ಈ ವರದಿಯಲ್ಲಿ ಭಾರತೀಯ ನೌಕಾಪಡೆಯಲ್ಲಿ ಕ್ರೀಡಾ ಕೋಟಾದಡಿ ನಾವಿಕರ ನೇಮಕಾತಿ(Recruitment of sailors under sports quota) ಕುರಿತು ತಿಲಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ನೌಕಾಪಡೆಯಲ್ಲಿ ಕ್ರೀಡಾ ಕೋಟಾದಡಿ ನಾವಿಕರ ನೇಮಕಾತಿ(Recruitment of Sailors under Sports Quota in Indian Navy): ಅವಲೋಕನ
ಭಾರತೀಯ ನೌಕಾಪಡೆ (Indian Navy) ಕ್ರೀಡಾ ಕೋಟಾದಡಿ 2024ನೇ ಸಾಲಿನ 2ನೇ ಬ್ಯಾಚ್‌ಗಾಗಿ ನಾವಿಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಶೈಕ್ಷಣಿಕ ಅರ್ಹತೆ ಹಾಗೂ ಇತರೆ ಮಾಹಿತಿಗಳನ್ನು ತಿಳಿದು, ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ಮಾಹಿತಿ:
ಭಾರತೀಯ ನೌಕಾಪಡೆ, ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅವಿವಾಹಿತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪುರುಷ ಅಭ್ಯರ್ಥಿಗಳ ಅರ್ಹ ಕ್ರೀಡೆಗಳು: ಅಥ್ಲೆಟಿಕ್ಸ್, ಅಕ್ವಾಟಿಕ್ಸ್(Aquatics), ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಕ್ರಿಕೆಟ್, ಈಕ್ವೆಸ್ಟ್ರಿಯನ್(Equestrian), ಫುಟ್‌ಬಾಲ್, ಫೆನ್ಸಿಂಗ್, ಆರ್ಟಿಸ್ಟಿಕ್, ಹ್ಯಾಂಡ್‌ಬಾಲ್, ಹಾಕಿ, ಕಬ್ಬಡಿ, ವಾಲಿಬಾಲ್, ವೇಟ್‌ಲಿಫ್ಟಿಂಗ್(Weightlifting), ವ್ರೆಸ್ಲಿಂಗ್(Wrestling), ಸ್ಕ್ವಾಷ್(Squash), ಗಾಲ್ಫ್, ಟೆನ್ನಿಸ್, ಕಾಯಾಕಿಂಗ್ ಮತ್ತು ಕ್ಯಾನೋಯಿಂಗ್, ರೋಯಿಂಗ್, ಶೂಟಿಂಗ್ ಮತ್ತು ಸ್ಕೈಲಿಂಗ್.
ಮಹಿಳಾ ಅಭ್ಯರ್ಥಿಗಳ ಅರ್ಹ ಕ್ರೀಡೆಗಳು: ಅಥ್ಲೆಟಿಕ್ಸ್, ಅಕ್ವಾಟಿಕ್ಸ್, ಆರ್ಟಿಸ್ಟಿಕ್, ಜಿಮ್ನಾಸ್ಟಿಕ್ಸ್, ಬಾಕ್ಸಿಂಗ್, ಫೆನ್ಸಿಂಗ್, ವ್ರೆಸ್ಲಿಂಗ್, ವೇಟ್‌ಲಿಫ್ಟಿಂಗ್, ಕಾಯಾಕಿಂಗ್(Kayaking) ಮತ್ತು ಕ್ಯಾನೋಯಿಂಗ್(Canoeing), ರೋಯಿಂಗ್, ಶೂಟಿಂಗ್ ಮತ್ತು ಸೈಲಿಂಗ್.
ಪ್ರವೇಶಾತಿ ಮಾದರಿ:
ನೇರ ಪ್ರವೇಶ ಸಣ್ಣ ಅಧಿಕಾರಿ (DE PO) ಕ್ರೀಡಾ ಪ್ರವೇಶ.
ನೇರ ಪ್ರವೇಶ ಮುಖ್ಯ ಸಣ್ಣ ಅಧಿಕಾರಿ (DE CPO) ಕ್ರೀಡಾ ಪ್ರವೇಶ.
ವಯಸ್ಸಿನ ಅರ್ಹತೆ: 01-11-1999 ರಿಂದ 30-04-2007 ರ ನಡುವೆ ಜನಿಸಿದವರಾಗಿರಬೇಕು (ಎರಡು ದಿನಾಂಕಗಳು ಒಳಗೊಂಡಂತೆ).
ಶೈಕ್ಷಣಿಕ ಅರ್ಹತೆ: ಕನಿಷ್ಠ 10+2 ಪಾಸಾಗಿರಬೇಕು.
ಸೂಚನೆಗಳು:
ಶೂಟಿಂಗ್: ಇತ್ತೀಚಿನ ರಾಷ್ಟ್ರೀಯ ಶ್ರೇಯಾಂಕದ ಪ್ರಕಾರ ಒಲಿಂಪಿಕ್ ಈವೆಂಟ್‌ಗಳಲ್ಲಿ ಅಗ್ರ 50 ಕ್ರೀಡಾಪಟುಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ನೌಕಾಯಾನ: ಬೋಟ್‌ನ ಐಎಲ್‌ಸಿಎ? ಐಎಲ್‌ಸಿಎ6, 49ಇಆರ್ ಮತ್ತು 49ಇಆರ್ (ಎಫ್‌ಎಕ್ಸ್) ತರಗತಿಗಳಲ್ಲಿ ಅಂತಾರಾಷ್ಟ್ರೀಯ / ಹಿರಿಯ ರಾಷ್ಟ್ರೀಯ ಪದಕ ವಿಜೇತರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
ಸಾಮಾನ್ಯ ಅಭ್ಯರ್ಥಿಗಳು: 20-07-2024
ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪದ ಅಭ್ಯರ್ಥಿಗಳು: 25-07-2024
ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ: www.joinindiannavy.gov.in
ಅರ್ಜಿಯ ಹಾರ್ಡ್ ಕಾಪಿ ಸಲ್ಲಿಸಬೇಕಾದ ವಿಳಾಸ:
ಕಾರ್ಯದರ್ಶಿ, ಭಾರತೀಯ ನೌಕಾಪಡೆಯ ಕ್ರೀಡಾ ನಿಯಂತ್ರಣ ಮಂಡಳಿ, ನೌಕಾಪಡೆಯ ಪ್ರಧಾನ ಕಚೇರಿ, ರಕ್ಷಣಾ ಸಚಿವಾಲಯ, 2ನೇ ಮಹಡಿ, ಚಾಣಕ್ಯ ಭವನ, ಚಾಣಕ್ಯ ಪುರಿ, ನವದೆಹಲಿ – 110021.
ಭಾರತೀಯ ನೌಕಾಪಡೆಯ ಕ್ರೀಡಾ ಪ್ರಮಾಣ ಪತ್ರಗಳ ಪ್ರಕಾರ ಅರ್ಜಿ ಸಲ್ಲಿಸುವುದರಲ್ಲಿ ಆಸಕ್ತಿ ಇರುವ ಕ್ರೀಡಾಪಟುಗಳು ತಮ್ಮ ಅರ್ಜಿಯನ್ನು ಸಲ್ಲಿಸಿ, ದೇಶದ ಸೇವೆಗೆ ಅವಕಾಶವನ್ನು ಪಡೆಯಲು ಸೂಚಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.