ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಏರಿಕೆ ಆಗಲಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನು ಕರ್ನಾಟಕ ಸರ್ಕಾರ ಘೋಷಿಸಿದೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತೇವೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಂದಿನಿ ಹಾಲಿಗೆ ಲೀಟರ್ ಗೆ ರೂ.3 ಹೆಚ್ಚಳ :
ಕರ್ನಾಟಕ ಕ್ಯಾಬಿನೆಟ್, ಆಗಸ್ಟ್ 1 ರಿಂದ ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ನಿರ್ಧರಿಸಿದೆ. ನಂದಿನಿ ಎಂಬುದು ಕರ್ನಾಟಕ ಹಾಲು ಒಕ್ಕೂಟದ(KMF) ಉತ್ಪನ್ನಗಳ ಬ್ರಾಂಡ್ ಹೆಸರು ಆಗಿದೆ. ಇನ್ನೂ ಈ ನಂದಿನಿ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಏರಿಕೆ ಆಗಿದೆ. ಇದನ್ನು ಹಾಲು ಉತ್ಪಾದಕರ ಬೇಡಿಕೆಗಳನ್ನು ಪರಿಗಣಿಸಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
39 ರೂ.ಗಳ ಬೆಲೆಯ ಹಾಲು (ಟೋನ್ಡ್) ಲೀಟರ್‌ಗೆ 42 ರೂ.ಗೆ ಮಾರಾಟವಾಗಲಿದೆ. ಉಳಿದಂತೆ ಲೀಟರ್‌ಗೆ 54 ರಿಂದ 56 ರೂ.ವರೆಗೆ ಮಾರಾಟವಾಗುತ್ತದೆ. ತಮಿಳುನಾಡಿನಲ್ಲಿ ಲೀಟರ್‌ಗೆ 44 ರೂ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
ಇದಕ್ಕೆ ಮುಖ್ಯಮಂತ್ರಿಗಳ ಮಾತಿಗೆ ಧ್ವನಿಗೂಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಾಲು ಉತ್ಪಾದಕರು ಮತ್ತು ರೈತರನ್ನು ಬೆಂಬಲಿಸಲು ಬೆಲೆ ಏರಿಕೆ ಅಗತ್ಯ ಎಂದು ಹೇಳಿದರು. ಮತ್ತು “ನಾವು ರೈತರಿಗೆ [ಹಾಲು ಉತ್ಪಾದಕರಿಗೆ] ಹಣವನ್ನು ನೀಡಬೇಕು. ಇಂದು ಇಡೀ ದೇಶದಲ್ಲಿ [ಟೋನ್ಡ್ ಹಾಲು] ಪ್ರತಿ ಲೀಟರ್‌ಗೆ ₹56 ಇದೆ. ನಮ್ಮ ರಾಜ್ಯದಲ್ಲಿ ಜನರು ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ. ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರವನ್ನು ಮೂರು ರೂಪಾಯಿಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಒಟ್ಟಾರೆ ರೈತರಿಗೆ ಸಹಾಯ ಆಗಬೇಕು, ನಮ್ಮ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕೆಎಂಎಫ್ ಹಾಲಿನ ದರ ಹೆಚ್ಚಳ (ಆಗಸ್ಟ್ 1 ರಿಂದ ಜಾರಿ)
ಹಾಲಿನ ಉತ್ಪನ್ನ | ಈಗಿನ ದರ (ರೂಪಾಯಿ) | ಪರಿಷ್ಕೃತ ದರ (ರೂಪಾಯಿ) |
ಟೋನ್ಡ್ ಹಾಲು | 39 | 42 |
ಹೋಮೋಜಿನೈಸ್ಡ್ ಟೋನ್ಡ್ ಹಾಲು | 40 | 43 |
ಸ್ಪೆಷಲ್ ಹಾಲು | 45 | 48 |
ಹೋಮೋಜಿನೈಸ್ಡ್ ಸ್ಟಾಂಡರ್ಡೈಸ್ಡ್ ಹಾಲು | 46 | 49 |
ಸಂತೃಪ್ತಿ ಹಾಲು | 52 | 55 |
ಡಬಲ್ ಟೋನ್ಡ್ ಹಾಲು | 38 | 41 |
ನಂದಿನಿ ಹಾಲಿನ ದರ ಹೆಚ್ಚಳ; ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ
ಪ್ರಸ್ತುತ ಕೆಎಂಎಫ್ ಹಾಲಿನ ದರ ಹೆಚ್ಚಳದ ಬಗ್ಗೆ ಮಾತ್ರ ಪ್ರಸ್ತಾವನೆ ಮಾಡಲಾಗಿದೆ. ಸಭೆಯ ಬಳಿಕವೂ ಎಲ್ಲಾ ಮಾದರಿಗಳ ಹಾಲು ದರ ಹೆಚ್ಚಳ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ಆದರೆ, ಮೊಸರು ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳ ದರ ಹೆಚ್ಚಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ, ಹಾಲು ಹೊರತು ಪಡಿಸಿ ಇತರೆ ಉತ್ಪನ್ನ ದರ ಹೆಚ್ಚಳ ಅನುಮಾನ ಎನ್ನಲಾಗಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಇಂತಹ ಉತ್ತಮವಾದ ಮಾಹಿತಿ ಕುರಿತು ಸುದ್ದಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ