ಗುಡ್ ನ್ಯೂಸ್(Good news)! ವಾಣಿಜ್ಯ ಸಿಲಿಂಡರ್(commercial cylinder) ಮತ್ತು ವಿಮಾನ ಇಂಧನ ಬೆಲೆಗಳಲ್ಲಿ ಭಾರಿ ಇಳಿಕೆ! ಗ್ಯಾಸ್ ಸಿಲಿಂಡರ್ ದರ ₹69.50 ಕಡಿತ(Gas cylinder price reduced by ₹69.50)!
ಹೌದು, ನೀವು ಓದಿದ್ದು ನಿಜ! ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ(LPG) ಸಿಲಿಂಡರ್ ದರ ₹69.50 ಕಡಿತಗೊಂಡಿದೆ. ಈಗ ಒಂದು ಸಿಲಿಂಡರ್‌ಗೆ ₹1,676 ನೀಡಲಾಗಿದೆ. ಜೊತೆಗೆ ವಿಮಾನ ಇಂಧನ(Aviation fuel) ಬೆಲೆಯು ಗಣನೀಯವಾಗಿ ಕುಸಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ಯಾಸ್ ಸಿಲಿಂಡರ್ ₹69 ಕಡಿತ, ವಿಮಾನ ಇಂಧನ ಬೆಲೆಯಲ್ಲಿಯೂ ಇಳಿಕೆ:
ವಾಣಿಜ್ಯ ಬಳಕೆಯ ಅಡುಗೆ ಸಿಲಿಂಡರ್ ದರ ಸತತ ಮೂರನೇ ತಿಂಗಳು ಕಡಿಮೆಯಾಗಿದೆ. ಶನಿವಾರ(ಜೂನ್ 01) 19 ಕೆ. ಜಿ ತೂಕದ ಸಿಲಿಂಡರ್‌ಗೆ ₹69 ಕಡಿತಗೊಳಿಸಿದ್ದರೆ, ಈಗಿನ ದರ ₹1, 676 ಆಗಿದೆ. ಏಪ್ರಿಲ್ 1 ರಂದು ₹30. 5 ಮತ್ತು ಮೇ 1 ರಂದು ₹19 ಬೆಲೆ ಇಳಿಕೆಯಾಗಿತ್ತು.
ಇದಲ್ಲದೆ, ವಿಮಾನಗಳಲ್ಲಿ ಬಳಸುವ ಇಂಧನ (ATF) ಬೆಲೆಯಲ್ಲಿಯೂ ಭಾರಿ ಇಳಿಕೆಯಾಗಿದೆ. ಈ ಬೆಲೆ ಇಳಿಕೆಯಿಂದ ವಿಮಾನ ಪ್ರಯಾಣದ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲದ ದರ ಮತ್ತು ವಿದೇಶಿ ವಿನಿಮಯ ದರವನ್ನು ಗಮನದಲ್ಲಿ ಇಟ್ಟುಕೊಂಡು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ATF ಹಾಗೂ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಿವೆ.
ಆದರೆ, ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಪ್ರಸ್ತುತ 14.2 ಕೆ.ಜಿ ತೂಕದ ಸಿಲಿಂಡರ್ ದರ ₹803 ಇದೆಯಷ್ಟೆ. ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ದರಗಳಲ್ಲಿ ಸಹ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಎಟಿಎಫ್ ದರ ಇಳಿಕೆ :
ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation-IOC) ಇಂದು ದೆಹಲಿಯಲ್ಲಿ ವಿಮಾನ ಇಂಧನ ಬೆಲೆ ಪ್ರತಿ ಕಿಲೋ ಲೀಟರ್‌ಗೆ ₹6,854.25 ಕಡಿಮೆಯಾಗಿದೆ. ಹೊಸ ಬೆಲೆ ಪ್ರಕಾರ, ದೆಹಲಿಯಲ್ಲಿ ಎಟಿಎಫ್ ಒಂದು ಕಿಲೋ ಲೀಟರ್‌ಗೆ ₹1,11,344 ಗೆ ಲಭ್ಯವಿರುತ್ತದೆ.
ಈ ಇಳಿಕೆಯು ಕಳೆದ ತಿಂಗಳಿಗೆ ಶೇ.5.8ರಷ್ಟು ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ, ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಕಿಲೋ ಲೀಟರ್‌ಗೆ ₹1,18,199 ಆಗಿದೆ.
ಈ ಬೆಲೆ ಕಡಿಮೆಯಿರುವ ವಿಮಾನಯಾನ ಕಂಪನಿಗಳಿಗೆ ಸ್ವಲ್ಪಮಟ್ಟಿಗೆ ಪರಿಹಾರ, ಅದು ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಒತ್ತಡಕ್ಕೆ ಸಿಲುಕಿತು. ಇದು ವಿಮಾನ ಪ್ರಯಾಣದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ, ಇದು ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.