ಭಾರತದಲ್ಲಿ ಓಲಾ-ಊಬರ್(Ola-Uber) ಮಾದರಿಯ ಹೊಸ ಸಹಕಾರಿ ಟ್ಯಾಕ್ಸಿ(Taxi) ಸೇವೆ ಆರಂಭ : ಚಾಲಕರಿಗೆ ನೇರ ಲಾಭ ತಲುಪಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
ಭಾರತದಲ್ಲಿ ಬಹುಜನರಿಗೆ ಸ್ವಾವಲಂಬನೆಯ ಹೊಸ ಅಸ್ತಿತ್ವ ನೀಡುವ ಪ್ರಯತ್ನದಲ್ಲಿ, ಕೇಂದ್ರ ಸರ್ಕಾರ ಸಹಕಾರಿ ಮಾದರಿಯ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲು ಸಜ್ಜಾಗಿದೆ. ಸಹಕಾರಿಯ ತತ್ವದಡಿಯಲ್ಲಿ, ಈ ಸೇವೆಯ ಲಾಭಗಳು ನೇರವಾಗಿ ಚಾಲಕರಿಗೆ(drivers) ತಲುಪಲಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ(Minister Amit Shah) ಸಂಸತ್ತಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯ ಘೋಷಣೆಯನ್ನು ಮಾಡಿದ್ದು, ಇದು ಭಾರತದ ಸಂಚಾರ ಕ್ಷೇತ್ರದಲ್ಲಿ ಹೊಸತೊಂದು ಅಧ್ಯಾಯವನ್ನು ಬರೆಯಲಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಓಲಾ ಮತ್ತು ಊಬರ್(Ola and Uber) ಮಾದರಿಯಲ್ಲಿ ದೇಶದಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದು, ಈ ಯೋಜನೆಯ ಉದ್ದೇಶ ಟ್ಯಾಕ್ಸಿ ಚಾಲಕರಿಗೆ ನೇರವಾಗಿ ಆರ್ಥಿಕ ಲಾಭವನ್ನು ಒದಗಿಸುವುದಾಗಿದೆ.
ಸಹಕಾರ ಸಚಿವಾಲಯದ ಪರಿಕಲ್ಪನೆ:
ಈ ಹೊಸ ಯೋಜನೆಯನ್ನು ಕೇಂದ್ರ ಸಹಕಾರ ಸಚಿವಾಲಯ ಕಾರ್ಯಗತಗೊಳಿಸಲಿದ್ದು, “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಬಲಪಡಿಸಲು ಈ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ. ಸಹಕಾರ ವ್ಯವಸ್ಥೆಯ ಮೂಲಕ ದೇಶದ ರೈತರು, ಕಾರ್ಮಿಕರು(workers), ಸಣ್ಣ ವ್ಯಾಪಾರಸ್ಥರು ಮತ್ತು ಚಾಲಕರನ್ನು ಆರ್ಥಿಕವಾಗಿ ಬೆಂಬಲಿಸುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಸಹಕಾರಿ ಟ್ಯಾಕ್ಸಿ ಸೇವೆಯ ಪ್ರಮುಖ ಲಕ್ಷಣಗಳು ಹೀಗಿವೆ:
ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆ:
ಟ್ಯಾಕ್ಸಿ ಚಾಲಕರಿಗಾಗಿ ಸಹಕಾರ ಸಂಘಟನೆ ರೂಪಿಸಲಾಗುವುದು. ಇದರಿಂದಾಗಿ ಚಾಲಕರು ಒಗ್ಗೂಡಿ ಸಹಕಾರಿ ಚೌಕಟ್ಟಿನಲ್ಲಿ ಕೆಲಸ ಮಾಡಬಹುದು.
ನೇರ ಆದಾಯ ಭದ್ರತೆ:
ಇದರಲ್ಲಿ ಯಾವುದೇ ಮಧ್ಯವರ್ತಿ ಅಥವಾ ಖಾಸಗಿ ಕಂಪನಿಯ ನಿಯಂತ್ರಣ ಇರುವುದಿಲ್ಲ. ಆದಾಯ ನೇರವಾಗಿ ಚಾಲಕರಿಗೆ ತಲುಪುವುದು.
ವ್ಯಾಪ್ತಿಯ ಸುಧಾರಣೆ:
ದ್ವಿಚಕ್ರ ವಾಹನಗಳು(Two wheelers), ಆಟೋ ರಿಕ್ಷಾ, ಕಾರುಗಳ ಸಹಿತ ವಿವಿಧ ರೀತಿಯ ವಾಹನಗಳು ಸಹಕಾರಿ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಸಹಕಾರಿ ವಿಮಾ ಯೋಜನೆ(Cooperative Insurance Scheme):
ಚಾಲಕರ ಮತ್ತು ಅವರ ಕುಟುಂಬದ ಸುರಕ್ಷತೆಗಾಗಿ ವಿಶೇಷ ವಿಮಾ ಯೋಜನೆ ಕೂಡ ಪರಿಚಯಿಸಲಾಗುವುದು.
ಸಹಕಾರಿ ವಲಯದ ವಿಸ್ತರಣೆ:
ಪೆಟ್ರೋಲ್ ಪಂಪುಗಳು, ಅನಿಲ ವಿತರಣಾ ಕೇಂದ್ರಗಳು, ಪಡಿತರ ಅಂಗಡಿಗಳು, ಔಷಧಿ ಮಾರಾಟ ಕೇಂದ್ರಗಳು, ಗೋದಾಮುಗಳು, ನೀರಿನ ನಿರ್ವಹಣೆ ಮತ್ತು ಸಾವಯವ ಕೃಷಿ ಕ್ಷೇತ್ರಗಳಿಗೂ(agricultural fields) ಈ ಯೋಜನೆ ವಿಸ್ತಾರಗೊಳ್ಳಲಿದೆ.
ಈ ಹೊಸ ಸಹಕಾರಿ ಟ್ಯಾಕ್ಸಿ ಸೇವೆಯು ದೇಶದ ಸಂಚಾರ ವ್ಯವಸ್ಥೆಗೆ ಮತ್ತು ಚಾಲಕರ ಆರ್ಥಿಕ ಸ್ಥಿರತೆಗೆ ಮಹತ್ತರ ಬದಲಾವಣೆಯನ್ನು ತರಲಿದೆ. ಸರ್ಕಾರದ ಪ್ರಕಾರ, ಈ ಸೇವೆ ಚಾಲಕರ ಶ್ರೇಣಿಗೆ ಹೆಚ್ಚಿನ ಸ್ವಾಯತ್ತತೆ ನೀಡಲಿದ್ದು, ದುರ್ಬಲ ವರ್ಗಗಳ ಆರ್ಥಿಕ ಸುಧಾರಣೆಗೆ ನೆರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ “ಸಹಕಾರದಿಂದ ಸಮೃದ್ಧಿ” ದೃಷ್ಠಿಕೋಣವನ್ನು ಮುಂದುವರಿಸುವ ಈ ಯೋಜನೆಯು ಭಾರತದಲ್ಲಿ ಒಬ್ಬ ಸಾಮಾನ್ಯ ಚಾಲಕನಿಗೂ ಆರ್ಥಿಕ ಸ್ವಾಯತ್ತತೆಯನ್ನು ಒದಗಿಸಲಿದೆ.
ಭಾರತದಲ್ಲಿ ಇತ್ತೀಚೆಗೆ ಸಹಕಾರಿ ಮಾದರಿಯ ಸೇವೆಗಳು ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಯೋಜನೆ ಸಹ ಭವಿಷ್ಯದಲ್ಲಿ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.