ಕೇಂದ್ರ ಸರ್ಕಾರದ (Gas cylinder)ಉಜ್ವಲ ಯೋಜನೆ (Ujwala yojana)ಅಡಿಯಲ್ಲಿ ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಪಡೆದುಕೊಂಡಿದ್ದಾರೆ. ಇಂತಹ ಜನಗಳಿಗೆ ಪ್ರತಿ ವರ್ಷ 12 ಸಿಲಿಂಡರ್ ಖರೀದಿ ಮಾಡಲು ರೂ.200 ಸಬ್ಸಿಡಿ ನೀಡುತ್ತಿದ್ದರು ಆದರೆ ಕೇಂದ್ರದಿಂದ ಮತ್ತೆ ಗ್ಯಾಸ್ ಸಿಲಿಂಡರ್ ಸಬ್ಸಿಡಿ (Gas cylinder subsidy) ನೀಡಲು ನಿರ್ಧಾರವನ್ನು ಮಾಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಸಬ್ಸಿಡಿ ಮೊತ್ತ ಇನ್ನಷ್ಟು ಏರಿಕೆ
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸಬ್ಸಿಡಿ ಮೊತ್ತವನ್ನು ಇನ್ನಷ್ಟು ಏರಿಕೆ ಮಾಡಿದ್ದಾರೆ. ಅಂದರೆ 200 ರೂ ಇದ್ದ ಸಬ್ಸಿಡಿಯನ್ನು 300 ರೂ ಏರಿಸಲಾಗಿದೆ. ಹಾಗಾಗಿ ಗ್ಯಾಸ್ ಸಿಲಿಂಡರ್(Gas cylinder) ಬಳಕೆದಾರರಿಗೆ KYC ಮಾಡಿಸಿ ಸಬ್ಸಿಡಿ ಪಟ್ಟಿಯಲ್ಲಿ ಹೆಸರನ್ನು ಸೇರಿಸಿಕೊಳ್ಳಲು ಸೂಚಿಸಲಾಗಿತ್ತು ಈಗಾಗಲೇ KYC ಮಾಡಿಸಿರುವ ಗ್ಯಾಸ್ ಸಿಲಿಂಡರ್ ಬಳಕೆದಾರರ ಹೆಸರನ್ನು ಸಬ್ಸಿಡಿ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರದಿಂದ ಎಲ್ಲಾ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೂ KYC ಮಾಡಿಸಲು ಸೂಚನೆಯನ್ನು ನೀಡಲಾಗಿತ್ತು, ಇದೀಗ KYC ಮಾಡಿಸಿರುವ ಕೆಲವು ಅರ್ಹ ಸಬ್ಸಿಡಿ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರು ಇರುವ ಫಲಾನುಭವಿಗಳಿಗೆ ಇನ್ನು ಮುಂದೆ ಕೇವಲ 600 ರೂ ಗಳಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ. ನೀವು ಕೂಡ ಉಜ್ವಲ ಯೋಜನೆಯ ಗ್ಯಾಸ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಹೆಸರು ಕೂಡ ಸಬ್ಸಿಡಿ ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿ
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿಯಲ್ಲಿ(Gas cylinder subsidy list) ಹೆಸರು ಇದೆಯೇ ಚೆಕ್ ಮಾಡುವುದು ಹೇಗೆ ಎಂಬುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ:
ಮೊದಲು ಇಲಾಖೆಯ ಅಧಿಕೃತ ವೆಬ್ಸೈಟ್ಗೆ(official website) https://www.mylpg.in/ ಭೇಟಿ ನೀಡಿ.
ನಂತರ ವೆಬ್ಸೈಟ್ ಓಪನ್ ಆದ ನಂತರ bharat, HP, Indian ಈ ಮೂರು ಆಯ್ಕೆಗಳು ಕಾಣಿಸುತ್ತವೆ, ನೀವು ಯಾವ ಗ್ಯಾಸ್ ಸಿಲಿಂಡರ್ ಅಡಿಯಲ್ಲಿ ಗ್ಯಾಸ್ ಪಡೆದುಕೊಂಡಿದ್ದೀರಿ ಎಂಬುದನ್ನು ನೋಡಿ ಅದನ್ನು ಆಯ್ಕೆ ಮಾಡಿ.
ನಂತರ ನಿಮಗೆ ಹೊಸ ಪುಟ ಓಪನ್ ಆಗುವುದು ಅದರ right side ಕಾಣುವ home ಮೇಲೆ ಕ್ಲಿಕ್ ಮಾಡಿ.
ನಂತರ ಹೊಸ ಪೇಜ್ Open ಆಗುತ್ತದೆ ಅಲ್ಲಿ ಉಜ್ವಲ ಬೆನಿಫಿಶಿಯರಿ (Ujjwala beneficiaries )Option ಇರುತ್ತದೆ ಅದನ್ನು ಆಯ್ಕೆ ಮಾಡಿ ನಂತರ ನಿಮ್ಮ ರಾಜ್ಯ ಜಿಲ್ಲೆ ಆಯ್ಕೆ ಮಾಡಿ ನಿಮ್ಮ ಗ್ಯಾಸ್ ಸಿಲಿಂಡರ್ ಪುಸ್ತಕದ ನಂಬರ್ (Gas cylinder book number)ನಮೂದಿಸಿ ಸಬ್ಮಿಟ್ (Submit)ಮೇಲೆ ಕ್ಲಿಕ್ ಮಾಡಿ.
ಕೊನೆಯಲ್ಲಿ ನಿಮಗೆ ಸಬ್ಸಿಡಿ ಯೋಜನೆಗೆ ಅರ್ಹರಾಗಿರುವ ಫಲಾನುಭವಿಗಳ ಪಟ್ಟಿ (Selected list) ಕಾಣಿಸುತ್ತದೆ ಅದರಲ್ಲಿ ಹಲವು ಪುಟಗಳಲ್ಲಿ ಹೆಸರನ್ನು ತೋರಿಸಲಾಗುವುದು .
ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇದ್ದರೆ ನೀವು ಗ್ಯಾಸ್ ಸಿಲಿಂಡರ್ ಗೆ ರೂ.300 ಗಳ ಸಬ್ಸಿಡಿಯನ್ನು ಪಡೆಯಬಹುದು.
ಒಂದು ವೇಳೆ ನೀವು ಇನ್ನೂ ಈ ಉಜ್ವಲ ಯೋಜನೆ ಗೆ ಅರ್ಜಿ ಸಲ್ಲಿಸಿಲ್ಲ ಅಂದರೆ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದುಕೊಳ್ಳಲು ಈಗಲೂ ಕೂಡ ಅವಕಾಶವಿದ್ದು, ಆನ್ಲೈನ್ ಮೂಲಕ (Online)ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿ (Gas agency) ಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ಕೊಟ್ಟು ಪ್ರಧಾನ ಮಂತ್ರಿ ಉಜ್ವಲ ಯೋಜನೆ (Pradhan mantri Ujwala yojana) 2.0 ಗೆ ಅಪ್ಲೈ (Apply)ಮಾಡಿ.
ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿ ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗೃಹಲಕ್ಷ್ಮಿ 5ನೇ ಕಂತಿನ ಹಣ ಈ ಜಿಲ್ಲೆಯ ಮಹಿಳೆಯರಿಗೆ ಈಗ ಜಮಾ ಆಯ್ತು
- ಈ ಮಹಿಳೆಯರಿಗೆ ಸಿಗಲಿದೆ ಉಚಿತ LPG ಗ್ಯಾಸ್ ಕನೆಕ್ಷನ್, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.
- LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಭರ್ಜರಿ ಆಫರ್, ತಪ್ಪದೇ ತಿಳಿದುಕೊಳ್ಳಿ
- ಗ್ಯಾಸ್ ಸಿಲಿಂಡರ್ e-kyc ಮಾಡಿಲ್ಲ ಅಂದ್ರೆ ಸಬ್ಸಿಡಿ ಬಂದ್..? ಕೇಂದ್ರದ ಸ್ಪಷ್ಟನೆ ಇಲ್ಲಿದೆ!
- ಬ್ಯಾಂಕ್ ಆಫ್ ಇಂಡಿಯಾ ಹೊಸ ನಾರಿಶಕ್ತಿ ಬ್ಯಾಂಕ್ ಉಳಿತಾಯ ಖಾತೆ, ಪ್ರಯೋಜನಗಳ ಬಗ್ಗೆ ಗೊತ್ತಾ?
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.