ಬಜೆಟ್ ಫ್ರೆಂಡ್ಲಿ, ಹೊಸ ಸ್ಕೂಟರ್ ಖರೀದಿಸುವ ಯೋಜನೆ ಇದೆಯೆ? ಹಾಗಾದರೆ ಈ ಸ್ಕೂಟರ್ ಗಳನ್ನು ನಿಮ್ಮ ಆಯ್ಕೆಯಲ್ಲಿರಿಸಿ. ಇಲ್ಲಿದೆ ಕಡಿಮೆ ದರದಲ್ಲಿ ಹೆಚ್ಚಿನ ಫೀಚರ್ಸ್ ನೀಡುವ ಸ್ಕೂಟರ್ ಗಳ ಪಟ್ಟಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಗ್ರಾಹಕರ ಆಕರ್ಷಣೆಗೆ ಹೊಸ ತಂತ್ರಗಳನ್ನು ಅನುಸರಿಸುವ ಕಂಪನಿಗಳ ಪೈಕಿ ಒಪಿಜಿ ಮೊಬಿಲಿಟಿ (OPG Mobility) ಕೂಡಾ ಗಮನ ಸೆಳೆಯುತ್ತಿದೆ. ಹಿಂದಿನ ಒಕಾಯಾ ಇವಿ (Okaya EV) ಎಂಬ ಹೆಸರಿನಲ್ಲಿ ಪರಿಚಿತವಾಗಿದ್ದ ಈ ಕಂಪನಿ, ಇದೀಗ ಹೊಸದಾಗಿ ಮರುನಾಮಕರಣಗೊಂಡು, ತನ್ನ ‘ಫೆರಾಟೊ(Ferrato)’ ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಬೆಲೆ ಕಡಿತವನ್ನು ಘೋಷಿಸಿದೆ. ಈ ಕಡಿತದಿಂದಾಗಿ ಕೆಲವೊಂದು ಮಾದರಿಗಳನ್ನು ಕೇವಲ ₹49,999 ದರದಲ್ಲಿ ಖರೀದಿಸುವ ಅವಕಾಶವನ್ನು ಗ್ರಾಹಕರು ಪಡೆಯುತ್ತಿದ್ದಾರೆ!
ಹೊಸ ಬೆಲೆಗಳೊಂದಿಗೆ ಫೆರಾಟೊ ಸೀರೀಸ್ ಇ-ಸ್ಕೂಟರ್‌ಗಳು!Ferrato Series e- scooters with new price!
ಒಪಿಜಿ ಮೊಬಿಲಿಟಿ ತನ್ನ Ferrato ಸೀರೀಸ್‌ನ ಎಲ್ಲಾ ಪ್ರಮುಖ ಮಾದರಿಗಳಿಗೆ ₹5,000 ರಿಂದ ₹15,000 ವರೆಗೆ ದರ ಇಳಿಕೆ ಮಾಡಿದೆ. ಇದರಿಂದಾಗಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹೊಸ ಎಕ್ಸ್-ಶೋರೂಂ ದರ ₹49,999 ರಿಂದ ₹1,09,999 ರಷ್ಟು ಕನಿಷ್ಠ ಮತ್ತು ಗರಿಷ್ಠ ವ್ಯಾಪ್ತಿಯಲ್ಲಿ ಲಭ್ಯವಿದೆ.
ಈ ಕಡಿತದೊಂದಿಗೆ, ಕಂಪನಿಯ Ferrato Disruptor e-bike, Ferrato Moto Fast ಮತ್ತು Ferrato Fast F3 ಮಾದರಿಗಳ ಖರೀದಿಯ ಮೇಲೂ ₹5,000 ವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಆದರೆ, ಈ ಕೊಡುಗೆಗಳು ಯಾವ ಅವಧಿಯವರೆಗೆ ಮುಂದುವರಿಯುತ್ತವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಫೆರಾಟೊ ಸೀರೀಸ್ ಇ-ಸ್ಕೂಟರ್‌ಗಳ ವೈಶಿಷ್ಟ್ಯಗಳು ಮತ್ತು ಹೊಸ ದರಗಳು(Specifications and New Prices):
ನಿಮಗೆ ಯಾವುದೆಲ್ ಲಾಭಕಾರಿ ಎಂಬುದನ್ನು ತಿಳಿಯಲು ಈ ಸ್ಕೂಟರ್‌ಗಳ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:
Ferrato Freedom LA:
ಬೆಲೆ: ₹49,999
ರೇಂಜ್: 55 ಕಿ.ಮೀ
ಟಾಪ್ ಸ್ಪೀಡ್: 25 ಕಿ.ಮೀ/ಗಂ
ಬ್ಯಾಟರಿ: 10 ಗಂಟೆಗಳಲ್ಲಿ ಪೂರ್ತಿ ಚಾರ್ಜ್
ಸಾಧಾರಣ ಬಳಕೆದಾರರಿಗೆ ಸೂಕ್ತ ಆಯ್ಕೆ
Ferrato Classiq:
ಬೆಲೆ: ₹59,999
ರೇಂಜ್: 60-70 ಕಿ.ಮೀ
ಟಾಪ್ ಸ್ಪೀಡ್: 25 ಕಿ.ಮೀ/ಗಂ
ಬ್ಯಾಟರಿ ಸಾಮರ್ಥ್ಯ: 1.44 ಕೆಡಬ್ಲ್ಯೂಹೆಚ್
ಮಂದಗತಿಯ ಬೃಹತ್ ಶಹರ ಪ್ರಯಾಣಕ್ಕಾಗಿ ಸೂಕ್ತ
Ferrato Faast F2F :
ಬೆಲೆ: ₹79,999
ರೇಂಜ್: 70-80 ಕಿ.ಮೀ
ಟಾಪ್ ಸ್ಪೀಡ್: 50 ಕಿ.ಮೀ/ಗಂ
ಬ್ಯಾಟರಿ ಸಾಮರ್ಥ್ಯ: 2.16 ಕೆಡಬ್ಲ್ಯೂಹೆಚ್
ಸುರಕ್ಷತೆಗೆ ಡ್ರಮ್ ಬ್ರೇಕ್‌ಗಳೊಂದಿಗೆ ಲಭ್ಯವಿದೆ
Ferrato Faast F4:
ಬೆಲೆ: ₹ 1,09,999
ರೇಂಜ್: 140-160 ಕಿ.ಮೀ
ಟಾಪ್ ಸ್ಪೀಡ್: 65 ಕಿ.ಮೀ/ಗಂ
ಬ್ಯಾಟರಿ ಸಾಮರ್ಥ್ಯ: 4.4 ಕೆಡಬ್ಲ್ಯೂಹೆಚ್
ಉನ್ನತ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ – ಲಾಂಗ್ ಡ್ರೈವ್‌ಗಾಗಿ ಪರಿಪೂರ್ಣ ಆಯ್ಕೆ
ಈ ಆಫರ್ ಯಾಕೆ ಮಹತ್ವದ್ದು?
ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗುತ್ತಿರುವ ನಡುವೆಯೂ ಒಪಿಜಿ ಮೊಬಿಲಿಟಿಯ ಈ ದರ ಇಳಿಕೆ ಗ್ರಾಹಕರಿಗೆ ಒಳ್ಳೆಯ ಅವಕಾಶ. ಮೊಬೈಲ್ ದರಕ್ಕೆ ಸಿಗುವ Ferrato Freedom LA ಮಾದರಿ ದೈನಂದಿನ ನಗರದ ಪ್ರಯಾಣಿಕರಿಗೆ ತುಂಬಾ ಲಾಭಕಾರಿ. ಇನ್ನೊಂದೆಡೆ, Ferrato Faast F4 ಉನ್ನತ ಸಾಮರ್ಥ್ಯದ ರೇಂಜ್ ಮತ್ತು ವೇಗ ಹೊಂದಿದ್ದು, ಹೆಚ್ಚಿನ ಪ್ರಯಾಣ ಮಾಡುವವರಿಗೆ ಸೂಕ್ತ.
ಇದೇ ಕಾರಣಕ್ಕೆ, ಕಡಿಮೆ ಬಜೆಟ್‌ನಲ್ಲಿಯೇ ಉತ್ತಮ ವೈಶಿಷ್ಟ್ಯಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಬೇಕು ಎಂದು ಯೋಚಿಸುವವರಿಗೆ ಇದು ಸಿಹಿಸುದ್ದಿಯಾಗಿದೆ!
ನಿಮ್ಮ ಆದ್ಯತೆ ಯಾವದು? ಕಡಿಮೆ ದರದ ಸ್ಕೂಟರೇ ಅಥವಾ ಉನ್ನತ ಶ್ರೇಣಿಯ ಮಾದರಿಗಳೇ?. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಸ್ಕೂಟರ್ ಆಯ್ಕೆಮಾಡಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.