LPG Gas: ಎಲ್​ಪಿಜಿ ಗ್ಯಾಸ್​ಗೆ ಇದ್ದವರಿಗೆ ಬಿಗ್ ಅಪ್​ಡೇಟ್ ; ತಪ್ಪದೇ ಈ ಕೆಲಸ madi!

IMG 20240712 WA0002

ಎಲ್ ಪಿ ಜಿ ಗ್ಯಾಸ್ ಗೆ ಆಧಾರ್ ಲಿಂಕ್(link Aadhaar to LPG) ಆಗಬೇಕು, ಅದಕ್ಕಾಗಿ ಹೊಸ ಇಕೆವೈಸಿ(e- KYC) ಅಪ್ ಡೇಟ್ ಅಗತ್ಯ!

ಇಂದು ಅಡುಗೆ ಕೆಲಸಗಳಿಗೆ ಹೆಚ್ಚಾಗಿ ಎಲ್ಲರೂ ಎಲ್ ಪಿ ಜಿ (LPG) ಅನ್ನು ಬಳಸುತ್ತಾರೆ. ಎಲ್ ಪಿ ಜಿ ಗ್ಯಾಸ್ ಬಹಳ ಮುಖ್ಯವಾಗಿದೆ. ಆದರೆ ಇಂದು ಸರ್ಕಾರದಿಂದ (government) ಕಡಿಮೆ ಬೆಲೆಗೆ ದೊರೆಯುವ ಅಡುಗೆ ಅನಿಲ ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ದುರೂಪಯೋಗವನ್ನು ನಿಲ್ಲಿಸುವ ಸರ್ಕಾರ ಒಂದು ಮಹತ್ವದ ಕಾರ್ಯ ಕೈಗೊಂಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಕೆವೈಸಿ ಅಪ್ಡೆಟ್ ಮಾಡುವ ಉದ್ದೇಶ (purpose) :

ಅಡುಗೆ ಅನಿಲವನ್ನು ಸರ್ಕಾರ ಸಬ್ಸಿಡಿ(subsidy) ದರದಲ್ಲಿ ನೀಡುತ್ತದೆ. 14.2 ಕಿಲೋ ತೂಕದ ಅಡುಗೆ ಅನಿಲ ಸಿಲಿಂಡರ್ ನ ಬೆಲೆ ಸದ್ಯ 803 ರೂ ಇದೆ. ಆದರೆ, 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ (commercial gas cylinder) ಬೆಲೆ 1,646 ರೂ ಇದೆ. ಸುಮಾರು 600 ರೂ. ನಷ್ಟು ಅಂತರ ಇದೆ. ಸಾಕಷ್ಟು ಜನರು ವಾಣಿಜ್ಯ ಉಪಯೋಗಕ್ಕೆ ಅಡುಗೆ ಅನಿಲವನ್ನೇ ಬಳಸುತ್ತಿದ್ದಾರೆ. ಹೋಟೆಲ್ ಇತ್ಯಾದಿಯವರು ಅಡುಗೆ ಅನಿಲ ಬಳಕೆದಾರರ ಹೆಸರಲ್ಲಿ ಸಿಲಿಂಡರ್(cylinder) ಪಡೆದು ಬಳಸುವುದು ಇತ್ಯಾದಿ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರ ಗ್ರಾಹಕರಿಂದ ಆಧಾರ್ ಇಕೆವೈಸಿ ಮಾಡಿಸುವಂತೆ ಇಂಡೇನ್, ಎಚ್ ಪಿ, ಬಿಪಿ ಗ್ಯಾಸ್ ವಿತರಕರಿಗೆ ತಿಳಿಸಿದೆ.

ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಇರುವವರು ಇಕೆವೈಸಿ ಅಪ್​ಡೇಟ್ (EKYC Update) ಕಡ್ಡಾಯ :

ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್ ಡೇಟ್ ಮಾಡಬೇಕಾಗುತ್ತದೆ. ಗ್ರಾಹಕರಿಂದ ಇಕೆವೈಸಿ ಪಡೆಯುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಅಡುಗೆ ಅನಿಲವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿರುವುದನ್ನು ತಡೆಯಲು ಈ ಕ್ರಮ ಕೈಗೊಂಡಿದೆ. ಹಾಗಾಗಿ ಇಕೆವೈಸಿ ಅಪ್ ಡೇಟ್ ಕಡ್ಡಾಯವಾಗಿದೆ.

ನಿಮ್ಮ ಎಲ್ ಪಿಜಿ ಗ್ಯಾಸ್ ಸಂಪರ್ಕಕ್ಕೆ ಇಕೆವೈಸಿ ಅಪ್ ಡೇಟ್ ಮಾಡಬೇಕಾಗುತ್ತದೆ :

ಐಒಸಿ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (oil marketing companies) ಗ್ರಾಹಕರಿಂದ ಆಧಾರ್ ಆಧಾರಿತ ಇಕೆವೈಸಿ ಪಡೆಯುತ್ತಿವೆ. ಅಡುಗೆ ಅನಿಲ ಸಂಪರ್ಕವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ (central government) ಸೂಚನೆ ಮೇರೆಗೆ ಈ ಕಾರ್ಯ ಮಾಡಲಾಗುತ್ತಿದೆ. ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಇದರ ಬಗ್ಗೆ ಮಾತನಾಡಿ, ಆಧಾರ್ ಮೂಲಕ ಇಕೆವೈಸಿ ಅಪ್ ಡೇಟ್ ಮಾಡಲು ಕಾರಣಗಳನ್ನು ನೀಡಿದ್ದಾರೆ.

ಇಕೆವೈಸಿ ಅಪ್ ಡೇಟ್ ಮಾಡುವ ವಿಧಾನ (steps) :

ನಿಮಗೆ ಗ್ಯಾಸ್ ಡೆಲಿವರಿಗೆ ಬರುವ ವ್ಯಕ್ತಿಗೆ ನಿಮ್ಮ ಆಧಾರ್ ವಿವರ ಸಲ್ಲಿಸಬೇಕು.
ನಂತರ ಆಪ್ ಒಂದರಲ್ಲಿ ನಿಮ್ಮ ಆಧಾರ್ ವಿವರ ಫೀಡ್ ಮಾಡಲಾಗುತ್ತದೆ.
ಆಧಾರ್ ಗೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ಸಲ್ಲಿಸಿದರೆ ಇಕೆವೈಸಿ ಅಪ್ ಡೇಟ್ ಆದಂತೆ.
ನಿಮ್ಮ ಗ್ಯಾಸ್ ವಿತರಕ ಏಜೆನ್ಸಿಯ ಕಚೇರಿಗೆ ಹೋಗಿ ಇಕೆವೈಸಿ ಮಾಡಬಹುದು.
ನಿಮ್ಮ ಆಧಾರ್ ಪ್ರತಿಯನ್ನು ಅಲ್ಲಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.
ಇಂಡಿಯನ್ ಆಯಿಲ್, ಭಾರತ್ ಗ್ಯಾಸ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಮೊಬೈಲ್ ಆಯಪ್ ಗಳಲ್ಲಿ ಇಕೆವೈಸಿ ಅಪ್ ಡೇಟ್ ಮಾಡುವ ಅವಕಾಶ ಇರುತ್ತದೆ.

ಗಮನಿಸಿ (Notice) :

ಗ್ಯಾಸ್ ಸಂಪರ್ಕಕ್ಕೆ ಇಕೆವೈಸಿ ಅಪ್ ಡೇಟ್ ಮಾಡಲು ಸದ್ಯ ಸರ್ಕಾರ ಯಾವುದೇ ರೀತಿಯ ಡೆಡ್ ಲೈನ್ (deadline) ನೀಡಿಲ್ಲ. ಹೀಗಾಗಿ, ಆತುರ ಮಾಡದೇ ತಾಳ್ಮೆಯಿಂದ ಇಕೆವೈಸಿ ಮಾಡಲು ಸಾಕಷ್ಟು ಸಮಯಾವಕಾಶ ಇರುತ್ತದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!