ಡಿಸೆಂಬರ್(December) ತಿಂಗಳ ಮೊದಲ ದಿನವೇ ಎಲ್ ಪಿಜಿ ಸಿಲೆಂಡರ್(LPG cylinder) ಬಳಕೆದಾರರಿಗೆ ಬಿಗ್ ಶಾಕ್.!
ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ ಪಿ ಜಿ ಸಿಲೆಂಡರ್ ಇಲ್ಲದೆ ಯಾರ ಮನೆಗಳಲ್ಲೂ ಅಡುಗೆ ಕೆಲಸಗಳು ಆಗುವುದಿಲ್ಲ. ಅದರಲ್ಲೂ ಇಂದು ಎಲ್ಲರೂ ಮನೆಗಳಲ್ಲಿ, ಗೃಹ ಬಳಕೆ(Domestic use) ಹಾಗೂ ವಾಣಿಜ್ಯ ಕೆಲಸಗಳಿಗೆ(commercial purposes) ಎಲ್‌ಪಿಜಿ ಸಿಲಿಂಡರ್ ಗಳನ್ನು(LPG cylinder) ಬಳಸುತ್ತಾರೆ. ಇನ್ನು ಎಲ್ಪಿಜಿ ಸಿಲೆಂಡರ್ ಗಳ ಬಳಕೆಯಿಂದ ಕಡಿಮೆ ಸಮಯದಲ್ಲಿ ಅಡುಗೆ ಕೆಸಗಳನ್ನು ಮಾಡಿ ಮುಗಿಸಬಹುದು. ಆದ್ದರಿಂದ ಇಂದು ಎಲ್ಲರ ಮನೆಯಲ್ಲೂ ಕೂಡ ಸಿಲೆಂಡರ್ ಗಳನ್ನು ಬಳಸುತ್ತಿದ್ದಾರೆ. ಅದರೆ ಇದೀಗ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ವಾಣಿಜ್ಯ ವ್ಯಾಪಾರಸ್ಥರು ಎಲ್‌ಪಿಜಿ ಸಿಲಿಂಡರ್ ಅನ್ನು ಕೊಂಡು ಕೊಳ್ಳಲು ಬಹಳ ಕಷ್ಟಕರವಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್ ಹಬ್ಬ ಹಾಗೂ ಮದುವೆ ಕಾರ್ಯಕ್ರಮಗಳ ಜೊತೆಯಲ್ಲಿ ಇಯರ್ ಎಂಡ್ ಆಗಿರುವುದರಿಂದ ಮನೆ ಹಾಗೂ ಹೋಟೆಲ್ ಗಳಲ್ಲಿ ಗ್ಯಾಸ್ ಹೆಚ್ಚಾಗಿ ಬೇಕಾಗುತ್ತದೆ. ಆದರೆ ಡಿಸೆಂಬರ್ ಆರಂಭದಿಂದಲೇ ಎಲ್‌ಪಿಜಿ ಸಿಲಿಂಡರ್‌ಗಳು ದುಬಾರಿಯಾಗುತ್ತಿದ್ದು, ಜನರು ಸಿಲೆಂಡರ್ ಕೊಂಡಕೊಳ್ಳಲು ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದರಾಗಿದೆ. ಬೆಲೆ ಎಷ್ಟು ಏರಿಕೆಯಾಗಿದೆ (Rate Increased), ಯಾವಾಗಿನಿಂದ ಏರಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ(price hike) ಜನರ ಜೇಬಿಗೆ ಕತ್ತರಿ :
ಹೌದು, ಎಲ್‌ಪಿಜಿ ಸಿಲಿಂಡರ್ ಅನ್ನು ಎಲ್ಲರೂ ಬಳಸುತ್ತಿದ್ದು, ಎಲ್ಲರ ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕು. ಆದರೆ ಇತ್ತೀಚಿಗೆ ತಿಂಗಳಿನಿಂದ ತಿಂಗಳಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಆಗುತ್ತಲೇ ಇದ್ದು, ಇದೀಗ ಡಿಸೆಂಬರ್ ತಿಂಗಳ ಮೊದಲ ದಿನವೇ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳು (new rates) ಅನ್ವಯವಾಗಲಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್(Commercial use cylinder) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ :
ಕಳೆದ ಸ್ವಲ್ಪ ತಿಂಗಳುಗಳಿಂದ ಗ್ಯಾಸ್ ಸಿಲಿಂಡರ್ ಬೆಲೆ ಕ್ರಮೇಣ ಏರಿಕೆಯಾಗುತ್ತಲೇ ಇದೆ. ಆಗಸ್ಟ್‌ನಲ್ಲಿ 8.50 ರೂಪಾಯಿ ಏರಿಕೆಯಾಗಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಮೂರು ತಿಂಗಳು ಸೇರಿ ಒಟ್ಟು 39 ರೂಪಾಯಿ ಬೆಲೆ ಏರಿಕೆಯಾಗಿತ್ತು. ಇನ್ನು, ನವೆಂಬರ್ ತಿಂಗಳ ಮೊದಲ ದಿನದಿಂದಲೇ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ದರವನ್ನು 62 ರೂ.ಗಳಿಗೆ ಹೆಚ್ಚಿಸಲಾಗಿತ್ತುತ್ತು. ಇದೀಗ ಮತ್ತೆ ಡಿಸೆಂಬರ್‌ನಲ್ಲಿ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಏರಿಕೆ ಮಾಡಿದ್ದು, 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವು 16.5 ರೂಪಾಯಿ ಹೆಚ್ಚಳವಾಗಿದೆ.
ಎಲ್ಲಿ ಎಲ್ಲಿ ಎಷ್ಟು ಬೆಲೆ ಇದೆ?:
ಡಿಸೆಂಬರ್ ಮೊದಲ ದಿನವೇ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ನವೆಂಬರ್ ನಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1802 ಇತ್ತು. ಇದೀಗ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1818.50 ರೂ ಆಗಿದೆ. ಉಳಿದಂತೆ ಕೋಲ್ಕತ್ತಾದಲ್ಲಿ 1927 ರೂ., ಮುಂಬೈನಲ್ಲಿ 1771 ರೂ., ಚೆನ್ನೈನಲ್ಲಿ 1980.50 ರೂ., ಪಟ್ನಾದಲ್ಲಿ 2072 ರೂ. ಬೆಂಗಳೂರಿನಲ್ಲಿ 1895 ರೂ. ಹೆಚ್ಚಳವಾಗಿದೆ.
ಗಮನಿಸಿ :
ವಿಶೇಷ ಸಂಗತಿ ಏನೆಂದರೆ 14 ಕೆಜಿಯ ಗೃಹ ಬಳಕೆಯ (Home use) ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದಿಗೂ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಕೇವಲ 803 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 829 ರೂ., ಮುಂಬೈನಲ್ಲಿ 802.50 ಮತ್ತು ಚೆನ್ನೈನಲ್ಲಿ 818.50 ರೂ.ಇದೆ.
ವಾಣಿಜ್ಯ ಬಳಕೆಯ ಸಿಲಿಂಡರ್(Commercial use cylinder) ಬೆಲೆ ಪರಿಷ್ಕರಣೆಯು ಪ್ರತಿನಿತ್ಯ ಸಿಲಿಂಡರ್ ಬಳಸುವ ರೆಸ್ಟೋರೆಂಟ್, ಹೋಟೆಲ್ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.