ಇದೀಗ ಸಂಚಾರಿಗಳಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಮೈಸೂರು ಮತ್ತು ಬೆಂಗಳೂರು ನಡುವೆ ಪ್ರತಿ 10 ನಿಮಿಷಗಳಿಗೊಮ್ಮೆ ರೈಲು (Train) ಸಂಚಾರ ನಡೆಸುವ ಬಗ್ಗೆ ರೈಲ್ವೆ ಮಂಡಳಿಯು (Railway Board) ನಿರ್ಧಾರ ಕೈಗೊಂಡಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು ಮತ್ತು ಬೆಂಗಳೂರು ನಡುವೆ 10 ನಿಮಿಷಕ್ಕೊಂದು ರೈಲು ಸಂಚಾರ ಆರಂಭಿಸುವ ಉದ್ದೇಶ ( Purpose ) :
ಎಲ್ಲರಿಗೂ ಪ್ರಯಾಣ ಮೂಲಸೌಕರ್ಯವನ್ನು ಒದಗುಸಬೇಕು ಮತ್ತು ಆರ್ಥಿಕ ಬೆಳವಣಿಗೆಯನ್ನು ( Increasing Economic ) ಉತ್ತೇಜಿಸುವಲ್ಲಿ ಇದು ಒಂದು ಮುಖ್ಯ ಪಾತ್ರ ವಹಿಸುತ್ತದೆ. ಅದರ ಜೊತೆಗೆ ಈ ರೈಲಿನ ವ್ಯವಸ್ಥೆಯನ್ನು ಪ್ರಾರಂಭಿಸುವುದರಿಂದ ಉಭಯ ನಗರಗಳ ನಡುವಿನ ಪ್ರಯಾಣಿಕರಿಗೆ ತ್ವರಿತ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವನ್ನು ದೊರಕಿಸುವುದು ಇದರ ಮುಖ್ಯ ಉದ್ದೇಶ ಆಗಿದೆ.
ಪ್ರತಿ 10 ನಿಮಿಷಕ್ಕೆ ರೈಲು ಸಂಚಾರ :
ಮುಖ್ಯವಾಗಿ ಎರಡು ನಗರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಈ ರೈಲು ವ್ಯವಸ್ಥೆಯನ್ನು ಕೈಗೊಳ್ಳಲಾಗಲಿದೆ. ಮೆಟ್ರೋ ಶೈಲಿಯ ( Metro Style ) ರೈಲುಗಳು ಈ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ಟ್ರ್ಯಾಕ್‍ಗಳನ್ನು ನಾಲ್ಕು ಪಟ್ಟು ಹೆಚ್ಚಿಸುವ ವಿಶಾಲ ಯೋಜನೆಯು ಇದಾಗಿದೆ. ಹಾಗೆಯೇ ಸುಧಾರಿತ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಯೋಜನೆ ಪರಿಹರಿಸುತ್ತದೆ. ಹಾಗೆಯೇ ಬಂಗಾರಪೇಟೆ-ಜೋಲಾರಪೇಟೆ, ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ವಿಭಾಗಗಳಲ್ಲಿ ಚತುಷ್ಪಥ ( Four Routes ) ಕಾಮಗಾರಿಗೆ ಅಂತಿಮ ಸ್ಥಳವನ್ನು ಗುರುತಿಸಲಾಗಿದೆ. ಅದನ್ನು ಹೊರತು ಪಡಿಸಿ ಬೆಂಗಳೂರಿನ ಹೊರವಲಯವನ್ನು ಒಳಗೊಂಡಿರುವ ವೃತ್ತಾಕಾರದ ರೈಲುಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಕೂಡ ಅನುಮೋದನೆ ನೀಡಲಾಗಿದೆ.
4 ಲೇನ್ ರೈಲ್ವೆ ಮಾರ್ಗಕ್ಕೆ ( Four Lene Train Route ) ಸಮೀಕ್ಷೆ ಮಾಡಲಾಗಿದೆ :
ಈಗಾಗಲೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಆಗಿದ್ದು, ಇದೀಗ ರೈಲ್ವೆ ಇಲಾಖೆಯು ಈ ಎರಡು ನಗರಗಳ ನಡುವಿನ ಮಾರ್ಗಗಳಲ್ಲಿ ನಾಲ್ಕು ಹಳಿ ನಿರ್ಮಾಣಕ್ಕೆ ಮುಂದಾಗಿದೆ. ಹಾಗಾದರೆ ಇದರಿಂದ ಏನೆಲ್ಲ ಪ್ರಯೋಜನಾ ಆಗಲಿದೆ ಎನ್ನುವ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.
ಈಗಾಗಲೇ ಬೆಂಗಳೂರು-ಮೈಸೂರು ಮಾರ್ಗಗಳಲ್ಲಿ 4 ರೈಲ್ವೆ ಹಳಿ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ. ಪ್ರಯಾಣಿಕರ ದಟ್ಟಣೆ ನಿವಾರಣೆ ಮಾಡುವ ಸಲುವಾಗಿ ಮತ್ತು ಸರಕು ಸಾಗಣಿಕೆ ಹೆಚ್ಚಳದ ಉದ್ದೇಶದಿಂದ ನೈರುತ್ಯ ರೈಲ್ವೆಯು ಬೆಂಗಳೂರು ಸಂಪರ್ಕಿಸುವ ಮಾರ್ಗವೂ ಸೇರಿ ಒಟ್ಟಾರೆ 10 ರೈಲ್ವೆ ಮಾರ್ಗಗಳ ಜೋಡಿ ಹಳಿ ( Two Tracks ) ಹಾಗೂ ಮೈಸೂರು-ಬೆಂಗಳೂರು ಮಾರ್ಗಗಳ 4 ಹಳಿ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಅದಕ್ಕೆ ಅಂತಿಮ ಸ್ಥಳ ಸಮೀಕ್ಷೆಗೆ ನಿರ್ಧರಿಸಿದೆ.
ಯಾವೆಲ್ಲ ಮಾರ್ಗಗಳಲ್ಲಿ ನಾಲ್ಕು ರೈಲು ಹಳಿ ನಿರ್ಮಾಣವಾಗಲಿದೆ ?
ಬೆಂಗಳೂರು-ತುಮಕೂರು (70 ಕಿಲೋ ಮೀಟರ್)
ಬೆಂಗಳೂರು-ಮೈಸೂರು (137 ಕಿಲೋ ಮೀಟರ್)
ಘಟ್ಟ ಪ್ರದೇಶ ಸೇರಿದಂತೆ ಬಂಗಾರಪೇಟೆ-ಜೋಲಾರಪೇಟೈ (72 ಕಿಲೋ ಮೀಟರ್)
ಹುಬ್ಬಳ್ಳಿ-ಹೊಸಪೇಟೆ (143 ಕಿಲೋ ಮೀಟರ್)
ಚಾಮರಾಜನಗರ-ಮೈಸೂರು (60 ಕಿಲೋ ಮೀಟರ್)
ಈ ಮಾರ್ಗವನ್ನು ಜೋಡಿಹಳಿಯಿಂದ 4 ಹಳಿಗೆ ಹೆಚ್ಚಿಸಲು ಆರಂಭ ಮಾಡಲಾಗಿದೆ.
ಒಂದೇ ಹಳಿ ಇರುವ ಮಾರ್ಗಗಳನ್ನು ಜೋಡಿ ಹಳಿ ಮಾಡಲು ನಿರ್ಧಾರ :
ಹೊಸಪೇಟೆ-ವ್ಯಾಸ ಕಾಲೋನಿ (58 ಕಿ.ಮೀ.)
ಹಾಸನ-ಕುಣಿಗಲ್-ಚಿಕ್ಕಬಾಣಾವರ (166 ಕಿ.ಮೀ.)
ಗಿಣಿಗೇರಾ-ರಾಯಚೂರು (166 ಕಿ.ಮೀ.)
ವ್ಯಾಸ ಕಾಲೋನಿ-ಕೊಟ್ಟೂರು-ಅಮರಾವತಿ ಕಾಲೋನಿ (196 ಕಿ.ಮೀ.)
ಮಾಲ್ಗೂರು -ಮದಕ್ಷಿರ- ಹಿರಿಯೂರು ಹೊಸ ಮಾರ್ಗದ ಡಬ್ಲಿಂಗ್ (110 ಕಿ.ಮೀ.)
ಗದಗ-ವಾಡಿ (257 ಕಿ.ಮೀ.)
ಈ ಮಾರ್ಗಗಳ ನಡುವೆ ಜೋಡಿಹಳಿ ರೂಪಿಸಲು ಅಂತಿಮ ಸ್ಥಳ ಸಮೀಕ್ಷೆಗೆ ನೈಋತ್ಯ ರೈಲ್ವೆ ಟೆಂಡರ್ ಕರೆದಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
ಈ ರೈಲಿನ ವ್ಯವಸ್ಥೆಯಲ್ಲಿ ಅತ್ಯುತ್ತಮ ಮೂಲಸೌಕರ್ಯ ಒದಗಿಸಲಾಗಿದೆ :
ಮೆಟ್ರೋ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಅತ್ಯತ್ತಮ ಮೂಲಸೌಕರ್ಯ ನೀಡಲಾಗಿದೆ. ಎಲ್ಲಾ ಭಾರತೀಯ ನಗರಗಳಲ್ಲಿನ ಉಪನಗರ ವ್ಯವಸ್ಥೆಗಳು ಭಾರತೀಯ ರೈಲ್ವೇ ನೆಟ್‍ವರ್ಕ್‍ಗೆ ಸಂಯೋಜಿಸಲ್ಪಟ್ಟಿವೆ, ಇದು ಅತ್ಯುತ್ತಮ ಮೂಲಸೌಕರ್ಯ ಬಳಕೆ ಎಂದು ಹೇಳಲಾಗಿದೆ. ಪ್ರಸ್ತುತ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಾಲ್ಕು ಕಾರಿಡಾರ್‍ಗಳನ್ನು ನಿರ್ಮಿಸಲು ಕೆ-ರೈಡ್ ಕಡ್ಡಾಯವಾಗಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಮತ್ತು ಭವಿಷ್ಯದ ಭಾರತೀಯ ರೈಲ್ವೆ ನಡುವಿನ ಸಹಯೋಗದಲ್ಲಿ, ನೈಋತ್ಯ ರೈಲ್ವೆಯ ಉಪಕ್ರಮಗಳೊಂದಿಗೆ ಬೆಂಗಳೂರು ನಗರ ಮತ್ತು ಉಪಗ್ರಹ ಪಟ್ಟಣಗಳ ನಡುವೆ ಪ್ರಯಾಣಿಕರ ಸಂಚಾರ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸುವ ನನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.