ಸ್ವಂತ ವ್ಯಾಪಾರ ಮತ್ತು ವಹಿವಾಟು ಮಾಡಲು ದೇಶದ ಯುವಕ ಮತ್ತು ಯುವತಿಯರಿಗೆ ಸರ್ಕಾರಗಳು ಪ್ರೋತ್ಸಾಹಿಸುತ್ತಾ ಬಂದಿವೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಸಿಗುವ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಸಿಕೊಡಲಾಗುವುದು.ಹೌದು, ಈ ಯೋಜನೆಯ ಅಡಿಯಲ್ಲಿ ಹೇಗೆ ಸಾಲವನ್ನು ತೆಗೆದುಕೊಳ್ಳುವುದು?, ಇದಕ್ಕೆ ಬೇಕಾದ ದಾಖಲಾತಿಗಳು, ಬಡ್ಡಿ ಎಷ್ಟು ಇರುತ್ತದೆ? ಹೀಗೆ ಎಲ್ಲಾ ಮಾಹಿತಿಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಧಾನಮಂತ್ರಿ ಮುದ್ರಾ ಯೋಜನೆ 2024:
ಮುದ್ರಾ ಯೋಜನೆಯ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ, ಮುದ್ರಾ (MUDRA) ಎಂದರೆ ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಫಿನೆನ್ಸ್ ಏಜೆನ್ಸಿ ಎಂದು ಅರ್ಥ. ಸಾಕಷ್ಟು ಜನ ಓದಿರುತ್ತಾರೆ ಆದರೆ ಕೆಲಸ ಸಿಕ್ಕಿರುವುದಿಲ್ಲ, ಇನ್ನು ಕೆಲವು ಜನರಿಗೆ ಯಾವುದಾದರೂ ಒಂದು ಹೊಸದಾದ ವ್ಯಾಪಾರವನ್ನು ಶುರು ಮಾಡೋಣ ಎಂದರೆ ಅವರಿಗೂ ಎಲ್ಲಿಯೂ ಕೂಡ ಸಾಲ ದೊರೆಯುತ್ತಿರುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಸಣ್ಣ ಪುಟ್ಟ ವ್ಯಾಪಾರಗಳನ್ನು ಶುರು ಮಾಡುವಂತವರಿಗೆ ಅಥವಾ ಈಗಾಗಲೇ ಸಣ್ಣ ಮಟ್ಟದಲ್ಲಿ ಇರುವಂತಹ ಉದ್ಯಮವನ್ನು ವಿಸ್ತಾರ ಗೊಳಿಸಲು ಸಹಾಯ ಆಗಲೆಂದು ಮೋದಿಯವರು ಈ ಯೋಜನೆಯನ್ನು ಶುರು ಮಾಡಿದರು.
ಎಷ್ಟು ಸಾಲ ದೊರೆಯುತ್ತದೆ :
ಈ ಮುದ್ರಾ ಯೋಜನೆಯ ಅಡಿಯಲ್ಲಿ 50,000 ಗಳಿಂದ ಹಿಡಿದು 10 ಲಕ್ಷದವರೆಗೂ ಸಾಲ ದೊರೆಯುತ್ತದೆ.
ಮೂರು ಸಾಲದ ವಿಭಾಗಗಳು :
- ಶಿಶು ಸಾಲ : ಈ ಸಾಲದ ಯೋಜನೆಯ ಅಡಿಯಲ್ಲಿ ನಿಮಗೆ 50,000 ವರೆಗೂ ಸಾಲ ದೊರೆಯುತ್ತದೆ
- ಕಿಶೋರ ಸಾಲ: ಈ ಸಾಲದ ಯೋಜನೆಯ ಅಡಿಯಲ್ಲಿ ನಿಮಗೆ 50,000 ದಿಂದ 5 ಲಕ್ಷ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
- ತರುಣ್ ಸಾಲ : ಈ ಸಾಲದ ಯೋಜನೆಯ ಅಡಿಯಲ್ಲಿ ನಿಮಗೆ 5 ಲಕ್ಷ ರೂಗಳಿಂದ 10 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದಾಗಿದೆ.
ನೀವು ಯಾವ ರೀತಿಯ ವ್ಯವಹಾರವನ್ನು ಮಾಡಲು ಇಚ್ಚಿಸುತ್ತೀರಾ ಹಾಗೂ ಎಷ್ಟು ಬಂಡವಾಳ ಹೂಡುತ್ತಿರ ಎನ್ನುವುದರ ಮೇಲೆ ಈ ವಿಧಾನದ ಸಾಲಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ : ಭಾರತ ಅಷ್ಟೇ ಅಲ್ಲ ಅಮೆರಿಕದಲ್ಲೂ ಈ ಸೂರ್ಯ ಗ್ರಹಣಕ್ಕೆ ಭಯ ಪಡ್ತಿದಾರೆ ಜನ! ಯಾಕೆ ಗೊತ್ತಾ?
ಯಾವ ವ್ಯಾಪಾರಗಳಿಗೆ ಅಥವಾ ಉದ್ದಿಮೆಗಳಿಗೆ ಸಾಲ ದೊರೆಯುತ್ತದೆ?:
ಕಿರಾಣಿ ಅಂಗಡಿ, ಆಟೋರಿಕ್ಷಾ ಅಥವಾ ಟ್ಯಾಕ್ಸಿಗಳನ್ನು ತೆಗೆದುಕೊಂಡು ಬಾಡಿಗೆಗೆ ಬಿಡುವಂತಹ ವ್ಯಾಪಾರ, ಟೈಲರಿಂಗ್ ಅಂಗಡಿ, ಬ್ಯೂಟಿ ಪಾರ್ಲರ್ ಹಾಗೂ ಸಲೂನ್ಗಳು, ಗ್ಯಾರೇಜ್ ಅಂಗಡಿ, ಜೆರಾಕ್ಸ್ ಶಾಪ್, ಹಪ್ಪಳ ಹಾಗೂ ಉಪ್ಪಿನಕಾಯಿ ತಯಾರಿಸುವ ಫ್ಯಾಕ್ಟರಿ, ಆಹಾರ ಉತ್ಪನ್ನಗಳ ತಯಾರಿ, ಜವಳಿ ಕ್ಷೇತ್ರ, ಸಮುದಾಯ, ವ್ಯಾಯಾಮ ಶಾಲೆ, ಕೋಳಿ ಸಾಕಣೆ, ಸಣ್ಣ ಪುಟ್ಟ ಉತ್ಪಾದಕ ಅಂಗಡಿ, ಬಟ್ಟೆ ನೇಯುವಂತಹ ಸಣ್ಣ ಉದ್ಯಮ ಇಂತಹ ಹಲವಾರು ಸಣ್ಣಪುಟ್ಟ ಉದ್ದಿಮೆಗಳನ್ನು ಪ್ರಾರಂಭಿಸಲು ಸಾಲವನ್ನು ನೀಡಲಾಗುತ್ತದೆ.
ಈ ಸಾಲವನ್ನು ಪಡೆಯಲು ಬೇಕಾಗಿರುವ ಮುಖ್ಯ ದಾಖಲೆಗಳು :
ನಿಮ್ಮ ಊರಿನಲ್ಲಿ ಪಬ್ಲಿಕ್ ಸೆಕ್ಟರ್ ಯೂನಿಯನ್ ಬ್ಯಾಂಕಿನಲ್ಲಿ ಮುದ್ರಾ ಯೋಜನೆಯ ಸಾಲವನ್ನು ಪಡೆಯಲು ಫಾರ್ಮನ್ನು ಕೊಡಬೇಕಾಗುತ್ತದೆ. ವಯೋಮಿತಿ, ಕನಿಷ್ಠ 18 ವರ್ಷ ತುಂಬಿರಬೇಕು. ಜೊತೆಗೆ, ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ.
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಕಾಯಂ ವಿಳಾಸ
- ವ್ಯಾಪಾರದ ವಿಳಾಸ ಮತ್ತು
- ಮಾಲಿಕತ್ವದ ಪುರಾವೆ
- 3 ವರ್ಷಗಳ ಬ್ಯಾಲೆನ್ಸ್ ಶೀಟ್
- ಆದಾಯ ತೆರಿಗೆ ರಿಟರ್ನ್ಸ್
- ಸ್ವಯಂ ಮೌಲ್ಯಮಾಪನ ರಿಟರ್ನ್ಸ್
- ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
ಮುದ್ರಾ ಯೋಜನೆಯ ಉಪಯೋಗಗಳು ಹಾಗೂ ವಿಶೇಷತೆ :
ಕೆಲವು ಪ್ರತಿಭಾವಂತ ವ್ಯಕ್ತಿಗಳಿಗೆ ಓದು ಮುಗಿದ ನಂತರ ಕೆಲಸವು ಸಿಗುತ್ತಿರುವುದಿಲ್ಲಾ ಹಾಗೂ ಇನ್ಯಾವುದಾದರೂ ಸ್ವಂತ ವ್ಯಾಪಾರವನ್ನು ಶುರು ಮಾಡೋಣ ಎಂದರೆ ಹಣದ ಮುಗ್ಗಟ್ಟು ಇರುತ್ತದೆ ಇಂತಹ ವ್ಯಕ್ತಿಗಳಿಗೆ ಈ ಸಾಲದಿಂದ ತುಂಬಾ ಉಪಯೋಗಕರವಾಗಿದೆ. ಅಲ್ಲದೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಈ ಯೋಜನೆಯ ಅಡಿಯಲ್ಲಿ ತುಂಬಾ ಸುಲಭವಾಗಿ ಸಾಲದ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯ ಅಡಿಯಲ್ಲಿ ಸಾಲವನ್ನು ತೆಗೆದುಕೊಂಡರೆ ಬಡ್ಡಿಯು ಕಡಿಮೆ ಇರುತ್ತದೆ.
ಉಪವ್ಯಕ್ತಿಗೆ ಒಂದೇ ಸಾಲ ದೊರೆಯುತ್ತದೆ. ತರುಣ್ ಸಾಲಕ್ಕೆ ಸಾಲದ ಮೊತ್ತದ ಶೇಕಡ 0.5 0 ಬಡ್ಡಿ ವಿಧಿಸಲಾಗುತ್ತದೆ. ಸರಕಾರಿ ಯೋಜನೆಗಳ ಲಿಂಕ್ ಆಗಿದ್ದ ವೇಳೆ ಅದರಲ್ಲಿ ಸರಕಾರದ ಬಂಡವಾಳ ಸಬ್ಸಿಡಿ ಒದಗಿಸುವ ಆಯ್ಕೆ ಇದ್ದರೆ ಸಬ್ಸಿಡಿಯನ್ನು ಪರಿಗಣಿಸಲಾಗುತ್ತದೆ. ಈ ಸಾಲದ ಬಡ್ಡಿ ದರವು ಖಾತೆದಾರರ ಬ್ಯಾಂಕ್ ವ್ಯವಹಾರ, ಕ್ರೆಡಿಟ್ ಸ್ಕೋರ್ ಗಳ ಮೇಲೆ ಅವಲಂಬಿಸಿರುತ್ತದೆ.
ಈ ಸಾಲ ಕೊಡುವ ಬ್ಯಾಂಕುಗಳು :
ಸಾರ್ವಜನಿಕ ವಲಯದ ಬ್ಯಾಂಕುಗಳು:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,
ಬ್ಯಾಂಕ್ ಆಫ್ ಇಂಡಿಯಾ,
ಬ್ಯಾಂಕ್ ಆಫ್ ಮಹಾರಾಷ್ಟ್ರ,
ಬ್ಯಾಂಕ್ ಆಫ್ ಬರೋಡ,
ಕಾರ್ಪೊರೇಷನ್ ಬ್ಯಾಂಕ್,
ಕೆನರಾ ಬ್ಯಾಂಕ್.
ಇದನ್ನೂ ಓದಿ : ಬರೋಬ್ಬರಿ 31 ಲಕ್ಷ ರೂಪಾಯಿ ಸಿಗುವ LIC ಕನ್ಯಾಧಾನ ಸ್ಕೀಮ್ ಬಗ್ಗೆ ಗೊತ್ತಾ?
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು :
ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್,
ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್,
ಡೆಕ್ಕನ್ ಗ್ರಾಮೀಣ ಬ್ಯಾಂಕ್,
ಬಿಹಾರ ಗ್ರಾಮೀಣ ಬ್ಯಾಂಕ್,
ಸಪ್ತಗಿರಿ ಗ್ರಾಮೀಣ ಬ್ಯಾಂಕ್.
ಖಾಸಗಿ ವಲಯದ ಬ್ಯಾಂಕ್ ಗಳು:
ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ,
ಹೆಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್,
ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್,
ಡಿಸಿಬಿ ಬ್ಯಾಂಕ್ ಲಿಮಿಟೆಡ್,
ಕ್ಯಾಥೋಲಿಕ್ ಸೀರಿಯಲ್ ಬ್ಯಾಂಕ್ ಲಿಮಿಟೆಡ್,
ಫೆಡರಲ್ ಬ್ಯಾಂಕ್ ಲಿಮಿಟೆಡ್ .
ಸಹಕಾರಿ ಬ್ಯಾಂಕುಗಳು:
ಗುಜರಾತ್ ಸ್ಟೇಟ್ ಕೋ – ಆಫ್ ಬ್ಯಾಂಕ್,
ರಾಜಕೋಟ್ ನಾಗರಿಕ ಸಹಕಾರಿ ಬ್ಯಾಂಕ್,
ಕಳುಪ್ಪುರ್ ಕಮರ್ಷಿಯಲ್ ಸಹಕಾರ ಬ್ಯಾಂಕ್,
ಎಂ ಎಫ್ ಐ, ಹಾಗೂ
ಎಂಬಿಎಫ್‌ಸಿ ವಲಯದ ಫೈನಾನ್ಸಿಯಲ್ ಕಂಪನಿಗಳು.
ಆಸಕ್ತವುಳ್ಳ ಅಭ್ಯರ್ಥಿಗಳು ಈ ಕೆಳಗಿನ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವೆಬ್ ಸೈಟ್ ಗೆ ಭೇಟಿ ನೀಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ : ಯುಗಾದಿ ಹಬ್ಬಕ್ಕೆ ಚಿನ್ನ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯಲ್ಲಿ ಐತಿಹಾಸಿಕ ದಾಖಲೆ. ಇಂದಿನ ರೇಟ್ ನೋಡಿ
ಮುದ್ರಾ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅರ್ಜಿದಾರರು ಅಧಿಕೃತ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಅಗತ್ಯತೆ ಮತ್ತು ಸಾಲದ ಯೋಜನೆಯ ಪ್ರಮಾಣವನ್ನ ಅವಲಂಬಿಸಿ ಶಿಶು, ಕಿಶೋರ್ ಅಥವಾ ತರುಣ್ ಸಾಲ ಯೋಜನೆಗಾಗಿ ನೀವು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಮುದ್ರಾ ಲೋನ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
ಹಂತ 1: ನೀವು ಮುದ್ರಾ ಸಾಲವನ್ನು ಪಡೆಯಲು ಬಯಸುವ PMMY-ಅಧಿಕೃತ ಹಣಕಾಸು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ https://www.mudra.org.in/ ಭೇಟಿ ನೀಡಿ. ಸಂಬಂಧಿತ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
ಹಂತ 2: ನಿಮಗೆ ಅಗತ್ಯವಿರುವ ಸಾಲದ ಫಾರ್ಮ್ ಅನ್ನು (ಶಿಶು, ತರುಣ್ ಅಥವಾ ಕಿಶೋರ್) ಡೌನ್‌ಲೋಡ್ ಮಾಡಿ ಮತ್ತು ಮುದ್ರಾ ಲೋನ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಸತಿ/ವ್ಯಾಪಾರ ವಿಳಾಸ ಮತ್ತು ಶೈಕ್ಷಣಿಕ ಅರ್ಹತೆಗಳಂತಹ ವೈಯಕ್ತಿಕ ಮತ್ತು ವ್ಯವಹಾರದ ವಿವರಗಳನ್ನು ನಮೂದಿಸಿ.
ಹಂತ 3: ನಂತರ, ಅರ್ಜಿ ನಮೂನೆಯನ್ನು ಸಲ್ಲಿಸಿ. ಬ್ಯಾಂಕ್ ಅಥವಾ ಸಾಲ ನೀಡುವ ಸಂಸ್ಥೆಗೆ ಸಲ್ಲಿಸುವಾಗ ನೀವು ಅಗತ್ಯ ದಾಖಲೆಗಳನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
ಹಂತ 4: ಮುದ್ರಾ ಸಾಲದ ಅರ್ಜಿ ನಮೂನೆ ಮತ್ತು ಲಗತ್ತಿಸಲಾದ ದಾಖಲೆಗಳನ್ನು ಪ್ರಕ್ರಿಯೆಗೊಳಿಸಿದ ನಂತರ ಮತ್ತು ಪರಿಶೀಲಿಸಿದಾಗ, ಸಾಲವನ್ನು ಅನುಮೋದಿಸಲಾಗುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ವಿತರಿಸಲಾಗುತ್ತದೆ.
ಮುದ್ರಾ ಸಾಲಕ್ಕೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಹಂತ 1: ನಿಮ್ಮ ಆಯ್ಕೆಯ PMMY-ಅಧಿಕೃತ ಬ್ಯಾಂಕ್ ಅಥವಾ NBFC ಗೆ ಭೇಟಿ ನೀಡಿ.
ಹಂತ 2: ನೀವು ಸ್ವಯಂ-ಲಿಖಿತ ವ್ಯಾಪಾರ ಯೋಜನೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
ಹಂತ 3: ಮುದ್ರಾ ಸಾಲದ ಅರ್ಜಿ ನಮೂನೆಯನ್ನು ಕೇಳಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 4: ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.
ಹಂತ 5: ಒಮ್ಮೆ ಎಲ್ಲಾ ದಾಖಲೆಗಳನ್ನು ಯಶಸ್ವಿಯಾಗಿ ಪರಿಶೀಲಿಸಿದ ನಂತರ, ಸಾಲವನ್ನು ಅನುಮೋದಿಸಲಾಗುತ್ತದೆ ಮತ್ತು ಬಯಸಿದ ಮೊತ್ತವನ್ನು ನಮೂದಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಒಂದು ಬಾರಿ ಅರ್ಜಿಯನ್ನು ಸಲ್ಲಿಸಿದ ಮೇಲೆ ನಿಮಗೆ ಏಳರಿಂದ 16 ದಿನಗಳ ಒಳಗಾಗಿ ಅನುಮೋದನೆ ಆಗುತ್ತದೆ. ಇದು ಆಯಾ ಬ್ಯಾಂಕಿಗೆ ಸಂಬಂಧಪಟ್ಟರುವುದಾಗಿರುತ್ತದೆ. ನೀವೇನಾದರೂ 10 ಲಕ್ಷದ ಒಳಗಡೆ ನಿಮ್ಮ ಕನಸಿನ ಉದ್ದಿಮೆಯನ್ನು ಶುರು ಮಾಡಲು ಸಾಲವನ್ನು ಪಡೆಯಬೇಕು ಎಂದಿದ್ದರೆ, ಈ ಯೋಜನೆಯ ಸರ್ಕಾರದ ಒಂದು ಉಪಯುಕ್ತಕರ ಯೋಜನೆಯಾಗಿದೆ. ಆದರಿಂದ ಇಂತಹ ಮುಖ್ಯವಾದ ಯೋಜನೆಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಲೇಖನವನ್ನು ಈ ಕೂಡಲೇ ಎಲ್ಲಾ ಸ್ನೇಹಿತ ಮಿತ್ರರಿಗೆ ಶೇರ್ ಮಾಡಿ, ಧನ್ಯವಾದಗಳು.
Gold Rate Today : ಯುಗಾದಿ ಹಬ್ಬಕ್ಕೆ ದಾಖಲೆ ಬರೆದ ಚಿನ್ನದ ಬೆಲೆ, ಇಂದಿನ ರೇಟ್ ನೋಡಿ : 05/04/2024
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಭಾರತ ಅಷ್ಟೇ ಅಲ್ಲ ಅಮೆರಿಕದಲ್ಲೂ ಈ ಗ್ರಹಣಕ್ಕೆ ಭಯ ಪಡ್ತಿದಾರೆ ಜನ! ಯಾಕೆ ಗೊತ್ತಾ?
- ಯುಗಾದಿ ಹಬ್ಬಕ್ಕೆ ಚಿನ್ನ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯಲ್ಲಿ ಐತಿಹಾಸಿಕ ದಾಖಲೆ. ಇಂದಿನ ರೇಟ್ ನೋಡಿ
- ಈ ರೈತರಿಗೆ ಮಾತ್ರ ಸಿಗಲಿದೆ ಹಣ ಪಿಎಂ ಕಿಸಾನ್ 17ನೇ ಕಂತಿನ 2000/- ರೂ. ಹಣ, ಬಿಡುಗಡೆಗೆ ದಿನಾಂಕ ನಿಗದಿ.
- ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ, New Ration Card Status Karnataka 2024 @ahara.kar.nic.in
- ಜ್ಯೂಸ್ ಜಾಕಿಂಗ್ ಬಗ್ಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ! ಏನಿದು ಜ್ಯೂಸ್ ಜಾಕಿಂಗ್?
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- ಯುಗಾದಿ ಹಬ್ಬಕ್ಕೆ ಚಿನ್ನ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯಲ್ಲಿ ಐತಿಹಾಸಿಕ ದಾಖಲೆ. ಇಂದಿನ ರೇಟ್ ನೋಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
How can ಐ apply this