ಹೊಸ ರೇಷನ್ ಕಾರ್ಡ್, ಫಲಾನುಭವಿಗಳುಗೆ ಗುಡ್ ನ್ಯೂಸ್ ನೀಡಿದ ಸರ್ಕಾರ.
ಪಡಿತರ ಚೀಟಿಗಳು(Ration card) ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ (subsidy) ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಇದರ ಮೂಲಕ ಅನೇಕ ಸೌಲಭ್ಯಗಳು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ನಿಂದ ಭಾರತೀಯರಿಗೆ ಗುರುತಿಸುವಿಕೆಯ ಸಾಮಾನ್ಯ ರೂಪವಾಗಿಯೂ ಇದು ಕಾರ್ಯ ನಿರ್ವಹಿಸಿತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ರೇಷನ್ ಕಾರ್ಡ್ (New Ration Card Application) :
ಕಾಂಗ್ರೆಸ್ ಪಕ್ಷವು (Congress government) ಚುನಾವಣೆಯಲ್ಲಿ ನೀಡಿರುವ ಐದು ಗ್ಯಾರಂಟಿ ಭರವಸೆಗಳ ಅನುಷ್ಠಾನದಲ್ಲಿ ಫಲಾನುಭವಿಗಳನ್ನು ಗುರುತಿಸಲು ಬಿಪಿಎಲ್ ಪಡಿತರ ಚೀಟಿಯನ್ನೇ ಮಾನದಂಡವಾಗಿ ನಿಗದಿಪಡಿಪಡಿಸಿದಕ್ಕಾಗಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸರ್ಕಾರ ಹೊಸ ಕಾರ್ಡ್ (new ration card) ವಿತರಣೆಯನ್ನು ಮುಂದೂಡುತ್ತಲೇ ಬಂದಿದೆ. ಹೊಸ ರೇಷನ್ ಕಾರ್ಡ್ ಗಳನ್ನು ನೀಡುವ ಪ್ರಕ್ರಿಯೆಯನ್ನು ಸೆಪ್ಟೆಂಬರ್ ನಿಂದ ಆರಂಭಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಅನರ್ಹ ಅರ್ಜಿಗಳನ್ನು ವಜಾ ಮಾಡಲಾಗಿದೆ :
ಬಿಪಿಎಲ್ ಪಡಿತರ ಚೀಟಿಗಾಗಿ ಬಂದಿದ್ದ 2.95 ಲಕ್ಷ ಅರ್ಜಿಗಳಲ್ಲಿ 50 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ವಜಾ ಮಾಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ (BPL card) ನೀಡಲು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಅನರ್ಹ ಅರ್ಜಿಗಳನ್ನು ವಜಾ ಮಾಡಲಾಗಿದೆ. 2.40 ಲಕ್ಷ ಅರ್ಜಿಗಳನ್ನು ಪರಿಷ್ಕರಣೆ ಮಾಡಲಾಗಿದೆ.
90 ಸಾವಿರ ಹೊಸ ರೇಷನ್ ಕಾರ್ಡ್ (New Ration Card) ಗಳಿಗೆ ಬೇಡಿಕೆ :
ಆಹಾರ ಇಲಾಖೆಯಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದ್ದು, 90 ಸಾವಿರ ಹೊಸ ರೇಷನ್ ಕಾರ್ಡ್ (New Ration Card) ಗಳಿಗೆ ಬೇಡಿಕೆ ಇಟ್ಟಿದ್ದು, ಈಗಾಗಲೇ ರೇಷನ್ ಕಾರ್ಡ್ ಪರಿಷ್ಕರಣೆ ಮಾಡುವ ಪ್ರಕ್ರಿಯೆ ನಡೆದಿದೆ. ಬಾಕಿ ಉಳಿದಿರುವ ಅರ್ಜಿಗಳನ್ನು ಇತ್ಯರ್ಥ ಮಾಡಿದ ನಂತರ ಸೆಪ್ಟೆಂಬರ್ ನಲ್ಲಿ ಹೊಸ ಪಡಿತರ ಚೀಟಿಗಳನ್ನು ನೀಡುವ ಪ್ರಕ್ರಿಯೆ ಆರಂಭವಾಗಲಿದೆ.
ಕೆಲವು ತುರ್ತು ಅಗತ್ಯಗಳನ್ನು ಪೂರೈಸಲು, ಸರ್ಕಾರವು ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಈ ಯೋಜನೆಯಡಿ ಈ ಕೆಳಗಿನವರು ಅರ್ಜಿ ಸಲ್ಲಿಸಬಹುದು :
ಹೊಸದಾಗಿ ಮದುವೆಯಾಗಿ ಸಂಸಾರ ಆರಂಭಿಸುವ ದಂಪತಿಗಳು
ಮದುವೆಯ ನಂತರ ಪ್ರತ್ಯೇಕವಾಗಿ ವಾಸಿಸುವ ದಂಪತಿಗಳು ಹೊಸ ರೇಷನ್ ಕಾರ್ಡ್‌ಗೆ(new ration card) ಅರ್ಹರಾಗುತ್ತಾರೆ.
ಕುಟುಂಬದಿಂದ ಬೇರೆಯಾಗಿ ಜೀವನ ನಡೆಸುವ ದಂಪತಿಗಳು
ಈಗಾಗಲೇ ರೇಷನ್ ಕಾರ್ಡ್ ಹೊಂದಿರುವ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುವ ದಂಪತಿಗಳು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಪಡೆಯಲು ಅಗತ್ಯ ದಾಖಲೆಗಳು (Documents) :
ಆಧಾರ್ ಕಾರ್ಡ್
ಮನೆಯ ಸದಸ್ಯರ ಆಧಾರ್ ಕಾರ್ಡ್‌ಗಳು
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ನಿವಾಸ ಪ್ರಮಾಣ ಪತ್ರ ಮೊಬೈಲ್ ಸಂಖ್ಯೆ (ಕಡ್ಡಾಯ) ಬಾಡಿಗೆದಾರರಿಗೆ ಒಪ್ಪಂದ ಪತ್ರ (ಕಡ್ಡಾಯ)
ಅರ್ಜಿ ಸಲ್ಲಿಸುವುದು ಹೇಗೆ (How to apply application) :
ಗ್ರಾಮ ಒನ್(Gram one), ಬೆಂಗಳೂರು ಒನ್(Bengaluru one), ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಸೆನ್ (Online) ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಆನ್ಸೆನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.