ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಿದ್ರೆ ಇಲ್ಲಿದೆ ಗುಡ್ ನ್ಯೂಸ್!

new ration card 1

2024 ರ ಹೊಸ ಪಡಿತರ ಚೀಟಿ (ration card) ಪಟ್ಟಿ ಬಿಡುಗಡೆ. ಈ ಹೊಸ ಪಟ್ಟಿಯಲ್ಲಿ (new list) ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?

ಇಂದು ಎಲ್ಲರ ಮನೆಗಳಲ್ಲೂ ಪಡಿತರ ಚೀಟಿ ಗಳನ್ನು (Ration card) ಕಾಣಬಹುದು. ರೇಷನ್ ಕಾರ್ಡ್ ಒಂದು ಆಧಾರ್ ಆಧಾರಿತ ರಾಷ್ಟ್ರೀಯ ಪಡಿತರ ಕಾರ್ಡ್ ಪೋರ್ಟಬಿಲಿಟಿ (national ration card portability) ಯೋಜನೆಯಾಗಿದೆ. ಭಾರತದೊಳಗಿರುವ ಎಲ್ಲಾ ಜನರಿಗೂ ಆಹಾರದ ಕೊರತೆಯನ್ನು ನೀಗಿಸುವ ಸಲುವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಸಬ್ಸಿಡಿ (subsidy) ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿರುವ ಕುಟುಂಬಗಳಿಗೆ ಭಾರತದಲ್ಲಿ ರಾಜ್ಯ ಸರ್ಕಾರಗಳು ನೀಡುವ ಅಧಿಕೃತ ದಾಖಲೆಯಾಗಿದೆ. ಇತ್ತೀಚಿಗೆ  ಆಹಾರ ಇಲಾಖೆಯು ಹೊಸ ರೇಷನ್ ಕಾರ್ಡ್ ಪಡೆಯಲು ಹಾಗೂ ತಿದ್ದುಪಡಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿತ್ತು. ಹೆಚ್ಚಿನ ಜನರು ಈ ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಇದೀಗ ಹೊಸ ಪಡಿತರ ಚೀಟಿ ಪಟ್ಟಿ (new ration crad) ಬಿಡುಗಡೆಯಾಗಿದೆ. ನಿಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ ಪಡಿತರ ಚೀಟಿ ಪಟ್ಟಿ ಬಿಡುಗಡೆ :

ಹಲವು ದಿನಗಳ ಹಿಂದೆ ಪಡಿತರ ಚೀಟಿ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿಗಳನ್ನು ಆಹ್ವಾನಿಸಿದ ನಂತರದ ದಿನದಿಂದಲೂ ಹೊಸ ಪಡಿತರ ಪಟ್ಟಿಗಾಗಿ ಕಾಯುತ್ತಿದ್ದರು. ಇದೀಗ ಆಹಾರ ಸಂಪನ್ಮೂಲ ಇಲಾಖೆ (department of food resources) ಹೊಸ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಡಿತರ ಚೀಟಿಯ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿಯನ್ನು ಪಡೆಯಲು ಆನ್‌ಲೈನ್ (online) ಅಥವಾ ಆಫ್‌ಲೈನ್‌ನಲ್ಲಿ (offline) ಅರ್ಜಿ ಸಲ್ಲಿಸಿದ ಅರ್ಹ ಅರ್ಜಿದಾರರ ಹೆಸರುಗಳನ್ನು ಈ ಹೊಸ ಪಟ್ಟಿಯಲ್ಲಿ  ಪ್ರಕಟಿಸಲಾಗಿದೆ.

ಹೊಸ ಪಡಿತರ ಚೀಟಿ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸುವುದು ಹೇಗೆ ?

ಮೊದಲು ಪಡಿತರ ಚೀಟಿಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು: https://nfsa.gov.in/portal/apply_ration_card
ನಂತರ ಪಡಿತರ ಚೀಟಿಯ ಅರ್ಹತಾ ಪಟ್ಟಿಯ ಮೇಲೆ ಕ್ಲಿಕ್ ಮಾಡಬೇಕು.
ನಂತರ ರಾಜ್ಯವನ್ನು (state) ಆಯ್ಕೆಮಾಡಬೇಕು.
ರಾಜ್ಯವನ್ನು ಆಯ್ಕೆ ಮಾಡಿದ ನಂತರ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
ನಂತರ, ನಿಮ್ಮ ಬ್ಲಾಕ್, ಗ್ರಾಮ ಮತ್ತು ವಾರ್ಡ್ ಸಂಖ್ಯೆಯನ್ನು ಆಯ್ಕೆ ಮಾಡಬೇಕು.
ತದನಂತರ ನೀವು ಹೊಸ ಪಡಿತರ ಚೀಟಿ ಪಟ್ಟಿಯನ್ನು ಕಾಣಬಹುದು.

ಗಮನಸಿ (notice) :

5 ವರ್ಷಗಳವರೆಗೆ ಉಚಿತ ಪಡಿತರ ಚೀಟಿಯನ್ನು ನೀಡುವ ಯೋಜನೆ ಇನ್ನೂ ಚಾಲ್ತಿಯಲ್ಲಿದ್ದು, ಇದರ ಪ್ರಯೋಜನವನ್ನು  ಪಡೆಯದಿಲ್ಲದವರು ಅರ್ಜಿಗಳನ್ನು ಸಲ್ಲಿಸಬಹುದು. ಪಡಿತರ ಚೀಟಿಯ ಅಧಿಕೃತ ವೆಬ್‌ಸೈಟ್ ಅಥವಾ ಅವರ ಬ್ಲಾಕ್ ಆಫೀಸ್‌ಗೆ ಭೇಟಿ ನೀಡುವ ಮೂಲಕ  ಅರ್ಜಿಗಳನ್ನು ಸಲ್ಲಿಸಬಹುದು.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!