ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದ್ದು, ನಿವಾಸ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಪರಿಣಾಮ ರೇಷನ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಾಗಿದೆ, ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ ಡಿ ಬಿ ಟಿ (DBT) ಹಣ ನಿಮ್ಮ ಖಾತೆಗೆ (Bank Account) ಜಮಾ ಆಗುತ್ತದೆ ಎಂದು ಹೇಳಬಹುದು. ರೇಷನ್ ಕಾರ್ಡ್ ಪಡೆದುಕೊಂಡರೆ ಸುಲಭವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಆಗಬಹುದು ಅಂತ ಜನರು ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕಾದು ಕುಳಿತಿದ್ದಾರೆ. ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ? ಬೇಕಾದ ಅಗತ್ಯ ದಾಖಲೆಗಳು ಯಾವುವು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಏಪ್ರಿಲ್ 1 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ
ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ( KH Muniyappa ) ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದೆ (application for new ration card) ಎಂದು X ಮೂಲಕ ತಿಳಿಸಿದ್ದಾರೆ.
ಈ ಮೂರು ದಾಖಲೆಗಳು ಕಡ್ಡಾಯ
ರಾಜ್ಯದಲ್ಲಿ ಹಲವು ಜನ ಹೊಸ ಪಡಿತರ ಚೀಟಿಗೆ (BPL Ration Card) ಅರ್ಜಿ ಹಾಕಲು ಕಾಯುತ್ತಿರುವುದರಿಂದ ಸಾಮಾನ್ಯವಾಗಿ ಸರ್ವರ್ ತೊಂದರೆ ಕಾಣಿಸಿಕೊಳ್ಳಬಹುದು, ಹಾಗಾಗಿ ಅಗತ್ಯ ದಾಖಲೆಗಳನ್ನು ನೀವು ಮೊದಲೇ ರೆಡಿಮಾಡಿಕೊಂಡು ಮೊದಲು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕೇವಲ ಮೂರು ದಾಖಲೆಗಳು ಸಾಕು, ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಪೈಕಿ ಒಬ್ಬರ ಆದಾಯ ಪ್ರಮಾಣ ಪತ್ರ, ಮತ್ತು ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದರೆ ಅದರ ಜನ್ಮ ದಾಖಲೆಯ ಪ್ರಮಾಣ ಪತ್ರ ಬೇಕಾಗುತ್ತದೆ. ಮತ್ತು ನಿಮ್ಮ ಎಲ್ಲಾ ಸದಸ್ಯರ ಆಧಾರ್ ಕಾರ್ಡ ಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಮತ್ತು ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ರೆ ಕೂಡಲೇ ಅದನ್ನು ಸಹಿತ ಅಪ್ಡೇಟ್ ಮಾಡಿಸಿಕೊಳ್ಳಿ, ಕೆಲವೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇದ್ದಲ್ಲಿ ಸಮಸ್ಯೆ ಆಗಬಹುದು.
ಇವರಿಗೆ ಮಾತ್ರ ಸಿಗಲಿದೆ ರೇಷನ್ ಕಾರ್ಡ್
ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು, ಹೊಸದಾಗಿ ಮದುವೆಯಾದ ದಂಪತಿ ಹೊಸ ಪಡಿತರ (ration card) ಚೀಟಿಗೆ ಅರ್ಜಿ ಸಲ್ಲಿಸಬಹುದು, ರಾಜ್ಯದಲ್ಲಿ ಈಗಾಗಲೇ ಪಡಿತರ ಚೀಟಿ ಹೊಂದಿರದ ಕುಟುಂಬಗಳು ಅರ್ಹರಾಗಿರುತ್ತಾರೆ, ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಿದ್ದರೆ ಬಡತನ ರೇಖೆಗಿಂತ (below poverty line)ಕೆಳಗಿನವರು ಆಗಿರಬೇಕು, ನಿಮ್ಮ ಆದಾಯ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ಬಿಪಿಎಲ್ ಹಾಗೂ ಅದಕ್ಕಿಂತ ಜಾಸ್ತಿ ಇದ್ದರೆ ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ:
ಗ್ರಾಮ ಒನ್(Gram one), ಬೆಂಗಳೂರು ಒನ್(Bengaluru one) , ಮತ್ತು ಇತರ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ (Online) ಮೂಲಕ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಪೋರ್ಟಲ್ ನಿರ್ದಿಷ್ಟ ಸಮಯದಲ್ಲಿ ಮಾತ್ರ ತೆರೆದಿರುತ್ತದೆ. ಸೇವಾ ಕೇಂದ್ರದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ.
ಸೂಚನೆ : ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬಯೋಮೆಟ್ರಿಕ್ ಡಿವೈಸ್ ಅವಶ್ಯಕತೆ ಇದ್ದು ಸ್ವತಃ ನೀವೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಹಾಗಾಗಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ LKG &1ನೇ ತರಗತಿ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
- ಮೂರು ದಿನಗಳಿಂದ ಇಳಿಯುತ್ತಲೇ ಇದೆ ಚಿನ್ನದ ಬೆಲೆ, ಖರೀದಿಗೆ ಇದೇ ಸೂಕ್ತ ಸಮಯ
- 2024 ರ ಮತದಾರರ ಪಟ್ಟಿ ಬಿಡುಗಡೆ. ಮೊಬೈಲ್ ನಲ್ಲಿ ನೋಡುವುದು ಹೇಗೆ? Karnataka Voter List Download 2024
- ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
ರೆಷನ್ ಕಾರ್ಡ ಮಾಡಿಸೀ ೨ವರ್ಷ ಆಯ್ತು ಯಾವಾಗ ಬಿಡ್ತಿರ ಸರ್,