ಎಲ್‌ಪಿಜಿ ಅಡುಗೆ ಸಿಲಿಂಡರ್ ಸಬ್ಸಿಡಿ ಬರುತ್ತಿಲ್ಲವೇ? ಈ ಸಣ್ಣ ಕೆಲಸ ಮಾಡಿ.! ಜಮಾ ಆಗುತ್ತೆ 

Picsart 25 04 11 23 02 24 293

WhatsApp Group Telegram Group

ಎಲ್‌ಪಿಜಿ ಸಬ್ಸಿಡಿ ಸಮಸ್ಯೆ: ಇ-ಕೆವೈಸಿ, ಆಧಾರ್ ಲಿಂಕ್ ಮತ್ತು ಬ್ಯಾಂಕ್ ವಿವರಗಳ ಅಪ್‌ಡೇಟ್ ಅಗತ್ಯವಿದೆ

ಈಗಿನ ದಿನಗಳಲ್ಲಿ ಎಲ್‌ಪಿಜಿ ಅಡುಗೆ ಅನಿಲ (LPG gas Cylinder) ಬಳಕೆ ಮಾಡುವ ಜನರಿಗೆ ಸಬ್ಸಿಡಿ ಲಭ್ಯವಿರುವುದು ತುಂಬಾ ಮಹತ್ತ್ವದ್ದಾಗಿದೆ. ದುಬಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನತೆ ಚಿಂತೆಗೊಳಗಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ ಅಡುಗೆ ಅನಿಲ ಸಬ್ಸಿಡಿ ಸಹಾಯವಾಗುತಿತ್ತು. ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಹಾಗೂ ಸಾಮಾನ್ಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಅನೇಕ ವರ್ಷಗಳಿಂದ ಸಬ್ಸಿಡಿ ನೀಡಲಾಗುತ್ತಿದೆ. ಆದರೂ, ಇತ್ತೀಚೆಗೆ ಹಲವರು ತಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮೆಯಾಗುತ್ತಿಲ್ಲ ಎಂದು ಅಕಾಲಿಕ ದೂರುಗಳನ್ನು ನೀಡಿದ್ದಾರೆ. ಏಕೆ ಸಬ್ಸಿಡಿ ಬರ್ತಿಲ್ಲ? ಹೇಗೆ ಅದನ್ನು ಸರಿಪಡಿಸಬಹುದು? ಯಾವ ಡಾಕ್ಯುಮೆಂಟ್‌ಗಳು ಬೇಕು ಎಂಬ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ದೈನಂದಿನ ಬದುಕಿನಲ್ಲಿ ಅಡುಗೆ ಅನಿಲದ (LPG) ಮಹತ್ವ ಅಪಾರ. ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ದುಬಾರಿಯಾಗುತ್ತಿರುವುದು ದೊಡ್ಡ ಹೊರೆ ಆಗಿದೆ. ಈ ಸಮಸ್ಯೆಯನ್ನು ಲಘು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ (Central government) ಸಾಮಾನ್ಯ ಗ್ರಾಹಕರಿಗೂ, ‘ಪ್ರಧಾನಮಂತ್ರಿ ಉಜ್ವಲ ಯೋಜನೆ’ ಅಡಿಯಲ್ಲಿ ಅರ್ಹ ಮಹಿಳೆಯರಿಗೂ ಅಡುಗೆ ಅನಿಲ ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿ ಸಿಲಿಂಡರ್‌ಗೆ ಸುಮಾರು ₹300 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ವರ್ಷಕ್ಕೆ 12 ಸಿಲಿಂಡರ್‌ಗಳವರೆಗೆ ಈ ಸೌಲಭ್ಯ ಲಭ್ಯವಿದೆ. ಆದಾಗ್ಯೂ, ಇತ್ತೀಚೆಗೆ ಹಲವಾರು ಗ್ರಾಹಕರು ತಮಗೆ ಈ ಸಬ್ಸಿಡಿ ಹಣ (Subsidy money) ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ಸಬ್ಸಿಡಿ ಸಿಗದಿರೋ ಪ್ರಮುಖ ಕಾರಣಗಳು ಹೀಗಿವೆ.

ಸಬ್ಸಿಡಿ ಸಿಗದಿರೋ ಪ್ರಮುಖ ಕಾರಣಗಳು:

ಇ-ಕೆವೈಸಿ ಪ್ರಕ್ರಿಯೆ ಮುಗಿದಿಲ್ಲ:
2023ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಡುಗೆ ಅನಿಲ ಗ್ರಾಹಕರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು (EKY-C Process) ಆರಂಭಿಸಿದೆ. ಆದರೆ, ಈ ಪ್ರಕ್ರಿಯೆ ಇನ್ನೂ ಬಹುತೇಕ ಗ್ರಾಹಕರಿಗೆ ಪೂರ್ಣವಾಗಿಲ್ಲ. ಇ-ಕೆವೈಸಿ ಮುಗಿಯದೇ ಇದ್ದರೆ, ಸಬ್ಸಿಡಿ ಹಣ ಜಮೆಯಾಗೋದಿಲ್ಲ.
ಬ್ಯಾಂಕ್ ಅಕೌಂಟ್ ಡಾಕ್ಯುಮೆಂಟ್ (Bank account document) ಸಲ್ಲಿಸಿಲ್ಲ:
ಕೆಲ ಗ್ರಾಹಕರು ತಮ್ಮ ಬ್ಯಾಂಕ್ ವಿವರಗಳನ್ನು ಸರಿಯಾಗಿ ಸಲ್ಲಿಸಿಲ್ಲ. ಇದರಿಂದಾಗಿ ಅಡುಗೆ ಅನಿಲ ಕಂಪನಿಗಳಿಗೆ ಹಣ ಕಳುಹಿಸಲು ತೊಂದರೆ ಆಗುತ್ತಿದೆ.
ಆಧಾರ್ ಕಾರ್ಡ್ ಲಿಂಕ್ ಇಲ್ಲ:
ಎಲ್‌ಪಿಜಿ ಐಡಿಗೆ ಆಧಾರ್ ಲಿಂಕ್ (Adhar link)  ಮಾಡಿಲ್ಲದ ಗ್ರಾಹಕರಿಗೂ ಸಬ್ಸಿಡಿ ಸಿಗುವುದಿಲ್ಲ. ಆಧಾರ್, ಬ್ಯಾಂಕ್ ಖಾತೆ ಹಾಗೂ ಎಲ್‌ಪಿಜಿ ಐಡಿ (LPG ID) ನಡುವಿನ ಲಿಂಕ್ ಅನಿವಾರ್ಯವಾಗಿದೆ.

ಸಬ್ಸಿಡಿ ಸಮಸ್ಯೆ ಪರಿಹಾರಕ್ಕೆ ಅನುಸರಿಸಬೇಕಾದ ವಿಧಾನ ಹೀಗಿದೆ:

ಸಬ್ಸಿಡಿ ಸಮಸ್ಯೆ ಪರಿಹಾರಕ್ಕೆ ಅನುಸರಿಸಬೇಕಾದ ವಿಧಾನ ಹೀಗಿದೆ:

1. https://mylpg.in/index.aspx ವೆಬ್‌ಸೈಟ್‌ಗೆ ಹೋಗಿ:
ಈ ಪೋರ್ಟಲ್‌ನಲ್ಲಿ (Portal) ನೀವು ನಿಮ್ಮ 17 ಅಂಕಿಗಳ ಎಲ್‌ಪಿಜಿ ಗ್ರಾಹಕ ಐಡಿ ಬಳಸಿ ಲಾಗಿನ್ ಮಾಡಿ, ಸಬ್ಸಿಡಿ ಸ್ಥಿತಿಯನ್ನು ಚೆಕ್ ಮಾಡಬಹುದು.
2. ಇ-ಕೆವೈಸಿ ಪ್ರಕ್ರಿಯೆ ಮುಗಿಸಿ:
ನಿಮ್ಮ ಎಲ್‌ಪಿಜಿ ಸಪ್ಲೈ ಮಾಡುವ ಕಂಪನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ಹೋಗಿ ಅಥವಾ ಆನ್‌ಲೈನ್ (Online)  ಮೂಲಕ ಇ-ಕೆವೈಸಿ ಮಾಡಿ.
3. ಬ್ಯಾಂಕ್ ಡೀಟೆಲ್ಸ್ ಅಪ್‌ಡೇಟ್ ಮಾಡಿ:
ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಇತ್ಯಾದಿ ಸರಿಯಾಗಿ ಲಿಂಕ್ (Link) ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಡಾಕ್ಯುಮೆಂಟ್‌ಗಳು ಲಭ್ಯವಿಲ್ಲದಿದ್ದರೆ ಸಲ್ಲಿಸಿ.
4. ಆಧಾರ್ ಲಿಂಕ್ ಪರಿಶೀಲಿಸಿ:
ನಿಮ್ಮ ಆಧಾರ್ ಸಂಖ್ಯೆ ಎಲ್‌ಪಿಜಿ ಐಡಿಗೆ ಹಾಗೂ ಬ್ಯಾಂಕ್‌ಖಾತೆಗೆ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ. ಇಲ್ಲದಿದ್ದರೆ, ಆದಷ್ಟು ಬೇಗ ಲಿಂಕ್ ಮಾಡಿಸಿಕೊಳ್ಳಿ.

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸಬ್ಸಿಡಿ (Subsidy) ವಿವರ:

ಈ ಯೋಜನೆಯಡಿ, ಅರ್ಹ ಮಹಿಳಾ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗಾಗಿ ರೂ.300 ಸಬ್ಸಿಡಿ ಒದಗಿಸಲಾಗುತ್ತಿದೆ. ವರ್ಷಕ್ಕೆ ಗರಿಷ್ಠ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ಸಿಗುತ್ತದೆ. ಇದನ್ನು ಪಡೆಯಲು ಎಲ್ಲಾ ದಾಖಲೆಗಳು ಸರಿಯಾಗಿ ಲಿಂಕ್ ಆಗಿರುವುದು ಅನಿವಾರ್ಯ.

ಎಲ್‌ಪಿಜಿ ಸಬ್ಸಿಡಿ ಸಿಗದಿರುವುದು ತಾತ್ಕಾಲಿಕ ತೊಂದರೆಯಾಗಿದ್ದು, ಸರಿಯಾದ ಮಾಹಿತಿ, ದಾಖಲೆಗಳ ಜೋಡಣೆ ಮತ್ತು ಇ-ಕೆವೈಸಿ ಪ್ರಕ್ರಿಯೆ ಮುಗಿಸಿದರೆ ನೀವು ಮತ್ತೆ ಸಬ್ಸಿಡಿ (Subsidy) ಪಡೆಯಬಹುದು. ಸರ್ಕಾರದಿಂದ ಇವುಗಳ ಮೇಲ್ವಿಚಾರಣೆ ನಡೆಯುತ್ತಿರುವುದರಿಂದ, ಹೆಚ್ಚಿನ ಸಮಯ ಕಳೆಯದೆ ಕ್ರಮ ಕೈಗೊಂಡರೆ ಉಪಯೋಗವಾಗುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ ನಿಮ್ಮ ಎಲ್‌ಪಿಜಿ ಕಂಪನಿಯ ಗ್ರಾಹಕ ಸೇವಾ ಕೇಂದ್ರ (Help line center) ಅಥವಾ ಅಧಿಕೃತ ವೆಬ್‌ಸೈಟ್ ಸಂಪರ್ಕಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!