ಮಾರುತಿ ಕಾರಿಗೆ ಮುಗಿಬಿದ್ದ ಗ್ರಾಹಕರು..! 5.54 ಲಕ್ಷದ ಈ ಕಾರಿನ ಮೈಲೇಜ್ 34 ಕಿ.ಮೀ!!

IMG 20240626 WA0003

ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿದೆ ಮಾರುತಿ ಸುಜುಕಿಯ ವ್ಯಾಗನ್ಆರ್ (Maruti Suzuki WagonR):

ಇಂದು ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಕಾರುಗಳ ಮಾರಾಟದಲ್ಲಿ ಭಾರೀ ಪೈಪೋಟಿ ಇದ್ದು, ಎಲ್ಲಾ ಕಂಪನಿಗಳು ತಮ್ಮ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಅದರಲ್ಲೂ ಹೆಚ್ಚು ಜನಪ್ರಿಯತೆ ಮತ್ತು ಗುರುತಿಸಿಕೊಂಡಿರುವ ಕಂಪನಿ ಎಂದರೆ ಮಾರುತಿ ಸುಜುಕಿ. ಮಾರುತಿ ಸುಜುಕಿ ಕಂಪನಿ (maruthi suzuki company) ಕೂಡ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ.ಕಾರುಗಳ ಉತ್ಪಾದನೆಯಲ್ಲಿ ಅತೀ ಹೆಚ್ಚು ಹೆಸರು ಮಾಡಿದ ಕಂಪನಿ ಎಂದರೆ ಅದು ಮಾರುತಿ ಸುಜುಕಿ. ಮಾರುತಿ ಸುಜುಕಿಯು ಇದೀಗ ಕೈಗೆಟಕುವ ದರದಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಹಾಗೆಯೇ ಇದೀಗ ಮಾರುತಿ ಸುಜುಕಿಯು ಹೆಸರು ಮಾಡಿದ ವ್ಯಾಗನ್ಆರ್ (Maruti Suzuki WagonR) ಅತಿ ಹೆಚ್ಚು ಮಾರಾಟವಾಗುವ ಕಾರಣ ಸದ್ದು ಮಾಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR):
maruti suzuki wagon r right front three quarter0

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಇದು ಸ್ವಲ್ಪ ಕಡಿಮೆ ವೆಚ್ಚದಾಯಕವಾಗಿದ್ದು, ಈ ಕಾರು ಅತ್ಯುತ್ತಮ ಮೈಲೇಜ್ ನೀಡುತ್ತದೆ. ಹಾಗೆಯೇ ಇದರ ಪೆಟ್ರೋಲ್-ಮ್ಯಾನ್ಯುವಲ್ (petrol manual) ರೂಪಾಂತರಗಳು 24.35 ಕಿ.ಮೀ ಮೈಲೇಜ್ ನೀಡುತ್ತದೆ. ಮತ್ತು ಪೆಟ್ರೋಲ್-ಎಜಿಎಸ್ ರೂಪಾಂತರಗಳು ಪ್ರತಿ ಲೀಟರ್‌ಗೆ 25.19 ಕಿಮೀ ಮೈಲೇಜ್ ನೀಡುತ್ತದೆ ಎಂದು ಮಾರುತಿ ಸುಜುಕಿ ತಿಳಿಸಿದೆ.

ಈ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಹಾಗೆಯೇ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಇದು ಉತ್ತಮ ಬೇಡಿಕೆಯಿಂದ ಮಾರಾಟ ಆಗುತ್ತಿದೆ. ಈ 2024ರ ಮೇ ತಿಂಗಳಿನಲ್ಲಿ ವ್ಯಾಗನ್ಆರ್ ಮಾದರಿಯ 14,492 ಯುನಿಟ್ ಗಳು ಮಾರಾಟವಾಗಿವೆ. ಇನ್ನು 2023ರ ಮೇ ತಿಂಗಳಿನಲ್ಲಿ ವ್ಯಾಗನ್ಆರ್ ಮಾದರಿಯ 16,258 ಯುನಿಟ್ ಗಳು ಮಾರಾಟವಾಗಿತ್ತು.

ಪ್ರತಿ ಕೆಜಿಗೆ 33.47 ಕಿಮೀ ಮೈಲೇಜ್ (milage) ನೀಡುತ್ತದೆ ಮಾರುತಿ ಸುಜುಕಿ ವ್ಯಾಗನ್ ಆರ್‌ :

ಮಾರುತಿ ಸುಜುಕಿ ವ್ಯಾಗನ್ ಆರ್‌ನ ಸಿಎನ್‌ಜಿ ರೂಪಾಂತರಗಳು ಪ್ರತಿ ಕೆಜಿಗೆ 33.47 ಕಿಮೀ ಮೈಲೇಜ್ ನೀಡುತ್ತವೆ. ಈ ಕಾರಣಕ್ಕಾಗಿ ಅನೇಕ ಜನರು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರನ್ನು ಖರೀದಿಸಲು ಇಷ್ಟಪಡುತ್ತಾರೆ.

ಮಾರುತಿ ವ್ಯಾಗನ್ಆರ್ ಕಾರು ಮಾರಾಟದಲ್ಲಿ ಕುಸಿತ :

ಕಳೆದ ವರ್ಷದ ಮೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಕಳೆದ ತಿಂಗಳ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ವ್ಯಾಗನ್ಆರ್ ಮಾರಾಟದಲ್ಲಿ ಶೇ.11ರಷ್ಟು ಕುಸಿತವನ್ನು ಕಂಡಿದೆ. ಈ ಮಾರುತಿ ವ್ಯಾಗನ್ಆರ್ (Maruti WagonR) ಕೈಗೆಟುಕುವ ಹ್ಯಾಚ್‌ಬ್ಯಾಕ್ ಆಗಿದೆ.
ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಇದರ ಮಾರಾಟ ಕೊಂಚ ಕುಸಿತ ಕಂಡಿದೆ. ಆದರೆ ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಏರಿಕೆಯನ್ನು ಕಾಣುಬಹುದು.
ಹಾಗೆಯೇ ಮಾರುತಿ ಸುಜುಕಿ ಕಂಪನಿಯು ಟಾಲ್-ಬಾಯ್ ಹ್ಯಾಚ್‌ಬ್ಯಾಕ್‌ನ ಫ್ಲೆಕ್ಸ್-ಫ್ಯೂಯಲ್ ಆವೃತ್ತಿಯಲ್ಲಿ ಕೆಲಸ ಮಾಡುತ್ತಿದೆ, ಇದರ ಉತ್ಪಾದನೆಯು 2025 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಮಾರುತಿ ವ್ಯಾಗನ್ಆರ್ ಕಾರಿನ ವೈಶಿಷ್ಟ್ಯತೆಗಳು (features) :

ಮಾರುತಿ ವ್ಯಾಗನ್ಆರ್ ಕಾರಿನಲ್ಲಿ 1.0 ಲೀಟರ್ ಮತ್ತು 1.2 ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಮೋಟಾರ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ, ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ತಂತ್ರಜ್ಞಾನ ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ಅನ್ನು ಹೊಂದಿವೆ.

ಎಲ್ಲಾ ತಂತ್ರಜ್ಞಾನಗಳು ಅದರ ಮೈಲೇಜ್ ಅನ್ನು ಹೆಚ್ಚಿಸುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ 1.0 ಲೀಟರ್ ಲೀಟರ್, ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. 1.0 ಲೀಟರ್ ಎಂಜಿನ್ 66bhp ಮತ್ತು 89Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಕಾರಿನಲ್ಲಿ ದೊಡ್ಡ 1.2 ಲೀಟರ್ ಇನ್‌ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ 88bhp ಮತ್ತು 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು ಆಂಡ್ರಾಯ್ಡ್ ಆಟೋ ಮತ್ತು Apple CarPlay ಕನೆಕ್ಟಿವಿಯೊಂದಿಗೆ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟ್ಯಾಕೋಮೀಟರ್, ವಿಂಗ್ ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್‌ಗಳು, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು 4 ಸ್ಪೀಕರ್‌ಗಳನ್ನು ಹೊಂದಿವೆ.

ಮಾರುತಿ ಸುಜುಕಿ ವ್ಯಾಗನ್ಆರ್ ಬೆಲೆ (price) :

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನ ಆರಂಭಿಕ ಬೆಲೆಯು ಕೇವಲ 5.54 ಲಕ್ಷ ರೂ. ಆಗಿದೆ. ಈ ಕಾರಿನ ಟಾಪ್ ರೂಪಾಂತರದ ಬೆಲೆ 7.33 ಲಕ್ಷ ರೂ. ಆಗಿದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!