ಹೊಸ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ, ಹೊಸ ಲುಕ್ ಪಡೆದ N160!
ಇಂದು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದ ಹಲವಾರು ವಾಹನಗಳನ್ನು ಮಾರುಕಟ್ಟೆಯಲ್ಲಿ ಕಾಣುತ್ತೇವೆ. ಹಾಗೆಯೇ ಹಲವಾರು ವಾಹನ ತಯಾರಿಕಾ ಕಂಪನಿಗಳು ಅತ್ಯಂತ ಹೆಸರು ವಾಸಿಯಾಗಿವೆ. ಅದರಲ್ಲಿ ಬಜಾಜ್ ಆಟೋ ಲಿಮಿಟೆಡ್ (Bjaj Auto Limited) ಕೂಡ ಒಂದು. ಇಂದು ಬಜಾಜ್ ಹೆಚ್ಚು ಜನಪ್ರಿತೆಯನ್ನು ಹೊಂದಿದ್ದು, ಹಲವಾರು ವಿವಿಧ ವಾಹಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಅವುಗಳ ಸಾಲಿನಲ್ಲಿ ದ್ವಿಚಕ್ರ ವಾಹನಗಳು ಹೆಚ್ಚು ಹೆಸರುವಾಸಿಯಾಗಿವೆ. NS ಎಂದ ಕೂಡಲೇ ಮೊದಲಿಗೆ ನೆನಪಗೋದು ಬಜಾಜ್ ಕಂಪನಿ, ಯಾಕೆಂದರೆ ಹೆಚ್ಚು ಯುವಕರನ್ನು ಸೆಳೆದಿದೆ ಬಜಾಜ್ ಕಂಪನಿಯ ಈ ಒಂದು ಬೈಕ್. ಹಾಗೆಯೇ ಇದೀಗ ಬಜಾಜ್ ಕಂಪನಿ ತನ್ನ ಹೊಸ ದ್ವಿಚಕ್ರ ವಾಹನ (two wheel vehicle) ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಬಜಾಜ್ ನ ಹೊಸ ವೈಶಿಷ್ಟ್ಯ ಗಳನ್ನು (new features) ಹೊಂದಿದ ಬೈಕ್ ಗಳು :
ಹೊಸ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ ಪಲ್ಸರ್ N160ನ ಹೊಸ ವೇರಿಯೆಂಟ್ ಅನ್ನು ಪರಿಚಯಿಸಿದೆ ಬಜಾಜ್. ಇದರ ಜೊತೆಗೆ ಪಲ್ಸರ್ 125, 150 ಮತ್ತು 220F ಮಾಡಲ್‌ಗಳನ್ನು ಹೊಸ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ (premium features) ನವೀಕರಿಸಲಾಗಿದ್ದು, ಈ ಮಾದರಿಗಳ ಬೈಕ್ ಗಳು ಬಹಳ ವೈಶಿಷ್ಟತೆಗಳನ್ನು ಹೊಂದಿವೆ. ಇದರ ಬಗ್ಗೆ ಈ ಕೆಳಗೆ ತಿಳಿದು ಕೊಳ್ಳೋಣ.
ಹೊಸ ಲುಕ್ (new look) ನಲ್ಲಿ ಪಲ್ಸರ್ N160 :
ಪಲ್ಸರ್ N 160 ಹೊಸ ಮಾದರಿಯನ್ನು ಹೊಂದಿದ್ದು, ಈ ಬೈಕ್ ನೋಡಲು ಸ್ಟೈಲಿಶ್, ಸ್ಪೋರ್ಟಿ ಬೈಕ್ ಹೊಸ ಡಿಸೈನ್ ಅನ್ನು ಹೊಂದಿದೆ. ಹೀಗಾಗಿ ಈ ಒಂದು ಬೈಕ್ ಎಲ್ಲರ ಗಮನ ಸೆಳೆದಿದೆ. ಈ ಹೊಸ ಪಲ್ಸರ್ N160 ಶಾಂಪೇನ್ ಗೋಲ್ಡ್ 33mm USD ಫೋರ್ಕ್‌ಗಳನ್ನು ಹೊಂದಿದೆ. ಹಾಗೆಯೇ ಬ್ಲೂಟೂತ್-ಸಕ್ರಿಯಗೊಳಿಸಿದ ಇನ್‌ಸ್ಟ್ರೂಮೆಂಟ್ ಕನ್ಸೋಲ್‌ಗೆ ಸಂಯೋಜಿತವಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಜೊತೆಗೆ ಬರಲಿದ್ದು, ಮೋಟಾರ್‌ಸೈಕಲ್ ಈಗ ಸಂಪೂರ್ಣ ಕನೆಕ್ಟಿವಿಟಿ ಸೂಟ್ ಹೊಂದಿದೆ.
ಈ ಬೈಕ್ 164.82cc ಆಯಿಲ್ ಕೂಲ್ಡ್ ಎಂಜಿನ್‌ನಿಂದ (oil cooled engine) ಚಾಲಿತವಾಗಿದ್ದು, 11.7 kW(16PS @8750rpm ವರೆಗೆ ಪವರ್ ನೀಡಲು ಟ್ಯೂನ್ ಮಾಡಲಾಗಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.
ರೈನ್ (rain) ರೋಡ್ (road) ಮತ್ತು ಆಫ್ – ರೋಡ್ ರೈಡ್ ಮೋಡ್‌ಗಳ (off ride mode) ಸೇರ್ಪಡೆ ಹೊಂದಿದೆ :
ಈ ಬೈಕ್ ನಲ್ಲಿ ವಿವಿಧ ರೀತಿಯ ರಸ್ತೆ ಪರಿಸ್ಥಿತಿಗಳಲ್ಲಿ ಸವಾರನಿಗೆ ಗರಿಷ್ಠ ನಿಯಂತ್ರಣವನ್ನು ನೀಡಲು ಪ್ರತಿ ರೈಡ್ ಮೋಡ್‌ನಲ್ಲಿ ಎಬಿಎಸ್ (ABS) ಮಟ್ಟವನ್ನು ಹೊಂದುವಂತೆ ಮಾಡಲಾಗಿದೆ.
ಮೂರು ವಿಧದ ರೋಡ್ ಮೋಡ್ ಅನ್ನು ಇದರಲ್ಲಿ ಪ್ರಮಾಣಿತವಾಗಿ ಹೊಂದಿಸಲಾಗಿದ್ದು, ಇದು ನಗರದಲ್ಲಿ ಅಥವಾ ಹೆದ್ದಾರಿಯಲ್ಲಿ ನಿಯಮಿತ ಸವಾರಿಗೆ ಸೂಕ್ತವಾಗಿರುತ್ತವೆ. ತೇವಾಂಶದ ರಸ್ತೆಗಳಿಗೆ ರೈನ್ ಮೋಡ್ ಸೂಕ್ತವಾಗಿದೆ. ಜಾರು ಮೇಲ್ಮೈಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಸ್ಥಿರವಾದ ಬ್ರೇಕಿಂಗ್ ಅನ್ನು ಹೊಂದಿದೆ. ಹಾಗೆಯೇ ಆಫ್ ರೋಡ್ ಮೋಡ್ ಭೂಪ್ರದೇಶ ಮತ್ತು ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದು, ಒಟ್ಟಾರೆ ನಿರ್ವಹಣೆ ಅನುಭವಕ್ಕೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ ಈ ಒಂದು ಹೊಸ ಬೈಕ್.
ಪಲ್ಸರ್ N160 ಬೆಲೆ (price) :
ಬಜಾಜ್ ಈಗ ಹೊಸ ಪಲ್ಸರ್ N160 ರೂಪಾಂತರವನ್ನು ರೂ. 1,39,693 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಬಜಾಜ್ ನ 2024ರ ಪಲ್ಸರ್ 125, 150 ಮತ್ತು 220F ಮಾಡಲ್‌ಗಳ ಅಪ್‌ಡೇಟ್ ಹೀಗಿದೆ :
ಪಲ್ಸರ್ 125ರ ಕಾರ್ಬನ್ ಫೈಬರ್ ಸಿಂಗಲ್ ಮತ್ತು ಸ್ಪ್ಲಿಟ್ ಸೀಟ್ ರೂಪಾಂತರಗಳು ಈಗ ಸಂಪೂರ್ಣ ಡಿಜಿಟಲ್ ಬ್ಲೂಟೂತ್ ಕನ್ಸೋಲ್, ಯುಎಸ್‌ಬಿ ಚಾರ್ಜರ್ ಮತ್ತು ಹೊಸ ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ. ಇದೇ ರೀತಿಯ ರೂಪಾಂತರದ ಆಯ್ಕೆಯು ಪಲ್ಸರ್ 150 ನಲ್ಲಿ ಲಭ್ಯವಿದೆ. ವೈಶಿಷ್ಟ್ಯಗಳು ಮತ್ತು ರಿಫ್ರೆಶ್ ಮಾಡಿದ ಸ್ಟೈಲಿಂಗ್ 220F ಗೆ ಪ್ರಮಾಣಿತವಾಗಿದೆ. ಈ ಎಲ್ಲ ಮಾದರಿಯ ಬೈಕ್ ಗಳು ಮುಂದೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.