ಮಹೀಂದ್ರಾ (Mahindra) ಸಂಸ್ಥೆಯ ಹೊಚ್ಚ ಹೊಸ ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಎಸ್‌ಯುವಿ ಖರೀದಿಸಲು ಕ್ಯೂ ನಿಂತ ಜನರು!
ಇಂದು ಮಾರುಕಟ್ಟೆಯಲ್ಲಿ ಹಲವಾರು ವಾಹನ ತಯಾರಿಕಾ ಕಂಪನಿಗಳ ವಾಹನಗಳನ್ನು ನಾವು ನೋಡುತ್ತೇವೆ. ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳನ್ನು ಒಳಗೊಂಡ ವಾಹನಗಳನ್ನು ತಯಾರು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ಹಾಗೆ ನೋಡುವುದಾದರೆ ಇಂದು ಭಾರತದಲ್ಲಿ ಹಲವಾರು ವಾಹನ ತಯಾರಿಕ ಸಂಸ್ಥೆಗಳಿವೆ. ಅದರಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವಂತಹ ವಾಹನ ತಯಾರಿಕಾ ಸಂಸ್ಥೆ ಎಂದರೆ ಅದು ಮಹೀಂದ್ರಾ ಸಂಸ್ಥೆ. ಇದೀಗ ಮಹೀಂದ್ರಾ ಸಂಸ್ಥೆಯು ತನ್ನ ಹೊಚ್ಚಹೊಸ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಕಾರು ಎಲ್ಲರ ಗಮನ ಸೆಳೆಯುತ್ತಿದ್ದು, ಜನರು ಈ ಕಾರನ್ನು ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ಬನ್ನಿ ಹಾಗಾದರೆ ಈ ಕಾರಿನ ಬೆಲೆ ಎಷ್ಟು?, ಈ ಕಾರ್ ನಲ್ಲಿರುವ ವೈಶಿಷ್ಟಗಳೇನು?, ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಉತ್ತಮ ಜನಪ್ರಿಯತೆ ಹೊಂದಿದ, ಹೆಚ್ಚು ಜನರನ್ನು ಆಕರ್ಷಿಸಿದ ಕಾರು :
ಮಹೀಂದ್ರಾ ಸಂಸ್ಥೆ ಬಿಡುಗಡೆ ತಯಾರಿಸಿರುವ ಹೊಚ್ಚ ಹೊಸ ಕಾರು ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಎಸ್‌ಯುವಿ(SUV) ಆಗಿದ್ದು, ಏಪ್ರಿಲ್ ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಹಾಗೆಯೇ ಮೇ 26ರಿಂದ ಈ ಕಾರಿನ ವಿತರಣೆಗಳು ಕೂಡ ಶುರುವಾಗಿದ್ದವು. ಕಂಪನಿಯು ಒಂದೇ ದಿನ 1,500 ಯುನಿಟ್ ಎಸ್‌ಯುವಿಗಳನ್ನು ಡೆಲಿವರಿ ಮಾಡಿತ್ತು. ಅದಕ್ಕೂ ಮೊದಲು ಮೇ 15ರಂದು ಬುಕ್ಕಿಂಗ್ ಪ್ರಾರಂಭಿಸಿದ 1 ಗಂಟೆಯೊಳಗೆ ಈ ಕಾರನ್ನು ಬರೊಬ್ಬರಿ 50,000 ಗ್ರಾಹಕರು ಕಾಯ್ದಿರಿಸಿದ್ದರು.
ನೂತನ ಎಕ್ಸ್‌ಯುವಿ 3ಎಕ್ಸ್‌ಒ ಎಸ್‌ಯುವಿ ಕಾರಿನ ಬೆಲೆ (Price) :
ಈಗಾಗಲೇ ಬಿಡುಗಡೆಯಾಗಿರುವ ಈ ನೂತನ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಸ್‌ಯುವಿ ಪಡೆಯುತ್ತಿರುವ ಬುಕ್ಕಿಂಗ್‌ನಲ್ಲಿ ಗ್ರಾಹಕರು ಶೇಕಡ 70% ಪಾಲನ್ನು ಪೆಟ್ರೋಲ್ ರೂಪಾಂತರ ವೇರಿಯೆಂಟ್ ಗಳನ್ನು (varient) ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಕಂಪನಿಯು ವಿತರಣೆ ಆರಂಭಿಸಿದ ಮೊದಲ ತಿಂಗಳಲ್ಲಿ ಅಂದರೆ, ಮೇ, 2024 ರಲ್ಲಿ 10,000 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ದೇಶೀಯವಾಗಿ ಖರೀದಿಗೆ ಲಭ್ಯವಿರುವ ಹೊಸ ‘ಎಕ್ಸ್‌ಯುವಿ 3ಎಕ್ಸ್‌ಒ’ ರೂ.7.49 ಲಕ್ಷದಿಂದ ರೂ.15.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಎಸ್‌ಯುವಿ ಕಾರಿನ ವೈಶಿಷ್ಟ್ಯಗಳು (features) :
ಗ್ರಾಹಕರಿಗೆ ಹಲವಾರು ವೇರಿಯಂಟ್ ಗಳಲ್ಲಿ ಲಭ್ಯವಿದೆ ಈ ಕಾರು :
ಈ ಕಾರು ಎಂಎಕ್ಸ್1, ಎಂಎಕ್ಸ್2, ಎಂಎಕ್ಸ್2 ಪ್ರೊ, ಎಂಎಕ್ಸ್3, ಎಂಎಕ್ಸ್3 ಪ್ರೊ ಸೇರಿದಂತೆ ವಿವಿಧ ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಹಾಗೆಯೇ ಈ ಕಾರು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಎಲ್‌ಇಡಿ ಹೆಡ್‌ಲೈಟ್‌ಗಳು, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್‌ಗಳು (ಡಿಆರ್‌ಎಲ್‌ಎಸ್), ನವೀನ ಬಂಪರ್, ಅಲಾಯ್ ವೀಲ್‌ಗಳು ಮತ್ತು ಸಿ-ಆಕಾರಕ್ಕೆ ಹೋಲುವ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ.
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಸ್‌ಯುವಿ ಎರಡು ಪವರ್‌ಟ್ರೇನ್‌ನೊಂದಿಗೆ (two power train) ಲಭ್ಯವಿದೆ.
ಮೊದಲನೆಯದು, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 200 ಎನ್‌ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದ್ದು, 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್ 130 ಪಿಎಸ್ ಪವರ್ ಹಾಗೂ 250 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಹಾಗೆಯೇ ಎರಡನೆಯದು, 1.5-ಲೀಟರ್ ಡೀಸೆಲ್ ಎಂಜಿನ್ 117 ಪಿಎಸ್ ಪವರ್ (ಶಕ್ತಿ) ಮತ್ತು 300 ಎನ್‌ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 17.96 ರಿಂದ 21.2 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.
ಈ ಕಾರಿನಲ್ಲಿರುವ ಇತರ ವೈಶಿಷ್ಟ್ಯಗಳು (other features) ಎಂದರೆ:
ಸಿಟ್ರಿನ್ ಯೆಲ್ಲೋ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್, ಟ್ಯಾಂಗೋ ರೆಡ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಡಿಸ್ಪ್ಲೇಗಳು, ಕ್ರೂಸ್ ಕಂಟ್ರೋಲ್, ಡುಯಲ್ ಝೋನ್ ಎಸಿ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇನ್ನು ಸುರಕ್ಷತೆಯ ಬಗ್ಗೆ ನೋಡುವುದಾದರೆ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಸ್‌ಯುವಿ ಹೆಸರುವಾಸಿಯಾಗಿದೆ. 6 ಏರ್‌ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ವ್ಯೂ ಕ್ಯಾಮೆರಾ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಕಿಯಾ ಸೋನೆಟ್ ಮಾದರಿಗಳನ್ನು ಹೊಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.