ಸಿಲಿಂಡರ್ ಖರೀದಿ ಮೇಲೆ ಭರ್ಜರಿ ಆಫರ್: ಈ ರೀತಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ರೆ ಸಿಗಲಿದೆ ಕ್ಯಾಶ್ ಬ್ಯಾಕ್!
ಇತ್ತೀಚಿನ ದಿನಗಳಲ್ಲಿ ಜನರು ಸಾಂಪ್ರದಾಯಿಕ ಅಡುಗೆ ಉಪಕರಣಗಳಾದ ಇದ್ದಿಲು, ಕಟ್ಟಿಗೆಯನ್ನು ಬಳಸಿ ಮಾಡುವ ಅಡುಗೆ ವಿಧಾನವನ್ನು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಅರೋಗ್ಯದ ದೃಷ್ಟಿಯಿಂದ ಹಾಗೂ ಇವೆಲ್ಲವುದರ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ಬಳಸಲು ಕಷ್ಟವಾಗುತ್ತಿದೆ. ಆದ್ದರಿಂದ ಜನರು ಗ್ಯಾಸ್ ಸಿಲಿಂಡರ್‌ಗಳ (gas cylinder) ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವ ಜನರ ಸಂಖ್ಯೆ ಹೆಚ್ಚುಟ್ಟಿದ್ದು, ಒಂದು ವೇಳೆ ಸಿಲಿಂಡರ್ ಗಳ ಬೆಲೆ ಏರಿಕೆಯಾದರಂತೂ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕವಾಗಿ ಬಹಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಗ್ಯಾಸ್ ಸಿಲಿಂಡರ್ ಗಳನ್ನು ಬುಕ್ ಮಾಡುವವರು ಕೆಲವು ಅಂಶಗಳನ್ನು ಹಾಗೂ ಸಲಹೆಗಳನ್ನು ಅನುಸರಿಸಿದರೆ ಹಣವನ್ನು ಉಳಿಸಬಹುದು. ಹೇಗೆ ಹಣ ಉಳಿಸಬಹುದು? ಯಾರೆಲ್ಲ ಇದಕ್ಕೆ ಅರ್ಹರು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನೀವು ಇಂಡೇನ್, ಭಾರತ್, ಹೆಚ್‌ಪಿ(HP) ಯಾವುದೇ ಸಿಲಿಂಡರ್ ಬಳಸುತ್ತಿದ್ದರೂ ನಿಮಗೆ ಈ ಭರ್ಜರಿ ಕೊಡುಗೆ ಸಿಗಲಿದೆ. ಆದರೆ ಈ ಅವಕಾಶ ಕೇವಲ ನಿರ್ದಿಷ್ಟ ಜನರಿಗೆ ಮಾತ್ರ ಸಿಗಲಿದೆ. ಈ ಪ್ರಯೋಜನವನ್ನು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ (airtel thanks application) ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು.
ಯಾರಿಗೆ ಈ ಪ್ರಯೋಜನ ಸಿಗಲಿದೆ :
ಈ ಪ್ರಯೋಜನವನ್ನು ಪಡೆಯಬೇಕೆಂದರೆ ಗ್ರಾಹಕರು ಆಕ್ಸಿಸ್ ಬ್ಯಾಂಕ್ ತನ್ನ ಬಳಕೆದಾರರಾಗಿರಬೇಕು. ಬಳಕೆದಾರರು ಕ್ರೆಡಿಟ್ ಕಾರ್ಡ್ (credit card) ಬಳಸುತ್ತಿರಬೇಕು. ಇನ್ನು ಆಕ್ಸಿಸ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲರಿಗೂ ಈ ಸೌಲಭ್ಯ ಸಿಗುವುದಿಲ್ಲ.10ರಷ್ಟು ಕ್ಯಾಶ್ ಬ್ಯಾಕ್ (cash back) ಪಡೆಯಲು ಗ್ರಾಹಕರು ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿರಬೇಕು.
ಕ್ಯಾಶ್ ಬ್ಯಾಕ್ ಪಡೆಯಲು ಸಿಲಿಂಡರ್ ಬುಕ್ ಮಾಡುವುದು ಹೇಗೆ:?
ಈ ಪ್ರಯೋಜನವನ್ನು ಪಡೆಯಲು ನೀವು ನಿಮ್ಮ ಮೊಬೈಲ್ ನಲ್ಲಿ ಏರ್ ಟೆಲ್ ಥ್ಯಾಂಕ್ಸ್ ಆಪ್ ಡೌನ್ಲೋಡ್ ಮಾಡಿರಬೇಕು. ಈ ಆಪ್ ನ ಮೂಲಕವೇ ನೀವು ಸಿಲಿಂಡರ್ ಬುಕ್ ಮಾಡಿದರೆ ಶೇಕಡಾ 10ರಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ. ಹಾಗೂ 85ರ ರಿಯಾಯಿತಿ ದೊರೆಯಲಿದೆ. ವಿಶೇಷವಾಗಿ ಈ ಪ್ರಯೋಜನ ಸೀಮಿತ ಅವಧಿಗೆ ಮಾತ್ರ ಈ ಲಭ್ಯವಿರಲಿದೆ.
ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಗ್ಯಾಸ್ ಬುಕ್ ಮಾಡುವುದು ಹೇಗೆ?
ಮೊದಲಿಗೆ ನೀವು ನಿಮ್ಮ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಬೇಕು.
ನಂತರ, ನೀವು ಮುಖಪುಟದಲ್ಲಿ ಕೆಳಗೆ ಗೋಚರಿಸುವ ಪೇ ಐಕಾನ್ ಕ್ಲಿಕ್ ಮಾಡಬೇಕಾಗುತ್ತದೆ.
ಈಗ ರೀಚಾರ್ಜ್ ಮತ್ತು ಪಾವತಿ ಬಿಲ್ ವಿಭಾಗದಲ್ಲಿ ಬುಕ್ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ.
ನಂತರ, ಸೆಲೆಕ್ಟ್ ಆಪರೇಟರ್ ಮೇಲೆ ಕ್ಲಿಕ್ ಮಾಡಿ.
ಈಗ ನೀವು ಐಡಿ ಆಯ್ಕೆ ಮಾಡಬೇಕು. ಗ್ರಾಹಕ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಅಥವಾ ವಿಶಿಷ್ಟ ಗ್ರಾಹಕ ಐಡಿಯನ್ನು ನಮೂದಿಸಬೇಕು.
ನಂತರ, ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದ ನಂತರ ಬುಕಿಂಗ್ ಮೊತ್ತವನ್ನು ನೋಡುತ್ತೀರಿ.
ನಂತರ, ಪೇ ನೌ ಕ್ಲಿಕ್ ಮಾಡಿ.
ಈಗ 10 ಪ್ರತಿಶತ ಕ್ಯಾಶ್ ಬ್ಯಾಕ್ ಪಡೆಯಲು ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ. ಈ ಕ್ಯಾಶ್ಬ್ಯಾಕ್ ನಿಮ್ಮ ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಖಾತೆಗೆ ಜಮಾ ಮಾಡಲಾಗುತ್ತದೆ.
ಪ್ರಸ್ತುತ ಸಿಲಿಂಡರ್ ಬೆಲೆ 860 ರೂ. ಇದೆ. ಅಂದರೆ ನಿಮಗೆ ರೂ. 85 ವರೆಗೆ ರಿಯಾಯಿತಿ ದೊರೆಯಲಿದೆ. ಇದರಿಂದ ಗ್ರಾಹಕರಿಗೆ ಆರ್ಥಿಕವಾಗಿ ನೆರವಾಗಲಿದ್ದು, ಗ್ರಾಹಕರು ಖುಷಿ ಪಡುವಂತಾಗಿದೆ.
ಗಮನಿಸಿ (notice) :
ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಿಲಿಂಡರ್ ಬುಕಿಂಗ್ ಹೊರತುಪಡಿಸಿ ಅಮೆಜಾನ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು. ಇದರಲ್ಲಿ ಸಿಲೆಂಡರ್ ಬುಕ್ ಮಾಡಿದರೆ ರೂ.17ರವರೆಗೆ ರಿಯಾಯಿತಿ ಸಿಗಲಿದೆ. ಈ ಪ್ರಯೋಜನವನ್ನು ICICI Amazon ಕ್ರೆಡಿಟ್ ಕಾರ್ಡ್(credit card) ಮೂಲಕ ಪಡೆಯಬಹುದು. ಮತ್ತು ಬಜಾಜ್ ಫೈನಾನ್ಸ್ ಆಪ್ (bajaj finance app) ಮೂಲಕ ರೂ.20 ರಿಯಾಯಿತಿ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ