Business Idea: ಇರೋ ಕಮ್ಮಿ ದುಡ್ಡಲ್ಲೇ ಬ್ಯುಸಿನೆಸ್‌ ಸ್ಟಾರ್ಟ್ ಮಾಡಿ , ತಿಂಗಳಿಗೆ 50 ಸಾವಿರ ಲಾಭ ಬರುತ್ತೆ,?

1000346864

ಈ ಬ್ಯುಸಿನೆಸ್(Business) ಮಾಡಿ ತಿಂಗಳಿಗೆ 50 ಸಾವಿರ ಲಾಭ ಪಡೆಯಬಹುದು. ಕಡಿಮೆ ಬಜೆಟ್ ನಲ್ಲಿ (Low budget) ಬಾಟಲ್ ಮರುಬಳಕೆ ವ್ಯಾಪಾರ ಮಾಡಿ ಲಾಭ ಪಡೆಯಿರಿ.

ಬ್ಯುಸಿನೆಸ್ (Business) ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದು ದುಡ್ಡೇ ದೊಡ್ಡಪ್ಪ ಆಗಿರುವುದರಿಂದ ದುಡ್ಡಿಲ್ಲ ಅಂದ್ರೆ ಏನು ಮಾಡೋಕಾಗಲ್ಲ. ಅದರಲ್ಲೂ ನಾವು ಯಾವುದಾದರೂ ವ್ಯಾಪಾರ ಶುರು ಮಾಡುತ್ತೇವೆ ಎಂದರೆ ಲಕ್ಷಗಟ್ಟಲೆ ದುಡ್ಡು ಇರಬೇಕು. ಆದ್ದರಿಂದ ವ್ಯಾಪಾರ ಮಾಡುವ ಆಸೆ ಇದ್ದರೂ ಕೂಡ ಹಣ ಇಲ್ಲ ಎಂಬ ಒಂದೇ ಕಾರಣಕ್ಕೆ ಬ್ಯುಸಿನೆಸ್‌‌ ಶುರು ಮಾಡುವ ಯೋಚನೆಯನ್ನು ಬಿಟ್ಟಿರುತ್ತಾರೆ. ಅಂಥವರಿಗೆ ಇಲ್ಲೊಂದು ಕಡಿಮೆ ಹೂಡಿಕೆಯಲ್ಲಿ ವ್ಯಾಪಾರ ಮಾಡುವ ಮಾರ್ಗವಿದೆ. ಈ ವ್ಯಾಪಾರವನ್ನು ಶುರುಮಾಡಿ ತಿಂಗಳಿಗೆ 50000 ಸಾವಿರ ಲಾಭ ಪಡೆಯಬಹುದು. ಕಡಿಮೆ ಬಂಡವಾಳದಲ್ಲಿ ಈ ರೀತಿಯ ಸಂಪಾದನೆಯನ್ನು ಮಾಡುವುದು ಹೇಗೆ? ಅದು ಯಾವ ವ್ಯಾಪಾರ ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ವ್ಯಪಾರ ಮಾಡುವುದರಿಂದ ನಾವು ತಿಂಗಳಿಗೆ 50000 ಸಾವಿರಾ ಲಾಭ ಪಡೆಯಬಹುದು. ಸಾಮಾನ್ಯವಾಗಿ ನಾವು ತಲೆ ಉಪಯೋಗಿಸಿ ಬ್ಯುಸಿನೆಸ್ ಶುರುಮಾಡಬೇಕು ಎಂದು ಅಂದುಕೊಳ್ಳುತ್ತೀವಿ. ಆದರೆ ಎಲ್ಲರು ಮಾಡುವ ಬ್ಯುಸಿನೆಸ್ ಅನ್ನು ನಾವು ಮಾಡಿದರೆ ಲಾಭ ಪಡೆಯುವುದು ಕಷ್ಟವಾಗುತ್ತದೆ. ಆದ್ದರಿಂದ ಹೊಸದಾಗಿ ಹೊಸತದ ಹೊಸ ಬ್ಯುಸಿನೆಸ್ (New Business) ಶುರುಮಾಡಬೇಕು. ಅದರಲ್ಲೂ ಟ್ರೆಂಡಿಂಗ್‌ನಲ್ಲಿರೋ ಬ್ಯುಸಿನೆಸ್(Trending Business) ಮಾಡುದ್ರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ನೋಡುವುದಾದರೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭಗಳಿಸುವ ಹಲವು ಬ್ಯುಸಿನೆಸ್ ಗಳು ಇವೆ. ಅದರಲ್ಲಿ ಬಹಳ ಟ್ರೆಂಡಿಂಗ್ ನಲ್ಲಿರುವ ಬಾಟಲ್ ಮರುಬಳಕೆ ವ್ಯಾಪಾರವೂ ಒಂದು.

ಖಾಲಿ ಬಿಯರ್ ಬಾಟಲಿಗಳ ಮರುಬಳಕೆ ವ್ಯಾಪಾರವು(beer bottle Recycling business) ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಉದ್ಯಮದಾಗಿ ಬೆಳೆಯುತ್ತಿದೆ. ಬಿಯರ್ ಸೇವನೆಯ ನಂತರ ಬಾಟಲಿಗಳನ್ನು ಬಿಸಾಡುವ ಬದಲು, ಅವುಗಳನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಲಾಭ ಎರಡನ್ನೂ ಸಾಧಿಸಬಹುದು.

ಮರುಬಳಕೆ ವ್ಯಾಪಾರದ ಮಹತ್ವ:

ಗಾಜಿನ ಬಾಟಲಿಗಳು ಪರಿಸರಕ್ಕೆ ಹಾನಿಕಾರಕವಾಗಬಹುದು, ಏಕೆಂದರೆ ಅವು ನಾಶವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಅದರ ಬದಲು, ಬಾಟಲಿಗಳನ್ನು ಮರುಬಳಕೆ ಮಾಡುವ ಮೂಲಕ ಪರಿಸರ ಮಾಲಿನ್ಯವನ್ನು(Environmental pollution) ಕಡಿಮೆ ಮಾಡಬಹುದು. ಇದು ಪರಿಸರ ಸ್ನೇಹಿ ಕ್ರಮವಾಗಿದ್ದು, ಗಾಜಿನ ಉತ್ಪಾದನೆಗೆ ಬೇಕಾದ ಶಕ್ತಿಯ ಬಳಕೆಯನ್ನು ಸಹ ಕಡಿಮೆ ಮಾಡುತ್ತದೆ.

ವ್ಯಾಪಾರ ಆರಂಭಿಸಲು ಅಗತ್ಯವಿರುವ ಹೂಡಿಕೆ:

ಈ ವ್ಯಾಪಾರವನ್ನು ಪ್ರಾರಂಭಿಸಲು, ಗಾಜಿನ ಬಾಟಲಿಗಳನ್ನು ಪುಡಿ ಮಾಡುವ ಯಂತ್ರವನ್ನು(machine) ಖರೀದಿಸಬೇಕು. ಮಾರುಕಟ್ಟೆಯಲ್ಲಿ ಈ ಯಂತ್ರಗಳ ಬೆಲೆ ₹50,000 ರಿಂದ ₹2,00,000 ವರೆಗೆ ಇರಬಹುದು. ಬಾಟಲಿಗಳನ್ನು ಸ್ಥಳೀಯ ಸ್ಕ್ರ್ಯಾಪ್ ಪಾಯಿಂಟ್‌ಗಳಿಂದ(scrap points) ಅಥವಾ ನೇರವಾಗಿ ವೈನ್‌ಗಳು ಮತ್ತು ಬಾರ್‌ಗಳಿಂದ ಸಂಗ್ರಹಿಸಬಹುದು. ಬಾಟಲಿಗಳನ್ನು ಸಂಗ್ರಹಿಸಿದ ನಂತರ, ಅವುಗಳನ್ನು ಯಂತ್ರದಲ್ಲಿ ಪುಡಿ ಮಾಡಿ, ಸ್ಫಟಿಕ ರೂಪದಲ್ಲಿ ಪರಿವರ್ತಿಸಬಹುದು.

ಈ ವ್ಯಾಪಾರದಿಂದ ಎಷ್ಟು ಲಾಭದ ನಿರೀಕ್ಷೆ ಮಾಡಬಹುದು:

ಒಂದು ಟನ್ ಗಾಜಿನ ಹರಳುಗಳನ್ನು(Glass crystals) ಮಾರಾಟ ಮಾಡಿದರೆ, ಸುಮಾರು ₹8,000 ಗಳಿಸಬಹುದು. ಇದಕ್ಕಾಗಿ ಸರಾಸರಿ ವೆಚ್ಚ ₹3,000 ಆಗಿರುತ್ತದೆ. ಅಂದರೆ, ಒಂದು ಟನ್(one ton) ಗಾಜಿನ ಹರಳುಗಳನ್ನ ಮಾರಾಟ ಮಾಡಿದರೆ, ₹5,000 ಲಾಭ ಸಿಗಲಿದೆ. ಒಂದು ತಿಂಗಳಲ್ಲಿ 10 ಟನ್ ಗಾಜಿನ ಹರಳುಗಳನ್ನು ಮಾರಾಟ ಮಾಡಿದರೆ, ₹50,000 ಲಾಭ ಗಳಿಸಬಹುದು.

ಎಲ್ಲೆಲ್ಲಿ ಬಾಟಲ್ ಮರುಬಳಕೆ ಉಪಯುಕ್ತವಾಗುತ್ತದೆ:

ಮರುಬಳಕೆ ಗಾಜಿನ ಹರಳುಗಳನ್ನು ಗಾಜಿನ ಸಾಮಾನುಗಳು, ಬಾಟಲಿಗಳು ಮತ್ತು ಕನ್ನಡಕಗಳ(spectacles) ತಯಾರಿಕೆಯಲ್ಲಿ ಬಳಸಲಾಗುತ್ತದೆ. ದೊಡ್ಡ ಕಂಪನಿಗಳು ಬಾಟಲಿಗಳಿಂದ ಕ್ರಿಸ್ಟಲ್‌ಗಳನ್ನು ಉತ್ಪಾದಿಸುತ್ತವೆ. ಇದಲ್ಲದೆ, ಕೆಲವು ಕಂಪನಿಗಳು ಅವುಗಳನ್ನು ನಿರ್ಮಾಣ ವಲಯದಲ್ಲಿಯೂ ಬಳಸುತ್ತವೆ. ಹೀಗಾಗಿ, ಮಾರುಕಟ್ಟೆಯಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಇದೆ.

ಈ ವ್ಯಾಪಾರದಿಂದ ಸಮಾಜಕ್ಕೆ ಮತ್ತು ಪರಿಸರಕ್ಕೆ ಲಾಭ:

ಈ ವ್ಯಾಪಾರವು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿದ್ದು, ಗಾಜಿನ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಮರುಬಳಕೆ ಪ್ರಕ್ರಿಯೆಯ ಮೂಲಕ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಬಹುದು, ಇದು ಪರಿಸರ ಸ್ನೇಹಿ ಕ್ರಮವಾಗಿದೆ.

ಖಾಲಿ ಬಿಯರ್ ಬಾಟಲಿಗಳ ಮರುಬಳಕೆ ವ್ಯಾಪಾರವು ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭ ನೀಡುವ ಉದ್ಯಮವಾಗಿದೆ. ಪರಿಸರ ಸಂರಕ್ಷಣೆ(Environmental protection) ಮತ್ತು ಆರ್ಥಿಕ ಲಾಭ(Financial benefit) ಎರಡನ್ನೂ ಸಾಧಿಸಲು ಈ ವ್ಯಾಪಾರವು ಉತ್ತಮ ಮಾರ್ಗವಾಗಿದೆ. ಸಮಾಜದ ಮತ್ತು ಪರಿಸರದ ಹಿತದೃಷ್ಟಿಯಿಂದ, ಈ ರೀತಿಯ ಮರುಬಳಕೆ ಉದ್ಯಮಗಳು(Recycling industries) ಮುಂದಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುವ ಸಾಧ್ಯತೆ ಇದೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!