Ration Card Update: ರೇಷನ್‌ ಕಾರ್ಡ್‌  ಹೆಸರು ತಿದ್ದುಪಡಿಗೆ ಮತ್ತೇ ಅವಕಾಶ, ಇಲ್ಲಿದೆ ಮಾಹಿತಿ!

Picsart 24 12 04 10 25 54 713

ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶ? ಹೊಸ ರೇಷನ್ ಕಾರ್ಡ್​(New Ration Card) ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಮಾಹಿತಿ.

ರೇಷನ್ ಕಾರ್ಡ್ (Ration card) ಇಂದು ಮುಖ್ಯ ದಾಖಲೆಗಲ್ಲಿ ಒಂದಾಗಿದ್ದು, ಇಂದು ನಾವು ಯಾವುದೇ ಯೋಜನೆಯ ಲಾಭ ಪೆಡದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ (Document). ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ ಪಡೆಯುತ್ತೇವೆ. ಇಂದು ಎಲ್ಲರ ಮನೆಗಳಲ್ಲೂ  ಪಡಿತರ ಚೀಟಿ ಗಳನ್ನು (Ration card) ಕಾಣಬಹುದು. ಪಡಿತರ ಚೀಟಿ ಒಂದು ಆಧಾರ್(Aadhar) ಆಧಾರಿತ ರಾಷ್ಟ್ರೀಯ ಪಡಿತರ ಕಾರ್ಡ್ ಪೋರ್ಟಬಿಲಿಟಿ (national ration card portability) ಯೋಜನೆಯಾಗಿದೆ. ರೇಷನ್ ಕಾರ್ಡ್ ನಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು (Updates) ಮಾಡಲಾಗಿದೆ. ಮತ್ತು ಸರ್ಕಾರ ಹೊಸ ಬದಲಾವಣೆಗಳನ್ನು ಮಾಡುತ್ತಲೇ ಇದೆ. ಹಾಗೆಯೇ ಇದೀಗ ಸರ್ಕಾರದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ. ಕೆಲವರ ಬಳಿ ರೇಷನ್ ಕಾರ್ಡ್ ಇಲ್ಲ ಹಾಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ. ರೇಷನ್ ಕಾರ್ಡ್ ತಿದ್ದುಪಡಿ ಹೇಗೆ ಮಾಡುವುದು? ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಥವಾ ತಿದ್ದುಪಡಿಗೆ ಅರ್ಜಿ ಅಹ್ವಾನ :

Ration card correction :// ಇಂದು ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಹಾಗೂ ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ. ಇದೀಗ ಹೊಸ ರೇಷನ್ ಕಾರ್ಡ್(new ration card) ಗೆ ಸಂಬಂಧಿಸಿದಂತೆ ಅರ್ಜಿಯನ್ನು (Application) ಸಲ್ಲಿಸಲು ಮತ್ತು ಹಲವು ತಿದ್ದುಪಡಿ ಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಮತ್ತು ರೇಷನ್ ಕಾರ್ಡ್ ನಲ್ಲಿ ಇರುವಂತಹ ಯಾವುದೇ ವಿವರಗಳನ್ನು ತಿದ್ದುಪಡಿ ಮಾಡಲು ಬಯಸುವವರಿಗೆ ಇದು ಬಹಳ ಸಹಾಯಕವಾಗಿದೆ.

ಎಂದಿನಿಂದ ಅರ್ಜಿ ಸಲ್ಲಿಸಲು ಅವಕಾಶ :

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ಅನ್ನೈನ್ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇಂದಿನಿಂದ ರೇಷನ್‌ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಡಿಸೆಂಬರ್ 3 ರಿಂದ ಅಂದರೆ ನಿನ್ನೆಯಿಂದ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಅವಕಾಶ ನೀಡಿದೆ. ಹೊಸ ಪಡಿತರ ಚೀಟಿ(New Ration Card)ಯಲ್ಲಿ ವಿಳಾಸ ಬದಲಾವಣೆ, ಹೊಸ ಸದಸ್ಯರ ಸೇರ್ಪಡೆ, ಸೇರಿದಂತೆ ಯಾವುದೇ ರೀತಿಯಲ್ಲಿ ಅಪ್ಡೇಟ್ ಮಾಡಲು ಇದೀಗ ರಾಜ್ಯ ಸರ್ಕಾರ  ಅವಕಾಶ ಮಾಡಿಕೊಟ್ಟಿದೆ.

ಯಾವೆಲ್ಲಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?:

ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ.
ಆಧಾರ್ ಈ-ಕೆವೈಸಿ
ಹೆಸರು ತೆಗೆಯುವುದು
ವಿಳಾಸ ಬದಲಾವಣೆ
ನ್ಯಾಯಬೆಲೆ ಅಂಗಡಿ ಬದಲಾವಣೆ
ಹೆಸರು ತಿದ್ದುಪಡಿ ಮಾಡಬಹುದು

ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು:

ಅರ್ಜಿದಾರರ ಅಧಾ‌ರ್ ಕಾರ್ಡ ಪ್ರತಿ(Adhar card)
ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಅದಾಯ ಪ್ರಮಾಣ ಪತ್ರ(caste and Income certificate)
ಮೊಬೈಲ್ ಸಂಖ್ಯೆ
ಜನನ ಪ್ರಮಾಣ ಪತ್ರ(Birth Certificate).
ಆಧಾರ್ ಕಾರ್ಡ್
ಪಾಸ್ಪೋರ್ಟ್ ಸೈಜ್ ಫೋಟೋ
ಮತದಾರರ ಗುರುತಿನ ಚೀಟಿ(Voter ID)
ಡ್ರೈವಿಂಗ್ ಲೈಸೆನ್ಸ್
ಖಾಯಂ ನಿವಾಸದ ಪತ್ರ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಪಡಿತರ ಚೀಟಿಯಲ್ಲಿ ಯಾವುದೇ ರೀತಿಯಲ್ಲಿ ತಿದ್ದುಪಡಿಯನ್ನು ಮಾಡಲು ನಿಮ್ಮ ಹತ್ತಿರದ ಯಾವುದೇ ಸಿಎಸ್ಸಿ ಕೇಂದ್ರ, ಗ್ರಾಮಒನ್ ಕೇಂದ್ರ, ಕರ್ನಾಟಕ ಒನ್, ಕೇಂದ್ರಕ್ಕೆ ಭೇಟಿ ನೀಡಿ ಅಥವಾ ನಾಡ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ಹೋಗಿ ಈ https://ahara.kar.nic.in/home ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಗಮನಿಸಿ:

ಅರ್ಜಿದಾರನಿಗೆ ಈ ಕುರಿತಂತೆ ಯಾವುದೇ  ರೀತಯ ಗೊಂದಲಗಳು ಇದ್ದರೆ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ  : 18004259339 ಮತ್ತು ಸಹಾಯವಾಣಿ ಸಂಖ್ಯೆ: 1967 ಗೆ ಕರೆ ಮಾಡಬಹುದು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!