಾವು ಯಾರು ಕೂಡ ಅರಿತುಕೊಂಡಿಲ್ಲ. ನಾವು ಮಾಡುವ ಸಣ್ಣ ತಪ್ಪಿನಿಂದಾಗಿ ಹಲವಾರು ಜೀವಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ. ಇದಕ್ಕೆ ಪರಿಹಾರ ನಾವು ಎಲ್‌ಪಿಜಿ ಸಿಲಿಂಡರ್ ಗಳನ್ನು ಬಳಸುವ ಮುನ್ನ ಸಿಲಿಂಡರ್ ಎಕ್ಸ್ಪರಿ ಡೇಟ್ ಆಗಿದೆಯೇ ಎಂದು ಪರಿಶೀಲಿಸಬೇಕು. ಹೌದು ಕೇವಲ ತಿನ್ನುವ ಪದಾರ್ಥಗಳಿಗೆ ಅಥವಾ ಔಷಧಿಗಳಿಗೆ(Medicine) ಮಾತ್ರವಲ್ಲದೆ ಸಿಲಿಂಡರ್ ಗಳು ಕೂಡ ಎಕ್ಸ್ಪರ್ ಆಗುತ್ತವೆ. ಇದರಿಂದ ಅಚಾನಕ್ಕಾದ ಸಿಲಿಂಡರ್ ಸ್ಪೋಟಗಳು ಸಂಭವಿಸುತ್ತಿವೆ. ಎಲ್ಪಿಜಿ ಸಿಲಿಂಡರನ್ನು ನಿಮ್ಮ ಮನೆಗೆ ವಿತರಣೆ ಮಾಡಿದ ನಂತರ ಬಹಳ ಮುಖ್ಯವಾಗಿ ಸಿಲಿಂಡರ್ ಎಕ್ಸ್ಪರ್ ಆಗಿದೆಯೇ ಎಂದು ಒಮ್ಮೆ ಗಮನಿಸಿ. ಇದರಿಂದ ಸಂಭವಿಸುವ ಅನಾಹುತಗಳನ್ನು ತುಂಬಾ ಸುಲಭವಾಗಿ ತಪ್ಪಿಸಬಹುದು.

LPG ಸಿಲಿಂಡರ್ ಗಳ ಸ್ಪೋಟಕ್ಕೆ ಕಾರಣ  ಏನು?

ನಾವು ಬಳಸುವ ವಸ್ತುಗಳ ಮೇಲೆ ಕೆಲವೊಮ್ಮೆ ಎಷ್ಟು ನಿರ್ಲಕ್ಷ ತೋರುತ್ತೇವೆ ಎಂದರೆ ಒಮ್ಮೆ ತೆಗೆದುಕೊಂಡ ವಸ್ತುವನ್ನು ಮತ್ತೆ ಪರಿಶೀಲಿಸುವ ಯೋಚನೆಯನ್ನು ಕೂಡ ಮಾಡುವುದಿಲ್ಲ. ಅದೇ ರೀತಿಯಾಗಿ ಗ್ಯಾಸ್ ಸಿಲಿಂಡರ್ ಗಳನ್ನು ತೆಗೆದುಕೊಂಡಾಗ ಬಂದಿರುವಂತಹ ರೆಗ್ಯುಲೇಟರ್ ಪೈಪ್ ಗಳನ್ನೇ (Regulator Pipes) ಬಳಸುತ್ತಿರುತ್ತೇವೆ. ಇದರಿಂದಾಗಿ ತುಂಬಾ ಹಳೆಯದಾದ ರೆಗ್ಯುಲೇಟರ್ ಪೈಪ್ ಗಳ ಬಳಕೆ ಹಾಗೂ ಸಿಲಿಂಡರ್ (LPG Cylinder) ನಲ್ಲಿ ಉತ್ಪಾದನಾ ದೋಷ (Manufacturing Defect) ಕಂಡುಬಂದರೆ ಅನಿಲ ಸೋರಿಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅನಿಲ ಸೋರಿಕೆಯಾಗುವುದನ್ನು ತಡೆಗಟ್ಟುವುದು ಹೇಗೆ?

ಸಿಲಿಂಡರ್ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಸ್ಲೀಪಿಂಗ್ ಪ್ರಕ್ರಿಯೆಯ (Sniffing Process) ಮೂಲಕ ಪರಿಶೀಲಿಸಬಹುದು. ತದನಂತರ ಅನಿಲ ಸೋರಿಕೆ ಆಗುತ್ತಿರುವ ಜಾಗದಲ್ಲಿ ನೀರು ಅಥವಾ ಸಾಬೂನು ಮಿಶ್ರಿತ ನೀರನ್ನು ಹಾಕುವ ಮೂಲಕ ಅನಿಲ ಸೋರಿಕೆಯಾಗುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆಯನ್ನು (process) ನೀವು ಮಾಡಿದ ಬಳಿಕ ಆ ಜಾಗದಲ್ಲಿ ಗುಳ್ಳೆಗಳು ಇದ್ದರೆ ನಿಮ್ಮ ಅನಿಲ ಸೋರಿಕೆಯಾಗುತ್ತಿದೆ ಎನ್ನುವುದು ಖಾತರಿಯಾಗುತ್ತದೆ.

ಅನಿಲ ಸೋರಿಕೆಯಾಗುತ್ತಿರುವುದು ಖಾತರಿಯಾದ ಬಳಿಕ ಅದನ್ನು ನಿರ್ಲಕ್ಷಿಸದೆ ಡಿಸ್ಟ್ರಿಬ್ಯೂಟರ್ (distributor) ಅನ್ನು ಮನೆಗೆ ಕರೆಸಿ ಅನಿಲ ಸೋರಿಕೆಯಾಗುತ್ತಿರುವುದನ್ನು ಸರಿಮಾಡಿಸಿಕೊಳ್ಳಬಹುದು. ಅಥವಾ ಹಳೆ ಸಿಲೆಂಡರ್ (cylinder) ಬದಲಿಗೆ ಹೊಸ ಸಿಲಿಂಡರ್ ಅನ್ನು ತೆಗೆದುಕೊಳ್ಳಬಹುದು

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

One thought on “LPG Cylinder:  ಗ್ಯಾಸ್ಸ್  ಕನೆಕ್ಷನ್ ಇರುವ ಎಲ್ಲರಿಗೂ ಸರ್ಕಾರದ ಹೊಸ ಮಾರ್ಗಸೂಚಿ  ಪ್ರಕಟ!

  1. Cylinders neck rubber bush must be changed during refilling, this fault only leads to burst. This is to be done unconditionally weather it is good or bad.

Leave a Reply

Your email address will not be published. Required fields are marked *

error: Content is protected !!