New Scheme- ಮಹಿಳೆಯರಿಗೆ ₹500/- ಮಾಶಾಸನ ! ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

manaswini scheme

ಮನಸ್ವಿನಿ ಎಂಬ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ಯೋಜನೆಯನ್ನು ವಿವಾಹವಾಗದೆ ಅಥವಾ ವಿಚ್ಛೇದಿತರಾಗಿ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಮಹಿಳೆಯರಿಗಾಗಿ ನೀಡಲಾಗಿದೆ. ಈ ಯೋಜನೆಯ ಅವಶ್ಯಕತೆ ಮತ್ತು ಈ ಯೋಜನೆಗೆ ಬೇಕಾದ ಅರ್ಹತೆ ಬಗ್ಗೆ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಮನಸ್ವಿನಿ ಯೋಜನೆ(Manasvini Scheme) 2023:

ಹೌದು ರಾಜ್ಯ ದಲ್ಲಿ ಕಾಂಗ್ರೆಸ್ ಸರ್ಕಾರ(congress Government) ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಈ ಎಲ್ಲ ಯೋಜನೆಗಳ ಅಡಿಯಲ್ಲಿ ಮನಸ್ವಿನಿ ಯೋಜನೆ(Manasvini Scheme)ಯು ಕೂಡ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಮುಖ್ಯವಾಗಿ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗಾಗಿ ಪ್ರತಿ ತಿಂಗಳು ರೂ.500 ನೀಡುವುದೆಂದು ಸರ್ಕಾರ ಹೇಳಿದೆ. ವಿವಾಹವಾಗದೆ ಅಥವಾ ಗಂಡನಿಂದ ಬೇರ್ಪಟ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಜೀವನ ರೂಪಿಸಿಕೊಳ್ಳಲು ಈ ಯೋಜನೆಯು ಸಹಾಯವಾಗಿದೆ.

ಅಷ್ಟೇ ಅಲ್ಲದೆ 65 ವರ್ಷ ಮೇಲ್ಪಟ್ಟ ವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಇದು ಕೂಡ ಮನಸ್ವಿನಿ ಯೋಜನೆಯಡಿಯಲ್ಲಿ ಬರುತ್ತದೆ.

ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ಈ ಯೋಜನೆಯು 40 ವರ್ಷದಿಂದ 65 ವರ್ಷದೊಳಗಿನ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ದೊರೆಯುತ್ತದೆ.

ನಗರ ಪ್ರದೇಶಗಳಲ್ಲಿ ಬಡತನದ ರೇಖೆಗಳಿಗಿಂತ ಕೆಳಗಿರುವ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 12000 ಗಳಿಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿರಬಾರದು.

ಹಾಗೂ ಬೇರೆ ಯಾವುದೇ ಯೋಜನೆ ಅಡಿ ಅಥವಾ ಖಾಸಗಿಯಾಗಲಿ ಸಾರ್ವಜನಿಕವಾಗಲಿ ಯಾವುದೇ ರೀತಿಯ ಪಿಂಚಣಿಯನ್ನ ತೆಗೆದುಕೊಳ್ಳುವವರಾಗಿರಬಾರದು.

ಈ ಯೋಜನೆಯ ತಿಂಗಳ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಒಮ್ಮೆ ನೀವು 65 ವರ್ಷಕ್ಕಿಂತ ಹೆಚ್ಚಿನವರಾಗಿದ್ದರೆ ನಿಮಗೆ ಈ ಮನಸ್ವಿನಿ ಯೋಜನೆಯ(Manaswini Scheme) ಲಾಭವನ್ನು ಪಡೆಯಲು ಸಾಧ್ಯವಿಲ್ಲ ನೀವು ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.

ಹೇಗೆ ಈ ಯೋಜನೆಯನ್ನು ಪಡೆಯುದು ?

ಈ ಯೋಜನೆಯನ್ನು ಪಡೆದುಕೊಳ್ಳಲು ಹತ್ತಿರವಿರುವ ಸರಕಾರಿ ಕಚೇರಿ ಅಥವಾ ಅಟಲ್ ಜಿ ಸ್ನೇಹ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಕೇಳುವ ದಾಖಲಾತಿಯನ್ನು ಒದಗಿಸುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ವಿಶೇಷ ಸೂಚನೆ : ಇದಕ್ಕೆ ಯಾವುದೇ ರೀತಿಯ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ.

ಈ ಯೋಜನೆಗೆ ಬೇಕಾಗುವ ದಾಖಲಾತಿಗಳು :

ಅವಿವಾಹಿತರು ಹಾಗೂ ವಿಚ್ಛೇದಿತರು, ವಿವಾಹವಾಗದೆ ಅಥವಾ ವಿಚ್ಛೇದನವಾಗಿರುವುದರ ಬಗ್ಗೆ ಪ್ರಮಾಣ ಪತ್ರ.
ಅಂತ್ಯೋದಯ ಕಾರ್ಡ್ ಮತ್ತು ವಯಸ್ಸಿನ ಬಗ್ಗೆ ಒಂದು ಪ್ರಮಾಣ ಪತ್ರ
ಎಲೆಕ್ಷನ್ ಕಾರ್ಡ್
ಮನೆಯ ವಿಳಾಸದ ದಾಖಲೆಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!