1.73 ಲಕ್ಷ ಅರ್ಜಿ ವಿಲೇವಾರಿ, ಬಿಪಿಎಲ್ ಕಾರ್ಡ್ (BPL card) ದಾರರಿಗೆ ಗುಡ್ ನ್ಯೂಸ್!
ಇಂದು ಎಲ್ಲಾ ಕೆಲಸಕಾರ್ಯಗಳಿಗೆ ಬಿಪಿಎಲ್ ಕಾರ್ಡ್ ಅಥವಾ ಪಡಿತರ ಚೀಟಿ ಬಹಳ ಮುಖ್ಯವಾಗಿದೆ. ಯಾಕೆಂದರೆ, ಸರ್ಕಾರದ ಯಾವುದೇ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ನ ಉಪಯೋಗ ಬಹಳವಿದೆ. ಬಿಪಿಎಲ್ ಕಾರ್ಡ್ ಅನ್ನು ಮುಖ್ಯ ಗುರುತಿನ ಚೀಟಿಯಾಗಿ ಬಳಸುತ್ತೇವೆ. ಹಾಗೆಯೇ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಅನ್ವಯಿಸಿದ್ದು, ಅವುಗಳ ಉಪಯೋಗವನ್ನು ಬಿಪಿಎಲ್ ಕಾರ್ಡ್ ದಾರರು ಪಡೆಯುತ್ತಿದ್ದಾರೆ. ಈ ಹಿಂದೆ ಬಿಪಿಎಲ್ ಕಾರ್ಡ್ ನ ಅಪ್ಡೇಟ್ (Update) ಕೂಡ ಮಾಡಿಸಲಾಗಿದ್ದು, ಇದೀಗ ಹೊಸ ಬಿಪಿಎಲ್ ಕಾರ್ಡ್ ಗಾಗಿ ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳು ಆದಷ್ಟು ಬೇಗ ವಿಲೇವಾರಿಗೊಳ್ಳಲಿದ್ದು ಕಾರ್ಡುದಾರರ ಕೈಗೆ ಸಿಗಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1.73 ಲಕ್ಷ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ (Application Submission) :
ಈಗಾಗಲೇ ರಾಜ್ಯದಲ್ಲಿ 1.73 ಲಕ್ಷ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ವಿಧಾನ ಪರಿಷತ್‌ಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ಒಟ್ಟು 2.95 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಬಂದಿವೆ. ಇದರಲ್ಲಿ 2.36 ಲಕ್ಷ ಮಂದಿ ಅರ್ಹರಿದ್ದಾರೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದ ಒಂದು ವಾರದೊಳಗೆ ಅಂಥವರಿಗೆ ಆರೋಗ್ಯ ಸೇವೆ ಸಿಗುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿಯ ಪ್ರತಾಪ ಸಿಂಹ ನಾಯಕ್ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ನಲ್ಲಿ ಹಲವಾರು ಎಡವಟ್ಟುಗಳು, ಅವುಗಳನ್ನು ಬಗೆಹರಿಸುವ ಬಗ್ಗೆ ಭರವಸೆ :
ವಿಧಾನಮಂಡಲದ ಅಧಿವೇಶನದಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯರು, ಪ್ರಭಾಕರ ಎಂಬ ಕೂಲಿ ಕಾರ್ಮಿಕ ಯಾವುದೇ ಜಮೀನು ಹೊಂದಿಲ್ಲ. ಬದುಕಿಗೆ ಆಧಾರವಾಗಿದ್ದ ಬಿಪಿಎಲ್ ಕಾರ್ಡ್ ಅನ್ನು ಸರಕಾರ ರದ್ದು ಮಾಡಿದೆ. ಇದಕ್ಕೆ ಕಾರಣ ಮಗಳ ವಿದ್ಯಾಭ್ಯಾಸಕ್ಕಾಗಿ ಆದಾಯ ಪ್ರಮಾಣ ಪತ್ರವನ್ನು ಮಾಡಿಸಲು ಅಧಿಕಾರಿಗಳ ಬಳಿ ಹೋದಾಗ ಅಧಿಕಾರಿಗಳಿಗೆ ಇವರಿಗೆ 4,000 ರೂ. ಆದಾಯ ಎಂದು ನಮೂದಿಸುವ ಬದಲು 4 ಲಕ್ಷ ರೂ. ಎಂದು ಪರಿಗಣಿಸಿ ಪ್ರಮಾಣ ಪತ್ರ ನೀಡಿದ ಹಿನ್ನೆಲೆಯಲ್ಲಿ ಕಾರ್ಡ್ ರದ್ದು ಮಾಡಲಾಗಿದೆ. ಇದು ಸರಕಾರದ (government) ಎಡವಟ್ಟು. ಇದರಿಂದ ಈ ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯದಿಂದ ಸಿಕ್ಕಿಲ್ಲ. ತಕ್ಷಣ ಇವರಿಗೆ ರದ್ದಾಗಿರುವ ಕಾರ್ಡ್ ಅನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ (school children’s) ಮಧ್ಯಾಹ್ನ ಬಿಸಿಯೂಟಕ್ಕೆ ಬಳಸುವ ಅಕ್ಕಿ ಖರೀದಿ ಮಧ್ಯೆ 5.5 ರೂ. ವ್ಯತ್ಯಾಸ :
ವಿಧಾನಮಂಡಲದ ಅಧಿವೇಶನದಲ್ಲಿ (Legislative Session) ಪಡಿತರ ಚೀಟಿಗೆ ನೀಡುವ ಅಕ್ಕಿ ಖರೀದಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟಕ್ಕೆ ಬಳಸುವ ಅಕ್ಕಿ ಖರೀದಿ ಮಧ್ಯೆ 5.5 ರೂ. ವ್ಯತ್ಯಾಸ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ನಡೆದಿದೆ.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಎನ್ ರವಿಕುಮಾರ್ (N kumar), ‘ಶಿಕ್ಷಣ ಇಲಾಖೆಯು ಅಕ್ಷರ ದಾಸೋಹಕ್ಕೆ 1 ಕೆ.ಜಿ ಅಕ್ಕಿಗೆ 29.30 ರೂ. ಕೊಟ್ಟು ಖರೀದಿಸುತ್ತಿದೆ. ಪಡಿತರ ಚೀಟಿಗೆ ನೀಡುವ ಅಕ್ಕಿಯನ್ನು 34.60 ರೂ.ಗೆ ಖರೀದಿಸಲಾಗುತ್ತಿದೆ. ಇದರ ಮಧ್ಯೆ 5.5 ರೂ.ವ್ಯತ್ಯಾವಿದೆ. ಇದು ಹೇಗೆ ಸಾಧ್ಯ? ಅಕ್ಕಿ ಹಣ ಎಲ್ಲಿಗೆ ಹೋಗುತ್ತಿದೆ? ಮಕ್ಕಳು ತಿನ್ನುವ ಅಕ್ಕಿಗೆ ಗುಣಮಟ್ಟತೆ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇದರ ಬಗ್ಗೆ ಮಾತನಾಡಿದ, ಆಹಾರ ಸಚಿವ ಕೆಎಚ್ ಮುನಿಯಪ್ಪ (K.H Muniyappa), “ಅಕ್ಷರ ದಾಸೋಹಕ್ಕೆ ರಾಜ್ಯದ ಟೆಂಡರ್ (tender), ಅನ್ನಭಾಗ್ಯಕ್ಕೆ ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಖರೀದಿ ದರದಲ್ಲಿ ವ್ಯತ್ಯಾಸವಿದೆ. ಕೇಂದ್ರಕ್ಕೆ ಸೇರಿದ ಎರಡು ಸಂಸ್ಥೆಗಳಿಂದಲೇ ಅಕ್ಕಿಯನ್ನು ಪಾರದರ್ಶಕವಾಗಿ ಖರೀದಿ ಮಾಡಲಾಗುತ್ತಿದೆ. ಅನ್ನಭಾಗ್ಯಕ್ಕೆ ಬೇಕಾದ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಕೊಡಲಿಲ್ಲ. ನಂತರ ನಾವು ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಮೂಲಕವೇ ‘ಎ’ ಗ್ರೇಡ್ ರಾ ರೈಸ್ ಖರೀದಿಸಿ ವಿತರಣೆ ಮಾಡುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.