ಇಂದು ಜಗತ್ತು ಹೆಚ್ಚು ಸ್ಪರ್ಧಾತ್ಮಕ ಯುಗವಾಗಿದೆ ( Competition Period ). ಎಲ್ಲದರಲ್ಲೂ ಕಾಂಪಿಟಿಷನ್ ಗಳು ಇದ್ದೆ ಇವೆ. ಹಾಗೆಯೇ ಅತೀ ಹೆಚ್ಚು ಕೋರ್ಸ್ ಗಳು ನಮ್ಮ ಕಣ್ಣ ಮುಂದೆ ಕಾಣುತ್ತವೆ. ಹೌದು, ನಾವು ಯಾವ ಕೋರ್ಸ್ ಮಾಡಿದರೆ ಉತ್ತಮ?, ಯಾವ ಕೋರ್ಸ್ ಮುಗಿಸಿದರೆ ಉತ್ತಮ ವೇತನ ದೊರೆಯುತ್ತದೆ ? ಎಂಬ ಬಹಳಷ್ಟು ಗೊಂದಲಗಳಿರುತ್ತವೆ. ನೀವೇನಾದರೂ ದ್ವಿತೀಯ ಪಿಯುಸಿ (2nd puc) ಮುಗಿಸಿದ್ದರೆ. ನಿಮಗೆ ಶಾರ್ಟ್ ಟರ್ಮ್ ಕೋರ್ಸ್ ( Short Term Corse ) ಮಾಡುವ ಆಸಕ್ತಿ ಇದ್ದರೆ, ಈ ಕೆಳಗೆ ಹಲವು ಶಾರ್ಟ್ ಟರ್ಮ್ ಕೋರ್ಸ್ ಗಳ ಬಗ್ಗೆ ಮಾಹಿತಿ ಮತ್ತು ವೇತನದ ಬಗ್ಗೆ ತಿಳಿಸಲಾಗಿದೆ. ಅದರ ಬಗ್ಗೆ ತಿಳಿದು ಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವೆಬ್ ಡಿಸೈನ್ ( Web design ) :
ವೆಬ್ ಗೆ ಬೇಕಾದಹಾಗೆ ಡಿಸೈನ್ ಮಾಡಿ ಕೊಡುವ ಜಾಬ್ ಇದಾಗಿದ್ದು, ಬಹಳ ಕ್ರಿವೇಟಿವ್ ಇಂದ ಕೂಡಿದ ಜಾಬ್ ಆಗಿದೆ. ಇಂದಿನ ಆಧುನಿಕ ಯುಗದಲ್ಲಿ ಬಹಳ ಬೇಡಿಕೆ ಇರುವ ಕೋರ್ಸ್ ಇದಾಗಿದೆ. 3 ರಿಂದ 6 ತಿಂಗಳುಗಳ ಶಾರ್ಟ್ ಟರ್ಮ್ ಕೋರ್ಸ್ ಇರಲಿದೆ. ಇದು ಕೂಡ ಉತ್ತಮ ಸಂಭಾವನೆ ನೀಡುವ ಜಾಬ್ ಆಗಿದೆ. ಈ ಕೋರ್ಸ್ ಅನ್ನು ಓದಲು ಇಚ್ಛಿಸುವವರು ಈ ಕೋರ್ಸ್ ಗಾಗಿ ಅಪ್ಲೈ ಮಾಡಬಹುದು.
ವೇತನ : ಈ ಕೋರ್ಸ್ ಕಲಿತ ನಂತರ ವಾರ್ಷಿಕ 1,60,000 ದಿಂದ 7,50,00 ವರೆಗೆ ಪಡೆಯಬಹುದು.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ( Digital Marketing Course ) :
ಇಂದಿನ ಯುಗದಲ್ಲಿ ಮಾರ್ಕೆಟಿಂಗ್ ಫೀಲ್ಡ್ ನಲ್ಲಿ ಬಹಳ ಬೇಡಿಕೆ ಇದೆ. ಇದು ಕೂಡ ಅತ್ಯಂತ ಎಫ್ಫೆಕ್ಟಿವ್ ಕೋರ್ಸ್ ( Effective corse ) ಆಗಿದ್ದು, ಈ ಕೋರ್ಸ್ ಕಲಿಯುದರಿಂದ ಬಹಳ ಉಪಯೋಗ ಇದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಆನ್ ಲೈನ್ ಮೂಲಕ ಕೂಡ ಈ ಒಂದು ಕೋರ್ಸ್ ಅನ್ನು ಕಲಿಯಬಹುದು.
ವೇತನ : ಈ ಕೋರ್ಸ್ ಮುಗಿಸಿದ ನಂತರ ನೀವು ಮಾಸಿಕವಾಗಿ ರೂ. 48,000 ದಿಂದ 59,574 ವೇತನ ಪಡೆಯಬಹದು.
ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್ ( Event Management Course ) :
ಹಲವಾರು ರೀತಿಯ ಕಾರ್ಯಕ್ರಮಗಳು ಏರ್ಪಡುತ್ತವೆ. ಅದಕ್ಕಾಗಿ ಈವೆಂಟ್ ಮ್ಯಾನೇಜ್ಮೆಂಟ್ ನ ಅವಶ್ಯಕತೆ ಇರುತ್ತದೆ. ಈವೆಂಟ್ ಮ್ಯಾನೇಜ್ಮೆಂಟ್ ಕೂಡ ಒಂದು ಉತ್ತಮ ವೇತನದ ಕೋರ್ಸ್ ಆಗಿದೆ. ಇದರಲ್ಲಿ ಮುಖ್ಯವಾಗಿ ನಿರ್ವಹಣೆ ಕೌಶಲ್ಯ ಬಹಳ ಮುಖ್ಯ.
ವೇತನ : ಈವೆಂಟ್ ನಲ್ಲಿ ವೇತನವು ಆಯಾ ಕಾರ್ಯಕ್ರಮ ಅಥವಾ ಈವೆಂಟ್ ಮೇಲೆ ಅವಲಂಭಿತವಾಗಿರುತ್ತದೆ. ಇದು ಕೂಡ ಉತ್ತಮ ಸಂಭಾವನೆ ಗಳಿಸಲು ಒಂದು ಉತ್ತಮ ಕೋರ್ಸ್ ಆಗಿದೆ.
ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ( Hotel management course ) :
ಇಂದು ನಾವು ಎಲ್ಲ ಕಡೆಗಳಲ್ಲೂ ಹೋಟೆಲ್ ಗಳನ್ನು ಕಾಣುತ್ತೇವೆ. ಪ್ರತಿನಿತ್ಯ ಜನರು ಹೋಟೆಲ್ ಗಳಲ್ಲಿ ಊಟ ತಿಂಡಿ ಮಾಡುತ್ತಾರೆ. ನೀವೇನಾದರೂ ಹೋಟೆಲ್ ತೆರೆಯಲು ಬಯಸಿದರೆ ಹೋಟೆಲ್ ಮ್ಯಾನೇಜ್ಮೆಂಟ್ ಕುರಿತು ಡಿಪ್ಲೊಮ ಕೋರ್ಸ್‌ಗಳಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಹಡಗುಗಳಲ್ಲಿ, ಏರ್‌ಲೈನ್ ಸರ್ವೀಸ್, Cruises ಗಳಲ್ಲಿ ಎಂಟ್ರಿ ಲೆವೆಲ್ ಉದ್ಯೋಗ ಪಡೆಯಲು ಈ ಶಾರ್ಟ್ ಟರ್ಮ್ ಕೋರ್ಸ್ ಗಳು ಬಹಳ ಉಪಯುಕ್ತವಾಗಿವೆ.
ವೇತನ : ಈ ಕೋರ್ಸ್ ಮುಗಿಸಿದ ನಂತರ ಆರಂಭಿಕವಾಗಿ ವಾರ್ಷಿಕ ರೂ.3.3 ಲಕ್ಷವರೆಗೆ ವೇತನ ಪಡೆಯಬಹುದಾಗಿದೆ.
ಇಂಟೇರಿಯರ್ ಡಿಸೈನಿಂಗ್ ( Intirier design ) :
ನಿಮ್ಮಲ್ಲಿ ಸೃಜನ ಶೀಲತೆ, ಮತ್ತು ಯಾವುದೇ ವಸ್ತುವಿಗೆ ಒಳ್ಳೆಯ ರೂಪ ಕೊಡುವ ಸಾಮರ್ಥ್ಯ ವಿದ್ದರೆ ಈ ಒಂದು ಕೋರ್ಸ್ ಬಹಳ ಉಪಯುಕ್ತವಾಗಿದೆ. ಮತ್ತು ಈ ಕೋರ್ಸ್ ಗೆ ಟೆಕ್ನಿಕಲ್ ನಾಲೆಡ್ಜ್ ಬೇಕಾಗುತ್ತದೆ. ಹಾಗಾಗಿ ಡಿಪ್ಲೊಮಾ(Diploma) ಮತ್ತು ಪದವಿ(degree) ಕೋರ್ಸ್ ಆಗಿ ಇದನ್ನು ಓದಬಹುದು.
ವೇತನ : ಈ ಕೋರ್ಸ್ ಕಲಿತ ನಂತರ ನಿಮ್ಮ ಸ್ಕಿಲ್ ಮೇಲೆ ವೇತನ ದೊರೆಯಲಿದೆ. ಮೊದಲು 2 ಲಕ್ಷ ಸಂಭಾವನೆಯಿಂದ 8 ಲಕ್ಷವರೆಗೆ ಸಂಭಾವನೆ ಪಡೆಯಬಹುದು.
ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ( Journalism and mass communication ) :
ಇಂದು ಪತ್ರಿಕೋದ್ಯಮ ಎಲ್ಲ ಕಡೆಗಳಲ್ಲೂ ಆವರಿಸಿದೆ. ಹೌದು, ಮೀಡಿಯಾ ಇಂದು ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಈ ಕೋರ್ಸ್ ಮುಗಿಸಿದ ನಂತರ ಯಾವುದೇ ತಾವೇ ಸ್ವತಃ ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಉದಾಹರಣೆಗೆ : ಯೂಟ್ಯೂಬ್ ಚಾನೆಲ್(U-Tube), ಬ್ಲಾಗ್ (ನ್ಯೂಸ್ ಬ್ಲಾಗ್) ಕ್ರಿಯೇಟ್ ಮಾಡಿಕೊಳ್ಳಬಹುದು.
ಇನ್ನೊಂದು ಮುಖ್ಯ ವಿಚಾರ ಎಂದರೆ, ಮೀಡಿಯಾ ಹೌಸ್‌ಗಳು ನೀಡುವ ಶಾರ್ಟ್ ಟರ್ಮ್ ಕೋರ್ಸ್‌ಗಳಿಂದ, ಶಿಕ್ಷಣ ಸಂಸ್ಥೆಗಳು ನೀಡುವ ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ ಎಲ್ಲ ಹಂತದಲ್ಲೂ ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ಕೋರ್ಸ್ ಲಭ್ಯ ಇದೆ.
ಬ್ಯುಸಿನೆಸ್ ಅನಾಲಿಟಿಕ್ಸ್ ಕೋರ್ಸ್ ( Business analytics course ) :
ಎಲ್ಲರೂ ಇಂದು ಶಿಕ್ಷಣ ಪಡೆದು ನಂತರ ತಮ್ಮದೇ ಸ್ವಂತ ಬ್ಯುಸಿನೆಸ್ ಮಾಡಲು ಶುರುಮಾಡುತ್ತಾರೆ. ಹಾಗಾಗಿ ಬ್ಯುಸಿನೆಸ್ ನಲ್ಲಿ ಉತ್ತಮ ಹಿಡಿತ ಹೊಂದಲು ಹಲವಾರು ಬ್ಯುಸಿನೆಸ್ ನ ಕೋರ್ಸ್ ಗಳಿವೆ. ಈ ಕೋರ್ಸ್ ಕಲಿತ ನಂತರ ಒಂದು ಉತ್ತಮ ಅವಾಕಾಶ ಬ್ಯುಸಿನೆಸ್ ಫೀಲ್ಡ್ ನಲ್ಲಿ ಸಿಗಲಿದೆ.
ವೇತನ : ಇದರಲ್ಲಿ ವಾರ್ಷಿಕವಾಗಿ 80,000 ದವರೆಗೆ ವೇತನ ಪಡೆಯಬಹುದು.
ಇತರೆ ಶಾರ್ಟ್ ಟರ್ಮ್ ಕೋರ್ಸ್‌ಗಳು ( Some other Short term courses ) :
ಇಷ್ಟೇ ಅಲ್ಲದೆ ಇಂದು ನಮಗೆ ಶಾರ್ಟ್ ಟರ್ಮ್ ಕೋರ್ಸ್ ಗಳು ಹಲವಾರು ಇವೆ. ಇವುಗಳ ಮೂಲಕ ನಮ್ಮ ಜೀವನವನ್ನು ವೃದ್ದಿಕೊಳ್ಳಬಹುದು. ಅವುಗಳೆಂದರೆ : ಬಜೆಟಿಂಗ್ ಕೋರ್ಸ್, ಫ್ಯಾಷನ್ ಡಿಸೈನಿಂಗ್, ನರ್ಸಿಂಗ್ ಕೇರ್ ಸರ್ಟಿಫಿಕೇಟ್, ಕ್ಲಿಯರ್ ಟ್ಯಾಕ್ಸ್, ಕೋಡಿಂಗ್ ಕೋರ್ಸ್, ಫೈನಾನ್ಷಿಯಲ್ ಪ್ಲಾನರ್ ಕೋರ್ಸ್, ಮಷಿನ್ ಲರ್ನಿಂಗ್ ಕೋರ್ಸ್, ಅಕೌಂಟಿಂಗ್ ಕೋರ್ಸ್, ಅಬ್ರಾಡ್ ಕರಿಯರ್‌ಗಳಿಗಾಗಿ ಫಾರಿನ್ ಲಾಂಗ್ವೇಜ್ ಕೋರ್ಸ್ ಗಳಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಅತೀ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ಕೊಡುವ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ
- ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ
- ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ಮತ್ತೆ ಪ್ರಾರಂಭ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ..!
- ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ಮಾನ್ಯರೆ
ನೀವು ಪಿಯುಸಿ ಆದ ನಂತರ ಯಾವ ಉದ್ಯೋಗ ಯಾವ ಯಾವ ನೌಕರಿ ಮಾಡಬೇಕೆಂಬುದರ ಬಗ್ಗೆ ಚಿನ್ನದ ಮಾಹಿತಿ ಹಾಗೂ ನಿಖರವಾಗಿ ಇದೆ ನನಗೆ ಅದರ ಒಂದು ಪಿಡಿಎಫ್ ಮುದ್ರಣವನ್ನು ನನ್ನ ವಾಟ್ಸಪ್ ನಂಬರ್ ಗೆ ಕಳಿಸಿದರೆ ನನಗೆ ತುಂಬಾ ಸಹಾಯವಾಗುತ್ತದೆ ಏಕೆಂದರೆ ನನ್ನ ಮೊಮ್ಮಗಳು ಒಬ್ಬಳು ಈಗ ಪಿಯುಸಿ ಮುಗಿಸುತ್ತಿದ್ದಾಳೆ ನಿಮ್ಮ ಲೇಖನ ಅವಳಿಗೆ ತುಂಬಾ ಸಹಾಯವಾಗಬಹುದು ದಯವಿಟ್ಟು ನಿಮ್ಮ ಪಿಯುಸಿ ಆದ ಬಳಿಕ ಯಾವ ಉದ್ಯೋಗ ಯಾವ ಕಾಲೇಜು ಮಾಡಬೇಕೆಂಬುದರ ಬಗ್ಗೆ ಮಾಹಿತಿ ಸರಿಯಾಗಿ ಅನಿಸಿದೆ ದಯವಿಟ್ಟು ಅದರ ಒಂದು ಪ್ರತಿ ನನಗೆ ನನ್ನ ವಾಟ್ಸಪ್ ಗೆ ಕಳುಹಿಸಿಕೊಡಿ
ಇಂತಿ ನಿಮ್ಮ ಆಶಾದಾರಿ ಸಿದ್ದರಾಮ ಚಡಚಣ ವಿಜಯಪುರ ಜಿಲ್ಲೆ ಕರ್ನಾಟಕ