Motorola Mobiles: ಭರ್ಜರಿ ಎಂಟ್ರಿ ಕೊಡಲಿದೆ ಮೊಟೊರೊಲಾ Razr 50! ಸೂಪರ್ ಡಿಸೈನ್!

Motorola Razr 50

ಆದಷ್ಟು ಬೇಗ ಮಾರುಕಟ್ಟೆಗೆ ಬಿಡುಗಡೆ ಆಗಲಿರುವ ಮೊಟೊರೊಲಾ Razr 50 (Motorola Razr 50).

ಇಂದು ನಾವು ಸ್ಮಾರ್ಟ್ ಫೋನ್ (smart phone) ಯುಗದಲ್ಲಿದ್ದೇವೆ. ಒಂದರ ನಂತರ ಒಂದು ವಿಶಿಷ್ಟವಾದ, ವಿಭಿನ್ನವಾದ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಿವೆ. ಉತ್ತಮ ಫಿಚರ್ಸ್ ಗಳ (features) ಹಾಗೂ ಉತ್ತಮ ಆಫರ್ಸ್ ಗಳೊಂದಿಗೆ (offers) ಮೊಬೈಲ್ ಕಂಪನಿಗಳು ತಮ್ಮ ತಮ್ಮ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿವೆ. ಇಂದು ಜನರು ಕೂಡ ತಮ್ಮ ಬಳಿ ಜನಪ್ರಿಯ ಬ್ರ್ಯಾಂಡ್ ಗಳ ಸ್ಮಾರ್ಟ್ ಫೋನ್ ಗಳು ಇದ್ದರೆ ಹೆಮ್ಮೆಯ ವಿಷಯ ಎಂದು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡುತ್ತಾರೆ. ಹಾಗೆ ಇದೀಗ ಮಾರುಕಟ್ಟೆಗೆ ಮೊಟೊರೊಲಾ ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನನ್ನು ಶೀಘ್ರದಲ್ಲಿ ಲಾಂಚ್ ಮಾಡಲಿದೆ. ಬನ್ನಿ ಈ ಸ್ಮಾರ್ಟ್ ಫೋನ್ ನ ವಿಶೇಷತೆಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Razr ಸರಣಿಯ ಮೊಬೈಲ್ ಗಳನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದ ಮೊಟೊರೊಲಾ :

ಮೊಟೊರೊಲಾ (Motorola) ಕಂಪೆನಿಯು  ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ಹಾಗೆಯೇ ಇದೀಗ ಮೊಟೊರೊಲಾ ಕಂಪನಿ ಮೊಟೊರೊಲಾ Razr ಸರಣಿಯ ಹೊಸ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Razr ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಎಲ್ಲಿ ಎಲ್ಲಿ ಬಿಡುಗಡೆ ಮಾಡಲಿದೆ ?

ಶೀಘ್ರದಲ್ಲೇ ಮೊಟೊರೊಲಾ ಕಂಪನಿಯು ತನ್ನ ಹೊಸ  Razr ಸರಣಿಯ Razr 50 (Motorola Razr 50) ಮತ್ತು ಮೊಟೊರಲಾ Razr 50 ಅಲ್ಟ್ರಾ (Motorola Razr 50 Ultra) ಸ್ಮಾರ್ಟ್ ಫೋನ್ ಗಳ ಬಿಡುಗಡೆಗೆ ಸಜ್ಜಾಗಿದೆ. ಹಾಗೆಯೇ ಈ ಮೊಬೈಲ್‌ಗಳನ್ನು ಯುಎಸ್ ಮತ್ತು ಕೆನಡಾ ಸೇರಿ ಕೆಲವು ಆಯ್ದ ಮಾರುಕಟ್ಟೆಗಳಲ್ಲಿ Razr ಸರಣಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಮೊಟೊರೊಲಾ Razr 50 ಸ್ಮಾರ್ಟ್ ಫೋನ್ ನ ನಿರೀಕ್ಷಿತ ಫೀಚರ್ಸ್‌ಗಳು (features) :

ಡಿಸ್ಪ್ಲೇ (display) :

ಈ ಸ್ಮಾರ್ಟ್ ಫೋನ್ ನ 3.6-ಇಂಚಿನ OLED ಕವರ್ ಡಿಸ್‌ಪ್ಲೇ ಜೊತೆಗೆ 1,066×1056 ಪಿಕ್ಸೆಲ್ ರೆಸಲ್ಯೂಶನ್ ಮತ್ತು 6.9 ಇಂಚಿನ OLED ಫುಲ್ ಹೆಚ್‌ಡಿ+(1,080×2,640 ಪಿಕ್ಸೆಲ್‌ಗಳು) 120Hz ದರದ ಒಳಗಿನ ಪರದೆಯನ್ನು ಹೊಂದಿದೆ.

ಪ್ರೊಸೆಸರ್ (processor) :

ಮೀಡಿಯಾಟೆಕ್ (MediaTek) ಡೈಮೆನ್ಸಿಟಿ 7300X SoC ನಲ್ಲಿ ರನ್ ಆಗುತ್ತದೆ ಎಂದು ತಿಳಿದು ಬಂದಿದೆ.

ಸ್ಟೋರೇಜ್ (storage) :

ಈ ಸ್ಮಾರ್ಟ್‌ಫೋನ್ 8GB, 12GB, ಮತ್ತು 16GB RAM ಆಯ್ಕೆಗಳೊಂದಿಗೆ 128GB, 256GB, 512GB ಮತ್ತು 1TB ಯಷ್ಟು ಸ್ಟೋರೆಜ್ ಗಳ ಸಾಮರ್ಥ್ಯ ಇದೆ.

ಕ್ಯಾಮೆರಾ (camera) :

ಹಾಗೆಯೇ ಇನ್ನು ಕ್ಯಾಮೆರಾ ಬಗ್ಗೆ ನೋಡುವುದಾದರೆ, ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಅಷ್ಟೇ ಅಲ್ಲದೆ ಇದು ಫೋಲ್ಡಿಂಗ್ ಡಿಸ್‌ಪ್ಲೇಯಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ ಎಂದು ತಿಳಿದು ಬಂದಿದೆ.

ಬಣ್ಣ (colour) :

ಮೊಟೊರೊಲಾ Razr 50 ನೇರಳೆ ಬಣ್ಣದಲ್ಲಿ ಕಂಡು ಬರಲಿದೆ. ಹಾಗೆಯೇ ಇದರಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಹೊಂದಿರುವ ನಿರೀಕ್ಷೆಯಿದೆ.

ಬ್ಯಾಟರಿ (battery) :

3,950mAh ಬ್ಯಾಟರಿ ಜೊತೆಗೆ 188 ಗ್ರಾಂ ತೂಕ ಹೊಂದಿರಬಹುದು ಎಂದು ತಿಳಿದು ಬಂದಿದೆ.

ಮೊದಲು ಯುಎಸ್ ನಲ್ಲಿ (US) ಬಿಡುಗಡೆ ಆಗುವ ನಿರೀಕ್ಷೆ :

ಮೊದಲು ಯುಎಸ್‌ನಲ್ಲಿ ಬಿಡುಗಡೆ ಆಗುವ ಮೊಟೊರೊಲಾ Razr 50 ಸ್ಮಾರ್ಟ್ ಫೋನ್ $699 ಡಾಲರ್ ಅಂದರೆ, ಸುಮಾರು ರೂ. 58,000 ರೂ. ಬೆಲೆ ಹೊಂದಿರಬಹುದು ಎಂದು ತಿಳಿದು ಬಂದಿದೆ. ಹಾಗೆಯೇ ಮೊಟೊರೊಲಾ Razr 50 ಅಲ್ಟ್ರಾ (Motorola Razr 50 ultra) ಮೊಬೈಲ್‌ ಜೂನ್‌ ತಿಂಗಳಿನಲ್ಲಿ ಅಧಿಕೃತವಾಗಿ ಆಯ್ದ ಕೆಲವು ದೇಶಗಳಲ್ಲಿ ಮಾತ್ರ ಲಾಂಚ್ ಆಗಬಹುದು ಎಂದು ಊಹಿಸಲಾಗಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!