60 ವರ್ಷಗಳ ಬ್ರಾಂಡ್ ಟ್ರಸ್ಟ್ ಸಂಭ್ರಮಾಚರಣೆ : 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮಾಡಿದ ಸಂತಸದಲ್ಲಿರುವ ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ (Mahindra Tractor Company).
ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ವಾಹನಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಕೇವಲ ಓಡಾಡುವುದಕ್ಕೆ ವಾಹನಗಳನ್ನು (Vehicles) ಖರೀದಿಸುವ ಜನ ಒಂದೆಡೆಯಾದರೆ, ತನ್ಮ ಆದಾಯದ ಮೂಲಕ್ಕಾಗಿ ಹಾಗೂ ತಮ್ಮ ವಾಹನಗಳನ್ನು ಕೆಲಸಕ್ಕಾಗಿ ಬಳಸುವವರಲ್ಲಿ ರೈತರು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾರೆ.
ನಮ್ಮ ದೇಶಕ್ಕೆ ರೈತನೇ ಬೆನ್ನೆಲುಬು ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ರೈತರು ತಮ್ಮ ಬೆಳೆ(crops)ಗಳನ್ನು ಬೆಳೆಯಲು ಹಲವಾರು ಉಪಕಾರಣಗಳು (Equipments) ಹಾಗೂ ವಾಹನಗಳನ್ನು ಬಳಸುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಬಹಳ ಹಿಂದೆ ಉಳಿಮೆಗಾಗಿ ಎತ್ತುಗಳನ್ನು ಬಳಸುತ್ತಿದ್ದ ರೈತ ಇಂದು ಟ್ರಾಕ್ಟರ್ (Tractor) ಬಳಕೆಯಿಂದ ಉಳಿಮೆ ಯನ್ನು ಮಾಡುವಷ್ಟು ಕೃಷಿಯಲ್ಲಿ ಅಭಿವೃದ್ಧಿಯನ್ನು (Agricultural Development) ಹೊಂದಿದ್ದಾನೆ. ಇನ್ನು ಟ್ರಾಕ್ಟರ್ ಕಂಪನಿಗಳಲ್ಲೇ ಅತಿದೊಡ್ಡ ಟ್ರಾಕ್ಟರ್ ತಯಾರಕರಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ (Mahindra Tractor Company) ಇಂದು 40 ಲಕ್ಷ ಟ್ರಾಕ್ಟರ್ (40 Lakhs Tractor’s) ಮಾರಾಟ ಮಾಡಿರುವ ಸಂತಸದಲ್ಲಿದ್ದಾರೆ. ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ ಯಾವಾಗ ಶುರುವಾಯ್ತು? ಹಾಗೂ ಇದರ ಮುಂದಿನ ಗುರಿಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
60 ವರ್ಷಗಳ ಬ್ರ್ಯಾಂಡ್ ಈ ಮಹೇಂದ್ರ :
ಇನ್ನು ಮಹೀಂದ್ರಾ ಟ್ರ್ಯಾಕ್ಟರ್ 1963 ರಲ್ಲಿ ಮೊದಲ ಮೆಟ್ಟಿಲನ್ನು ಅಮೆರಿಕಾದ ಇಂಟರ್ ನ್ಯಾಷನಲ್ ಹಾರ್ವೆಸ್ಟರ್ ಇಂಕ್ (International Harvest Ink) ಜೊತೆಗೆ ಪಾಲುದಾರಿಕೆಯನ್ನು ಮಾಡುವ ಮೂಲಕ ಮೊದಲ ಟ್ರಾಕ್ಟರ್ ಬಿಡುಗಡೆ ಮಾಡಿತು. ಸತತ 68 ವರ್ಷಗಳ ಬಳಿಕ ಅಂದರೆ 2004ರಲ್ಲಿ 1 ಮಿಲಿಯನ್ ಟ್ರಾಕ್ಟರ್ ತಯಾರಿಸುವಲ್ಲಿ ತನ್ನನ್ನು ತಾನು ಶಕ್ತಗೊಳಿಸಿ ಕೊಂಡಿತು. ತದನಂತರ 2009ರ ಬಳಿಕ ವಿಶ್ವದ ಅತಿ ಹೆಚ್ಚು ಮಾರಾಟವಾದ ಫಾರ್ಮ್ ಟ್ರ್ಯಾಕ್ಟರ್ ತಯಾರಕ ಎಂಬ ಹೆಗ್ಗಳಿಕೆ ಪಡೆಯಿತು. ಮಹೀಂದ್ರಾ ಟ್ರ್ಯಾಕ್ಟರ್ಸ್ 2-ಮಿಲಿಯನ್ ತಯಾರಿಸಲು 9 (2013ರವರೆಗೆ) ವರ್ಷಗಳ ಸಮಯವನ್ನು ತೆಗೆದುಕೊಂಡಿತು. 2013 ರಿಂದ 2019ರ ಹೊತ್ತಿಗೆ 3-ಮಿಲಿಯನ್ ಗಡಿಯನ್ನು ತಲುಪಿತು. ಆದರೆ ಇದೀಗ ತಯಾರಿಕೆಯಲ್ಲಿ ಮಾತ್ರವಲ್ಲದೆ 40 ಲಕ್ಷ ಟ್ರ್ಯಾಕ್ಟರ್ ಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ಇನ್ನಷ್ಟು ತನ್ನತ್ತ ಸೆಳೆದುಕೊಂಡಿದೆ. ಇನ್ನು ಪ್ರಸ್ತುತವಾಗಿ (2024) 40 ಲಕ್ಷ ಟ್ರ್ಯಾಕ್ಟರ್ ಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
60 ವರ್ಷಗಳ ಬ್ರಾಂಡ್ ಟ್ರಸ್ಟ್ (Brand Trust) ಹೊಂದಿರುವ ಮಹೀಂದ್ರಾ 390 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮಾಡೆಲ್ ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ಇದರಿಂದ ತನ್ನ ಎಲ್ಲಾ ಗ್ರಾಹಕರನ್ನು ಗಟ್ಟಿಯಾಗಿ ಅವರ ಬಳಿಯೇ ಉಳಿಸಿಕೊಂಡು ಬರುವ ಪ್ರಯತ್ನ ಮಾಡಿದೆ. ಭಾರತದಲ್ಲೇ 1,200 ಕ್ಕೂ ಹೆಚ್ಚು ಡೀಲರ್ ಪಾಲುದಾರಿಕೆಯನ್ನು ಮಹೀಂದ್ರಾ ಸ್ಥಾಪಿಸಿದೆ.
ಮಹೀಂದ್ರಾ ಫಾರ್ಮ್ ಈಕ್ವಿಪ್‌ಮೆಂಟ್ ಸೆಕ್ಟರ್‌ನ (Mahindra Farm Equipment Sector) ಪ್ರೆಸಿಡೆಂಟ್ ಹೇಮಂತ್ ಸಿಕ್ಕಾ (president Hemanth Sikka) ಮಾತನಾಡಿ, ಗ್ರಾಹಕರು ಹಾಗೂ ರೈತರು ನಮಗೆ ಯಾವಾಗಲೂ ಸ್ಫೂರ್ತಿ ನೀಡುತ್ತಲೇ ಬಂದಿದ್ದಾರೆ. ಹಾಗೂ ಈ ವೇಳೆ ನಾನು ನನ್ನ ತಂಡಗಳಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಾಗೂ ಇಂದಿನಿಂದ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಇನ್ನು ಮುಂದೆ ಕೂಡ ನಮ್ಮನ್ನು ನಾವು ಹೆಚ್ಚು ಕ್ರಿಯಾಶೀಲರನ್ನಾಗಿಸಿಕೊಳ್ಳುತ್ತೇವೆ. ವ್ಯವಸಾಯಕ್ಕೆ ಪೂರಕವಾಗುವಂತೆ ಹೊಚ್ಚ ಹೊಸ ಪ್ರಯತ್ನಗಳನ್ನು ನಾವು ಸದಾ ಮಾಡುತ್ತೇವೆ ಎಂಬ ಭರವಸೆ ನೀಡುತ್ತೇನೆ ಎಂದರು. ಹಾಗೂ ಮಹೀಂದ್ರಾ ಟ್ರ್ಯಾಕ್ಟರ್ ಕಂಪನಿ ಇದೇ ವರ್ಷದಲ್ಲಿ 60 ವರ್ಷಗಳನ್ನು ಪೂರೈಸಿದೆ ಇದು ಹೆಚ್ಚು ಸಂತಸ ತಂದಿರುವ ವಿಷಯ ಎಂದರು.
40 ಲಕ್ಷ ಗ್ರಾಹಕರ ಹೆಮ್ಮೆ :
’40 ಲಕ್ಷ ಆನಂದದಾಯಕ ಗ್ರಾಹಕರು ಮತ್ತು 60 ವರ್ಷಗಳ ಬ್ರ್ಯಾಂಡ್ ಟ್ರಸ್ಟ್’ (40 lakh happy customers and 60 years of brand trust) ಎಂಬ ಶೀರ್ಷಿಕೆಯಲ್ಲಿ ಹೊಸ ಡಿಜಿಟಲ್ ವೀಡಿಯೊ ಕಮರ್ಷಿಯಲ್ (ಡಿವಿಸಿ) (Digital video commercial) ಅನ್ನು ಪ್ರಸಾರ ಮಾಡುತ್ತಿದೆ. ಈ ವೇಳೆ ದೇಶಾದ್ಯಂತ ಇರುವ ತನ್ನೆಲ್ಲಾ ಗ್ರಹಕರಿಗೂ ಉತ್ಪನ್ನಗಳು ಮತ್ತು ಸರ್ವೀಸ್‌ಗಳ ಮೇಲೆ ಹೊಸ ಆಫರ್‌ಗಳನ್ನು (new offers) ನೀಡುತ್ತಿದೆ. ಕೆಂಪು’ ಬಣ್ಣಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಈ ಪ್ರಚಾರ ಅಭಿಯಾನವನ್ನು ಕೈಗೊಂಡಿದೆ. ಇನ್ನು ಈ ಬಣ್ಣವು ಏಕಕಾಲಕ್ಕೆ ಸಮೃದ್ಧಿಯನ್ನು ಮತ್ತು ಮಹೀಂದ್ರಾ ಟ್ರ್ಯಾಕ್ಟರ್‌ಗಳನ್ನು ಸಂಕೇತಿಸುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಹೀಂದ್ರಾ ಟ್ರ್ಯಾಕ್ಟರ್ಸ್ ಕಂಪನಿಯು (Mahindra tractor company) ತಮ್ಮ 40 ಲಕ್ಷ ಗ್ರಾಹಕರನ್ನು ಈ ವೇಳೆಯಲ್ಲಿ ಶ್ಲಾಘಿಸಿತು.
ಈ ಮಾಹಿತಿಗಳನ್ನು ಓದಿ
- ಭಾರಿ ಜನಪ್ರಿಯತೆ ಪಡೆಯುತ್ತಿದೆ ಕಮ್ಮಿ ಬೆಲೆಯ ಓಜಾ ಟ್ರಾಕ್ಟರ್, ಇಲ್ಲಿದೆ ಕಂಪ್ಲೀಟ್ ಮಾಹಿತಿ
- ಕೇವಲ 3 ಗಂಟೆ ಚಾರ್ಜ್ ಮಾಡಿ ಇಡೀ ದಿನ ಉಳಿಮೆ ಮಾಡುವ ಬೆಂಕಿ ಟ್ರ್ಯಾಕ್ಟರ್
- ಬಿಪಿಎಲ್ ಕಾರ್ಡ್ ಇದ್ದವರಿಗೆ ಎಲ್ ಪಿ ಜಿ ಸಿಲಿಂಡರ್ ಜೊತೆ ಗ್ಯಾಸ್ ಸ್ಟೋವ್ ಉಚಿತ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ