ಮುಂಗಾರು ಬೆಳೆ ವಿಮೆ  ಅರ್ಜಿ ಪ್ರಾರಂಭ! ಅಧಿಸೂಚಿತ ಬೆಳೆ ಪಟ್ಟಿ ಇಲ್ಲಿದೆ | Crop Insurance 2024

crop insurance

2024-25 ನೇ ಸಾಲಿನ ಮುಂಗಾರು ಬೆಳೆ ವಿಮೆ (Monsoon Crop Insurance) ಅರ್ಜಿ ಸಲ್ಲಿಕೆ ಪ್ರಾರಂಭ.! ಯಾವೆಲ್ಲ ಬೆಳೆಗಳಿಗೆ ಸಿಗಲಿದೆ ವಿಮೆ ನೋಂದಣಿ.

ವರ್ಷದಿಂದ ವರ್ಷಕ್ಕೆ ಸೂರ್ಯನ ತಾಪಮಾನದಿಂದ (temperature) ಮಳೆ ಬೀಳುವುದು ಕಡಿಮೆಯಾಗುತ್ತಿದೆ. ನಮ್ಮ ದೇಶದ ಬೆನ್ನೆಲುಬು ರೈತ, ಆತನಿಗೆ ಮಳೆಯೇ ಆಧಾರ. ಬೆಳೆ ಬೆಳೆಯಲು ಮಳೆಯ ನಿರೀಕ್ಷೆಯನ್ನು ಮಾಡುತ್ತಿರುತ್ತಾನೆ. ಹಿಂಗಾರು ಮುಂಗಾರು ಈ ರೀತಿಯ ಮಳೆಗಳು ಭೂಮಿಗೆ ಬೀಳುವುದರಿಂದ ರೈತರಿಗೆ(Farmers) ಸರ್ಕಾರದಿಂದ ಹಲವಾರು ರೀತಿಯ ಯೋಜನೆಗಳ ಸೌಲಭ್ಯಗಳು ದೊರೆಯುತ್ತವೆ. ಈ ನಿಟ್ಟಿನಲ್ಲಿ 2024 -25 ನೇ ಸಾಲಿನ ಮುಂಗಾರು ಬೆಳೆಗಳಿಗೆ ಬೆಳೆವಿಮೆ (crop insurance) ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ಸೂಚಿಸಿದೆ. ಬೆಳೆ ವಿಮೆ ಎಂದರೇನು? ಯಾವ ಯಾವ ಬೆಳೆಗಳಿಗೆ ವಿಮೆ ನೀಡುತ್ತಾರೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಏನಿದು ಬೆಳೆ ವಿಮೆ ಯೋಜನೆ?

ಭಾರತದಲ್ಲಿ ಶೇಕಡ 60 ರಷ್ಟು ಕುಟುಂಬಗಳು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಸಂಭವಿಸುವ ಪ್ರಕೃತಿ ವಿಕೋಪಗಳಾದಂತಹ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಸುನಾಮಿ ಇಂತಹ ಸಂಕಷ್ಟಗಳಿಗೆ ತುತ್ತಾಗಿ ತಮ್ಮ ಬೆಳೆಗಳನ್ನು ಕಳೆದುಕೊಳ್ಳುತ್ತಾರೆ. ಸಾಲ(loan) ಶೂಲ ಮಾಡಿ ಬಿತ್ತಿ ಬೆಳೆ ಹೀಗೆ ಪ್ರಕೃತಿ ವಿಕೋಪಕ್ಕೆ (natural disasters) ಸಿಲುಕಿದ ಮರು ಕ್ಷಣವೇ ಎಷ್ಟೊ ರೈತ ಕುಟುಂಬಗಳು ಸಾಲದ ಹೊರೆ ತಾಳದೇ ಬೀದಿಗೆ ಬೀಳುತ್ತವೆ. ಈ ಸಂದರ್ಭಗಳಲ್ಲಿ ರೈತರಿಗೆ ನೆರವಾಗುವ ದೃಷ್ಟಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು (PM phasal Bhima) ಜಾರಿಗೆ ತಂದಿದ್ದು.ಈ ಯೋಜನೆಯ ಅಡಿಯಲ್ಲಿ ಪ್ರಕೃತಿ ವಿಕೋಪಗಳಿಗೆ ಸಿಲುಕಿ ಬೆಳೆ ಹಾನಿಯಾದ ರೈತರಿಗೆ ಆರ್ಥಿಕವಾಗಿ ಧನ ಸಹಾಯವನ್ನು ನೀಡಲಾಗುತ್ತಿದೆ.

ಸರ್ಕಾರ ಇದೀಗ ಎಲ್ಲಾ ರೈತರಿಗೂ ಬೆಳೆ ವಿಮೆಯನ್ನು ಭೀಮ ಯೋಜನೆಯ ಶೇಕಡ 2 ರಷ್ಟು ಹಣವನ್ನು ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ.ಪ್ರತಿ ಹೆಕ್ಟರ್ ಗೆ 29 ಸಾವಿರದಿಂದ 86 ಸಾವಿರದವರೆಗಿನ ಆರ್ಥಿಕ ಸಹಾಯವನ್ನು ಆ ಒಂದು ಶೈಕ್ಷಣಿಕ ವರ್ಷದಲ್ಲಿ ಪ್ರಕೃತಿ ವಿಕೋಪಗಳಿಂದ ರೈತರ ಬೆಳೆಗಳು ನಾಶವಾದರೆ ಈ ವಿಮೆಯ ಪ್ರಯೋಜನವನ್ನು ಪಡೆಯಬಹುದು.

ಯಾವ ರೀತಿಯ ಪ್ರಕೃತಿ ವಿಕೋಪಗಳ ಸಂಭಂವಿಸಿದರೆ ಈ ವಿಮೆಯ ಪ್ರಯೋಜನವನ್ನು ಪಡೆಯಬಹುದು:

ರೈತರು ಬೆಳೆ ವಿಮೆಯ ನೋಂದಣಿಯನ್ನು (crop insurance registration) ಮಾಡಿಸಿದ ನಂತರ ಬಿತ್ತನೆ ಮಾಡಿ ಬೆಳೆಗಳ ಕಟಾವು ಮಾಡುವವರೆಗೂ ಬೆಳೆಗಳಿಗೆ ಈ ಒಂದು ವಿಮೆಯು ರಕ್ಷಣೆ ಇರುತ್ತದೆ. ಪ್ರಕೃತಿ ವಿಕೋಪಗಳಾದ ಅತಿಯಾದ ಮಳೆ ಮತ್ತು ಬರ ಸೇರಿದಂತೆ ಹಲವಾರು ಪ್ರಕೃತಿ ವಿಕೋಪಗಳ ಬೆಳೆ ನಷ್ಟಕ್ಕೆ ರೈತರಿಗೆ ಬೆಳೆ ವಿಮಾದ ಆರ್ಥಿಕ ಭದ್ರತೆಯನ್ನು ನೀಡುತ್ತಾರೆ.

ಮುಂಗಾರು ಬೆಳೆಗಳ ಬೆಳೆ ವಿಮೆಯ (Mansoon crop insurance) ಜಿಲ್ಲಾ ವಾರ ದಿನಾಂಕಗಳ ಪಟ್ಟಿ:

ಸರ್ಕಾರದಿಂದ ಬಿಡುಗಡೆಯಾಗಿರುವ ಜಿಲ್ಲಾವಾರು ಕೊನೆಯ ದಿನಾಂಕಗಳ ಪಟ್ಟಿಯನ್ನು ನೋಡಲು ಸಂರಕ್ಷಣೆ ಜಾಲತಾಣಕ್ಕೆ ಭೇಟಿಯನ್ನು ನೀಡಬೇಕು.
https://samrakshane.karnataka.gov.in/
ಜಾಲತಾಣಕ್ಕೆ (website) ಭೇಟಿ ನೀಡಿದ ನಂತರ ಮುಖಪುಟದಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಯ್ಕೆಯಲ್ಲಿ ನೀವು 2024 25 ಎಂದು ಆಯ್ಕೆ ಮಾಡಿಕೊಂಡು ಮತ್ತು ಋತು ಎಂಬುವುದರಲ್ಲಿ Kharif ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
ಕೊನೆಯಲ್ಲಿ ರೈತರ ಕಾಲಂನಲ್ಲಿ view cut off dates ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಜಿಲ್ಲಾವಾರು ಕೊನೆಯ ದಿನಾಂಕಗಳ ಪಟ್ಟಿ ದೊರೆಯುತ್ತದೆ.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು (documents) ಬೇಕಾಗುತ್ತವೆ?:

ರೈತರ ಆಧಾರ ಕಾರ್ಡ
ಜಮೀನಿನ ಪಹಣಿ ಪತ್ರ
ಬ್ಯಾಂಕ್ ಪಾಸ್ ಬುಕ್
ಫ್ರೂಟ್ಸ್ ಐಡಿ ನಂಬರ್

ಬೆಳೆ ವಿಮೆ ಮಾಡಲು ಆಸಕ್ತಿ ಇಲ್ಲವಾದರೆ ಏನು ಮಾಡಬೇಕು?

ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದೆ, ಆದರೆ ಸಾಲ ಪಡೆದುಕೊಂಡ ರೈತರಿಗೆ ಈ ಒಂದು ವಿಮೆ ಮಾಡಿಸಲು ಆಸಕ್ತಿ ಇಲ್ಲವೆಂದರೆ ತಾವು ಬೆಳೆ ಸಾಲ ಪಡೆದ  ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ  ದಿನಾಂಕಕ್ಕೂ 7 ದಿನ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಬೇಕಾಗುತ್ತದೆ. ಹೀಗೆ ಮಾಡಿದರೆ ಅವರು ನಿಮ್ಮ ಯೋಜನೆಯನ್ನು ಕೈ ಬಿಡುತ್ತಾರೆ.

ಯಾವ ಯಾವ ಬೆಳೆಗಳಿಗೆ ವಿಮೆ ನೋಂದಣಿ  ಸಿಗಲಿದೆ :

ಕರ್ನಾಟಕ ರೈತ ಸುರಕ್ಷಾಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಬರುವ ಭತ್ತ, ಮುಸುಕಿನ ಜೋಳ ಮತ್ತು ಹೋಬಳಿ ಮಟ್ಟದ ಬೆಳೆಗಳಾದ ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಹುರುಳಿ, ಸೂರ್ಯಕಾಂತಿ, ಎಳ್ಳು, ಹತ್ತಿ, ನೆಲಗಡಲೆ, ಈರುಳ್ಳಿ, ಕೆಂಪು ಮೆಣಸಿನಕಾಯಿ ಬೆಳಗಳಿಗೆ ವಿಮೆಯನ್ನು ಮಾಡಿಸಿಕೊಳ್ಳ ಬಹುದು.

ಪ್ರಮುಖ ದಿನಾಂಕ (important dates) :

ಭತ್ತ, ತೊಗರಿ, ರಾಗಿ ನವಣೆ, ಹುರಳಿ, ನೆಲಗಡಲೆ ಮತ್ತು ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನ ಮತ್ತು ಎಳ್ಳು ಬೆಳೆಗೆ ವಿಮೆ ಮಾಡಲು ಜುಲೈ 15 ಕೊನೆಯ ದಿನವಾಗಿದೆ.

ಗಮನಿಸಿ (notice) :

ರೈತರು ಈ ಒಂದು ಬೆಳೆ ವಿಮೆಯನ್ನು ತಮ್ಮ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದು. ರೈತರು ತಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ  ಸಂಪರ್ಕಿಸಬಹುದು. ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ  18001801551 ಉಚಿತ ಸಹಾಯವಾಣಿ ನಂಬರ್ ಗೆ ಕರೆ ಮಾಡಬಹುದು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!