ಹೊಸ ಹೀರೊ ಕ್ಸೂಮ್ ಕಾಂಬ್ಯಾಟ್ ಎಡಿಷನ್ ಬಿಡುಗಡೆ; ಖರೀದಿಗೆ ಮುಗಿಬಿದ್ದ ಜನ

IMG 20240612 WA0000

ಹೊಸ ಫೈಟರ್ ಜೆಟ್ ಲುಕ್‌ನೊಂದಿಗೆ ಹೀರೋ ಕ್ಸೂಮ್ ಕಾಂಬ್ಯಾಟ್ ಎಡಿಷನ್(Combat Edition) ಬಿಡುಗಡೆ!

ಭಾರತೀಯ ಶೈಲಿಯ ಸ್ಪರ್ಧೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ ಹೀರೋ ವೆಹಿಕಲ್ಸ್ ಮತ್ತು ಸ್ಕೂಟರ್ಸ್ ಹೊಸ ಫೈಟರ್ ಜೆಟ್‌ನಂತಹ ಲುಕ್‌ನೊಂದಿಗೆ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕ್ಸೂಮ್(xoom) ಸ್ಕೂಟರ್ ಶ್ರೇಣಿಯನ್ನು ಪರಿಚಯಿಸಿದ್ದ ಹೀರೋ ಕಂಪನಿಯು, ಈಗ ಅದರ ಹೊಸ ವೆರಿಯಂಟ್ ಆಗಿರುವ ಕಾಂಬ್ಯಾಟ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ದೆಹಲಿಯ ಎಕ್ಸ್ ಶೋರೂಂ(Ex-Show room) ದರದಲ್ಲಿ ರೂ. 80,967 ಗಳ ಬೆಲೆಯಲ್ಲಿ ಈ ಹೊಸ ಸ್ಕೂಟರ್ ಗಮನ ಸೆಳೆಯುತ್ತದೆ.

ಕ್ಸೂಮ್ ಕಾಂಬ್ಯಾಟ್ ಎಡಿಷನ್‌( Xoom Combat Edition) ಉತ್ತಮ ಕಾರ್ಯಕ್ಷಮತೆ ಮತ್ತು ಆಕರ್ಷಕ ಡಿಸೈನ್‌ನಿಂದಾಗಿ ತಮ್ಮ ದರ್ಜೆಯನ್ನು ಹೆಚ್ಚಿಸಿದೆ. ಇದು ಸ್ಕೂಟರ್ ಪ್ರಿಯರಿಗೆ ಸ್ಪೋರ್ಟಿ ಆಯ್ಕೆಯಾಗಿ ಹೊರಹೊಮ್ಮಿದೆ. ಬನ್ನಿ ಈ ಸ್ಕೂಟರ್ ನ ವೈಶಿಷ್ಟಗಳು ಹಾಗೂ ವಿಶೇಷತೆಗಳು ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೊಣ.

Hero Launches Fighter Jet-Inspired Xoom : ವಿಶೇಷತೆಗಳು
xoom right front three quarter 7

ಸ್ಪೋರ್ಟಿ ವಿನ್ಯಾಸ: ಕ್ಸೂಮ್ ಕಾಂಬ್ಯಾಟ್ ಎಡಿಷನ್ ಒಂದು ಸ್ಪೋರ್ಟಿ ಲುಕ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ‘ಮ್ಯಾಟ್ ಶಾಡೋ ಗ್ರೇ(Matte Shadow Grey)’ ಬಣ್ಣದ ಸ್ಕೀಮ್‌ನಲ್ಲಿ ಈ ಸ್ಕೂಟರ್‌ನಲ್ಲಿ ಹಳದಿ(Yellow) ಮತ್ತು ಕಪ್ಪು(Black) ಬಣ್ಣದ ಅಕ್ಸೆಂಟ್‌ಗಳಿವೆ. ಈ ವಿಶೇಷ ಬಣ್ಣವು ಫೈಟರ್ ಜೆಟ್ ವಿಮಾನಗಳನ್ನು ನೆನಪಿಸುತ್ತದೆ.

ಶಕ್ತಿಯುತ ಎಂಜಿನ್: ಕಾಂಬ್ಯಾಟ್ ಎಡಿಷನ್ 110. 9 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಚಾಲಿತವಾಗಿದೆ. ಈ ಎಂಜಿನ್ 7, 250 rpm ನಲ್ಲಿ 8. 2 bhp ಪವರ್ ಮತ್ತು 5, 750 rpm ನಲ್ಲಿ 8. 7 Nm ಟಾರ್ಕ್ ಉತ್ಪಾದಿಸುತ್ತದೆ, ಉತ್ತಮ ವೇಗ ಮತ್ತು ಪ್ರವೇಶವನ್ನು ಖಚಿತಪಡಿಸುತ್ತದೆ.

ವೈಶಿಷ್ಟ್ಯಗಳು: ಕಾಂಬ್ಯಾಟ್ ಎಡಿಷನ್ LED ಹೆಡ್‌ಲೈಟ್, ಎಲ್ಇಡಿ ಟೈಲ್‌ಲೈಟ್(LED Tile light), ಕಾರ್ನರಿಂಗ್ ಲೈಟ್ಸ್, ಡಿಜಿಟಲ್ ಡಿಸ್ಪ್ಲೆ, ಬ್ಲೂಟ್ ಕನೆಕ್ಟಿವಿಟಿ, ಯುಎಸ್‌ಡಿಬಿ ಚಾರ್ಜಿಂಗ್ ಪೋರ್ಟ್ ಮತ್ತು ಬೂಟ್ ಲೈಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಝಡ್ಎಕ್ಸ್ ರೂಪಾಂತರದಲ್ಲಿ ಕಂಡುಬರುವ ಅದೇ ಡಿಜಿಟಲ್ ಡಿಸ್ಪ್ಲೇ ಟಾಪ್ ವೇರಿಯೆಂಟ್‌ನಲ್ಲಿ ಸಹ ಲಭ್ಯವಿದೆ. ಇದು ಬ್ಲೂಟೂತ್ ಸಂಪರ್ಕವನ್ನು ಹೊಂದಿದ್ದು, ಕರೆಗಳು ಮತ್ತು ಎಸ್ಎಂಎಸ್ ಎಚ್ಚರಿಕೆಗಳನ್ನು ನಿಮ್ಮ ಫೋನ್‌ನಿಂದಲೇ ಪ್ರದರ್ಶಿಸುತ್ತದೆ.

ಬ್ರೇಕಿಂಗ್ ಮತ್ತು ಸಸ್ಪೆನ್ಷನ್: ಉತ್ತಮ ಬ್ರೇಕಿಂಗ್ ಮತ್ತು ಸಸ್ಪೆನ್ ಸೆಟಪ್ ಅನ್ನು ಹೊಂದಿರುವ ಕಾಂಬ್ಯಾಟ್ ಎಡಿಷನ್ ಪ್ರಯಾಣವನ್ನು ಖಚಿತಪಡಿಸುತ್ತದೆ.

ಬೆಲೆ(price) ಮತ್ತು ಸ್ಪರ್ಧೆ:

ರೂ. 80, 967 ಗಳ ಬೆಲೆಯಲ್ಲಿ ಪ್ರಸ್ತುತ ಕ್ಸೂಮ್ ಕಾಂಬ್ಯಾಟ್(Xoom Combat) ಆವೃತ್ತಿ, ಈ ಸರಣಿಯಲ್ಲಿ ಅತ್ಯಂತ ದುಬಾರಿ ವೆರಿಯಂಟ್ ಆಗಿದೆ. ಈ ಸ್ಕೂಟರ್‌ನ ಬೇಸ್ ವೆರಿಯಂಟ್‌ಗಳು ಸುಮಾರು ಹತ್ತು ಸಾವಿರ ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿವೆ.

ಹೆಚ್ಚಿನ ಬೆಲೆ ಹೊರತಾಗಿಯೂ, ಕ್ಸೂಮ್ ಭಾರತದಲ್ಲಿ ಅತ್ಯಂತ ಕೈಗೆಟುಕುವ 110cc ಸ್ಕೂಟರ್‌ಗಳಲ್ಲಿ ಒಂದಾಗಿದೆ. Honda Dio ಯು ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದು, ರೂ.70,211 ರಿಂದ ರೂ.77,712 ವರೆಗೆ ಬೆಲೆ ಹೊಂದಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!