ಹೊಸ ಆಟೋ: ಒಂದು ರೂಪಾಯಿ ಖರ್ಚಿಲ್ಲದೆ 100 ಕಿಲೋಮೀಟರ್ ಓಡುವ ಆಟೋ!! ಸೂಪರ್ ಆಟೋ 

dc1e2aa3 fef6 4137 9561 a7fee2115fc1 Untitled 1

ಬೈಕ್ ಬೆಲೆಯಲ್ಲಿ ಆಟೋ ಖರೀದಿಸುವವರಿಗೆ ಗುಡ್ ನ್ಯೂಸ್, 1 ರೂ. ಖರ್ಚಿಲ್ಲದೆ 100 ಕಿ.ಮೀ ಓಡಲಿದೆ ಟಾಂಗಾ ಬಟರ್‌ಫ್ಲೈ….!

ಭಾರತದಲ್ಲಿ ಜನಸಂಖ್ಯೆ ಹೆಚ್ಚಾದಂತೆ  ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಭಾರತದಲ್ಲಿರುವ ಪ್ರತಿಯೊಬ್ಬರೂ ಕೂಡ ತಮ್ಮದೇ ಆದ ಸ್ವಂತ ವಾಹನಗಳನ್ನು ಹೊಂದಿದ್ದಾರೆ. ಇಂದು ಮಾರುಕಟ್ಟೆಗೆ ವಿವಿಧ ರೀತಿಯ ಹೊಚ್ಚ ಹೊಸ ತಂತ್ರಜ್ಞಾನ (Technology) ಅಳವಡಿತ ವಾಹನಗಳನ್ನು ಪರಿಚಯಿಸಲಾಗುತ್ತಿದೆ. ಹಲವಾರು ಕಂಪನಿಗಳು ಅದೆಷ್ಟು ವಾಹನಗಳನ್ನು ದಿನೇ ದಿನೇ ಆವಿಷ್ಕಾರ ಮಾಡುತ್ತಲೇ ಇದ್ದಾರೆ.

ಇಂದು ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಾಗಿ ಎಲೆಕ್ಟ್ರಿಕ್ ಚಾಲಿತ (Electric vehicles) ವಾಹನಗಳೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗೆ ಜನರು ಕೂಡ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಮಾರು ಹೋಗುತ್ತಿದ್ದಾರೆ. ಎಲೆಕ್ಟ್ರಿಕ್ ಕಂಪನಿಗಳು ಇಂದು ದ್ವಿಚಕ್ರವಾಹಗಳಿಂದ ಹಿಡಿದು ನಾಲ್ಕು ಚಕ್ರ ವಾಹನಗಳ ವರೆಗೆ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಹಾಗೂ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಝೀಲಿಯೋ ಇಬೈಕ್ಸ್ (ZELIO Ebikes) ತನ್ನ ಮೊದಲ ಇ-ರಿಕ್ಷಾ ಮಾದರಿಗಳಾದ ಟಾಂಗಾ ಬಟರ್‌ಫ್ಲೈ (Tanga Butterfly) ಮತ್ತು ಟಾಂಗಾ ಎಸ್‌ಎಸ್ (Tanga SS) ಎಂಬ ತ್ರಿ-ಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Zelio Ebikes launches two e rickshaws Tanga Butterfly and Tanga SS
ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಟಾಂಗಾ ಬಟರ್‌ಫ್ಲೈ (Tanga Butterfly) ಮತ್ತು ಟಾಂಗಾ ಎಸ್‌ಎಸ್ (Tanga SS) :

ಕಂಪನಿಯು ಬಿಡುಗಡೆ ಮಾಡಿರುವ ಈ ಎರಡು ಹೊಸ ಆಟೋಗಳನ್ನು ನಗರ ಮತ್ತು ಅರೆ-ನಗರ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಈ ಮಾದರಿಗಳನ್ನು ಕಳೆದ ತಿಂಗಳು ದೆಹಲಿಯಲ್ಲಿ ನಡೆದ EV ಇಂಡಿಯಾ ಎಕ್ಸ್‌ಪೋ 2024 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈ ಎರಡೂ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಿದ್ದು ಕಂಪನಿಯು ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಎರಡು ವಾಹನಗಳ ಬೆಲೆಗಳ ವಿವರ ಹೀಗಿದೆ :

ಟಾಂಗಾ ಬಟರ್‌ಫ್ಲೈ ರೂ.1,45,000 (ಎಕ್ಸ್‌ ಶೋರೂಂ) ಮತ್ತು ಟಾಂಗಾ SS ರೂ. 1,40,000 (ಎಕ್ಸ್-ಶೋರೂಮ್) ಬೆಲೆಗಳನ್ನು ಹೊಂದಿವೆ. ಟಾಂಗಾ ಬಟರ್‌ಫ್ಲೈ ವಾಹನವನ್ನು ಮೈಲ್ಡ್ ಸ್ಟೀಲ್‌ನೊಂದಿಗೆ ನಿರ್ಮಿಸಲಾಗಿದೆ. ಹಾಗೆಯೇ ಟಾಂಗಾ SS ಮಾದರಿಯನ್ನು ಸ್ಟೇನ್‌ಲೆಸ್ ಸ್ಟೀಲ್‌ನೊಂದಿಗೆ ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಎರಡೂ ಮಾದರಿಯ ವಾಹನಗಳ ಕಾರ್ಯ ಕ್ಷಮತೆ :

ಎರಡೂ ಮಾದರಿಯ ವಾಹನಗಳು 30 ಕಿ.ಮೀ / ಗಂ ವೇಗವನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 100 ಕಿಮೀಗಳ ಪ್ರಭಾವಶಾಲಿ ರೇಂಜ್ ನೀಡುತ್ತವೆ. 1200W ಮೋಟಾರ್‌ನಿಂದ ಚಾಲಿತವಾಗಿದ್ದು, ಅವುಗಳು 48/60V 135Ah ಈಸ್ಟ್‌ಮನ್ ಬ್ಯಾಟರಿ (Eastman battery) ಯಲ್ಲಿ 8 ಗಂಟೆಗಳ ಚಾರ್ಜಿಂಗ್ ಸಮಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಚಾರ್ಜಿಂಗ್‌ಗಾಗಿ ವೋಲ್ಟೇಜ್ ಏರಿಳಿತದ ರಕ್ಷಣೆಯನ್ನು ಒಳಗೊಂಡಿರುವ SMPS ಚಾರ್ಜರ್‌ನೊಂದಿಗೆ ಲಭ್ಯವಿದೆ.

ಟಾಂಗಾ ಬಟರ್‌ಫ್ಲೈ ಮತ್ತು ಟಾಂಗಾ ಎಸ್‌ಎಸ್ ವಿವಿಧ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ :

ಟಾಂಗಾ ಬಟರ್‌ಫ್ಲೈ ರೆಡ್, ಗ್ರೇ, ವೈಟ್, ಸ್ಕೈ ಬ್ಲೂ ಮತ್ತು ಮಿಲಿಟರಿ ಗ್ರೀನ್ ಎಂಬ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಟಾಂಗಾ ಎಸ್‌ಎಸ್ ಬಣ್ಣಗಳ ವಿಷಯಕ್ಕೆ ಬಂದರೆ ಬ್ಲೂ, ರೆಡ್, ಸೀ ಬ್ಲೂ, ಪ್ಯಾರೆಟ್ ಗ್ರೀನ್ ಮತ್ತು ಗ್ರೇ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಎರಡೂ ಮಾದರಿಗಳಿಗೆ ಸಾಮಾನ್ಯ ಪರಿಕರಗಳಲ್ಲಿ ಅಗ್ನಿಶಾಮಕ, ಪ್ರಥಮ ಚಿಕಿತ್ಸಾ ಕಿಟ್, ಟೂಲ್ ಕಿಟ್ ಮತ್ತು ಜ್ಯಾಕ್ ನೀಡಲಾಗುತ್ತದೆ.

ಈ ಎರಡೂ ವಾಹಗಳ ವೈಶಿಷ್ಟ್ಯಗಳ (Features) ವಿವರ ಹೀಗಿದೆ :

ಟಾಂಗಾ ಬಟರ್‌ಫ್ಲೈ ಮತ್ತು ಟಾಂಗಾ SS ಎರಡೂ ವಾಹಗಳು ಸ್ವಲ್ಪ ಮಟ್ಟಿಗೆ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ. ಇವುಗಳು ಸುಧಾರಿತ ಬ್ರೇಕಿಂಗ್ ವ್ಯವಸ್ಥೆಗಳೊಂದಿಗೆ ಬರುತ್ತವೆ, ಮುಂಭಾಗದ ಲಿವರ್-ಚಾಲಿತ ಡ್ರಮ್ ಬ್ರೇಕ್ ಮತ್ತು ಹಿಂಭಾಗದ ಪ್ಯಾಡಲ್-ಚಾಲಿತ ಡ್ರಮ್ ಬ್ರೇಕ್ ಜೊತೆಗೆ ಯಾಂತ್ರಿಕ ಹ್ಯಾಂಡ್ ಲಿವರ್-ಚಾಲಿತ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಸುಗಮ ಸವಾರಿಗಾಗಿ, ಅವುಗಳು ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕರ್‌ಗಳನ್ನು ಮತ್ತು ಹಿಂಭಾಗದಲ್ಲಿ ಲೀಫ್ ಸ್ಪ್ರಿಂಗ್ ಶಾಕರ್‌ಗಳನ್ನು ಹೊಂದಿವೆ.

ಎರಡು ಮಾದರಿಯ ವಾಹನಗಳ ಚಾಸಿಸ್ ಅನ್ನು ಹೆಚ್ಚಿನ ಬಿಗಿತದ ಮೊನೊಕಾಕ್ ಫ್ರೇಮ್‌ (Monocack frame) ನೊಂದಿಗೆ ನಿರ್ಮಿಸಲಾಗಿದೆ :

ಎರಡೂ ಮಾದರಿಗಳು ಟಿವಿಎಸ್-ನಿರ್ಮಿತ 3.75-12 ಎಂಎಂ ಟೈರ್‌ಗಳೊಂದಿಗೆ ಬರುತ್ತವೆ. ಚಾಸಿಸ್ ಅನ್ನು ಹೆಚ್ಚಿನ ಬಿಗಿತದ ಮೊನೊಕಾಕ್ ಫ್ರೇಮ್‌ನೊಂದಿಗೆ ನಿರ್ಮಿಸಲಾಗಿದೆ, ಇದು ಬಾಳಿಕೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. 2030 ಎಂಎಂ ವ್ಹೀಲ್‌ಬೇಸ್, 2690 ಎಂಎಂ ಉದ್ದ, 1000 ಎಂಎಂ ಅಗಲ, 1710 ಎಂಎಂ ಎತ್ತರ, ಮತ್ತು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿವೆ.

ಈ ಎರಡೂ ಮಾದರಿಯ ವಾಹನಗಳ ಇತರ ವೈಶಿಷ್ಟ್ಯಗಳ (Other features) ವಿವರ ಹೀಗಿದೆ :

ಪ್ರಮುಖ ವೈಶಿಷ್ಟ್ಯಗಳ ಶ್ರೇಣಿಯನ್ನು ಹೊಂದಿರುವ ಎರಡೂ ವಾಹನಗಳು, ವೈಪರ್‌ನೊಂದಿಗೆ ಅಗಲವಾದ ಮುಂಭಾಗದ ಗ್ಲಾಸ್, ಕವರ್ ಹೊಂದಿರುವ ಸ್ಟೆಪ್ನಿ, ಹ್ಯಾಂಡಲ್ ಲಾಕ್, ಡಬಲ್ ಸ್ಪೀಕರ್‌ಗಳೊಂದಿಗೆ ಎಫ್‌ಎಂ ರೇಡಿಯೋ, ಡಿಜಿಟಲ್ ಮೀಟರ್, ಸೆಂಟ್ರಲ್ ಲಾಕಿಂಗ್, ಹೆವಿ ಕರ್ಟನ್‌ಗಳು, ಟ್ಯಾಕ್ಸಿ ಲೈಟ್, ಎಲ್‌ಇಡಿ ಕ್ಯಾಬಿನ್ ಲೈಟ್, ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಸೂಚಕಗಳು, ಬಾಟಲ್ ಗಳನ್ನು ಹೊಂದಿವೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!