Namma Metro jobs: ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ!

metro jobs

ಈ ವರದಿಯಲ್ಲಿ ಮೆಟ್ರೋ ಉದ್ಯೋಗಾವಕಾಶಗಳ (Metro job opportunities) ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಳಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.

ಬೆಂಗಳೂರು ಮೆಟ್ರೋ ರೈಲು ನಿಗಮದ ನೇಮಕಾತಿ 2024(Bangalore Metro Rail Corporation Recruitment 2024):

ಬೆಂಗಳೂರಿನ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆಯುತ್ತಲೇ ಇದ್ದು, ಹಾಗೆಯೇ ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತಲೇ ಇವೆ. ಇದೀಗ ಈ ಸಂಸ್ಥೆಯು ತಿಂಗಳಿಗೆ ₹ 62,500 ರಿಂದ ₹ 1,06,250 ರವರೆಗಿನ ಸಂಬಳ(salary)ದೊಂದಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಇದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಾಗಿದೆ. ಲಭ್ಯವಿರುವ ಹುದ್ದೆಗಳು ಮತ್ತು ಅರ್ಜಿ ಪ್ರಕ್ರಿಯೆಯ ವಿವರ ಇಲ್ಲಿದೆ.

ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(Bangalore Metro Rail Corporation Limited)

ಹುದ್ದೆಗಳ ವಿವರ:

ಎಕ್ಸಿಕ್ಯೂಟಿವ್ ಇಂಜಿನಿಯರ್(Executive Engineer) (Civil) : 1 ಹುದ್ದೆ

ಸಹಾಯಕ ಇಂಜಿನಿಯರ್(Assistant Engineer) (ಸಿವಿಲ್) : 4 ಹುದ್ದೆಗಳು

ಸಹಾಯಕ ಇಂಜಿನಿಯರ್ (E&M) : 1 ಹುದ್ದೆ,

ಸಹಾಯಕ ವ್ಯವಸ್ಥಾಪಕ (ಮಾರ್ಕೆಟಿಂಗ್) : 1 ಹುದ್ದೆ

ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆ:

ಕಾರ್ಯನಿರ್ವಾಹಕ ಇಂಜಿನಿಯರ್(Executive Engineer) : 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು, ಸಿವಿಲ್ ಇಂಜಿನಿಯರಿಂಗ್‌ನಲ್ಲಿ BE/B.Tech ಮತ್ತು ಕನಿಷ್ಠ 12 ವರ್ಷಗಳ ಅನುಭವ ಹೊಂದಿರಬೇಕು.

ಸಹಾಯಕ ಇಂಜಿನಿಯರ್ (ಸಿವಿಲ್) : 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು, ಸಿವಿಲ್ ಇಂಜಿನಿಯರಿಂಗ್‌ನಲ್ಲಿ BE/B.Tech ಮತ್ತು ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

ಸಹಾಯಕ ಇಂಜಿನಿಯರ್ (E&M) : 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ BE/B.Tech ಮತ್ತು ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

ಸಹಾಯಕ ವ್ಯವಸ್ಥಾಪಕರು (ಮಾರ್ಕೆಟಿಂಗ್) : 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು, ಸಿವಿಲ್ ಇಂಜಿನಿಯರಿಂಗ್, B.Arch, ಅಥವಾ MBA ನಲ್ಲಿ BE/B.Tech ಮತ್ತು ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

ಸಂಬಳ ಏಷ್ಟು?

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ನೇಮಕಾತಿ 2024 ಕ್ಕೆ ಆಯ್ಕೆಯಾದ ಅಭ್ಯರ್ಥಿಗೆ ನೀಡಲಾಗುವ ಸಂಬಳ ಈ ಕೆಳಗಿನಂತಿದೆ:

ಎಕ್ಸಿಕ್ಯೂಟಿವ್ ಇಂಜಿನಿಯರ್ (ಸಿವಿಲ್) :  ತಿಂಗಳಿಗೆ ₹1,06,250 ವೇತನ

ಸಹಾಯಕ ಇಂಜಿನಿಯರ್ (ಸಿವಿಲ್) :  ತಿಂಗಳಿಗೆ ₹62,500 ವೇತನ

ಸಹಾಯಕ ಇಂಜಿನಿಯರ್ (E&M) :  ತಿಂಗಳಿಗೆ ₹62,500 ವೇತನ

ಸಹಾಯಕ ವ್ಯವಸ್ಥಾಪಕ (ಮಾರ್ಕೆಟಿಂಗ್) :  ತಿಂಗಳಿಗೆ ₹62,500 ವೇತನ

ನೇಮಕಾತಿಯ ಅವಧಿ:

ಬೆಂಗಳೂರು ಮೆಟ್ರೋ ರೈಲು ನಿಗಮದ 2024 ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 3 ವರ್ಷಗಳ ಗುತ್ತಿಗೆ ಅವಧಿಗೆ ನೇಮಕ ಮಾಡಲಾಗುತ್ತದೆ. ಈ ಅವಧಿಯನ್ನು 3 ತಿಂಗಳ ಮುನ್ನೂಚನೆಯ ಮೂಲಕ ಅಥವಾ ಪರಸ್ಥಿತಿಗಳು ತಕ್ಕಮಟ್ಟಿಗೆ ಸಮರ್ಥಿಸಿದರೆ, 3 ತಿಂಗಳ ಸಂಭಾವನೆ ಪಾವತಿಸುವ ಮೂಲಕ, ಎರಡೂ ಕಡೆಯಿಂದ ಮುಕ್ತಾಯಗೊಳಿಸಬಹುದಾಗಿದೆ.

ನೇಮಕಾತಿಯ ಅಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆಯು ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ವಿದ್ಯಾರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅರ್ಜಿದಾರರನ್ನು ಸಂದರ್ಶನಕ್ಕೆ ಕರೆಯಲಾಗುವುದು .

ಅರ್ಜಿ ಸಲ್ಲಿಸುವುದು ಹೇಗೆ:

ಬೆಂಗಳೂರು ಮೆಟ್ರೋ ರೈಲು ನಿಗಮದ ನೇಮಕಾತಿ 2024 ಗಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://projectrecruit.bmrc.co.in/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ನಂತರ, ಹ್ಯಾಪಿ ಸಲ್ಲಿಸಿದ ಹಾರ್ಡ್ ಕಾಪಿಯನ್ನು  ಅಭ್ಯರ್ಥಿಗಳು ಪೋಸ್ಟ್ ಮೂಲಕ ನಮೂದಿಸಿದ ವಿಳಾಸಕ್ಕೆ ಸಲ್ಲಿಸಬೇಕು.

ಗೆ – ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು 560 027.

ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 02.07.24.

ಅರ್ಜಿ ನಮೂನೆಯ ಮುದ್ರಣವನ್ನು ಸಲ್ಲಿಸಲು ಕೊನೆಯ ದಿನಾಂಕ 05.07.24.

ಅರ್ಜಿಯನ್ನು ಸಲ್ಲಿಸಲು ಡೈರೆಕ್ಟರ್ ಲಿಂಕ್ : https://projectrecruit.bmrc.co.in/

ಅಧಿಕೃತ ಅಧಿಸೂಚನೆ: ಲಿಂಕ್

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!