ಇಂದು ಮೊಬೈಲ್ ಯಾರ ಬಳಿ ಇಲ್ಲ ಹೇಳಿ. ಪ್ರತಿ ಯೊಬ್ಬರು ಮೊಬೈಲ್ ಬಳಸುತ್ತಾರೆ. ಮೊಬೈಲ್ ಫೋನ್ ನಮ್ಮ ಜೀವನದಲ್ಲಿ ಒಂದು ಪಾರ್ಟ್ ಆಗಿಬಿಟ್ಟಿದೆ. ಪ್ರತಿ ಯೊಬ್ಬರ ಕೈಯಲ್ಲಿ ವಿವಿಧ ಬಗೆಯ, ಅತ್ಯಾಧಿನಿಕ ಫೀಚರ್ಸ್ ಗಳುಳ್ಳ ಮೊಬೈಲ್ ಗಳಿವೆ. ಹಾಗೆಯೇ ಇಂದು ಮಾರ್ಕೆಟ್ ನಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಮೊಬೈಲ್ ಕಂಪೆನಿಗಳ ನಡುವೆ ಪೈಪೋಟಿ ನಡೆದಿದೆ. ಸದ್ಯಕ್ಕೆ ಈಗ ಜನಪ್ರಿಯ ಮೊಬೈಲ್ ಕಂಪನಿಯಾದ ಮೊಟೊರೋಲಾ ( Motorola ) ಕಂಪೆನಿಯ ಹೊಸ ಸ್ಮಾರ್ಟ್ ಫೋನ್ ಆದಷ್ಟು ಬಿಡುಗಡೆ ಆಗಲಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಮೊಟೊರೊಲಾ ಕಂಪೆನಿಯ ( Motorola ) ಬಗ್ಗೆ ಹೇಳುವುದಾದರೆ , ಮೊಬೈಲ್ ವರ್ಲ್ಡ್ ನಲ್ಲಿ ಈ ಕಂಪೆನಿಯು ಹೆಸರು ಮಾಡಿದೆ. ಈ ಕಂಪೆನಿಯು ಬಿಡುಗಡೆ ಮಾಡುವ ಎಲ್ಲ ಮೊಬೈಲ್ ಫೋನ್ ಗಳು ಅತ್ಯಾಕರ್ಷಕ ಲುಕ್ , ಡಿಸೈನ್ , ಕ್ಯಾಮೆರಾ , ಮತ್ತು ಮಾಡೆಲ್ ಗಳನ್ನು ಹೊಂದಿವೆ. ಇದೀಗ ಮೊಟೊರೊಲಾ ಕಂಪೆನಿಯು ಹೊಸದಾಗಿ ಮೋಟೋ(Moto) G34 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಫೋನ್ ನ ಫೀಚರ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೋಟೋ G34 5G ಡಿಸ್‌ಪ್ಲೇ ವಿವರ ( Display ) :
ಮೋಟೋ G34 5G ಸ್ಮಾರ್ಟ್‌ಫೋನ್ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ.
ಪಂಚ್-ಹೋಲ್ ವಿನ್ಯಾಸದೊಂದಿಗೆ ಫ್ಲಾಟ್ ಡಿಸ್‌ಪ್ಲೇ ಇದರಲ್ಲಿ ಇದೆ.
ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದೆ. 1600×720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಕೂಡ ಹೊಂದಿದೆ.
ಇಷ್ಟೇ ಅಲ್ಲದೆ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.
ಪ್ರೊಸೆಸರ್ ( Processor ) ಬಗ್ಗೆ ಮಾಹಿತಿ ಈ ಕೇಳಗಿನಂತಿದೆ :
ಈ ಸ್ಮಾರ್ಟ್‌ಫೋನ್ ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ನೀಡಲಾಗಿದೆ.
ಹಾಗೆಯೇ ಆಂಡ್ರಾಯ್ಡ್ 14 ಪ್ರೊಸೆಸರ್ ಈ ಫೋನ್ ನಲ್ಲಿ ರನ್ ಆಗಲಿದೆ.
ಸ್ಟೋರೇಜ್ ( Storage ) :
ಈ ಫೋನ್ ನಲ್ಲಿ, 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿದೆ.
ಇಷ್ಟೇ ಅಲ್ಲದೆ 8GB ವರ್ಚುವಲ್ RAM ಅನ್ನು ಹೊಂದಿದೆ.
ಮೈಕ್ರೊ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಕ್ಯಾಮೆರಾ ( Camera ) :
ಮೋಟೋ G34 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ.
ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.
ಹಾಗೂ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಇದರೊಂದಿಗೆ ಎಲ್‌ಇಡಿ ಫ್ಲ್ಯಾಷ್ ಅನ್ನು ಕೂಡ ಒಳಗೊಂಡಿದೆ.
ಬ್ಯಾಟರಿ ಮತ್ತು ಪ್ಯಾಕ್ ಅಪ್ ( Battery and Pack up ) :
ಈ ಸ್ಮಾರ್ಟ್‌ಫೋನ್ ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಇದು USB-C ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5, GPS, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.
ಹಾಗೂ ಹೆಚ್ಚುವರಿ ಭದ್ರತೆಗಾಗಿ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.
ಇದರೊಂದಿಗೆ ಆಡಿಯೊಫೈಲ್‌ಗಳಿಗಾಗಿ, ಸಾಧನವು ಡಾಲ್ಬಿ ಅಟ್ಮಾಸ್-ಟ್ಯೂನ್ಡ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಹೊಂದಿದೆ.
ಈ ಸ್ಮಾರ್ಟ್ ನ ಬಣ್ಣಗಳು ( Colors ) :
ಈ ಒಂದು ಸ್ಮಾರ್ಟ್ ಫೋನ್ ಎರಡು ವಿಧಗಳಲ್ಲಿ ದೊರೆಯುತ್ತದೆ. ಅವುಗಳೆಂದರೆ :
ಸ್ಟಾರ್ ಬ್ಲ್ಯಾಕ್ ಮತ್ತು ಸೀ ಬ್ಲೂ ಕಲರ್
ಮೋಟೋ G34 5G ಫೋನ್ ನ ಬೆಲೆ ಮತ್ತು ಲಭ್ಯತೆ ( Price ) :
ಮೋಟೋ G34 5G ಹೊಸ ಸ್ಮಾರ್ಟ್‌ಫೋನ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆ ಗೊಂಡಿದೆ. ಆದ್ದರಿಂದ ಇದರ 8GB+128GB ರೂಪಾಂತರದ ಆಯ್ಕೆಯು ಚೀನಾದಲ್ಲಿ ಯುವಾನ್ 999 ಗೆ ದೊರೆಯುತ್ತದೆ. ಅಂದರೆ ಭಾರತದಲ್ಲಿ ಅಂದಾಜು 11,941ರೂ ಬೆಲೆಗೆ ದೊರೆಯುತ್ತದೆ.
ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ ಆಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ದೊರೆತಿಲ್ಲ. ಆದರೆ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ
ಈ ಮಾಹಿತಿಗಳನ್ನು ಓದಿ
- ರೆಡ್ಮಿಯ ಮತ್ತೊಂದು ಮೊಬೈಲ್ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ, ಏನಿದರ ವಿಶೇಷತೆ?
- ಹೊಸ ಐಟೆಲ್ ಫೋನ್ ಎಂಟ್ರಿ..! ಇಷ್ಟು ಕಮ್ಮಿ ಬೆಲೆಗೆ 5G ಮೊಬೈಲ್ ಯಾರೂ ಕೊಡಲ್ಲ.
- ಬರೀ 10 ಸಾವಿರದೊಳಗೆ ಸಿಗುತ್ತಿದೆ ಹೊಸ ಲಾವಾ 5G ಮೊಬೈಲ್, ಚೈನಾ ಮೊಬೈಲ್ಸ್ ಗೆ ಟಕ್ಕರ್
- ಮತ್ತೊಂದು ಸ್ಯಾಮ್ಸಂಗ್ ಗ್ಯಾಲಕ್ಸಿ 5G ಸ್ಮಾರ್ಟ್‌ಫೋನ್ ಬಿಡುಗಡೆ..!
- ವಿವೋದ 3 ಹೊಸ ಮೊಬೈಲ್ಸ್ ಬಿಡುಗಡೆ. ಇಲ್ಲಿದೆ ಮಾಹಿತಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.