ಉಬರ್‌ನ ಮೋಟೋ ವುಮೆನ್ ಟ್ಯಾಕ್ಸಿ(Moto Women Taxi) ಸೇವೆ ಪ್ರಾರಂಭ. ಮಹಿಳೆಯರಿಂದ ಮಹಿಳೆಯರಿಗಾಗಿ.
ಬೆಂಗಳೂರು ನಗರದಲ್ಲಿ ಇಂದು ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ಉಬರ್(Uber) ಹೊಸ ಸೇವೆಯನ್ನು ಪರಿಚಯಿಸಿದೆ. ಮಹಿಳಾ ಪ್ರಯಾಣಿಕರಿಗೆ ವಿಶಿಷ್ಟ ಸೇವೆ ನೀಡುವ ಉದ್ದೇಶದಿಂದ ಮೋಟೋ ವುಮೆನ್ ಬೈಕ್ ಟ್ಯಾಕ್ಸಿ ಪ್ರಾರಂಭಿಸಲಾಗಿದೆ. ಈ ಸೇವೆ 24 ಗಂಟೆಗಳಿಗೂ ಲಭ್ಯವಿದ್ದು, ಮಹಿಳಾ ಚಾಲಕರೊಂದಿಗೆ(female drivers) ಮಹಿಳೆಯರಿಗಾಗಿ ಅದರಲ್ಲೂ ಅವರ ಸುರಕ್ಷಿತೆಗಾಗಿ ಮಾಡಿರುವ ಹೊಸ ಸೇವೆ ಎಂದರೆ ತಪ್ಪಾಗಲಾರದು. ಈ ಸೇವೆಯ ವಿಶೇಷವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಮಹಿಳೆಯರಿಂದ ಮಹಿಳೆಯರಿಗಾಗಿ ‘ಮೋಟೋ ವುಮೆನ್’ ಟ್ಯಾಕ್ಸಿ ಸೇವೆ ಪ್ರಾರಂಭಿಸಾಲಾಗಿದೆ. ನಾವು ಯಾವಾಗ ಬೈಕ್ ಟ್ಯಾಕ್ಸಿ ಬುಕ್ ಮಾಡಿದರೂ ಪುರುಷ ಡ್ರೈವರ್ಗಳು(Male drivers) ಮಾತ್ರ ಬರುತ್ತಿದ್ದರು. ಅಂಥಹ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದು ಸ್ವಲ್ಪ ಮುಜುಗರವನ್ನು ಉಂಟು ಮಾಡುತ್ತಿತ್ತು. ಇದರ ಜೊತಯಲ್ಲಿ ಸುರಕ್ಷತೆಯ ವಿಷಯದಲ್ಲಿ ಹೆಚ್ಚಿನ ಭಯಾವೂ ಆಗುತ್ತಿತ್ತು. ಆದರೆ ಇನ್ನು ಆ ಭಯ ಹಾಗೂ ಚಿಂತೆ ಬಿಟ್ಟು ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದು. ಉಬರ್ ಮಹಿಳೆಯರಿಗಾಗಿಯೇ ಮಹಿಳಾ ಬೈಕ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭ ಮಾಡಿದೆ.
ಈಗಾಗಲೇ ಎಷ್ಟು ಮಂದಿ ‘ಮೋಟೋ ವುಮೆನ್’ ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ?:
ಉಬರ್ ಸಂಸ್ಥೆಯು ಉಬರ್ ಮೋಟೋ ವುಮೆನ್(Moto Women) ಸೇವೆಯನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಬೆಂಗಳೂರಿನಲ್ಲಿ ಘೋಷಿಸಿದ್ದು, ಮಹಿಳೆಯರಿಗೆ ಮಾತ್ರ ಈ ಸೇವೆಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಸೇವೆ ಕೇವಲ ಸುರಕ್ಷಿತವಷ್ಟೇ ಅಲ್ಲ, ಇದರ ಜೊತೆ ಮಹಿಳೆಯರು ಆದಾಯಗಳಿಸಬಹುದು. ಮಹಿಳಾ ಪ್ರಯಾಣಿಕರಿಗೆ ಭದ್ರತೆ ನೀಡಿದರೆ, ಮತ್ತೊಂದು ಕಡೆ ಮಹಿಳಾ ಚಾಲಕರಿಗೆ ಉದ್ಯೋಗ ನೀಡಿ ಆದಾಯ ಗಳಿಸಲು ಸಹಾಯ ಮಾಡಲಿದೆ. ದಿನದ 24 ಗಂಟೆಯೂ ಬೈಕ್ ಟ್ಯಾಕ್ಸಿ ಸೇವೆ ಸಿಗಲಿದೆ. ಈಗಾಗಲೇ ಮೋಟೋ ವುಮೆನ್ ಸೇವೆಗೆ 300 ಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಮೋಟೋ ವುಮೆನ್ ವಿಶೇಷತಗಳೇನು ?:
ಬೆಂಗಳೂರಿನ ಎಲ್ಲಾ ಪ್ರಮುಖ ಭಾಗಗಳಲ್ಲಿ ಉಬರ್ ಮೋಟೋ ವುಮೆನ್ ಸೇವೆ ಲಭ್ಯವಾಗಲಿದೆ. ಹಾಗೂ ಪ್ರಯಾಣಿಕರಿಗೆ ಯಾವದೇ ಸಮಸ್ಯೆ ಬರಬಾರದು ಎಂದು ಮಾನಿಟರ್ ಮಾಡಿರುತ್ತದೆ. ಅಗತ್ಯವಿರುವ ಸಮಯದಲ್ಲಿ ಮಹಿಳಾ ಪ್ರಾಣಿಕರು ಮತ್ತು ಚಾಲಕರು ಉಬರ್‌ನ 24×7 ಸುರಕ್ಷತಾ ಸಹಾಯವಾಣಿಯ ಸಹಾಯ ಪಡೆಯಬಹುದು. ಇನ್ನು ಮಹಿಳೆಯರಿಗಾಗಿ ಹಲವು ವೈಶಿಷ್ಟ್ಯಗಳಿದ್ದು, ಐವರ ಸಂಪರ್ಕ ಸಂಖ್ಯೆಗಳೊಂದಿಗೆ ರಿಯಲ್ ಟೈಂ ಟ್ರಿಪ್ ಶೇರಿಂಗ್(Real Time Trip Sharing)ಗೂ ಅವಕಾಶ ಕಲ್ಪಿಸಲಾಗಿದೆ. ಹಾಗೂ ಮಹಿಳೆಯರನ್ನು ಹೊರತುಪಡಿಸಿ ಬೇರೆಯವರನ್ನು ಕರೆದುಕೊಂಡು ಹೋಗಲು ವುಮನ್ ಒನ್ಲಿ ಮೋಡ್ ಅನ್ನು(Woman only mode) ಆಫ್ ಮಾಡುವ ಆಯ್ಕೆಯನ್ನೂ ನೀಡಲಾಗಿದೆ. ಈ ಅವಕಾಶ ಮಹಿಳಾ ಡ್ರೈವರ್ಗಳು ಬಯಸಿದಲ್ಲಿ ಮಾತ್ರ. ಇದರಿಂದ ಮಹಿಳಾ ಚಾಲಕರು ಹೆಚ್ಚಿನ ಲಾಭ ಪಡೆಯಬಹುದು ಎಂದು ಕಂಪನಿ ಹೇಳಿದೆ.
ಇನ್ನು, ಉಬರ್ ಆ್ಯಪ್‌ನಲ್ಲಿಯೇ(Uber app) ಈ ಹೊಸ ಸೇವೆ ದೊರೆಯಲಿದ್ದು, ಫೋನ್ ಸಂಖ್ಯೆಗಳು ಮತ್ತು ಡ್ರಾಪ್-ಆಫ್ ಸ್ಥಳಗಳ ರಹಸ್ಯ ಕಾಪಾಡಲೂ ಅವಕಾಶವಿದೆ. RideCheck, Uber ನ ಪೂರ್ವಭಾವಿ ಸುರಕ್ಷತಾ ವೈಶಿಷ್ಟ್ಯ, ದೀರ್ಘ ನಿಲುಗಡೆ ಮಾಡುತ್ತದೆ. ದಿನದಿಂದ ದಿನಕ್ಕೆ ಮಹಿಳಾ ಚಾಲಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಇನ್ನಷ್ಟು ಉದ್ಯೋಗ ನೀಡುವ ನಿಟ್ಟಿನಲ್ಲಿ 2025 ರ ಮೊದಲ ತ್ರೈಮಾಸಿಕದ ವೇಳೆಗೆ ಮಹಿಳಾ ಬೈಕ್ ಟ್ಯಾಕ್ಸಿ ಡ್ರೈವರ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಉಬರ್ ಚಿಂತನೆ ನಡೆಸಿದ್ದು, ಉಬರ್ ತನ್ನ ಯೋಜನೆಯನ್ನು ಮುಂದಿನ ವರ್ಷ ವಿಸ್ತರಿಸುವುದಾಗಿ ಹೇಳಿದೆ.
ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ವ್ಯಾಪಾರ ಕಾರ್ಯಾಚರಣೆಗಳ ಮುಖ್ಯಸ್ಥ ಅಭಿಷೇಕ್ ಮಾತನಾಡಿ, ಉಬರ್ ಮೋಟೋ ವುಮೆನ್ ಅನ್ನು, ಮಹಿಳೆಯರಿಗೆ ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರವಾದ ರೈಡ್ ಆಯ್ಕೆಯನ್ನು ಒದಗಿಸುವುದರ ಜೊತೆಗೆ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶ ನೀಡುತ್ತದೆ ಎಂದಿದ್ದಾರೆ. ಇನ್ನು ಈ ಸೇವೆಯನ್ನು ಮೊದಲಿಗೆ ಬೆಂಗಳೂರಿನಲ್ಲಿ ಆರಂಭಮಾಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಎಲ್ಲ ಜಿಲ್ಲೆಗಳಲ್ಲಿ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸೇವೆಯಲ್ಲಿ ಗಮನಿಸಬೇಕಾದ ಕೆಲವು ವಿಶೇಷ ಸೌಲಭ್ಯಗಳು :
ಮಹಿಳಾ-ಮಹಿಳಾ ಸಂಚಾರ:
ಈ ಸೇವೆಯಲ್ಲಿ ಮಹಿಳಾ ಚಾಲಕರು ಮಾತ್ರ ಸೇವೆಯನ್ನು ನೀಡುತ್ತಾರೆ, ಇದು ಮಹಿಳಾ ಪ್ರಯಾಣಿಕರ ಭದ್ರತೆಗೆ ವಿಶೇಷ ಗಮನಹರಿಸುತ್ತದೆ. ಇನ್ನು, ಯುಜರ್ ಫ್ರೆಂಡ್ಲಿ ಅಪ್ಲಿಕೇಶನ್ ಮೂಲಕ ತ್ವರಿತ ಬುಕ್ಕಿಂಗ್.
ಸೇವೆಯ ಲಭ್ಯತೆ:
ಬೆಂಗಳೂರು ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಈ ಸೇವೆ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಹೆಚ್ಚು ಮಹಿಳಾ ಚಾಲಕರನ್ನು ಪ್ರೋತ್ಸಾಹಿಸಲು ಉಬರ್ ತರಬೇತಿಯನ್ನು ಒದಗಿಸುತ್ತಿದೆ.
ಕಡಿಮೆ ದರ:
ದ್ವಿಚಕ್ರ ವಾಹನದಲ್ಲಿ ಸಮಯ ಉಳಿತಾಯ ಹಾಗೂ ಕಡಿಮೆ ಖರ್ಚಿನ ಪ್ರಯಾಣ. ಉಬರ್ ಸೇವೆಗಳಂತೆ ಈ ಹೊಸ ಬೈಕ್ ಟ್ಯಾಕ್ಸಿಗೂ ಸ್ಪರ್ಧಾತ್ಮಕ ದರವನ್ನು ಅನುಸರಿಸಲಾಗುತ್ತದೆ.
ಗಮನಿಸಿ :
ನೀವೇನಾದರೂ ಬೈಕ್ ರೈಡಿಂಗ್ ನಲ್ಲಿ ಆಸಕ್ತಿ ಹೊಂದಿದ್ದು, ಬೈಕ್ ರೈಡಿಂಗ್ ಗೆ ಬೇಕಾದ ಇಲ್ಲ ದಾಖಲೆ ನಿಮ್ಮ ಬಳಿ ಇದ್ದರೆ ನೀವು ಕೂಡ ಉಬರ್ ಜೊತೆ ಕೈಜೋಡಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.