Business loan: ಹೊಸ ಬಿಸಿನೆಸ್ ಪ್ರಾರಂಭಿಸಲು ಕೇಂದ್ರದಿಂದ ಸಿಗಲಿದೆ ನೆರವು..! ಮುದ್ರಾ ಲೋನ್ ಮಿತಿ ಹೆಚ್ಚಳ!

IMG 20240727 WA0005

ಕೇಂದ್ರ ಬಜೆಟ್ ನಲ್ಲಿ ಹೆಚ್ಚಿದ ಮುದ್ರಾ ಸಾಲ ಮಿತಿ, ಷರತ್ತುಗಳು, ಅರ್ಹತೆಗಳ ವಿವರ ಹೀಗಿದೆ :

2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು (Mudra Scheme) 2016ರಲ್ಲಿ ಪ್ರಾರಂಭವಾದ ಎಸ್‌ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್‌ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಮುದ್ರಾ ಯೋಜನೆ ಮತ್ತು ಎಸ್‌ಯುಪಿಐ ಯೋಜನೆಗಳು (SUPI schemes) ಅಗತ್ಯ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ (Union Budget 2024) ಹಲವಾರು ವಿಷಯಗಳನ್ನು, ಷರತ್ತುಗಳನ್ನು ಅನ್ವಯ ಮಾಡಲಾಗಿದೆ. ಮೋದಿ ಸರ್ಕಾರದ (Modi government) ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಸಂಸತ್ತಿನಲ್ಲಿ ಮಂಡಿಸಿ ಹಲವು ಜನಪರ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ವೇಳೆ ಅವರು ಮುದ್ರಾ ಸಾಲದ (Mudra loan) ಕುರಿತು ಮಾತನಾಡಿದ್ದು, ಅದರ ಮಿತಿಗಳನ್ನು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮುದ್ರಾ ಸಾಲದ ಮಿತಿಯ ಹೆಚ್ಚಳದಿಂದ ಹಲವಾರು ಉದ್ಯಮಿಗಳು ಪ್ರಯೋಜನ ಪಡೆಯುತ್ತಾರೆ :

ಮುದ್ರಾ ಸಾಲದ ಮಿತಿಗಳನ್ನು ಹೆಚ್ಚಿಸಿರುವುದರಿಂದ ಸಣ್ಣ ಉದ್ಯಮಿಗಳು ಮತ್ತು ಇನ್ನಿತರ ಉದ್ಯಮಿಗಳು ಇದರ ಲಾಭ ಪಡೆಯುತ್ತಾರೆ. ಮುಖ್ಯವಾಗಿ  ಹೆಚ್ಚಿನ ಸಾಲದ ಮಿತಿಯೊಂದಿಗೆ ಇದಕ್ಕೆ ಕೆಲವು ಷರತ್ತುಗಳನ್ನು ಅನ್ವಯ ಮಾಡಲಾಗಿದೆ. ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ಉದ್ಯಮಿಗಳಿಗೆ ಹಲವಾರು ರೀತಿಯಲ್ಲಿ ಪ್ರಯೋಜನವಾಗಲಿದೆ.

ಮುದ್ರಾ ಸಾಲ ಹೆಚ್ಚಳದ ಜೊತೆಗೆ ಹಲವಾರು ಷರತ್ತುಗಳು (Rules) ಅನ್ವಯವಾಗಿವೆ :

ಮುದ್ರಾ ಸಲಾದ ಹೆಚ್ಚಳದಲ್ಲಿ ಷರತ್ತುಗಳನ್ನು ಅನ್ವಯಿಸಿದ್ದು, ಹೆಚ್ಚಿದ ಸಾಲದ ಮಿತಿಗೆ ಅರ್ಹತೆ ಪಡೆಯಲು ಸಾಲಗಾರರು ಈ ಹಿಂದೆ ಮುದ್ರಾ ಸಾಲವನ್ನು ತೆಗೆದುಕೊಂಡು ಪೂರ್ಣವಾಗಿ ಮರುಪಾವತಿಸಿರಬೇಕು. ಹಾಗಿದ್ದರೆ ಮಾತ್ರ ಹೊಸ ಪ್ರಯೋಜನಗಳನ್ನು ಪಡೆಯಬಹುದು ಎಂದು ಷರತ್ತುಗಳನ್ನು ಸೂಚಿಸಿದ್ದಾರೆ.

ಮುದ್ರಾ ಸಾಲ(loan) ವಿಭಾಗಗಳ ವಿವರ ಹೀಗಿದೆ :

ಮುದ್ರಾ ಸಾಲಗಳನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗಿದೆ :
ಶಿಶು ವಿಭಾಗದಲ್ಲಿ 50,000 ರೂ.ವರೆಗೆ ಸಾಲ ದೊರೆಯುತ್ತದೆ.
ಕಿಶೋರ ವಿಭಾಗದಲ್ಲಿ 50,000 ರೂ.ನಿಂದ 5 ಲಕ್ಷ ರೂ. ವರೆಗೆ ಸಾಲ ದೊರೆಯುತ್ತದೆ.
ಮತ್ತು ತರುಣ್ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗಿನ ಸಾಲಗಳು ದೊರೆಯುತ್ತದೆ.

ಮುದ್ರಾ ಸಾಲದ ಪರಿಣಾಮ ಮತ್ತು ವ್ಯಾಪ್ತಿಯ ವಿವರ ಹೀಗಿದೆ :

ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ 47 ಕೋಟಿಗೂ ಹೆಚ್ಚು ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ 27.75 ಲಕ್ಷ ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಗಮನಾರ್ಹ ಸಂಗತಿ ಎಂದರೆ ಮಂಜೂರಾದ ಒಟ್ಟು 44.46 ಕೋಟಿ ಸಾಲದಲ್ಲಿ ಶೇ.69ರಷ್ಟು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ. ಬ್ಯಾಂಕ್‌ಗಳ ಸ್ಥಳೀಯ ಶಾಖೆಗೆ ಹೋಗಿ ಮುದ್ರಾ ಸಾಲ ಯೋಜನೆಯ ಮಾಹಿತಿ ಪಡೆಯಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!