Nag Panchami 2024: ನಾಗರ ಪಂಚಮಿಯಂದು ಹೀಗೆ ಪೂಜೆ ಮಾಡಿ, ಅದೃಷ್ಟವೇ ಬದಲಾಗುತ್ತದೆ.

IMG 20240808 WA0000

ಆಗಸ್ಟ್ 9 ರಂದು ನಡೆಯಲಿದೆ ಈ ಬಾರಿಯ ನಾಗರ ಪಂಚಮಿ(Nagar Panchami). ಮೇಷ, ಸಿಂಹ, ತುಲಾ, ವೃಷಭ, ಕುಂಭ ರಾಶಿಯವರಿಗೆ ಸಿಗಲಿದೆ ರಾಜಯೋಗ.

ನಮ್ಮ ಭಾರತದಲ್ಲಿ (India) ಅದರಲ್ಲೂ ಹಿಂದೂ ಧರ್ಮಗಳಲ್ಲಿ (In Hinduism) ಜನರು ಹಬ್ಬಗಳ ಬಗ್ಗೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆಷಾಢ ಕಳೆದು ಶ್ರಾವಣ ಮಾಸ ಆರಂಭವಾದಾಗ ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದಲ್ಲಿ ಮುಂಬರುವ ಹಬ್ಬಗಳಿಗೆ ಮುನ್ನುಡಿಯನ್ನಡುತ್ತದೆ.ಈ ಹಬ್ಬವನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಪ್ರತಿವರ್ಷವೂ ಸಹ ನಾಗರಪಂಚಮಿ ಹಬ್ಬವನ್ನು ಬಹಳ ಉತ್ಸಾಹಕತೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದಂದು ನಾಗದೇವರನ್ನು ಪೂಜಿಸುವ ಸಾಂಪ್ರದಾಯವಿದ್ದು, ಹಾವುಗಳನ್ನು ಪೂಜಿಸುವುದರಿಂದ  ನಾಗಪ್ಪನ ಆಶೀರ್ವಾದ ಸಿಗುವುದರ ಜೊತೆ ಜೊತೆಗೆ ಅವರ ಜಾತಕಗಳಲ್ಲಿ ಇರುವಂತಹ ದೋಷಗಳು ಕೂಡ ದೂರವಾಗುತ್ತವೆ ಎಂಬ ನಂಬಿಕೆ ಇದೆ.ನಾಗಪಂಚಮಿಯ ದಿನದಂದು ಹಾವುಗಳನ್ನು ಪೂಜಿಸುವುದರಿಂದ ರಾಹು-ಕೇತುಗಳ ದುಷ್ಪರಿಣಾಮ ಕಡಿಮೆಯಾಗುತ್ತವೆ. ಇನ್ನು ಜಾತಕದಲ್ಲಿ ಕಾಳ ಸರ್ಪದೋಷ ಇರುವವರಿಗೆ ನಾಗ ಪಂಚಮಿಯ ದಿನ ವಿಶೇಷ ಮಹತ್ವದ್ದು.ಈ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು. ಈ ಹಬ್ಬದಂದು ನಾಗರ ದೇವರ ವಿಗ್ರಹಗಳಿಗೆ ಹಾಲೆರೆದು ಹೂಗಳಿಂದ ಅಲಂಕಾರ ಮಾಡಿ ದೀಪ, ನೈವೇದ್ಯಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಅದರಲ್ಲಿ ಈ ಬಾರಿ ಐದು ರಾಶಿಗಳಿಗೆ ರಾಜಯೋಗವಿದ್ದು, ಆ ರಾಶಿಗಳಿಗೆ ಯಾವೆಲ್ಲ ಯೋಗಗಳು ದೊರೆಯಲಿದೆ ಹಾಗೂ  ಈ ಬಾರಿಯ ನಾಗರಪಂಚಮಿ ಹಬ್ಬ ಯಾವ ದಿನದಂದು ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಹೌದು, ಈ ಬಾರಿಯ ನಾಗರ ಪಂಚಮಿಯಲ್ಲಿ ಗ್ರಹಗಳು ಅದ್ಭುತವಾಗಿ ಸೇರಲಿದ್ದು,ಗ್ರಹಗಳ ಶುಭ ಸ್ಥಾನಗಳ ನಡುವೆ, ಒಟ್ಟಾರೆಯಾಗಿ 5 ರಾಶಿಗಳ (pile) ಜನರಿಗೆ ಲಾಭ ಮತ್ತು ಪ್ರಗತಿಯನ್ನು ನೀಡುವ ಜೊತೆಗೆ ಕೆಲವರ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಈ ಹಬ್ಬದಂದು ಮನೆಯ ಬಾಗಿಲ ಬಳಿ ಗೋವಿನ ಸಗಣಿ, ಸಿಂಧೂರ ಮತ್ತು ಬೇವಿನ ಸೊಪ್ಪಿನಿಂದ ಹಾವಿನ ಆಕಾರವನ್ನು ಮಾಡುತ್ತಾರೆ.ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಕಾಲ ಸರ್ಪದೋಷ ನಿವಾರಣೆಯಾಗಲಿದೆ.

ಈ ಬಾರಿ ನಾಗರ ಪಂಚಮಿ ಯಾವ ದಿನದಂದು ಬರಲಿದೆ?

ಈ ವರ್ಷದ ನಾಗರ ಪಂಚಮಿ ಶುಕ್ರವಾರ ಅಂದರೆ ಆಗಸ್ಟ್ (August) 9ರಂದು ಆಚರಿಸಲಾಗುತ್ತಿದೆ. ಕ್ಯಾಲೆಂಡರ್ (Calendar) ಪ್ರಕಾರ, 2024 ರಲ್ಲಿ ನಾಗ ಪಂಚಮಿ ತಿಥಿ ಆಗಸ್ಟ್ 9 ರಂದು ಮಧ್ಯರಾತ್ರಿ 12:36 ಕ್ಕೆ ಪ್ರಾರಂಭವಾಗಲಿದೆ, ಇದು ಆಗಸ್ಟ್ 10 ರಂದು ಬೆಳಿಗ್ಗೆ 3:14 ಕ್ಕೆ ಕೊನೆಗೊಳ್ಳುತ್ತದೆ. ನಾಗರ ಪಂಚಮಿಯದಿನದೊಂದು ಶುಕ್ರ ಮತ್ತು ಬುಧ ಒಟ್ಟಿಗೆ ಲಕ್ಷ್ಮೀ ನಾರಾಯಣ ಯೋಗವನ್ನು ರೂಪಿಸುತ್ತಿದ್ದಾರೆ ಹಾಗೂ ಈ ಬಾರಿಯ ಸಿದ್ಧಿ ಯೋಗ ಮತ್ತು ಸಧ್ಯ ಯೋಗವೂ ಜಾರಿಯಲ್ಲಿದೆ. ಶನಿ ದೇವ ತನ್ನ ರಾಶಿಚಕ್ರ ಚಿಹ್ನೆಯಾದ ಕುಂಭದಲ್ಲಿ ಸಂಕ್ರಮಿಸುತ್ತಿರುವಾಗ ಶಶ ರಾಜಯೋಗವನ್ನು ರೂಪಿಸುತ್ತಾನೆ. ಗ್ರಹಗಳ ಅತ್ಯಂತ ಮಂಗಳಕರ ಸಂಯೋಜನೆಯ ನಡುವೆ, ನಾಗರ ಪಂಚಮಿಯ ಈ ಹಬ್ಬವು ಕೆಲವು ರಾಶಿಗಳ ಜೀವನದಲ್ಲಿ ಮಂಗಳಕರವಾಗಿ ಹಾಗೂ ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಇನ್ನು ಪೂಜೆ ಮಾಡಲು 3 ಗಂಟೆಗಳ ಕಾಲಾವಕಾಶವಿರುತ್ತದೆ. ಅಂದರೆ ಬೆಳಿಗ್ಗೆ 5 ರಿಂದ 8 ರವರೆಗೆ ಪೂಜೆಗೆ ಶುಭ ಮುಹೂರ್ತವಿರುತ್ತದೆ. ನಾಗ ದೇವರನ್ನು ಪೂಜಿಸುವುದರಿಂದ ಎಲ್ಲಾ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿನ ಪರಿಹಾರವನ್ನು ದೊರಕಿಸಿಕೊಳ್ಳಬಹುದು.

ಒಟ್ಟಾರಿಯಾಗಿ ಈ ಬಾರಿ ಮೇಷ, ಸಿಂಹ, ತುಲಾ, ವೃಷಭ, ಕುಂಭ ರಾಶಿಯವರಿಗೆ ರಾಜಯೋಗ ಸಿಗಲಿದೆ?

ಕುಂಭ ರಾಶಿ (Aquarius)

ಈ ಬಾರಿ ಕುಂಭ ರಾಶಿಯವರಿಗೆ ಬಹಳಷ್ಟು ಅನುಕೂಲವಾಗಲಿದ್ದು, ಸಹೋದ್ಯೋಗಿಗಳಿಂದ ಉದ್ಯೋಗಕ್ಕೆ ಸಹಕಾರ ಸಿಗಲಿದೆ. ಹಾಗೂ ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ನಿಮ್ಮ ಮೇಲಧಿಕಾರಿಗಳು ನಿಮನ್ನು ಹೋಗಳುತ್ತಾರೆ. ಇದರಿಂದ ನಿಮ್ಮ  ಗೌರವ ಹೆಚ್ಚಾಗುವ ಜೊತೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಹಳಷ್ಟು ಹಣ ಪಡೆಯಬಹುದು. ಈ ರಾಶಿಯವರು ಹೊಸ ಕೆಲಸವನ್ನು ಪ್ರಾರಂಭಿಸುವ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಕಾಣಬಹುದು.

ಮೇಷ ರಾಶಿ (Aries)

ಈ ಬಾರಿ ಕುಂಭ ರಾಶಿಯವರಿಗೂ ಕೂಡ ಬಹಳಷ್ಟು ಅನುಕೂಲವಾಗಲಿದ್ದು, ಬಹಳಷ್ಟು ಉದ್ಯೋಗವಕಾಶ ಗಳು ಅವರನ್ನು ಅರಸಿ ಬರಲಿವೆ.ಇವರನ್ನು ಕಾಡುತ್ತಿದ್ದ ಎಲ್ಲಾ ಸಮಸ್ಯೆಗಳು ದೂರವಾಗಿ ಕೋರ್ಟ್ ಕೇಸ್ ಗಳಲ್ಲಿ ಕಷ್ಟ ಪಡುತ್ತಿದ್ದವರಿಗೆ ಯಶಸ್ಸ ಸಿಗಲಿದೆ. ಒಂದೇ ಬಾರಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆದುಕೊಂಡು ಸಾಕಷ್ಟು ಹಣವನ್ನು ಘಳಿಸುತ್ತೀರ.

ಸಿಂಹ ರಾಶಿ (Leo)

ಸಿಂಹ ರಾಶಿಯವರಿಗೆ ಅದೃಷ್ಟ ಎನ್ನುವುದು ತಂಡವವಾಡುತ್ತಿರುತ್ತದೆ ಆದ್ದರಿಂದ ಮಾಡುವ ಎಲ್ಲಾ ಕೆಲಸದಲ್ಲೂ ಲಾಭ ಇರುತ್ತದೆ. ಮಕ್ಕಳ ಜೊತೆ ಸಂಬಂಧ ಸರಿ ಹೋಗಿ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ರಾಶಿಯವರಿಗೆ ಐಷಾರಾಮಿಗಳು ಹೆಚ್ಚಾಗಿ ಜೀವನದಲ್ಲಿ ಬಹಳಷ್ಟು ಸಂತೋಷದಿಂದ ಇರುತ್ತಾರೆ.

ತುಲಾ ರಾಶಿ (Libra)

ತುಲಾ ರಾಶಿಯವರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ನಂತರ ಅವರಿಗೆ ರಾಜಯೋಗ ಸಿಗಲಿದ್ದು, ಅವರು ಮಾಡುತ್ತಿದ್ದಂತಹ ವ್ಯಾಪಾರಗಳಲ್ಲಿ ಪಾಲುದಾರರೊಂದಿಗೆ ಅವರು ಕೆಲವು ಹೊಸ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ. ನಾಗರ ಪಂಚಮಿಯ ದಿನ ತುಲಾ ರಾಶಿಯವರಿಗೆ ಅಪಾರ ಸಂಪತ್ತು ದೊರೆಯುವ ಜೊತೆಯಲ್ಲಿ ಹೆಚ್ಚಿನ ಸಮೃದ್ಧಿ ದೊರೆತು ಜೀವನದಲ್ಲಿ ಅವರು ಸಂತೋಷವಾಗಿರುತ್ತಾರೆ.

ವೃಷಭ ರಾಶಿ (Taurus)

ಇನ್ನು ವೃಷಭ ರಾಶಿಯವರಿಗೂ ಕೂಡ ನಾಗರ ಪಂಚಮಿಯದಿನದೊಂದು ರಾಜಯೋಗವಿದ್ದು ಹಾಗೂ ಪ್ರವೃತ್ತಿಯಲ್ಲಿ ಅಪಾರ ಸಾಧನೆಯನ್ನು ಮಾಡಲಿದ್ದಾರೆ. ಅದರಲ್ಲೂ ಅವರ ವೃತ್ತಿಜೀವನವು ಇಲ್ಲಿಂದ ಹೊಸ ದಿಕ್ಕನ್ನು ತೆಗೆದುಕೊಳ್ಳುತ್ತದೆ ಮತ್ತು ಯಶಸ್ಸುಸಿಗಲು ಪ್ರಾರಂಭವಾಗುತ್ತದೆ. ವ್ಯವಹಾರದ ಜೊತೆಯಲ್ಲಿ ಕುಟುಂಬದಲ್ಲಿ ಬಹಳ ಹರ್ಷದಾಯಕ ವಾತಾವರಣ ಸೃಷ್ಟಿಯಾಗಲಿದೆ. ಒಟ್ಟಾರೆಯಾಗಿ ಈ ರಾಶಿಯವರು ಕಠಿಣ ಪರಿಶ್ರಮಗಳಿಂದ ಹೊರಬಂದು ಯಶಸ್ವಿಯಾಗುವ ಜೊತೆಯಲ್ಲಿ ಲಾಭವನ್ನು ಘಳಿಸುತ್ತಾರೆ.

ನಾಗರ ಪಂಚಮಿಯ ಪೂಜೆಯಲ್ಲಿ ಯಾವೆಲ್ಲ ಪೂಜಾ ಸಾಮಗ್ರಿಗಳನ್ನು ಬಳಸಬೇಕು :

ನಾಗರ ಪಂಚಮಿಯ ಪೂಜೆಯಲ್ಲಿ ಗೋವಿನ ಸಗಣಿ, ಕೆಂಪು ಮಣ್ಣು, ಬೆಳ್ಳಿ, ಮರ ಅಥವಾ ಕಲ್ಲಿನಿಂದ ಮಾಡಿದ ಹಾವಿನ ಚಿತ್ರ ಅಥವಾ ವಿಗ್ರಹ ಅಥವಾ ಹಾವಿನ ಚಿತ್ರದ ಜೊತೆಯಲ್ಲಿ ಹಾಲು , ಸಿಹಿತಿಂಡಿಗಳು, ಹಣ್ಣುಗಳು, ಹೂವುಗಳು, ಕಾಳುಗಳು, ಅರಿಶಿನ, ಕರ್ಪೂರ, ಮೊಳಕೆಯೊಡೆದ ಧಾನ್ಯಗಳು, ಅಗರಬತ್ತಿಗಳು ಈ ರೀತಿಯ ವಸ್ತುಗಳನ್ನು ಬಳಸಿ ಪೂಜೆ ಯಶಸ್ವಿಯಾಗುವಂತೆ ಮಾಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿರುತ್ತದೆ.

ಪಿತೃ ದೋಷ ಹಾಗೂ ಆರ್ಥಿಕ ಲಾಭಕ್ಕಾಗಿ ಏನು ಮಾಡಬೇಕು:?

ಈ ದಿನದೊಂದು ಶ್ರೀಗಂಧವನ್ನು ಶಿವನಿಗೆ ಅರ್ಪಿಸಿ, ಹಣೆಯ ಮೇಲೆ ತಿಲಕವನ್ನು ಹಚ್ಚಬೇಕು ಹಾಗೂ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಕರ್ಪೂರ ಹಚ್ಚಬೇಕು. ಹೀಗೆ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಹಸುವಿನ ಸಗಣಿ ಅಥವಾ ಜೇಡಿಮಣ್ಣಿನಿಂದ ಹಾವಿನ ಆಕಾರವನ್ನು ಮಾಡಿ ಅದನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿವುದರಿಂದ. ಆರ್ಥಿಕ ಲಾಭಗಳ ಜೊತೆಗೆ ಪಿತೃಗಳ ಆಶೀರ್ವಾದವೂ ದೊರೆಯುತ್ತದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!