LPG ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ, ತಿಂಗಳ ಮೊದಲ ವಾರವೇ ಜನರ ಜೇಬಿಗೆ ಕತ್ತರಿ

IMG 20241002 WA0005

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ, ತಿಂಗಳ ಮೊದಲ ದಿನವೇ ಜನರ ಜೇಬಿಗೆ ಕತ್ತರಿ…!

LPG cylinder price hike :// ಇಂದು ಎಲ್ಲರೂ ಮನೆಗಳಲ್ಲಿ, ವಾಣಿಜ್ಯ ಕೆಲಸಗಳಿಗೆ ಎಲ್‌ಪಿಜಿ ಸಿಲಿಂಡರ್ (LPG cylinder) ಅನ್ನು ಬಳಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್‌ಪಿಜಿ ಸಿಲಿಂಡರ್ ಮಿತವ್ಯಯಕಾರಿಯಾಗಿದ್ದು, ಮತ್ತು ಅದರ ಅತ್ಯುತ್ತಮ ತಾಪನ ಸಾಮರ್ಥ್ಯವು ಆಹಾರವನ್ನು ಕಡಿಮೆ ಸಮಯದಲ್ಲಿ ಬೇಯಿಸಲು ಸಹಾಯ ಮಾಡುತ್ತದೆ, ಇಂಧನ ವೆಚ್ಚದಲ್ಲಿ ಎಲ್‌ಪಿಜಿ ಯು ಬಹಳಷ್ಟು ಸಹಾಯಕಾವಾಗಿದೆ.

ಅದರೆ ಇದೀಗ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ವಾಣಿಜ್ಯ ವ್ಯಾಪಾರಸ್ಥರು ಎಲ್‌ಪಿಜಿ ಸಿಲಿಂಡರ್ ಅನ್ನು ಕೊಂಡು ಕೊಳ್ಳಲು ಬಹಳ ಕಷ್ಟಕರವಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ದಸರಾ, ದೀಪಾವಳಿಯಂತಹ ಪ್ರಮುಖ ಹಬ್ಬಗಳು ಬರುತ್ತಿರುವ ನಡುವೆಯೇ ಬೆಲೆ ಏರಿಕೆಯಾಗಿದೆ. ಜನರು ಕೊಂಡು ಕೊಳ್ಳಲು ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದರಾಗಿದೆ. ಬೆಲೆ ಎಷ್ಟು ಏರಿಕೆಯಾಗಿದೆ (Rate Increased), ಯಾವಾಗಿನಿಂದ ಏರಿಕೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ :

ಹೌದು, ಎಲ್‌ಪಿಜಿ ಸಿಲಿಂಡರ್ ಅನ್ನು ಎಲ್ಲರೂ ಬಳಸುತ್ತಿದ್ದು, ಎಲ್ಲರ ಕೈಗೆಟಕುವ ಬೆಲೆಯಲ್ಲಿ ದೊರೆಯಬೇಕು. ಆದರೆ ಇದೀಗ ತಿಂಗಳ ಮೊದಲ ದಿನವೇ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗಿದ್ದು, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇಂದಿನಿಂದಲೇ ಹೊಸ ದರಗಳು (new rates) ಅನ್ವಯವಾಗಲಿದೆ. ಮಂಗಳವಾರ ಬೆಳಗ್ಗೆಯೇ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ಮಾಡಲಾಗಿದೆ. 1ನೇ ಅಕ್ಟೋಬರ್ 2024ರಿಂದಲೇ ಇಂಧನ ಕಂಪನಿಗಳು ಬೆಲೆಯನ್ನು ಹೆಚ್ಚಳ ಮಾಡಿಕೊಂಡಿವೆ.

ವಾಣಿಜ್ಯ ಬಳಕೆಯಾದ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ :

ಜುಲೈ-2024 ನಂತರ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈನಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (Oil market companies) ಬೆಲೆಗಳನ್ನು ಕೊಂಚ ಇಳಿಕೆ ಮಾಡಿಕೊಂಡಿದ್ದವು. ದೇಶದ ರಾಜಧಾನಿ ದೆಹಲಿಯಲ್ಲಿ 30 ರೂಪಾಯಿವರೆಗೂ ಇಳಿಕೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ 8.50 ರೂಪಾಯಿ ಏರಿಕೆಯಾಗಿತ್ತು. ನಂತರ ಇದೀಗ ಮೂರು ತಿಂಗಳು ಸೇರಿ ಒಟ್ಟು 39 ರೂಪಾಯಿ ಬೆಲೆ ಏರಿಕೆಯಾಗಿದೆ.

ವಾಣಿಜ್ಯ ಬಳಕೆಯ 19 ಕೆಜಿ ಎಲ್‌ ಪಿಜಿ ಸಿಲಿಂಡರ್ ಬೆಲೆ ಮಾತ್ರ ಏರಿಕೆಯಾಗಿದೆ :

ಹೌದು, ವಾಣಿಜ್ಯ(commercial) ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮಾತ್ರ ಏರಿಕೆಯಾಗಿದ್ದು, ಗೃಹ ಬಳಕೆಯ  (House use) 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐಓಸಿಎಲ್ ವೆಬ್‌ಸೈಟ್ ಪ್ರಕಾರ, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ನ ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗಲಿವೆ. ಆದರೆ ಸ್ಥಳಗಳಿಗೆ ತಕ್ಕಂತೆ ಬೆಲೆಗಳು ವ್ಯತ್ಯಾಸವಾಗಿರುತ್ತವೆ.

ದೆಹಲಿಯಿಂದ ಮುಂಬೈನವರೆಗೂ  ಎಲ್‌ಪಿಜಿ ಸಿಲಿಂಡರ್ ನ ಬೆಲೆಗಳು ಭಿನ್ನವಾಗಿವೆ :

ಮುಂಬೈನಲ್ಲಿ 1644 ರೂಪಾಯಿಯಿದ್ದ 19 ಕೆಜಿ ಸಿಲಿಂಡರ್ ಬೆಲೆ ಇದೀಗ 1,692.50 ರೂ ಆಗಿದೆ. ಸೆಪ್ಟೆಂಬರ್‌ನಲ್ಲಿ 39 ರೂ.ಗಳಷ್ಟು ಏರಿಕೆಯಾಗಿತ್ತು.
ಕೋಲ್ಕತ್ತಾದಲ್ಲಿ 1,802.50 ರೂ.ನಿಂದ 1,850.50 ರೂ.ಆಗಿದೆ.
ಚೆನ್ನೈನಲ್ಲಿ 1,855 ರೂ.ಯಿದ್ದ 19 ಕೆಜಿ ಸಿಲಿಂಡರ್ ಬೆಲೆ 1,903 ರೂ.ಆಗಿದೆ.
ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 48 ರೂಪಾಯಿ ಏರಿಕೆಯಾಗಿದೆ. ಸದ್ಯ 19 ಕೆಜಿ ಸಿಲಿಂಡರ್ ಬೆಲೆ 1,818 ರೂಪಾಯಿ ಆಗಿದೆ.

ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಒಂದು ಸಿಲಿಂಡರ್ ಬೆಲೆಯಲ್ಲಿ ಏರಿಕೆ :

19 ಕೆಜಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ನಿರಂತರ ಬದಲಾವಣೆಯಾಗುತ್ತಿದ್ದರೆ, ಮತ್ತೊಂದೆಡೆ, ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮಾತ್ರ ಹಾಗೆಯೇ ಇದೆ. ಮಹಿಳಾ ದಿನಾಚರಣೆಯಂದು ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಸುವ ಮೂಲಕ ಕೇಂದ್ರ ಸರ್ಕಾರವು ಜನರಿಗೆ ಸಮಾಧಾನ ನೀಡಿತ್ತು. ಸದ್ಯ ಗೃಹ ಬಳಕೆಯ 14 ಕೆಜಿ ಎಲ್‌ಪಿಜಿ ಒಂದು ಸಿಲಿಂಡರ್ ಬೆಲೆ ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ. ಮತ್ತು ಚೆನ್ನೈನಲ್ಲಿ 818.50 ರೂ. ಮತ್ತು ಬೆಂಗಳೂರಿನಲ್ಲಿ 805.50 ರೂಪಾಯಿ ಆಗಿದೆ.

ಈ ಬೆಲೆ ಪರಿಷ್ಕರಣೆಯು ಪ್ರತಿನಿತ್ಯ ಸಿಲಿಂಡರ್‌ ಬಳಸುವ ರೆಸ್ಟೋರೆಂಟ್‌, ಹೋಟೆಲ್‌ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!